Brendan Taylor Ban : ಜಿಂಬಾಬ್ವೆ ತಂಡದ ಮಾಜಿ ನಾಯಕ ಬ್ರೆಂಡನ್ ಟೇಲರ್ ಗೆ ನಿಷೇಧ ಶಿಕ್ಷೆ ವಿಧಿಸಿದ ಐಸಿಸಿ!

By Suvarna NewsFirst Published Jan 28, 2022, 7:58 PM IST
Highlights

ಮೂರೂವರೆ ವರ್ಷ ನಿಷೇಧ ಶಿಕ್ಷೆ ವಿಧಿಸಿದ ಐಸಿಸಿ ಭ್ರಷ್ಟಾಚಾರ ನಿಗ್ರಹ ಘಟಕ
ಎಲ್ಲಾ ಮಾದರಿಯ ಕ್ರಿಕೆಟ್ ನಿಂದಲೂ ಬ್ಯಾನ್
ಡೋಪಿಂಗ್ ನಿಯಮವನ್ನು ಉಲ್ಲಂಘಿಸಿದ ಆರೋಪವೂ ಇವರ ಮೇಲಿದೆ

ದುಬೈ (ಜ. 28): ಸ್ಪಾಟ್ ಫಿಕ್ಸಿಂಗ್ (Spot Fixing) ಮಾಡುವಂತೆ ಆಹ್ವಾನ ಬಂದ ವಿಚಾರವನ್ನು ತಕ್ಷಣವೇ ತಿಳಿಸಲು ವಿಫಲವಾಗಿರುವ ಜಿಂಬಾಬ್ವೆ (Zimbabwe) ತಂಡದ ಮಾಜಿ ನಾಯಕ ಬ್ರೆಂಡನ್ ಟೇಲರ್  (Brendan Tayl)ಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯ (ICC) ಭ್ರಷ್ಟಾಚಾರ ನಿಗ್ರಹ ಘಟಕ (anti-corruption unit), ಎಲ್ಲಾ ಮಾದರಿಯ ಕ್ರಿಕೆಟ್ ನಿಂದ ಮೂರೂವರೆ ವರ್ಷ ನಿಷೇಧ ಶಿಕ್ಷೆ ವಿಧಿಸಿದೆ. ಈ ಕುರಿತಾಗಿ ಶುಕ್ರವಾರ ಮಾಧ್ಯಮ ಪ್ರಕಟಣೆ ನೀಡಿರುವ ಐಸಿಸಿ, ಟೇಲರ್ ಕುಡ ನಿಷೇಧ ಶಿಕ್ಷೆಯನ್ನು ಒಪ್ಪಿಕೊಂಡಿದ್ದು, ಜನವರಿ 28 ರಿಂದಲೇ ಶಿಕ್ಷೆ ಆರಂಭವಾಗಲಿದೆ. ಇದರಲ್ಲಿ ಡೋಪಿಂಗ್ ನಿಯಮ (Doping Code) ಉಲ್ಲಂಘನೆ ಮಾಡಿದ ಆರೋಪವೂ ಇವರ ಮೇಲಿದೆ.

ಕೆಲ ದಿನಗಳ ಹಿಂದೆ ಟ್ವಿಟರ್ ನಲ್ಲಿ(Twitter) ಈ ಕುರಿತಾಗಿ ಹೇಳಿಕೆ ಬಿಡುಗಡೆ ಮಾಡಿದ್ದ ಬ್ರೆಂಡನ್ ಟೇಲರ್, ಭಾರತ ಪ್ರವಾಸದಲ್ಲಿದ್ದ ವೇಳೆ ನಾನು ಕೊಕೇನ್ ಸೇವನೆ ಮಾಡುತ್ತಿದ್ದ ವಿಡಿಯೋವನ್ನು ಉದ್ಯಮಿಯೊಬ್ಬರು ಚಿತ್ರೀಕರಣ ಮಾಡಿದ್ದರು. ಬಳಿಕ ಈ ವಿಡಿಯೋವನ್ನು ಇಟ್ಟುಕೊಂಡು ಪಂದ್ಯದಲ್ಲಿ ಸ್ಪಾಟ್ ಫಿಕ್ಸಿಂಗ್ ಮಾಡುವಂತೆ ಒಪ್ಪಂದ ಮಾಡಿಕೊಳ್ಳಲು ಬ್ಲ್ಯಾಕ್ ಮೇಲ್ (Black Mail) ಮಾಡುತ್ತಿದ್ದರು ಎಂದು ಹೇಳಿದ್ದರು. ಮುಂದಿನ ತಿಂಗಳು 36ನೇ ವರ್ಷಕ್ಕೆ ಕಾಲಿಡಲಿರುವ ಬ್ರೆಂಡನ್ ಟೇಲರ್, ಈಗಾಗಲೇ ತಾವು ಪುನಃಶ್ಚೇತನ ಕ್ಲಿನಿಕ್ ಗೆ ಸೇರಿರುವುದಾಗಿ ಹೇಳಿದ್ದಾರೆ.

