ಶ್ರೀಲಂಕಾ ಕ್ರಿಕೆಟ್‌ ತಂಡಕ್ಕೆ ಮಿಕಿ ಆರ್ಥರ್‌ ಕೋಚ್‌!

Published : Dec 06, 2019, 10:50 AM IST
ಶ್ರೀಲಂಕಾ ಕ್ರಿಕೆಟ್‌ ತಂಡಕ್ಕೆ ಮಿಕಿ ಆರ್ಥರ್‌ ಕೋಚ್‌!

ಸಾರಾಂಶ

ಮುಂಬರುವ ಟಿ20 ವಿಶ್ವಕಪ್ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು ಶ್ರೀಲಂಕಾ ಕ್ರಿಕೆಟ್ ಮಂಡಳಿ ತಂಡಕ್ಕೆ ನೂತನ ಕೋಚ್ ನೇಮಿಸಿದೆ. ಪಾಕ್ ಮಾಜಿ ಕೋಚ್ ಇದೀಗ ಲಂಕಾ ತಂಡಕ್ಕೆ ಮಾರ್ಗದರ್ಶನ ಮಾಡಲಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

ಕೊಲಂಬೊ(ಡಿ.06): ಏಕ​ದಿನ ವಿಶ್ವ​ಕಪ್‌ನಲ್ಲಿ ಕಳಪೆ ಪ್ರದರ್ಶನ ತೋರಿದ ಹಿನ್ನೆಲೆಯಲ್ಲಿ ತನ್ನ ಕೋಚಿಂಗ್‌ ಸಿಬ್ಬಂದಿ​ಯನ್ನು ಶ್ರೀಲಂಕಾ ಕ್ರಿಕೆಟ್‌ ಮಂಡಳಿ ಬದ​ಲಿಸಿದೆ. ದಕ್ಷಿಣ ಆಫ್ರಿ​ಕಾದ ಮಿಕಿ ಆರ್ಥರ್‌ರನ್ನು ನೂತ​ನ ಪ್ರಧಾನ ಕೋಚ್‌ ಆಗಿ ಗುರು​ವಾರ ಘೋಷಿ​ಸ​ಲಾ​ಯಿತು. 

ವಿಶ್ವಕಪ್‌ ಸೋಲು: ಪಾಕ್ ಕೋಚ್‌ಗೆ ಗೇಟ್‌ಪಾಸ್

ಆರ್ಥರ್‌ 2 ವರ್ಷಗಳ ಅವ​ಧಿಯ ಗುತ್ತಿ​ಗೆಗೆ ಸಹಿ ಹಾಕಿ​ದ್ದಾರೆ ಎಂದು ತಿಳಿ​ದು ಬಂದಿದೆ. ಅವರು ಈ ಮೊದಲು ಆಸ್ಪ್ರೇ​ಲಿಯಾ, ದಕ್ಷಿಣ ಆಫ್ರಿಕಾ ಹಾಗೂ ಪಾಕಿ​ಸ್ತಾನ ತಂಡ​ಗಳ ಕೋಚ್‌ ಆಗಿ ಕಾರ್ಯ​ನಿ​ರ್ವ​ಹಿ​ಸಿ​ದ್ದರು. ಪಾಕಿ​ಸ್ತಾನ ತಂಡ ವಿಶ್ವ​ಕಪ್‌ನಲ್ಲಿ ಕಳಪೆ ಪ್ರದ​ರ್ಶನ ತೋರಿ​ದ ಕಾರಣ, ವಿಶ್ವ​ಕಪ್‌ ಬಳಿಕ ಆರ್ಥರ್‌ರನ್ನು ಕೋಚ್‌ ಸ್ಥಾನ​ದಿಂದ ವಜಾ​ಗೊ​ಳಿ​ಸ​ಲಾ​ಗಿತ್ತು. 

ಮಾಲಿಂಗ U ಟರ್ನ್‌: ಇನ್ನೆ​ರಡು ವರ್ಷ ನಿವೃತ್ತಿಯಿ​ಲ್ಲ!

ಇನ್ನು ಜಿಂಬಾಬ್ವೆಯ ಮಾಜಿ ಆಟ​ಗಾ​ರ ಗ್ರಾಂಟ್‌ ಫ್ಲವರ್‌ ನೂತನ ಬ್ಯಾಟಿಂಗ್‌ ಕೋಚ್‌ ಆಗಿ ನೇಮ​ಕ​ಗೊಂಡರೆ, ಆಸ್ಪ್ರೇ​ಲಿ​ಯಾದ ಡೇವಿಡ್‌ ಸಾಕೆರ್‌ ಬೌಲಿಂಗ್‌ ಕೋಚ್‌ ಹುದ್ದೆ ಅಲಂಕ​ರಿ​ಸಿ​ದ್ದಾರೆ. 2019ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಲಂಕಾ ಪಡೆ ಸೆಮಿಫೈನಲ್ ಪ್ರವೇಶಿಸಲು ವಿಫಲವಾಗಿತ್ತು. 6ನೇ ಸ್ಥಾನದೊಂದಿಗೆ ವಿಶ್ವಕಪ್ ಅಭಿಯಾನ ಅಂತ್ಯಗೊಳಿಸಿತ್ತು. 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡಿಕಾಕ್‌ ಡ್ಯಾಶಿಂಗ್‌ ಆಟದ ಮುಂದೆ ಥಂಡಾ ಹೊಡೆದ ಟೀಮ್‌ ಇಂಡಿಯಾ!
ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯದ ಟಿಕೆಟ್ ಮಾರಾಟ ಆರಂಭ, 450 ರೂಗೆ ಬುಕಿಂಗ್ ಹೇಗೆ?