ಕೊಹ್ಲಿ, ರವಿಶಾಸ್ತ್ರಿ ಸುದೀರ್ಘ ಜತೆಯಾಟಕ್ಕೆ ತೆರೆ : ಉತ್ತಮ ವಿದಾಯ ಸಿಗಲಿ ಎಂದ ವಾಸಿಂ ಅಕ್ರಮ್!

By Suvarna News  |  First Published Nov 8, 2021, 5:45 PM IST

*ಸೋಮವಾರ ನಮೀಬಿಯಾ ಭಾರತ ನಡುವೆ ಚೊಚ್ಚಲ ಪಂದ್ಯ
*ಗೆಳೆಯನಿಗೆ ಪರಿಪೂರ್ಣ ವಿದಯಾ ಸಿಗಲಿ ಎಂದ ವಾಸಿಂ ಅಕ್ರಮ್
*ಕೊಹ್ಲಿ ಮತ್ತು ಮುಖ್ಯ ಕೋಚ್ ರವಿಶಾಸ್ತ್ರಿ ಸುದೀರ್ಘ ಜೊತೆಯಾಟಕ್ಕೆ ತೆರೆ


ದುಬೈ(ನ.8): ನ್ಯೂಜಿಲೆಂಡ್‌ (New Zealand) ವಿರುದ್ಧ ಅಫ್ಘಾನಿಸ್ತಾನ ಸೋಲುವುದರೊಂದಿಗೆ ಸೆಮಿಫೈನಲ್‌ ಪ್ರವೇಶಿಸುವ ಕೊನೆಯ ಅವಕಾಶವನ್ನೂ ಕಳೆದುಕೊಂಡಿರುವ ಮಾಜಿ ಚಾಂಪಿಯನ್‌ ಭಾರತ, ಟಿ20 ವಿಶ್ವಕಪ್‌ನ  (T20 World Cup) ಕೊನೆಯ ಪಂದ್ಯದಲ್ಲಿ ನಮೀಬಿಯಾ ವಿರುದ್ಧ ಸ್ಪರ್ಧಿಸಲಿದೆ. ಈಗಾಗಲೇ ಪಂದ್ಯಾವಳಿಯಿಂದ ನಿರ್ಗಮಿಸಿರುವ ಭಾರತ, ಈ ಪಂದ್ಯವನ್ನು ಪ್ರತಿಷ್ಠೆಗಾಗಿ ಆಡಲಿದೆ. ನಮೀಬಿಯಾ (Namibia) ವಿರುದ್ಧದ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ (Virat Kohli) ಮತ್ತು ಮುಖ್ಯ ಕೋಚ್ ರವಿಶಾಸ್ತ್ರಿ ನಡುವಿನ ಸುದೀರ್ಘ ಜೊತೆಯಾಟಕ್ಕೆ ತೆರೆ ಬೀಳಲಿದೆ. ಸೋಮವಾರದ ಪಂದ್ಯದ ನಂತರ ಕೊಹ್ಲಿ ಟಿ20 ಕ್ರಿಕೆಟ್‌ನಲ್ಲಿ ಭಾರತದ ನಾಯಕತ್ವದಿಂದ ಕೆಳಗಿಳಿಯಲಿದ್ದರೆ, ಶಾಸ್ತ್ರಿ ಅವರ ಮುಖ್ಯ ತರಬೇತದಾರ ಅವಧಿಯೂ ಕೊನೆಗೊಳ್ಳಲಿದೆ. ಭಾರತದ ಮಾಜಿ ನಾಯಕ ರಾಹುಲ್ ದ್ರಾವಿಡ್ (Rahul Dravid) ನವೆಂಬರ್ 17 ರಿಂದ  ಮುಖ್ಯ ತರಬೇತುದಾರರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. 

IPL 2022: ಹರಾಜಿಗೂ ಮುನ್ನ CSK ಈ ನಾಲ್ವರು ಆಟಗಾರರನ್ನು ರೀಟೈನ್ ಮಾಡಿಕೊಳ್ಳಬಹುದು..!

Latest Videos

ಕಾಮೆಂಟೇಟರ್‌ಗಳಾಗಿದ್ದ ದಿನಗಳಲ್ಲಿ ಶಾಸ್ತ್ರಿ ಅವರೊಂದಿಗೆ ಸಾಕಷ್ಟು ಸಮಯವನ್ನು ಕಳೆದಿದ್ದ ಪಾಕಿಸ್ತಾನದ (Pakistan) ಮಾಜಿ ನಾಯಕ ವಾಸಿಂ ಅಕ್ರಮ್ (Wasim Akram), ಸಾಮಾಜಿಕ ಮಾಧ್ಯಮದ ಮೂಲಕ ವಿಶ್ವಕಪ್‌ನಿಂದ ಹೊರ ನಡೆಯುತ್ತಿರುವ ಭಾರತ ತಂಡಕ್ಕೆ ಸಂದೇಶವೊಂದನ್ನು ನೀಡಿದ್ದಾರೆ. ಕೂನಲ್ಲಿ (Koo) ಪೋಸ್ಟ್‌ ಮಾಡಿರುವ ಪಾಕಿಸ್ತಾನದ ಮಾಜಿ ನಾಯಕ ವಾಸಿಂ ಅಕ್ರಮ್  ಭಾರತ ನಮೀಬಿಯಾ ಮುಖಾಮುಖಿಯಲ್ಲಿ  ಅವರ ಸ್ನೇಹಿತರಿಗೆ "ಪರಿಪೂರ್ಣ ವಿದಾಯ" ಸಿಗಲಿ ಎಂದು ಹಾರೈಸಿದ್ದಾರೆ.