ಕಳೆದ ಕೆಲವು ವರ್ಷಗಳಲ್ಲಿ ನಾನು ಕೆಲವು ಡ್ರಗ್ ಟೆಸ್ಟ್ ಗಳನ್ನು ಉಲ್ಲಂಘನೆ ಮಾಡುತ್ತಾ ಬಂದಿದ್ದೆ. ಆದರೆ, ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿಯಾಗುವ ಕೊನೆಯ ಪಂದ್ಯದ ವೇಳೆ, 2021ರ ಸೆಪ್ಟೆಂಬರ್ ನಲ್ಲಿ ಉದ್ದೀಪನ ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿದ್ದೆ ಎಂದು ಬ್ರೆಂಡನ್ ಟೇಲರ್ ಹೇಳಿದ್ದಾರೆ.
 

The ICC has released a statement on Brendan Taylor.https://t.co/IYKHAVeZHa

— ICC (@ICC)


"ಕಳೆದ ಎರಡೂವರೆ ವರ್ಷದಲ್ಲಿ ನಾನು ಸಾಕಷ್ಟು ಡ್ರಗ್ ಟೆಸ್ಟ್ ಗಳನ್ನು ತಪ್ಪಿಸಿಕೊಂಡಿದ್ದೆ. ಆದರೆ, ಡ್ರಗ್ ವ್ಯಸನಿಯಾಗಿ ವಿನಾಶದತ್ತ ಸಾಗುತ್ತಿದ್ದ ವೇಳೆ ನಾನು ಡ್ರಗ್ ಟೆಸ್ಟ್ ನಲ್ಲಿ ಸಿಕ್ಕಿಬಿದ್ದಿದ್ದೆ' ಎಂದು ಹೇಳಿದ್ದಾರೆ. ಬ್ರೆಂಡನ್ ಟೇಲರ್ ತನಗೆ ಬಂದಿದ್ದ ಆಹ್ವಾನವನ್ನು ತಿಳಿಸುವಲ್ಲಿ ವಿಳಂಬ ಮಾಡಿದ್ದು ಮಾತ್ರವಲ್ಲ, ಫಿಕ್ಸಿಂಗ್ ಮಾಡಿಕೊಳ್ಳುವಂತೆ ಒತ್ತಾಯಿಸಿದ್ದ ವ್ಯಕ್ತಿ ನೀಡಿದ ಆತಿಥ್ಯ ಹಾಗೂ ಉಡುಗೊರೆಗಳನ್ನು ಅವರು ಸ್ವೀಕರಿಸಿದ್ದಾರೆ ಇದೂ ಕೂಡ ಅಪರಾಧ ಎಂದು ಐಸಿಸಿ ಹೇಳಿದೆ.

2019ರಲ್ಲಿ ಆದ ಈ ಪ್ರಕರಣದ ಕುರಿತಾಗಿ ನಾನು ತ್ವರಿತವಾಗಿ ಐಸಿಸಿ ಮಾಹಿತಿ ನೀಡಲು ವಿಫಲವಾಗಿದ್ದೆ ಆ ಕಾರಣಕ್ಕಾಗಿ ಐಸಿಸಿಯಿಂದ ನಾನು ನಿಷೇಧಕ್ಕೂ ಒಳಗಾಗಬಹುದು ಎಂದು ಹೇಳಿದ್ದರು. ಪ್ರಾಯೋಜಕತ್ವ ಒಪ್ಪಂದದ ಕುರಿತಾಗಿ ಮಾತನಾಡಲು ಉದ್ಯಮಿಯೊಬ್ಬರು ನನ್ನನ್ನು ಭಾರತಕ್ಕೆ ಆಹ್ವಾನಿಸಿದ್ದರು. ಅದರೊಂದಿಗೆ ಜಿಂಬಾಬ್ವೆಯಲ್ಲಿ ಟಿ20 ಟೂರ್ನಮೆಂಟ್ ಅನ್ನು ಆಯೋಜನೆ ಮಾಡುವ ಪ್ರಸ್ತಾಪವನ್ನೂ ಮಾಡುವುದಾಗಿ ತಿಳಿಸಿದ್ದರು. ಈ ಕಾರಣಕ್ಕಾಗಿ 15 ಸಾವಿರ ಯುಎಸ್ ಡಾಲರ್ ಮೊತ್ತವನ್ನು ನೀಡುವುದಾಗಿಯೂ ತಿಳಿಸಿದ್ದರು. ಆದರೆ, ತಮ್ಮ ಹೇಳಿಕೆಯಲ್ಲಿ ಉದ್ಯಮಿಯ ಹೆಸರನ್ನು ಬಹಿರಂಗಪಡಿಸಲು ಅವರು ನಿರಾಕರಿಸಿದ್ದರು.

