ಪತ್ನಿ ಮೇಲೆ ಪ್ರೀತಿಯ ಸುರಿಮಳೆಗೈದ ಗಂಭೀರ್.. ಜಸ್ಟ್ ಎರಡೇ ಪದಗಳಲ್ಲಿ ಪ್ರೀತಿಯ ನಿವೇದನೆ ಹಂಚಿಕೊಂಡ ಕೋಚ್

Published : Oct 28, 2026, 05:14 PM IST
Gautam Gambhir and Natasha Jain wedding anniversary

ಸಾರಾಂಶ

ಟೀಂ ಇಂಡಿಯಾ ಕೋಚ್ ಗೌತಮ್ ಗಂಭೀರ್ ತಮ್ಮ 15ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಪತ್ನಿ ನತಾಶಾ ಜೊತೆಗಿನ ವಿಶೇಷ ಫೋಟೋವನ್ನು ಹಂಚಿಕೊಂಡಿದ್ದಾರೆ. ಇನ್ನೊಂದೆಡೆ, ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯನ್ನು ಭಾರತ ಗೆದ್ದುಕೊಂಡಿದ್ದು, ಅಭಿಷೇಕ್ ಶರ್ಮಾ ಅವರ ಸ್ಫೋಟಕ ಶತಕದ ಬಗ್ಗೆಯೂ ವಿವರಿಸಲಾಗಿದೆ.

ಟೀಂ ಇಂಡಿಯಾದ ಕೋಚ್ ಗೌತಮ್ ಗಂಭೀರ್ ಇವತ್ತು ಫುಲ್ ಹ್ಯಾಪಿ ಮೂಡ್‌ನಲ್ಲಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ತಾವು ಮತ್ತು ಪತ್ನಿ ಜೊತೆಗಿನ ವಿಶೇಷ ಫೋಟೋ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ. ಅದನ್ನು ನೋಡಿದ ಗೌತಿ ಅಭಿಮಾನಿಗಳು ಫುಲ್ ಖಷಿಯಾಗಿದ್ದಾರೆ. ಜೊತೆಗೆ ಶುಭ ಹಾರೈಸುತ್ತಿದ್ದಾರೆ.

ಗಂಭೀರ್ ಪೋಸ್ಟ್ ಮಾಡಿದ್ದು ಏನು?

ಗೌತಮ್ ಗಂಭೀರ್ ಮದುವೆ ಆಗಿ ಇವತ್ತಿಗೆ 15 ವರ್ಷ ಪೂರೈಸಿದೆ. ಅದೇ ಖುಷಿಯಲ್ಲಿ ತಮ್ಮ ಪತ್ನಿ ನತಾಶಾ ಜೈನ್ ಜೊತೆಗಿನ ಫೋಟೋವನ್ನು ಶೇರ್ ಮಾಡಿ ಎರಡು ಪದಗಳಲ್ಲಿ ವಿವಾಹ ವಾರ್ಷಿಕೋತ್ಸವದ ಬಗ್ಗೆ ಬರೆದುಕೊಂಡಿದ್ದಾರೆ. ಪತ್ನಿ ಜೊತೆಗಿನ ಫೋಟೋಗೆ 'US 15' ಎಂದು ಬರೆದುಕೊಂಡಿದ್ದಾರೆ. ಬೆನ್ನಲ್ಲೇ ಅವರ ಅಭಿಮಾನಿಗಳು ತಮ್ಮದೇ ಸ್ಟೈಲ್‌ನಲ್ಲಿ ಗಂಭೀರ್ ಅವರಿಗೆ ಶುಭಾಶಯಗಳನ್ನ ತಿಳಿಸುತ್ತಿದ್ದಾರೆ.

ಗೌತಮ್ ಗಂಭೀರ್ ಅವರು ಅಕ್ಟೋಬರ್ 28, 2011 ರಂದು ನತಾಶಾ ಜೈನ್ ಅವರನ್ನು ಮದುವೆ ಆದರು. ಹರಿಯಾಣದ ಗುರುಗ್ರಾಮ್‌ನಲ್ಲಿ ಇವರ ಮದುವೆ ಕಾರ್ಯಕ್ರಮ ನಡೆದಿತ್ತು. ಈ ಮುದ್ದಾದ ಜೋಡಿಗೆ ಇಬ್ಬರು ಹೆಣ್ಮಕ್ಕಳು ಇದ್ದಾರೆ. ಆಜೀನ್ ಮತ್ತು ಅನೈಜಾ ಎಂಬ ಹೆಣ್ಮಕ್ಕಳು ಇದ್ದಾರೆ.

ಇನ್ನು ಗಂಭೀರ್ ಅವರು ಪ್ರಸ್ತುತ ನ್ಯೂಜಿಲೆಂಡ್ ಪ್ರವಾಸದಲ್ಲಿದ್ದಾರೆ. ಟೀಂ ಇಂಡಿಯಾ ಟಿ20 ಸರಣಿಯನ್ನು ಆಡುತ್ತಿದ್ದು, ಈಗಾಲೇ ಮೂರು ಪಂದ್ಯಗಳನ್ನ ಗೆದ್ದಿರುವ ಭಾರತ ತಂಡವು ಟಿ20 ಸರಣಿಯನ್ನು ವಶಕ್ಕೆ ಪಡೆದುಕೊಂಡಿದೆ. ಇನ್ನೂ ಎರಡು ಪಂದ್ಯಗಳು ಉಳಿದಿವೆ. ಜೊತೆಗೆ ಏಕದಿನ ಹಾಗೂ ಟೆಸ್ಟ್ ಪಂದ್ಯಗಳನ್ನೂ ನ್ಯೂಜಿಲೆಂಡ್ ತಂಡದ ವಿರುದ್ಧ ಆಡಲಿದೆ.

