ಹೊಸ ಮನೆ ಖರೀದಿಸಿದ ಎಂ.ಎಸ್.ಧೋನಿ; ಪುಣೆಗೆ ಶಿಫ್ಟ್ ಆಗ್ತಾರಾ ಮಾಜಿ ನಾಯಕ?

Published : May 30, 2021, 03:20 PM IST
ಹೊಸ ಮನೆ ಖರೀದಿಸಿದ ಎಂ.ಎಸ್.ಧೋನಿ; ಪುಣೆಗೆ ಶಿಫ್ಟ್ ಆಗ್ತಾರಾ ಮಾಜಿ ನಾಯಕ?

ಸಾರಾಂಶ

ಹೊಸ ಮನೆ ಖರೀದಿಸಿದ ಸಿಎಸ್‌ಕೆ ನಾಯಕ ಎಂ.ಎಸ್.ಧೋನಿ  ರಾಂಚಿಯಲ್ಲಿ ಫಾರ್ಮ್ ಹೌಸ್ ಹೊಂದಿರುವ ಧೋನಿ ಪುಣೆಯಲ್ಲಿ ಮನೆ ಖರೀದಿ ರಾಂಚಿಯಿಂದ ಪುಣೆಗೆ ಶಿಫ್ಟ್ ಆಗ್ತಾರಾ ಧೋನಿ?

ಪುಣೆ(ಮೇ.30):  ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್.ಧೋನಿ ಸದ್ಯ ಕುಟುಂಬದ ಜೊತೆ ಕಾಲಕಳೆಯುತ್ತಿದ್ದಾರೆ. ರಾಂಚಿ ಹೊರವಲಯದಲ್ಲಿರುವ ಭವ್ಯ ಬಂಗಲೆ, ಫಾರ್ಮ್ ಹೌಸ್‌ನಲ್ಲಿ ಧೋನಿ ವಿಶ್ರಾಂತಿ ಜೀವನದಲ್ಲಿದ್ದಾರೆ. ಇದರ ನಡುವೆ ಧೋನಿ ಪುಣೆಯಲ್ಲಿ ಹೊ ಮನೆ ಖರೀದಿಸಿದ್ದಾರೆ.

ಲಾಕ್‌ಡೌನ್‌ನಲ್ಲಿ ಧೋನಿ ಫಾರ್ಮ್‌ ಹೌಸ್‌ನಲ್ಲಿ ಏನು ಮಾಡ್ತಿದ್ದಾರೆ ಗೊತ್ತಾ?

ಪುಣೆಯ ಪಿಂಪಿರಿ ಚಿಂಚಿವಾಡ್‌ನಲ್ಲಿನ ಎಸ್ಟಾಡೋ ಪ್ರಸಿಡೆಂಟಲ್ ಸೊಸೈಟಿಯಿಂದ ವಿಲ್ಲಾ ಖರೀದಿಸಿದ್ದಾರೆ. ಅರಮನೆಯಂತಿರುವ ಭವ್ಯ ಬಂಗಲೆ ಖರೀದಿಸಿರುವ ಧೋನಿ, ಕುಟುಂಬ ಸಮೇತ ಪುಣೆಗ ಶಿಫ್ಟ್ ಆಗ್ತಾರಾ ಅನ್ನೋ ಅನುಮಾನಗಳ ಮೂಡ ತೊಡಗಿದಿ.

