ಕೊರೋನಾ ಎಫೆಕ್ಟ್: ಎಲ್ಲಾ ದೇಸಿ ಕ್ರಿಕೆಟ್ ಟೂರ್ನಿ ರದ್ದುಪಡಿಸಿದ ಬಿಸಿಸಿಐ..!

By Suvarna News  |  First Published Mar 14, 2020, 6:32 PM IST

ಕೊರೋನಾಗೆ ಬೆಚ್ಚಿಬಿದ್ದಿರುವ ಬಿಸಿಸಿಐ ಈಗಾಗಲೇ ಐಪಿಎಲ್ ಟೂರ್ನಿಯನ್ನು ಮುಂದೂಡಿದೆ. ಇದೀಗ ದೇಶಿ ಟೂರ್ನಿಯನ್ನು ತಾತ್ಕಾಲಿಕವಾಗಿ ರದ್ದುಪಡಿಸಿದೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ.


ಮುಂಬೈ(ಮಾ.14): ದೇಶಾದ್ಯಂತ ಕರೋನಾ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯು ಮುನ್ನೆಚ್ಚರಿಕಾ ಕ್ರಮವಾಗಿ ಎಲ್ಲಾ ಮಾದರಿಯ ದೇಸಿ ಟೂರ್ನಿಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿದೆ.

ಕೊರೋನಾ ವಿರುದ್ಧ ಹೋರಾಡಲು ಕರೆ ಕೊಟ್ಟ ವಿರಾಟ್ ಕೊಹ್ಲಿ..!

Latest Videos

undefined

ಕರೋನಾ ವೈರಸ್ ಪ್ರಕರಣಗಳು ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ಇರಾನಿ ಕಪ್, ಸೀನಿಯರ್ ಇನ್ ಡೇ ನಾಕ್‌ಔಟ್, ಮಹಿಳಾ ಅಂಡರ್ 19 ಟಿ20 ಲೀಗ್, ಸೂಪರ್ ಲೀಗ್ ಮತ್ತು ನಾಕೌಟ್, ಮಹಿಳಾ ಅಂಡರ್ 19 ಟಿ20 ಚಾಲೆಂಜರ್ಸ್ ಟ್ರೋಫಿ, ಮಹಿಳಾ ಅಂಡರ್ 23 ನಾಕೌಟ್ ಹಾಗೂ ಮಹಿಳಾ ಅಂಡರ್ 23 ಒನ್ ಡೇ ಚಾಲೆಂಜರ್ಸ್ ಟೂರ್ನಿಗಳನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ.  

UPDATE: In view of the ongoing Novel Corona Virus (COVID-19) outbreak, all domestic matches have been put on hold.

More details 👉 https://t.co/4J2CtXzvr9 pic.twitter.com/RopOjSfYZX

— BCCI Domestic (@BCCIdomestic)

ಮಾರಣಾಂತಿಕ ಕೊರೋನಾ ವೈರಸ್ ಕ್ರೀಡಾ ಕ್ಷೇತ್ರದ ಮೇಲೆ ಕರಿ ನೆರಳು ಬೀಳುವಂತೆ ಮಾಡಿದೆ. ಇಂಡೋ-ಆಫ್ರಿಕಾ ಏಕದಿನ ಸರಣಿ, ಆಸೀಸ್-ಕಿವೀಸ್ ಸರಣಿಗಳು ಮುಂದೂಡಲ್ಪಟ್ಟಿವೆ. ಇನ್ನು 2020ರ ಐಪಿಎಲ್ ಟೂರ್ನಿಯು ಏಪ್ರಿಲ್ 15ಕ್ಕೆ ಮುಂದೂಡಲ್ಪಟ್ಟಿದೆ. ಒಂದು ವೇಳೆ ಐಪಿಎಲ್ ಟೂರ್ನಿ ನಡೆದರು, ಖಾಲಿ ಸ್ಟೇಡಿಯಂನಲ್ಲಿ ನಡೆಯುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಬಂಗಾಳ-ಸೌರಾಷ್ಟ್ರ ನಡುವಿನ ರಣಜಿ ಟ್ರೋಫಿ ಫೈನಲ್ ಪಂದ್ಯದ ಅಂತಿಮ ದಿನ ಪಂದ್ಯ ವೀಕ್ಷಿಸಲು ಪ್ರೇಕ್ಷಕರಿಗೆ ಅವಕಾಶ ನೀಡಿರಲಿಲ್ಲ. 
 

click me!