ಕೇವಲ 7 ನಿಮಿಷದಲ್ಲಿ ಟೀಂ ಇಂಡಿಯಾ ಕೋಚ್‌ ಆಗಿ ಸೆಲೆಕ್ಟ್ ಆಗಿದ್ರಂತೆ ಕರ್ಸ್ಟನ್‌

By Suvarna News  |  First Published Jun 16, 2020, 4:30 PM IST

ಟೀಂ ಇಂಡಿಯಾ ಯಶಸ್ವಿ ಕೋಚ್ ಎನಿಸಿಕೊಂಡಿದ್ದ ಗ್ಯಾರಿ ಕರ್ಸ್ಟನ್ ತಮ್ಮನ್ನು ಬಿಸಿಸಿಐ ಆಯ್ಕೆ ಮಾಡಿದ ಕ್ಷಣವನ್ನು ಮೆಲುಕು ಹಾಕಿದ್ದಾರೆ. ಕೇವಲ 7 ನಿಮಿಷದಲ್ಲಿ ಕೋಚ್ ಆದ ಕ್ಷಣವನ್ನು ಗ್ಯಾರಿ ಬಿಚ್ಚಿಟ್ಟಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.


ನವ​ದೆ​ಹ​ಲಿ(ಜೂ.16): ಭಾರತ ಕ್ರಿಕೆಟ್‌ ತಂಡದ ಅತ್ಯಂತ ಯಶಸ್ವಿ ತರಬೇತುದಾರ, ದಕ್ಷಿಣ ಆ​ಫ್ರಿ​ಕಾದ ಮಾಜಿ ಕ್ರಿಕೆ​ಟಿಗ ಗ್ಯಾರಿ ಕರ್ಸ್ಟನ್‌ ಕೋಚ್‌ ಆಗಿ ನೇಮ​ಕ​ಗೊಂಡ ರೋಚ​ಕತೆ ಕಥೆಯನ್ನು ಬಹಿ​ರಂಗಪಡಿ​ಸಿ​ದ್ದಾರೆ. 

ಕೇವಲ 7 ನಿಮಿಷಗಳಲ್ಲಿ ಟೀಂ ಇಂಡಿ​ಯಾದ ಕೋಚ್‌ ಆಗಿ ನೇಮ​ಕ​ಗೊಂಡೆ ಎಂದು ಕರ್ಸ್ಟನ್‌ ಸಂದ​ರ್ಶ​ನ​ವೊಂದ​ರಲ್ಲಿ ಹೇಳಿ​ಕೊಂಡಿ​ದ್ದಾರೆ. ‘ಕೋಚ್‌ ಆಗಿ ನನಗೆ ಅನು​ಭ​ವ​ವಿ​ರ​ಲಿಲ್ಲ. ಆಸ​ಕ್ತಿಯೂ ಇರ​ಲಿಲ್ಲ. ಆದರೆ ಸುನಿಲ್‌ ಗವಾ​ಸ್ಕರ್‌ ಆಹ್ವಾ​ನಿ​ಸಿ​ದರು ಎನ್ನುವ ಕಾರಣಕ್ಕೆ​ ಬಿಸಿ​ಸಿಐ ನಡೆ​ಸಿದ ಸಂದ​ರ್ಶ​ನಕ್ಕೆ ಹಾಜ​ರಾದೆ. ಕೋಚ್‌ ಆಯ್ಕೆ ಸಮಿ​ತಿ​ಯಲ್ಲಿದ್ದ ರವಿ ಶಾಸ್ತ್ರಿ ಕೇಳಿದ ಪ್ರಶ್ನೆಗೆ 2-3 ನಿಮಿಷ ಉತ್ತ​ರಿ​ಸಿದೆ. ಮುಂದಿನ 3 ನಿಮಿಷಗಳಲ್ಲಿ ಬಿಸಿ​ಸಿಐ ಕಾರ್ಯ​ದರ್ಶಿ ನೇಮ​ಕಾತಿ ಪತ್ರ ಕೈಗಿ​ತ್ತ​ರು’ ಎಂದು ಕರ್ಸ್ಟನ್‌ ಹೇಳಿ​ಕೊಂಡಿ​ದ್ದಾರೆ.

Latest Videos

ಗ್ಯಾರಿ 2007ರಲ್ಲಿ ನಡೆದ ಕೋಚ್ ಸಂದರ್ಶನವನ್ನು ಮೆಲುಕು ಹಾಕಿದ್ದಾರೆ. ಗ್ಯಾರಿ ಕರ್ಸ್ಟನ್ ಕೋಚ್ ಆಗುವ ಮುನ್ನ ಗ್ರೇಗ್ ಚಾಪೆಲ್ ಟೀಂ ಇಂಡಿಯಾ ಕೋಚ್ ಆಗಿದ್ದರು. ಚಾಪೆಲ್ ಮಾರ್ಗದರ್ಶನದಡಿ ಟೀಂ ಇಂಡಿಯಾ ಅಂತಹ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿರಲಿಲ್ಲ. ವೆಸ್ಟ್ ಇಂಡೀಸ್‌ನಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಮೊದಲ ಸುತ್ತಿನಲ್ಲೇ ಹೊರಬಿದ್ದು ತೀವ್ರ ಮುಖಭಂಗ ಅನುಭವಿಸಿತ್ತು. ಇಂತಹ ಕಠಿಣ ಸಂದರ್ಭದಲ್ಲಿ ಗ್ಯಾರಿ ಟೀಂ ಇಂಡಿಯಾ ಮಾರ್ಗದರ್ಶಕರಾಗಿ ನೇಮಕಗೊಂಡಿದ್ದರು.

ಕೊರೋನಾ ಮುಕ್ತ ನ್ಯೂಜಿಲೆಂಡ್‌ನಲ್ಲಿ ಟಿ20 ವಿಶ್ವಕಪ್ ಟೂರ್ನಿ?

ಗ್ಯಾರಿ ಕರ್ಸ್ಟನ್ ಟೀಂ ಇಂಡಿಯಾದ ಹಿರಿ-ಕಿರಿಯ ಆಟಗಾರರಲ್ಲಿ ಸಮನ್ವಯತೆ ಕಾಪಾಡುವಲ್ಲಿ ಯಶಸ್ವಿಯಾದರು. ನಾಯಕರಾಗಿದ್ದ ಧೋನಿ ಹಾಗೂ ಕೋಚ್ ಗ್ಯಾರಿ ಬಲಿಷ್ಠ ತಂಡವನ್ನು ಕಟ್ಟುವಲ್ಲಿ ಯಶಸ್ವಿಯಾಯಿತು. 2009ರಲ್ಲಿ ಧೋನಿ ನೇತೃತ್ವದ ಟೀಂ ಇಂಡಿಯಾ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ನಂ.1 ಪಟ್ಟ ಅಲಂಕರಿಸಿತು. ಇದರ ಜೊತೆಗೆ 2011ರಲ್ಲಿ ಭಾರತದಲ್ಲಿ ನಡೆದ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲೂ ಸಫಲವಾಯಿತು. ಇದರೊಂದಿಗೆ ಬರೋಬ್ಬರಿ 28 ವರ್ಷಗಳ ಏಕದಿನ ವಿಶ್ವಕಪ್ ಬರವನ್ನು ಭಾರತ ನೀಗಿಸಿಕೊಂಡಿತ್ತು. 

click me!