ಫ್ರೆಂಚ್‌ ಓಪನ್‌ ಟೆನಿಸ್‌: ಸೆರೆನಾ ವಿಲಿಯಮ್ಸ್‌ ಹೋರಾಟ ಅಂತ್ಯ!

By Suvarna News  |  First Published Jun 8, 2021, 10:03 AM IST

* ಫ್ರೆಂಚ್ ಓಪನ್ ಟೆನಿಸ್‌ ಟೂರ್ನಿಯಿಂದ ಸೆರೆನಾ ವಿಲಿಯಮ್ಸ್ ಔಟ್

* ಕಜಕಸ್ತಾನದ ಎಲೆನಾ ರೈಬಾಕಿನಾ ವಿರುದ್ಧ ಸೆರೆನಾಗೆ ಸೋಲು

* 24ನೇ ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಗೆಲ್ಲುವ ಸೆರೆನಾ ಕನಸು ಭಗ್ನ


ಪ್ಯಾರಿಸ್‌(ಜೂ.08): ಫ್ರೆಂಚ್‌ ಓಪನ್‌ ಗ್ರ್ಯಾನ್‌ ಸ್ಲಾಂ ಟೆನಿಸ್‌ ಟೂರ್ನಿಯಿಂದ ಅಮೆರಿಕದ ದಿಗ್ಗಜ ಆಟಗಾರ್ತಿ ಸೆರೆನಾ ವಿಲಿಯಮ್ಸ್‌ ಹೊರಬಿದ್ದಿದ್ದಾರೆ. ದಾಖಲೆಯ 24ನೇ ಹಾಗೂ ತಾಯಿಯಾದ ಬಳಿಕ ಮೊದಲ ಗ್ರ್ಯಾನ್‌ ಸ್ಲಾಂ ಗೆಲ್ಲುವ ಸೆರೆನಾ ಕನಸು, ಕನಸಾಗಿಯೇ ಉಳಿದಿದೆ. 

ಮಹಿಳಾ ಸಿಂಗಲ್ಸ್‌ 4ನೇ ಸುತ್ತಿನಲ್ಲಿ ಕಜಕಸ್ತಾನದ ಎಲೆನಾ ರೈಬಾಕಿನಾ ವಿರುದ್ಧ 3-6, 5-7 ಸೆಟ್‌ಗಳಲ್ಲಿ ಸೆರೆನಾ ವಿಲಿಯಮ್ಸ್ ಸೋಲುಂಡರು. ಕಜಕಸ್ತಾನದ 21 ಆಟಗಾರ್ತಿ ಮೊದಲ ಬಾರಿಗೆ ಮಹತ್ವದ ಪಂದ್ಯದಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಈ ಪಂದ್ಯವನ್ನು ಜಯಿಸಿದ್ದಕ್ಕೆ ತುಂಬಾ ಖುಷಿಯಾಗುತ್ತಿದೆ, ಇದೊಂದು ಅದ್ಭುತ ಅನುಭವ ಎಂದು ಎಲೆನಾ ರೈಬಾಕಿನಾ ಹೇಳಿದ್ದಾರೆ.

Take a bow 👏

Elena Rybakina breaks Serena Williams five times in her 6-3, 7-5 upset to earn a spot in her first Slam final eight. pic.twitter.com/T2NYVwHbuo

— Roland-Garros (@rolandgarros)

Tap to resize

Latest Videos

ಫ್ರೆಂಚ್‌ ಓಪನ್‌ ಟೆನಿಸ್‌: ಕ್ವಾರ್ಟರ್‌ಗೆ ಬೋಪಣ್ಣ ಜೋಡಿ

ಇದೇ ವೇಳೆ ಪುರುಷರ ಸಿಂಗಲ್ಸ್‌ನಲ್ಲಿ ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೆವ್‌, ಮಹಿಳಾ ಸಿಂಗಲ್ಸ್‌ನಲ್ಲಿ ಅಮೆರಿಕದ 17 ವರ್ಷದ ಕೊಕೋ ಗಾಫ್‌ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ.
 

click me!