ಇನ್ನು ನಿನ್ನೆ ನಡೆದ ಮೂರನೇ ಟಿ20 ಪಂದ್ಯವನ್ನು ಗೆದ್ದ ಬಳಿಕ ಗಂಭೀರ್ ಅವರು ಸೋಶಿಯಲ್ ಮೀಡಿಯಾದಲ್ಲಿ 'ಸ್ಟೇ ಹಂಬಲ್' ಎಂಬ ಸಂದೇಶವನ್ನು ರವಾನಿಸಿದ್ದರು. ವಿಶೇಷ ಅಂದರೆ ಅಭಿಷೇಕ್ ಶರ್ಮಾ ನಿನ್ನೆಯ ದಿನ ಅಬ್ಬರದ ಇನ್ನಿಂಗ್ಸ್ ಆರಂಬಿಸಿದರು. ಜಾಕೋಬ್ ಡಫಿ ಅವರ ಮೊದಲ ಓವರ್‍‌ನಲ್ಲಿ ಅವರು 26 ರನ್‌ಗಳು ಹಾಗೂ ಎರಡನೇ ಓವರ್‍‌ನಲ್ಲಿ 17 ರನ್‌ಗಳು ಮತ್ತು ಮೂರನೇ 21 ರನ್‌ಗಳಿಸಿದರು. ಟೀಂ ಇಂಡಿಯಾವು ಮೂರು ಓವರ್‍‌ನಲ್ಲಿ ಯಾವುದೇ ವಿಕೆಟ್ ಕಳೆದುಕೊಳ್ಳದೇ 64 ರನ್‌ಗಳಿಸಿತ್ತು.

ಮೊದಲು ಬ್ಯಾಟಿಂಗ್ ಮಾಡಿದ್ದ ನ್ಯೂಜಿಲೆಂಡ್ 20 ಓವರ್‍‌ನಲ್ಲಿ 3 ವಿಕೆಟ್ ಕಳೆದುಕೊಂಡು 198 ರನ್‌ಗಳಿಸಿತ್ತು. ಈ ಗುರಿಯನ್ನು ಬೆನ್ನು ಹತ್ತಿದ ಭಾರತ ತಂಡವು 13.2 ಓವರ್‍‌ನಲ್ಲಿ ನಿಗದಿತ ಗುರಿಯನ್ನು ಮುಟ್ಟಿತು. ಟೀಂ ಇಂಡಿಯಾ ಪರ ಸ್ಫೋಟಕ ಆರಂಭ ಸಿಕ್ಕಿತು. ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ ಮೈದಾನದಲ್ಲಿ ಆರ್ಭಟಿಸಿ ಬೊಬ್ಬಿರಿದರು.

ವೈಭವ್ ಸೂರ್ಯವಂಶಿ ಅವರು ಕೇವಲ 19 ಬಾಲ್‌ನಲ್ಲಿ 4 ಸಿಕ್ಸರ್, 4 ಬೌಂಡರಿಯೊಂದಿಗೆ 45 ರನ್‌ ಚಚ್ಚಿದರು. ಇನ್ನು ಅಭಿಷೇಕ್ ಶರ್ಮಾ ಸಿಕ್ಸರ್‍‌ಗಳ ಸುರಿಮಳೆಗೈದರು. 38 ಬಾಲ್‌ಗಳನ್ನ ಎದುರಿಸಿದ ಅಭಿಷೇಕ್ ಶರ್ಮಾ 11 ಸಿಕ್ಸರ್, 9 ಬೌಂಡರಿಯೊಂದಿಗೆ 113 ರನ್‌ಗಳಿಸಿ ಐತಿಹಾಸಿಕ ದಾಖಲೆ ಬರೆದರು. ಇನ್ನು ಸಂಜು ಸ್ಯಾಮ್ಸನ್ 18 ರನ್‌ಗಳ ಕಾಣಿಕೆ ನೀಡಿದರು. ಆ ಮೂಲಕ ಭಾರತ ತಂಡವು ನ್ಯೂಜಿಲೆಂಡ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿತು. 38 ಬಾಲ್‌ನಲ್ಲಿ 113 ರನ್‌ಗಳಿಸಿ ತಂಡದ ಗೆಲುವಿಗೆ ಪ್ರಮುಖ ರನ್‌ಗಳ ಕಾಣಿಕೆ ನೀಡಿದ ಅಭಿಷೇಕ್ ಶರ್ಮಾ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಡೆಲ್ಲಿ ಕ್ಯಾಪಿಟಲ್ಸ್‌ಗೆ ಬರೀ 10 ಲಕ್ಷಕ್ಕೆ ಸೇರಿಕೊಂಡ ವುಮೆನ್‌ 'ವೈಭವ್‌ ಸೂರ್ಯವಂಶಿ' ಕರ್ನಾಟಕದ ಆಲ್ರೌಂಡರ್‌ ಉಮಾ ಕಾಶ್ವಿ!
ಕನ್ನಡದ ಹುಡುಗಿ ವೃಂದಾ ದಿನೇಶ್ ಆರ್‍‌ಸಿಬಿಗೆ ಬಂದಿದ್ದಕ್ಕೆ ಕುಣಿದು ಕುಪ್ಪಳಿಸಿದ ಶ್ರೇಯಾಂಕಾ ಪಾಟೀಲ್