ಅಶ್ವಿನ್‌ ಸರ್ವಕಾಲಿಕ ಶ್ರೇಷ್ಠ ಆಟಗಾರ ಅಲ್ಲ.. ರೋಹಿತ್‌ ಬಾಯ್ತಪ್ಪಿ ಹೇಳಿರಬಹುದು...

Suvarna News   | Asianet News
Published : Mar 09, 2022, 02:56 PM IST
ಅಶ್ವಿನ್‌ ಸರ್ವಕಾಲಿಕ ಶ್ರೇಷ್ಠ ಆಟಗಾರ ಅಲ್ಲ.. ರೋಹಿತ್‌ ಬಾಯ್ತಪ್ಪಿ ಹೇಳಿರಬಹುದು...

ಸಾರಾಂಶ

ಅಶ್ವಿನ್‌ ಸರ್ವಕಾಲಿಕ ಶ್ರೇಷ್ಠ ಆಟಗಾರ ಅಲ್ಲ ಎಂದ ಪಾಕಿಸ್ತಾನಿ ಕ್ರಿಕೆಟಿಗ ವಿದೇಶದಲ್ಲಿ ಆಡಿದ ಪಂದ್ಯಗಳನ್ನು ನೋಡಿದರೆ ಹಾಗೆ ಅನಿಸುತ್ತಿಲ್ಲ ಪಾಕಿಸ್ತಾನದ ಮಾಜಿ ನಾಯಕ ರಶೀದ್ ಲತೀಫ್ ಹೇಳಿಕೆ  

ನವದೆಹಲಿ(ಮಾ.9): ಇತ್ತೀಚೆಗೆ ಶ್ರೀಲಂಕಾ ವಿರುದ್ದದ ಮೊಹಾಲಿ ಟೆಸ್ಟ್ (Mohali Test) ಪಂದ್ಯದಲ್ಲಿ ಅತ್ಯುತ್ತಮ ಸಾಧನೆ ತೋರಿದ ಬೌಲರ್‌   ರವಿಚಂದ್ರನ್‌ ಅಶ್ವಿನ್‌ ಅವರನ್ನು ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರು ಸಾರ್ವಕಾಲಿಕ ಶ್ರೇಷ್ಠ ಎಂದು ಕೊಂಡಾಡಿದ್ದರು. ಆದರೆ ಪಾಕಿಸ್ತಾನದ ಮಾಜಿ ನಾಯಕ ರಶೀದ್ ಲತೀಫ್ ಅವರು ರೋಹಿತ್ ಮಾತನ್ನು ಒಪ್ಪುವುದಿಲ್ಲ ಎಂದು ಹೇಳಿದ್ದಾರೆ.

ಲತೀಫ್ ಪ್ರಕಾರ, ಅಶ್ವಿನ್ ಒಬ್ಬ 'ಶ್ರೇಷ್ಠ' ಬೌಲರ್, ಆದರೆ ವಿದೇಶದಲ್ಲಿ ಅವರ ಪ್ರದರ್ಶನ ನೋಡಿದರೆ ಅವರಿನ್ನೂ 'ಸಾರ್ವಕಾಲಿಕ ಶ್ರೇಷ್ಠ'  ಆಗಿಲ್ಲ. ಅಶ್ವಿನ್, ನಿಸ್ಸಂದೇಹವಾಗಿ, ಒಬ್ಬ ಶ್ರೇಷ್ಠ ಬೌಲರ್, ಅವರು ತಮ್ಮ ಬೌಲಿಂಗ್‌ನಲ್ಲಿ ಬದಲಾವಣೆಗಳನ್ನು ತಂದಿದ್ದಾರೆ. ನೀವು ಎಸ್‌ಜಿ ಬಾಲ್‌ನೊಂದಿಗೆ ತಮ್ಮ ನೆಲದಲ್ಲಿ ಅಶ್ವಿನ್ ಅವರನ್ನು ನೋಡಿದರೆ, ಅವರು ಭಾರತದ ಅತ್ಯುತ್ತಮ ಸ್ಪಿನ್ನರ್ ಎಂಬುದರಲ್ಲಿ ಸಂದೇಹವಿಲ್ಲ. ಆದರೆ ವಿದೇಶದಲ್ಲಿ ಆಡಿದ ಪಂದ್ಯಗಳನ್ನು ನೋಡಿ ಹೇಳುವುದಾದರೆ ರೋಹಿತ್ (Rohit) ಅವರ ಹೇಳಿಕೆಯನ್ನು ನಾನು ಒಪ್ಪುವುದಿಲ್ಲ ಎಂದು ಲತೀಫ್‌ ಹೇಳಿದ್ದಾರೆ. 