Rahul Dravid: ಟೀಮ್ ಇಂಡಿಯಾ ನೂತನ ಕೋಚ್ ಆಗಿ ದ್ರಾವಿಡ್ ನೇಮಕ

"ನಮೀಬಿಯಾ ವಿರುದ್ಧದ ಅಂತಿಮ ಪಂದ್ಯದಲ್ಲಿ ಭಾರತಕ್ಕೆ ಹೆಚ್ಚಿನ ಅಪಾಯವಿಲ್ಲ. ಆದರೆ ಗಮನಿಸಬೇಕಾದ ಕೆಲವು ವಿಷಯಗಳಿವೆ. ಟಿ20 #ಕ್ರಿಕೆಟ್‌ನಲ್ಲಿ ವಿರಾಟ್ ಅಂತಿಮ ಬಾರಿಗೆ ತಂಡವನ್ನು ಮುನ್ನಡೆಸುವುದನ್ನು ನಾನು ನೋಡಲು ಬಯಸುತ್ತೇನೆ. ಎಲ್ಲಕ್ಕಿಂತ ಹೆಚ್ಚಾಗಿ ನನ್ನ ಉತ್ತಮ ಸ್ನೇಹಿತ ರವಿಶಾಸ್ತ್ರಿ  ಅವರಿಗೆ ಭಾರತ ಕೋಚ್ ಆಗಿ ಪರಿಪೂರ್ಣ ವಿದಾಯವನ್ನು ನೀಡುವುದನ್ನು  ನಾನು ನೋಡಲು  ಬಯಸುತ್ತೇನೆ." ಎಂದು ಅಕ್ರಮ್ ತಮ್ಮ ಕೂ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

 

 

ಶಾಸ್ತ್ರಿ ಮತ್ತು ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ (Test cricket) ಉತ್ತಮ ಯಶಸ್ಸನ್ನು ಸಾಧಿಸಿದ್ದಾರೆ, ಅದರೆ ಅವರು ಯಾವುದೇ ಪ್ರಮುಖ ಐಸಿಸಿ ಟ್ರೋಫಿಯನ್ನು (ICC Trophy) ಗೆಲ್ಲಲು ವಿಫಲರಾದರು. 2019 ರಲ್ಲಿ ನಡೆದ 50 ಓವರ್‌ಗಳ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಭಾರತ ಸೋತಿತ್ತು ಹಾಗು ಈ ವಿಶ್ವಕಪ್‌ನಲ್ಲಿ ಕೂಡ ಭಾರತ ಲೀಗ್‌ ಹಂತದಲ್ಲೇ ಹೊರ ನಡೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. 

ಉಭಯ ತಂಡಗಳು ಮೊದಲ ಬಾರಿ ಮುಖಾಮುಖಿ

ಟಿ20 ಮಾದರಿಯಲ್ಲಿ ಉಭಯ ತಂಡಗಳು ಮೊದಲ ಬಾರಿ ಮುಖಾಮುಖಿಯಾಗುತ್ತಿರುವುದು ವಿಶೇಷ. ಈ ಪಂದ್ಯದಲ್ಲಿ ಗೆದ್ದರೆ ಗ್ರೂಪ್‌-2ರಲ್ಲಿ ತೃತೀಯ ಸ್ಥಾನಿಯಾಗಿ ಭಾರತ ತನ್ನ ಈ ಬಾರಿಯ ಟಿ20 ವಿಶ್ವಕಪ್‌ ಅಭಿಯಾನವನ್ನು ಮುಕ್ತಾಯಗೊಳಿಸಲಿದೆ. ಅತ್ತ, ತಾನಾಡಿದ 4ರಲ್ಲಿ ಮೂರು ಪಂದ್ಯಗಳಲ್ಲಿ ಸೋತಿರುವ ನಮೀಬಿಯಾ ಒಂದು ವೇಳೆ ಗೆದ್ದದ್ದೇ ಆದಲ್ಲಿ, ಭಾರತ ಗ್ರೂಪ್‌-2ರಲ್ಲಿ 4ನೇ ಸ್ಥಾನಿಯಾಗುವ ಅಪಾಯವೂ ಇದೆ.

ಆದರೆ, ಆಫ್ಘನ್‌ ಹಾಗೂ ಸ್ಕಾಟ್ಲೆಂಡ್‌ ವಿರುದ್ಧ ಭಾರೀ ಲಯಕ್ಕೆ ಬಂದಂತೆ ಕಂಡು ಬಂದಿದ್ದ ಭಾರತೀಯ ಆಟಗಾರರು ನಮೀಬಿಯಾ ವಿರುದ್ಧ ಆಡಲಿರುವ ಕೊನೆಯ ಪಂದ್ಯದಲ್ಲಿ ಗೆಲುವಿನೊಂದಿಗೆ ಟಿ20 ವಿಶ್ವಕಪ್‌ ಅಭಿಯಾನ ಮುಗಿಸಲು ಕಾತರಿಸುತ್ತಿದ್ದಾರೆ. ಈ ಪಂದ್ಯದಲ್ಲೂ ಭಾರತೀಯ ಬ್ಯಾಟರ್‌ಗಳಿಂದ ಸ್ಫೋಟಕ ಆಟ ನಿರೀಕ್ಷಿಸಲಾಗಿದೆ. 4 ವರ್ಷದ ಬಳಿಕ ಭಾರತ ಪರ ಟಿ20 ಪಂದ್ಯವಾಡಿದ ಸ್ಪಿನ್‌ ಮಾಸ್ಟರ್‌ ಆರ್‌.ಅಶ್ವಿನ್‌ ತಂಡದಲ್ಲಿ ಮುಂದುವರಿಯುವ ನಿರೀಕ್ಷೆ ಇದೆ.

click me!