IPL 2021: ಸದ್ಯದಲ್ಲೇ RCB ನಾಯಕತ್ವದಿಂದ ಕೊಹ್ಲಿಗೆ ಕೊಕ್, ಮಾಜಿ ಕ್ರಿಕೆಟಿಗನಿಂದ ಹೊಸ ಬಾಂಬ್!

By Suvarna NewsFirst Published Sep 23, 2021, 5:58 PM IST
Highlights
  • IPL 2021 ಟೂರ್ನಿ ಬಳಿಕ ನಾಯಕತ್ವಕ್ಕೆ ವಿದಾಯ ಘೋಷಿಸಿರುವ ಕೊಹ್ಲಿ
  • ಸೋಲಿನ ಆರಂಭ ಮಾಡಿರುವ ನಾಯಕ ಕೊಹ್ಲಿಗೆ  RCB ಮ್ಯಾನೇಜ್ಮೆಂಟ್‌ನಿಂದ ಶಾಕ್?
  • ಸದ್ಯದಲ್ಲೇ  ನಾಯಕತ್ವ ಬದಲಿಸಲು ಆರ್‌ಸಿಬಿ ನಿರ್ಧಾರ, ಮಾಜಿ ಕ್ರಿಕೆಟಿಗನ ಹೇಳಿಕೆ

ದುಬೈ(ಸೆ.23): IPL 2021 ಟೂರ್ನಿ ಅದ್ಧೂರಿಯಾಗಿ ಆರಂಭಗೊಂಡಿದೆ. ಆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು(royal challengers bangalore)ತಂಡ ಸೋಲಿನೊಂದಿಗೆ ಎರಡನೇ ಭಾಗ ಆರಂಭಿಸಿದೆ. ಆರ್‌ಸಿಬಿ ಅಭಿಯಾನ ಆರಂಭಕ್ಕೂ ಮುನ್ನ ಐಪಿಎಲ್ 2021ರ ಬಳಿಕ ನಾಯಕ ವಿರಾಟ್ ಕೊಹ್ಲಿ, ನಾಯಕತ್ವಕ್ಕೆ ವಿದಾಯ ಹೇಳುತ್ತಿರುವುದಾಗಿ ಘೋಷಿಸಿದ್ದಾರೆ. ಇದೀಗ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸ್ಫೋಟಕ ಹೇಳಿಕೆ ನೀಡಿದ್ದು, ಅಭಿಮಾನಿಗಳ ಆತಂಕ ಮತ್ತಷ್ಟು ಹೆಚ್ಚಾಗಿದೆ.

ವಿರಾಟ್ ಕೊಹ್ಲಿ ಕೆಟ್ಟ ನಡವಳಿಕೆಯ ಆಟಗಾರ -ನಾಸಿರುದ್ದೀನ್ ಶಾ!

ಶೀಘ್ರದಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕತ್ವದಿಂದ ವಿರಾಟ್ ಕೊಹ್ಲಿ(Virat Kohli)ಗೆ ಕೊಕ್ ನೀಡಲಾಗುತ್ತದೆ ಎಂದು ಟೀ ಇಂಡಿಯಾ ಮಾಜಿ ಕ್ರಿಕೆಟಿಗ ಹೇಳಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈಗಾಗಲೇ ಹಲವು ಬಾರಿ ಹೊಸ ನಾಯಕತ್ವದಲ್ಲಿ ಸರಣಿ ಆಡಲು ಮುಂದಾಗಿತ್ತು. ಆದರೆ ಟೀಂ ಇಂಡಿಯಾ(Team India) ಪರ ಕೊಹ್ಲಿ ಅತ್ಯಂತ ಯಶಸ್ವಿ ನಾಯಕ ಹಾಗೂ ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ಕೊಹ್ಲಿ ಬದಲಾಯಿಸಲು ಆರ್‌ಸಿಬಿ ಮ್ಯಾನೇಜ್ಮೆಂಟ್ ಹಿಂದೇಟು ಹಾಕಿತ್ತು ಎಂದು ಮಾಜಿ ಕ್ರಿಕೆಟಿಗ ಹೇಳಿದ್ದಾರೆ. 