IPL 2022: ಜೇಸನ್‌ ರಾಯ್ ಬದಲಿಗೆ ಗುಜರಾತ್ ಟೈಟಾನ್ಸ್‌ಗೆ ಸ್ಪೋಟಕ ಬ್ಯಾಟರ್ ಎಂಟ್ರಿ..?

ಕುಂಬ್ಳೆ(Kumble) ತುಂಬಾ ಚೆನ್ನಾಗಿದ್ದರು, ಅವರು ನಿಜವಾಗಿಯೂ ಉತ್ತಮ ಪ್ರದರ್ಶನ ನೀಡಿದರು. ಜಡೇಜಾ (Jadeja) ಕೂಡ ನಿಜವಾಗಿಯೂ ಉತ್ತಮ ಪ್ರದರ್ಶನ ನೀಡಿದ್ದಾರೆ. ಈ ಹಿಂದೆ ಬಿಷನ್ ಸಿಂಗ್ ಬೇಡಿ (Bishan Singh Bedi) ಅವರು ಅದ್ಭುತವಾಗಿದ್ದರು, ಎಂದು ಲತೀಫ್ ಕ್ಯಾಟ್ ಬಿಹೈಂಡ್ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ. ನಾವು ಭಾರತದ ಆಟವನ್ನು ಮಾತ್ರ ಗಮನಿಸಿ ಮಾತನಾಡಿದರೆ, ಅವರು ಒಳ್ಳೆಯವರು ಎಂಬುದರಲ್ಲಿ ಸಂದೇಹವಿಲ್ಲ.ಆದರೆ ರೋಹಿತ್ ಅವರ ಹೇಳಿಕೆ  ಅವರು ಬಾಯ್ತಪ್ಪಿ ಹೇಳಿರಬಹುದು ಎಂದು ನಾನು ಭಾವಿಸುತ್ತೇನೆ. ಇದು ಆಟಗಾರರನ್ನು ಪ್ರೇರೇಪಿಸುವ ಒಂದು ಮಾರ್ಗವಾಗಿದೆ ಎಂದು ಅವರು ಹೇಳಿದರು.


ಶ್ರೀಲಂಕಾ ವಿರುದ್ದದ ಮೊಹಾಲಿ ಟೆಸ್ಟ್ (Mohali Test) ಪಂದ್ಯದ ಮೂರನೇ ದಿನದಾಟದಲ್ಲಿ ರವಿಚಂದ್ರನ್ ಅಶ್ವಿನ್‌ (Ravichandran Ashwin), ಮಾಜಿ ದಿಗ್ಗಜ ಕ್ರಿಕೆಟಿಗ ಕಪಿಲ್ ದೇವ್ (Kapil Dev)(434) ಅವರ ಹೆಸರಿನಲ್ಲಿದ್ದ ವಿಕೆಟ್‌ ದಾಖಲೆ ಹಿಂದಿಕ್ಕಿದ್ದರು. ಈ ಮೂಲಕ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅನಿಲ್‌ ಕುಂಬ್ಳೆ (Anil Kumble)(619) ಬಳಿಕ ಭಾರತ ಪರ ಗರಿಷ್ಠ ವಿಕೆಟ್ ಕಬಳಿಸಿದ ಎರಡನೇ ಬೌಲರ್ ಎನ್ನುವ ಕೀರ್ತಿಗೆ ತಮಿಳುನಾಡು ಮೂಲದ ರವಿಚಂದ್ರನ್ ಅಶ್ವಿನ್ ಪಾತ್ರರಾಗಿದ್ದರು. ಇದಷ್ಟೇ ಅಲ್ಲದೇ ಲಂಕಾ ಎದುರಿನ ಮೊದಲ ಟೆಸ್ಟ್‌ನಲ್ಲಿ 6 ವಿಕೆಟ್ ಕಬಳಿಸುವ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್‌ ಕಬಳಿಸಿದ ಜಗತ್ತಿನ ಬೌಲರ್‌ಗಳ ಪಟ್ಟಿಯಲ್ಲಿ ಅಶ್ವಿನ್ 9ನೇ ಸ್ಥಾನ ಗಳಿಸಿದ್ದರು.

