
ನವದೆಹಲಿ(ಮಾ.15): ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಅವರನ್ನು ಬಿಸಿಸಿಐ ಹಠಾತ್ತಾಗಿ ವೀಕ್ಷಕ ವಿವರಣೆಗಾರ ಹುದ್ದೆಯಿಂದ ಕೈಬಿಟ್ಟಿದೆ.
ವಿವಾದಗಳ ಸರದಾರ ಸಂಜಯ್ ಮಂಜ್ರೇಕರ್‌ಗೆ ಬಿಸಿಸಿಐ ಕಮೆಂಟರಿಯಿಂದ ಕೊಕ್?
ಕಳೆದ ಕೆಲ ತಿಂಗಳುಗಳಿಂದ ಮಂಜ್ರೇಕರ್ ಕೆಲವು ವಿವಾದಗಳನ್ನು ಸೃಷ್ಟಿಸಿದ್ದರು. ಅದರಲ್ಲೂ 2019ರ ಐಸಿಸಿ ವಿಶ್ವಕಪ್ ವೇಳೆ ಟೀಂ ಇಂಡಿಯಾದ ಆಲ್ರೌಂಡರ್ ರವೀಂದ್ರ ಜಡೇಜಾ ಅವರ ಕುರಿತಾಗಿ ನೀಡಿದ್ದ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟೀಕೆ ವ್ಯಕ್ತವಾಗಿತ್ತು. ಜಡೇಜಾ ಪ್ರತಿನಿಧಿಸುವ ಐಪಿಎಲ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ಸಹ ಟ್ವೀಟರ್‌ನಲ್ಲಿ ಅಸಮಾಧಾನ ವ್ಯಕ್ತಪಡಿಸಿತ್ತು.
ಜಡೇಜಾ ಮಾತಿನೇಟು: ಸಂಜಯ್ ಮಂಜ್ರೇಕರ್‌ಗೆ ಬೇಕಿತ್ತಾ ಇದು..?
ಮಂಜ್ರೇಕರ್ ಕಾರ್ಯ ವೈಖರಿ ಬಗ್ಗೆ ಬಿಸಿಸಿಐ ಹಿರಿಯ ಅಧಿಕಾರಿಗಳು ಅಸಮಾಧಾನ ಹೊಂದಿದ್ದು, ಅವರನ್ನು ಐಪಿಎಲ್ ವೀಕ್ಷಕ ವಿವರಣೆಯಿಂದಲೂ ದೂರವಿಡಲಾಗುತ್ತದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಬಿಸಿಸಿಐ ತೀರ್ಮಾನ ಹೊರಬೀಳುತ್ತಿದ್ದಂತೆ ಚೆನ್ನೈ ಸೂಪರ್ ಕಿಂಗ್ಸ್ ತಂಡವು ತನ್ನ ಅಧಿಕೃತ ಟ್ವಿಟರ್ ಖಾತೆಯಿಂದ ಟ್ವೀಟ್ ಮಾಡಿ ಮಂಜ್ರೇಕರ್ ಅವರ ಕಾಲೆಳೆದಿದೆ.
ಮಂಜ್ರೇಕರ್ 1987ರಿಂದ 1996ರವರೆಗೆ 37 ಟೆಸ್ಟ್ ಹಾಗೂ 74 ಏಕದಿನ ಪಂದ್ಯಗಳನ್ನಾಡಿದ್ದು, 5 ಶತಕ ಸಹಿತ 4,037 ರನ್ ಬಾರಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.