IPL 2021; ಆರ್‌ಸಿಬಿ ನಾಯಕತ್ವ ತ್ಯಜಿಸಲು ಪತ್ನಿ ಅನುಷ್ಕಾ ಕಾರಣ?ಸ್ಟೇನ್ ಸ್ಫೋಟಕ ಹೇಳಿಕೆ!

IPL 2021ರ ಐಪಿಎಲ್ ಟೂರ್ನಿ ಬಳಿಕ ನಾಯಕತ್ವದಿಂದ ಗುಡ್ ಬೈ ಹೇಳುವುದಾಗಿ ಕೊಹ್ಲಿ ಘೋಷಿಸಿದ್ದಾರೆ. ಆದರೆ ಈ ಸರಣಿಯಲ್ಲೇ ಟ್ರೋಫಿ ಗೆಲುವಿಗೆ ಆರ್‌ಸಿಬಿ ಪ್ಲಾನ್ ಹಾಕಿಕೊಂಡಿದೆ. ಹೀಗಾಗಿ ಕೊಹ್ಲಿ ನಾಯಕತ್ವ ಅಂತ್ಯಗೊಳಿಸಿ, ಹೊಸ ನಾಯಕನ ಆಯ್ಕೆ ಮಾಡಲು ಆರ್‌ಸಿಬಿ ಮುಂದಾಗಿದೆ. ಇದರಿಂದ ಈ ಬಾರಿ ಟೂರ್ನಿ ಹಾಗೂ ಮುಂಬರುವ ಐಪಿಎಲ್ ಟೂರ್ನಿಗೂ ನೆರವಾಗಲಿದೆ ಅನ್ನೋ ಆರ್‌ಸಿಬಿ ಮ್ಯಾನೇಜ್ಮೆಂಟ್ ಲೆಕ್ಕಾಚಾರ ಎಂದು ಮಾಜಿ ಕ್ರಿಕೆಟಿಗ ಹೊಸ ಬಾಂಬ್ ಸಿಡಿಸಿದ್ದಾರೆ.

ತಂಡದ ಹೀನಾಯ ಪ್ರದರ್ಶನದ ಬಳಿಕ ಕೆಕೆಆರ್(KKR) ತಂಡದ ನಾಯಕತ್ವದಿಂದ ದಿನೇಶ್ ಕಾರ್ತಿಕ್(Dinesh Karthik), ಸನ್‌ರೈಸರ್ಸ್ ಹೈದರಾಬಾದ್ ತಂಡದಿಂದ(Sunrisers Hyderabad) ಡೇವಿಡ್ ವಾರ್ನರ್(David Warner) ಟೂರ್ನಿ ಮಧ್ಯಭಾಗದಲ್ಲಿ ನಾಯಕತ್ವದಿಂದ ಕೆಳಗಿಳಿದಿದ್ದಾರೆ. ಇದೇ ರೀತಿ ಗೇಮ್ ಚೇಜಿಂಗ್ ರಾಯಲ್ ಚಾಲೆಂಜರ್ಸ್ ಬೆಂಗಳೂರಲ್ಲೂ ನಡೆಯಲಿದೆ ಎಂದು ಮಾಜಿ ಕ್ರಿಕೆಟಿಗ ಹೇಳಿದ್ದಾರೆ.