ಇತ್ತೀಚೆಗಷ್ಟೆ ಧೋನಿ ಮುಂಬೈ ಪ್ರಖ್ಯಾತ  ಅಪಾರ್ಟ್‌ಮೆಂಟ್ ಒಂದರಲ್ಲಿ ಮನೆ ಖರೀದಿಸಿದ್ದಾರೆ. ಜೊತೆಗೆ ಮುಂಬೈನಲ್ಲಿ ಧೋನಿ ಕಚೇರಿ ಕಾರ್ಯಗಳು ನಡೆಯುತ್ತಿದೆ. ಇದರ ನಡುವೆ ಇದೀಗ ಪುಣೆಯಲ್ಲೂ ಮನೆ ಖರೀದಿಸಿದ್ದಾರೆ. ಈಗಾಗಲೇ ಧೋನಿ ಮನೋರಂಜನೆ ಕ್ಷೇತ್ರಕ್ಕೂ ಕಾಲಿಟ್ಟಿದ್ದಾರೆ. MSD ಎಂಟರ್ಟೈನ್ಮೆಂಟ್ ಸಂಸ್ಥೆ ಹುಟ್ಟುಹಾಕಿದ್ದಾರೆ. ಕಳೆದ ವರ್ಷ ಈ ಸಂಸ್ಥೆ ಒಂದು ಸಾಕ್ಷ್ಯ ಚಿತ್ರ ನಿರ್ಮಿಸಿದೆ. MSD ಎಂಟರ್ಟೈನ್ಮೆಂಟ್ ಸಂಸ್ಥೆಯನ್ನು ಧೋನಿ ಪತ್ನಿ ಸಾಕ್ಷಿ ನೋಡಿಕೊಳ್ಳುತ್ತಿದ್ದಾರೆ.

ತಮ್ಮದೇ ಸಿನಿಮಾಕ್ಕೆ 45 ಕೋಟಿ ರೂ ಪಡೆದಿದ್ದ ಧೋನಿ..!

ರಾಂಚಿಯಿಂದ ಮುಂಬೈಗೆ ತೆರಳುವುದು ಸುಲಭದ ಮಾತಲ್ಲ. ಹೀಗಾಗಿ ಪುಣೆಯಲ್ಲಿ ಮನೆ ಖರೀದಿ ಮಾಡಿದ್ದಾರೆ. ಪುಣೆಯಿಂದ ಮುಂಬೈ ಪ್ರಯಾಣ ಹೆಚ್ಚಿಲ್ಲ. ಹೀಗಾಗಿ ಧೋನಿ ರಾಂಚಿಯಿಂದ ಪುಣೆಗೆ ಸ್ಥಳಾಂತರವಾಗುವ ಸಾಧ್ಯತೆಗಳಿವೆ ಅನ್ನೋ ಮಾತುಗಳು ಕೇಳಿಬಂದಿದೆ. 

ಆದರೆ ಧೋನಿ ಈ ಹಿಂದೆ ತಾನು ರಾಂಚಿಯಲ್ಲಿ ವಿಶ್ರಾಂತಿ ಜೀವನ ನಡೆಸುವುದಾಗಿ ಸ್ಪಷ್ಟಪಡಿಸಿದ್ದರು. ಇದಕ್ಕಾಗಿ ರಾಂಚಿ ನಗರದಲ್ಲಿದ್ದ ಮನೆ ತೊರೆದು ಹೊರವಲಯದಲ್ಲಿ ಫಾರ್ಮ್ ಹೌಸ್ ನಿರ್ಮಿಸಿದ್ದಾರೆ. ಹುಟ್ಟೂರಿನಿಂದ ಧೋನಿ ಪುಣೆಗೆ ಸ್ಥಳಾಂತರವಾಗೋ ಯಾವುದೇ ಸಾಧ್ಯತೆಗಳಿಲ್ಲ ಎಂದು ಧೋನಿ ಆತ್ಮೀಯ ಗೆಳೆಯ, ಮ್ಯಾನೇಜರ್ ಅರುಣ್ ಪಾಂಡೆ ಹೇಳಿದ್ದಾರೆ. 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಿರಾಟ್ ಕೊಹ್ಲಿಯಲ್ಲ, ಈ ಆಟಗಾರ ಹೆಚ್ಚು ಹಾರ್ಡ್‌ ವರ್ಕ್ ಮಾಡುವ ಆಟಗಾರ ಎಂದ ಯಶಸ್ವಿ ಜೈಸ್ವಾಲ್!
14 ವರ್ಷದ ವೈಭವ್ ಸೂರ್ಯವಂಶಿ 95 ಎಸೆತಕ್ಕೆ 171; ಯುವ ಭಾರತಕ್ಕೆ 234 ರನ್ ಜಯ!