Ind vs WI: ಟೀಂ ಇಂಡಿಯಾ ಆಯ್ಕೆಯಲ್ಲಿ ಮತ್ತೊಮ್ಮೆ ಎಡವಿತೇ ಬಿಸಿಸಿಐ..?
ಕಳೆದ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿಯಾಗುವ ಮೊದಲು 35 ವರ್ಷದ ಬ್ರೆಂಡನ್ ಟೇಲರ್, 205 ಏಕದಿನ, 34 ಟೆಸ್ಟ್ ಹಾಗೂ 45 ಟಿ20 ಪಂದ್ಯಗಳನ್ನು ಅಡಿದ್ದರು. ಸ್ಪಾಟ್ ಫಿಕ್ಸಿಂಗ್ ಗಾಗಿ ನನಗೆ ಸ್ವಲ್ಪ ಹಣವನ್ನು ನೀಡಲಾಗಿತ್ತು. ಆದರೆ, ಸ್ಪಾಟ್ ಫಿಕ್ಸಿಂಗ್ ಮಾಡಲು ಸಾಧ್ಯವಾಗಿರಲಿಲ್ಲ ಎಂದಿದ್ದಾರೆ. 2004 ರಿಂದ 2021ರವರೆಗೆ ಜಿಂಬಾಬ್ವೆ ತಂಡವನ್ನು ಪ್ರತಿನಿಧಿಸಿದ್ದ ಬ್ರೆಂಡನ್ ಟೇಲರ್,  17 ಶತಕಗಳೊಂದಿಗೆ 9938 ರನ್ ಬಾರಿಸಿದ್ದಾರೆ. 

Happy Birthday Shafali Verma: 'ಲೇಡಿ ಸೆಹ್ವಾಗ್' ಶೆಫಾಲಿ ವರ್ಮಾಗಿಂದು ಹುಟ್ಟುಹಬ್ಬದ ಸಂಭ್ರಮ
ಇದರೊಂದಿಗೆ ನಿಷೇಧಿತ ಬೆಂಜೊಯ್ಲೆಕಾಗ್ನಿನ್‌ಗೆ ಪಾಸಿಟಿವ್ ಪರೀಕ್ಷೆಗೂ ಒಳಪಟ್ಟಿದ್ದರು. ಕೊಕೇನ್ ಸೇವನೆಯ ಪರಿಣಾಮದಿಂದಾಗಿ ಈ ಉದ್ದೀಪನದ ಲಕ್ಷಣಗಳು ಸಿಕ್ಕಿಬೀಳುತ್ತವೆ. ಮೂರೂವರ್ಷ ವರ್ಷದ ನಿಷೇಧದ ವೇಳೆ ಏಕಕಾಲದಲ್ಲಿಯೇ 1 ತಿಂಗಳ ಉದ್ದೀಪನ ಕಾಯ್ದೆ ಉಲ್ಲಂಘನೆಯ ನಿಷೇಧವೂ ನಡೆಯಲಿದೆ. 2025ರ ಜುಲೈ 28 ರಂದು ಬ್ರೆಂಡನ್ ಟೇಲರ್ ಮತ್ತೆ ಕ್ರಿಕೆಟ್ ಆಡಲು ಮುಕ್ತವಾಗಿರುತ್ತಾರೆ ಎಂದು ಐಸಿಸಿ ತಿಳಿಸಿದೆ.

click me!