8 ವರ್ಷದ ಹಿಂದೆ ಟ್ವೀಟ್‌ ಮಾಡಿದ ತಪ್ಪಿಗಾಗಿ ಇಂಗ್ಲೆಂಡ್‌ ವೇಗಿ ಈಗ ಸಸ್ಪೆಂಡ್!

By Suvarna NewsFirst Published Jun 8, 2021, 8:34 AM IST
Highlights

* ಇಂಗ್ಲೆಂಡ್ ವೇಗಿಯನ್ನು ದಿಢೀರ್ ಸಸ್ಪೆಂಡ್‌ ಮಾಡಿದ ಇಸಿಬಿ

* 8 ವರ್ಷ ಹಿಂದೆ ಮಾಡಿದ ತಪ್ಪಿಗೆ ಓಲಿ ರಾಬಿನ್ಸನ್‌ಗೆ ಈಗ ಶಿಕ್ಷೆ

* ವೇಗಿ ಓಲಿ ರಾಬಿನ್ಸನ್‌ ಮೊದಲ ಪಂದ್ಯದಲ್ಲೇ ಆಲ್ರೌಂಡ್ ಪ್ರದರ್ಶನ ನೀಡಿದ್ದರು.

ಲಂಡನ್(ಜೂ.08)‌: ನ್ಯೂಜಿಲೆಂಡ್‌ ವಿರುದ್ಧ ಮೊದಲ ಟೆಸ್ಟ್‌ನಲ್ಲಿ ಇಂಗ್ಲೆಂಡ್‌ ತಂಡಕ್ಕೆ ಪಾದಾರ್ಪಣೆ ಮಾಡಿದ ವೇಗಿ ಓಲಿ ರಾಬಿನ್ಸನ್‌ ಸಂಕಷ್ಟಕ್ಕೆ ಸಿಲುಕಿದ್ದಾರೆ. 2012-13ರಲ್ಲಿ  18-19 ವರ್ಷವಿದ್ದಾಗ ಮಾಡಿದ ಟ್ವೀಟ್‌ಗಳಿಗೆ ಈಗ ಇಂಗ್ಲೆಂಡ್ ವೇಗಿ  ಅಮಾನತು ಶಿಕ್ಷೆಗೆ ಗುರಿಯಾಗಿದ್ದಾರೆ. 

ಇಂಗ್ಲೆಂಡ್‌ ಕ್ರಿಕೆಟ್ ತಂಡದಿಂದ ಹೊರಬಿದ್ದಿರುವ ರಾಬಿನ್ಸನ್‌, ಕಿವೀಸ್‌ ವಿರುದ್ಧದ 2ನೇ ಟೆಸ್ಟ್‌ನಲ್ಲಿ ಆಡುವುದಿಲ್ಲ. ತಂಡದ ಬಯೋ ಬಬಲ್‌ನಿಂದ ಅವರನ್ನು ಹೊರಹಾಕಲಾಗಿದೆ. 9 ವರ್ಷಗಳ ಹಿಂದೆ ರಾಬಿನ್ಸನ್‌ ‘ನನ್ನ ಮುಸ್ಲಿಂ ರೂಂಮೇಟ್‌ ಬಾಂಬ್‌ನಂತಿದ್ದಾನೆ’, ‘ಟ್ರೈನ್‌ನಲ್ಲಿ ನನ್ನ ಪಕ್ಕದಲ್ಲಿರುವ ವ್ಯಕ್ತಿಗೆ ಎಬೋಲಾ ಇದೆ’ ಎಂತೆಲ್ಲಾ ಟ್ವೀಟ್‌ ಮಾಡಿದ್ದರು. ಆ ಟ್ವೀಟ್‌ನ ಚಿತ್ರಗಳನ್ನು ರಾಬಿನ್ಸನ್‌, ಮೊದಲ ಟೆಸ್ಟ್‌ ಕ್ರಿಕೆಟ್ ಪಂದ್ಯ ಆಡುವಾಗ ಹಲವರು ಪೋಸ್ಟ್‌ ಮಾಡಿ ಜನಾಂಗೀಯ ನಿಂದನೆ ಮಾಡಿರುವ ವ್ಯಕ್ತಿ ಅಂತರರಾಷ್ಟ್ರೀಯ ಕ್ರಿಕೆಟ್‌ ಆಡುತ್ತಿದ್ದಾನೆ ಎಂದು ಟೀಕಿಸಿದ್ದರು.

ಇಂಗ್ಲೆಂಡ್-ಕಿವೀಸ್ ಮೊದಲ ಟೆಸ್ಟ್‌ ಡ್ರಾನಲ್ಲಿ ಅಂತ್ಯ

ಕ್ರಿಕೆಟ್ ಕಾಶಿ ಲಾರ್ಡ್ಸ್‌ನಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಓಲಿ ರಾಬಿನ್ಸನ್‌ ನ್ಯೂಜಿಲೆಂಡ್ ವಿರುದ್ದದ ಮೊದಲ ಪಂದ್ಯದ ಎರಡು ಇನಿಂಗ್ಸ್‌ಗಳಿಂದ 7 ವಿಕೆಟ್ ಕಬಳಿಸಿ ಮಿಂಚಿದ್ದರು. ಇನ್ನು ಬ್ಯಾಟಿಂಗ್‌ನಲ್ಲೂ 42 ರನ್ ಬಾರಿಸುವ ಮೂಲಕ ಭವಿಷ್ಯದಲ್ಲಿ ತಾವೊಬ್ಬ ಉಪಯುಕ್ತ ಆಲ್ರೌಂಡರ್ ಆಗಬಲ್ಲೆ ಎನ್ನುವ ಭರವಸೆಯನ್ನು ಮೂಡಿಸಿದ್ದರು.

ಓಲಿ ರಾಬಿನ್ಸನ್‌ ತಮ್ಮ 18 ಹಾಗೂ 19ನೇ ವಯಸ್ಸಿನಲ್ಲಿ ಜನಾಂಗೀಯ ನಿಂದನೆಯ ಕುರಿತಾಗಿ ಟ್ವೀಟ್‌ ಮಾಡಿದ್ದರು. ಇದೀಗ ಜೂನ್‌ 10ರಿಂದ ಎಡ್ಜ್‌ಬಾಸ್ಟನ್‌ನಲ್ಲಿ ನ್ಯೂಜಿಲೆಂಡ್‌ ವಿರುದ್ದ ಆರಂಭವಾಗಲಿರುವ ಎರಡನೇ ಟೆಸ್ಟ್‌ ಪಂದ್ಯದಿಂದ ಹೊರಬಿದ್ದಿದ್ದಾರೆ. ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯವು ಡ್ರಾನಲ್ಲಿ ಅಂತ್ಯವಾಗಿತ್ತು.
 

click me!