* ಎಂ ಎಸ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ಬೈ ಹೇಳಿ ಮೂರು ವರ್ಷವಾಗಿವೆ
* ಹೀಗಿದ್ದೂ ಕಮ್ಮಿಯಾಗಿಲ್ಲ ಧೋನಿಯ ಬ್ರ್ಯಾಂಡ್ ವ್ಯಾಲ್ಯೂ
* ಕ್ಯಾಪ್ಟನ್ ಕೂಲ್ ಧೋನಿ ಸಾವಿರ ಕೋಟಿಯ ಒಡೆಯ
ಬೆಂಗಳೂರು(ಜು.12) ಎಂ ಎಸ್ ಧೋನಿ, ಕ್ರಿಕೆಟ್ ಜಗತ್ತಿನ ಮಾಸ್ಟರ್ ಮೈಂಡ್. ಭಾರತೀಯ ಕ್ರಿಕೆಟ್ನ ಗ್ರೇಟೆಸ್ಟ್ ಕ್ಯಾಪ್ಟನ್. ಧೋನಿಯ ಶಾಂತ ಸ್ವಭಾವ, ತಂತ್ರಗಾರಿಕೆ, ಒತ್ತಡವನ್ನು ನಿಭಾಯಿಸುವ ರೀತಿ, ಎಂತವರಿಗೂ ಸ್ಫೂರ್ತಿ. ಇನ್ನು ಧೋನಿ ಕ್ರೇಜ್, ಫ್ಯಾನ್ ಫಾಲೋಯಿಂಗ್ ಬಗ್ಗೆಯಂತೂ ಹೇಳೋದೆ ಬೇಡ. ಈ ಬಾರಿಯ ಐಪಿಎಲ್ಲೇ ಅದಕ್ಕೆ ಸಾಕ್ಷಿ..!
CSK ದೇಶದ ಯಾವುದೇ ಮೂಲೆಯಲ್ಲಿ ಆಡಿದ್ರು, ಅಲ್ಲಿ ಯೆಲ್ಲೋ ಸೈನ್ಯವೇ ತುಂಬಿ ತುಳುಕುತ್ತೆ. ಅದಕ್ಕೆ ಕಾರಣ, ಒನ್ ಆ್ಯಂಡ್ ಓನ್ಲಿ ಧೋನಿ. ಭಾರತದಲ್ಲಷ್ಟೇ ಅಲ್ಲದೇ, ಪ್ರಪಂಚದಾದ್ಯಂತ ಮಹಿಗೆ ಅಭಿಮಾನಿಗಳಿದ್ದಾರೆ. ಲೆಜೆಂಡ್ ಸುನಿಲ್ ಗವಾಸ್ಕರ್ ಕೂಡ ಧೋನಿಯ ಬಿಗ್ ಫ್ಯಾನ್. ಧೋನಿ ಕೈಯಿಂದ ಗವಾಸ್ಕರ್ ತಮ್ಮ ಶರ್ಟ್ ಮೇಲೆ ಆಟೋಗ್ರಾಫ್ ಪಡೆದುಕೊಂಡಿದ್ದಾರೆ. ಇದು ಧೋನಿಯ ರೇಂಜ್. ಕೋಟಿ ಕೋಟಿ ಅಭಿಮಾನಿಗಳನ್ನ ಸಂಪಾದಿಸಿರೋ ಮಹಿ, ಸಾವಿರಾರು ಕೋಟಿಗೆ ಒಡೆಯರಾಗಿದ್ದಾರೆ.
ಯೆಸ್, ಸದ್ಯ ಜಗತ್ತಿನ ಶ್ರೀಮಂತ ಕ್ರಿಕೆಟರ್ಗಳಲ್ಲಿ ಧೋನಿಯು ಒಬ್ರು. ಇತ್ತೀಚೆಗೆ ವಾಣಿಜ್ಯ ಸಂಸ್ಥೆಯೊಂದು ಧೋನಿಯ ಆಸ್ತಿ ಮೌಲ್ಯ, ವಿವಿಧ ಮೂಲಗಳಿಂದ ಬರುವ ಆದಾಯವನ್ನ ಅಂದಾಜಿಸಿದೆ. ಇದರ ಪ್ರಕಾರ ಧೋನಿಯ ನೆಟ್ವರ್ತ್ 1,040 ಕೋಟಿ ರೂಪಾಯಿ ಎನ್ನಲಾಗಿದೆ.
The net worth of MS Dhoni is 1040 crores. [Stock Gro]
- 12 cr from CSK.
- 4 cr to 6 cr from Brands.
- 1 cr to 2 cr from social media fees
- Investments in sports.
- Bike collection.
- Car collection.
The face of the world cricket!!! pic.twitter.com/34BQ2s5ns5
ಇನ್ನೂ ಒಂದು ವರ್ಷ ಕ್ರಿಕೆಟ್ನಿಂದ ರಿಷಭ್ ಪಂತ್ ದೂರ..! ವಿಶ್ವಕಪ್‌ಗೂ ಮುನ್ನ ಟೀಂ ಇಂಡಿಯಾಗೆ ಶಾಕ್..!