ಕ್ರಿಕೆಟ್‌ ಬಿಟ್ಟರೂ ಕೋಟಿಗಟ್ಟಲೇ ಸಂಪಾದನೆ, ಕೊಹ್ಲಿ ಆದಾಯದ 8 ದೊಡ್ಡ ಮೂಲಗಳು

ಐಪಿಎಲ್ 2021ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮುನ್ನಡೆಸಲು ಎಬಿ ಡಿವಿಲಿಯರ್ಸ್ ಸೂಕ್ತ ಕ್ರಿಕೆಟಿಗ ಎಂದು ಮಾಜಿ ಕ್ರಿಕೆಟಿಗ ಹೇಳಿದ್ದಾರೆ. ಆರ್‌ಸಿಬಿ ತಂಡದಲ್ಲಿ ಹಲವು ಆವತ್ತಿಗಳನ್ನು ಆಡಿರುವ ಆಟಗಾರರ ಪೈಕಿ ಯಜುವೇಂದ್ರ ಚಹಾಲ್ ಕೂಡ ಇದ್ದಾರೆ. ಆದರೆ ಚಹಾಲ್ ಪ್ರದರ್ಶನ ಅಷ್ಟಕಷ್ಟೆ. ಇನ್ನು ಯುವ ನಾಯಕತ್ವವನ್ನು ಬಯಸಿದರೆ ದೇವದತ್ ಪಡಿಕ್ಕಲ್ ಮುಂಚೂಣಿಯಲ್ಲಿದ್ದಾರೆ ಎಂದು ನಾಯಕತ್ವಕ್ಕೆ ಕೆಲ ಹೆಸರನ್ನೂ ಸೂಚಿಸಲಾಗಿದೆ.

ಐಪಿಎಲ್ 2021ನಲ್ಲಿ ಆರ್‌ಸಿಬಿ:
IPL 2021ರ ಮೊದಲ ಭಾಗದಲ್ಲಿ ದಿಟ್ಟ ಹೋರಾಟ ನೀಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಆಡಿದ 7 ಪಂದ್ಯದಲ್ಲಿ 5 ಗೆಲುವು ಸಾಧಿಸಿತ್ತು. ಈ ಮೂಲಕ ಅಂಕಪಟ್ಟಿಯಲ್ಲಿ 3ನೇ ಸ್ಥಾನ ಅಲಂಕರಿಸಿತ್ತು. ದುಬೈನಲ್ಲಿ ಆರಂಭಗೊಂಡ ಐಪಿಎಲ್ ಎರಡನೇ ಭಾಗದಲ್ಲಿ ಆರ್‌ಸಿಬಿ ಮೊದಲ ಪಂದ್ಯದಲ್ಲಿ ಮುಗ್ಗರಿಸಿದೆ. ಆದರೆ ಸದ್ಯ ಅಂಕಪಟ್ಟಿಯಲ್ಲಿ 3ನೇ ಸ್ಥಾನ ಆಲಂಕರಿಸಿದೆ.

ಐಪಿಎಲ್‌ಗೆ ಕೊರೋನಾ ಆತಂಕ
ಭಾರತದಲ್ಲಿ ಆಯೋಜನೆಗೊಂಡಿದ್ದ IPL 2021 ಕೊರೋನಾ(Coronavirus ಕಾರಣ ಸ್ಥಗಿತಗೊಂಡಿತ್ತು. ಭಾರತದಲ್ಲಿ ಎರಡನೇ ಕೊರೋನಾ ಅಲೆ ತೀವ್ರಗೊಂಡ ಕಾರಣ ಐಪಿಎಲ್ ಆಯೋಜಿಸಲು ಬಿಸಿಸಿಐಗೆ(BCCI) ಅಸಾಧ್ಯವಾಯಿತು. ಹೀಗಾಗಿ ಸ್ಥಗಿತಗೊಂಡ ಐಪಿಎಲ್ ಮುಂದುವರಿಸಲು ದುಬೈ(Dubai) ತಾಣವನ್ನು ಆರಿಸಿಕೊಂಡಿತು. ಇದೀಗ ದುಬೈನಲ್ಲಿ ಐಪಿಎಲ್ 2021ರ ಟೂರ್ನಿ ಆರಂಭಗೊಂಡಿದೆ. 
 

click me!