IPL 2022: ವಿರಾಟ್ ಕೊಹ್ಲಿ ಮತ್ತೊಮ್ಮೆ ಆರ್‌ಸಿಬಿ ನಾಯಕನಾಗಲಾರ ಎಂದ ಡೇನಿಯಲ್ ವೆಟ್ಟೋರಿ

ರವಿಚಂದ್ರನ್ ಅಶ್ವಿನ್ ಕೇವಲ ಬೌಲಿಂಗ್ ಮಾತ್ರವಲ್ಲದೇ ಬ್ಯಾಟಿಂಗ್‌ನಲ್ಲೂ ತಂಡಕ್ಕೆ ಉಪಯುಕ್ತ ಕಾಣಿಕೆ ನೀಡಿದ್ದರು. ಲಂಕಾ ಎದುರಿನ ಮೊದಲ ಇನಿಂಗ್ಸ್‌ನಲ್ಲಿ ಅಶ್ವಿನ್ 82 ಎಸೆತಗಳನ್ನು ಎದುರಿಸಿ 8 ಬೌಂಡರಿ ಸಹಿತ 61 ರನ್‌ ಬಾರಿಸುವ ಮೂಲಕ ತಂಡಕ್ಕೆ ಆಸರೆಯಾಗಿದ್ದರು.
ಹೀಗಾಗಿ ಪಂದ್ಯ ಮುಕ್ತಾಯದ ಬಳಿಕ ರವಿಚಂದ್ರನ್ ಅಶ್ವಿನ್‌ ಪ್ರದರ್ಶನವನ್ನು ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma) ಗುಣಗಾನ ಮಾಡಿದ್ದರು.

ಅಶ್ವಿನ್ ಕಳೆದ ಹಲವಾರು ವರ್ಷಗಳಿಂದ ಭಾರತ ತಂಡವನ್ನು ಪ್ರತಿನಿಧಿಸುತ್ತಾ ಬಂದಿದ್ದಾರೆ ಹಾಗೂ ಉತ್ತಮ ಪ್ರದರ್ಶನವನ್ನು ನೀಡುತ್ತಿದ್ದಾರೆ. ಅವರು ಹಲವಾರು ಪಂದ್ಯಗಳಲ್ಲಿ ಏಕಾಂಗಿಯಾಗಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ. ನನ್ನ ಪ್ರಕಾರ ಅವರು ಸಾರ್ವಕಾಲಿಕ ಶ್ರೇಷ್ಠ ಆಟಗಾರ ಎಂದು ರೋಹಿತ್ ಶರ್ಮಾ ಬಣ್ಣಿಸಿದ್ದರು. ನಾನು ಹಲವಾರು ವರ್ಷಗಳಿಂದ ಅಶ್ವಿನ್‌ ಅವರ ಕ್ರಿಕೆಟ್ ನೋಡುತ್ತಾ ಬಂದಿದ್ದೇನೆ. ಅವರು ಕಳೆದ ಕೆಲವು ವರ್ಷಗಳಲ್ಲಿ ಅವರ ಆಟವು ವರ್ಷದಿಂದ ವರ್ಷಕ್ಕೆ ಉತ್ತಮವಾಗುತ್ತಲೇ ಸಾಗಿದೆ. ಅಶ್ವಿನ್ ತಮ್ಮ ಸಾಮರ್ಥ್ಯದ ಮೇಲೆ ಸಾಕಷ್ಟು ನಂಬಿಕೆಯಿಟ್ಟುಕೊಂಡು ಅತ್ಯುತ್ತಮ ಪ್ರದರ್ಶನ ತೋರುತ್ತಾ ಬಂದಿದ್ದು, ಅವರೊಬ್ಬ ಟೀಂ ಪ್ಲೇಯರ್. ಇನ್ನು ಬ್ಯಾಟಿಂಗ್‌ನಲ್ಲಿ ಜಡೇಜಾ ಜತೆ ಅಶ್ವಿನ್ ಮಹತ್ವದ ಇನಿಂಗ್ಸ್ ಆಡಿದ್ದಾರೆ ಎಂದು ರೋಹಿತ್ ಶರ್ಮಾ ಹೇಳಿದ್ದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಐಸಿಸಿಗೆ ಬಿಗ್ ಶಾಕ್ ಕೊಟ್ಟ ಮುಕೇಶ್ ಅಂಬಾನಿ ನೇತೃತ್ವದ ಜಿಯೋ ಹಾಟ್‌ಸ್ಟಾರ್!
ಇಂದಿನಿಂದ ಭಾರತ-ದಕ್ಷಿಣ ಆಫ್ರಿಕಾ ಟಿ20 ಕದನ; ಭಾರತಕ್ಕಿದೆ ಬಿಗ್ ಚಾಲೆಂಜ್!