ಇಂಟರ್ನ್ಯಾಷನಲ್ ಕ್ರಿಕೆಟ್‌ಗೆ ಗುಡ್‌ಬೈ ಹೇಳಿರೋ ಧೋನಿ, IPLನಲ್ಲಿ ಮಾತ್ರ ಆಡ್ತಿದ್ದಾರೆ. CSK ಧೋನಿಗೆ ಪ್ರತಿವರ್ಷ 12 ಕೋಟಿ ವೇತನ ನೀಡ್ತಿದೆ. ಅಲ್ಲದೇ, 28ಕ್ಕೂ ಹೆಚ್ಚು ಪ್ರತಿಷ್ಠಿತ ಬ್ರಾಂಡ್ಗಳಿಗೆ ಧೋನಿ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ. ಈ ಬ್ರಾಂಡ್ಗಳ ಒಂದು ದಿನ ಜಾಹೀರಾತು ಶೂಟಿಂಗ್ಗಾಗಿ ಧೋನಿ 4ರಿಂದ6 ಕೋಟಿ ಸಂಭಾವನೆ ಪಡೆದುಕೊಳ್ತಾರೆ.
ಸೋಷಿಯಲ್ ಮೀಡಿಯಾ ಮೂಲಕವೂ ಧೋನಿ, ಕೋಟ್ಯಂತರ ರೂಪಾಯಿ ಜೇಬಿಗಿಳಿಸ್ತಾರೆ. ಇನ್ಸ್ಟ್ರಾಗ್ರಾಮ್ನಲ್ಲಿ 4 ಕೋಟಿಗು ಹೆಚ್ಚು ಮತ್ತು ಫೇಸ್ಬುಕ್ನಲ್ಲಿ 2.5 ಕೋಟಿಗೂ ಅಧಿಕ ಫಾಲೋವರ್ಸ್ನ ಧೋನಿ ಹೊಂದಿದ್ದಾರೆ. ಈ ಎರಡು ಅಕೌಂಟ್ಗಳ ಮೂಲಕ ಧೋನಿ ವಿವಿಧ ಬ್ರಾಂಡ್ಗಳನ್ನ ಪ್ರಚಾರ ಮಾಡ್ತಾರೆ. ಇದಕ್ಕಾಗಿ ಪ್ರತಿ ಕಮರ್ಷಿಯಲ್ ಪೋಸ್ಟ್ಗೆ 1 ರಿಂದ 2 ಕೋಟಿ ರೂಪಾಯಿ ಚಾರ್ಜ್ ಮಾಡ್ತಾರೆ.
ಇನ್ನು ಸ್ಪೋರ್ಟ್ಸ್ ಮತ್ತು ರಿಯಲ್ ಎಸ್ಟೇಟ್ ಕಂಪನಿಗಳಲ್ಲಿ ಧೋನಿ ನೂರಾರು ಕೋಟಿ ಇನ್ವೆಸ್ಟ್ ಮಾಡಿದ್ದಾರೆ. ಇತ್ತೀಚೆಗೆ ಧೋನಿ ಸ್ವಂತ ಸಿನಿಮಾ ಪ್ರೊಡಕ್ಷನ್ ಹೌಸ್ನ ಕೂಡ ಆರಂಭಿಸಿದ್ದಾರೆ. ಈಗಾಗ್ಲೇ ತಮಿಳಿನಲ್ಲಿ ಒಂದು ಸಿನಿಮಾ ನಿರ್ಮಿಸಿದ್ದಾರೆ.
ಧೋನಿಯ ಡೆಹ್ರಾಡೂನ್ ಮನೆ ಮೌಲ್ಯವೇ 17.8 ಕೋಟಿ..!
ಧೋನಿ ತಮ್ಮ ತವರು ರಾಂಚಿ ಮತ್ತು ಉತ್ತರಕಾಂಡ್ನ ಡೆಹ್ರಾಡೂನ್ನಲ್ಲಿ ಒಂದೊಂದು ಮನೆ ಹೊಂದಿದ್ದು, ಡೆಹ್ರಾಡೂನ್ ಮನೆಯ ಮೌಲ್ಯ 17.8 ಕೋಟಿಯಾದ್ರೆ, ರಾಂಚಿಯ ಫಾರ್ಮ್ಹೌಸ್ ಮನೆಯ ಮೌಲ್ಯ 6 ಕೋಟಿಯಾಗಿದೆ. ಆಡಿ, ಹಮ್ಮರ್, ಲ್ಯಾಂಡ್ ರೋವರ್, ಫೆರಾರಿ, ಮರ್ಸಡಿಸ್ ಬೆನ್ಜ್, ರೋಲ್ಸ್ ರಾಯ್ಸ್, ಸೇರಿದಂತೆ ಹಲವು ಐಷಾರಾಮಿ ಕಾರ್ಗಳಿಗೆ ಮಹಿ ಮಾಲೀಕರಾಗಿದ್ದಾರೆ. ಕಾರ್ ಅಲ್ಲದೇ, ವಿವಿಧ ಇಂಪೋರ್ಟೆಡ್ ಬೈಕ್ಗಳು ಧೋನಿ ಮನೆಯ ಗ್ಯಾರೇಜ್ನಲ್ಲಿವೆ. ಅದೇನೆ ಇರಲಿ, ನಿವೃತ್ತಿ ಹೇಳಿ ಮೂರು ವರ್ಷವಾಗಿದ್ರು ಧೋನಿ ಬ್ರ್ಯಾಂಡ್ ವ್ಯಾಲ್ಯೂ ಮಾತ್ರ ಕಡಿಮೆಯಾಗಿಲ್ಲ.