MCC Cricket Rules: ಕ್ರಿಕೆಟ್ಟಲ್ಲಿನ್ನು ಬ್ಯಾಟ್ಸ್‌ಮನ್‌ ಬದಲು ಬ್ಯಾಟರ್ ಪದ ಬಳಕೆ..!

By Suvarna News  |  First Published Sep 23, 2021, 2:08 PM IST

* ಬ್ಯಾಟ್ಸ್‌ಮನ್‌ ಬದಲು ಬ್ಯಾಟರ್ ಪದ ಬಳಕೆ ಮಾಡಲು ಎಂಸಿಸಿ ನಿರ್ಧಾರ

* ಲಿಂಗ ತಾರತಮ್ಯ ತೊಡೆದು ಹಾಕುವ ನಿಟ್ಟಿನಲ್ಲಿ ಎಂಸಿಸಿ ಮಹತ್ವದ ಘೋಷಣೆ

* ಬ್ಯಾಟ್ಸ್‌ಮನ್‌, ಬ್ಯಾಟ್ಸ್‌ವುಮನ್‌ ಬದಲು ಬ್ಯಾಟರ್‌ ಇಲ್ಲವೇ ಬ್ಯಾಟ​ರ್ಸ್‌ ಪದ ಬಳಕೆ


ಲಂಡನ್(ಸೆ.23)‌: ಕ್ರಿಕೆಟ್‌ ನಿಯಮಗಳ ರಚನೆ, ಪರಿಷ್ಕರಣೆ ಮಾಡುವ ಎಂಸಿಸಿ (ಮಾರ್ಲೆಬೋನ್‌ ಕ್ರಿಕೆಟ್‌ ಕ್ಲಬ್‌) ಲಿಂಗ ಸಮಾನತೆ ದೃಷ್ಠಿಯಿಂದ ಬುಧವಾರ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ. 

ಇನ್ನು ಮುಂದೆ ಪುರುಷರ ಮತ್ತು ಮಹಿಳಾ ತಂಡದಲ್ಲಿ ಬ್ಯಾಟ್ಸ್‌ಮನ್‌(Batsman), ಬ್ಯಾಟ್ಸ್‌ವುಮನ್‌ ಬದಲು ಬ್ಯಾಟರ್‌ ಇಲ್ಲವೇ ಬ್ಯಾಟ​ರ್ಸ್‌ ಎಂಬ ಪದ ಬಳಕೆ ಮಾಡಲು ನಿರ್ಧರಿಸಿದೆ. ಸಮಿತಿಯ ವಿಶೇಷ ಕಾನೂನುಗಳ ಉಪ ಸಮಿತಿಯು ಚರ್ಚೆ ನಡೆಸಿದ ಬಳಿಕ ಎಂಸಿಸಿ ಈ ನಿರ್ಧಾರವನ್ನು ಅನುಮೋದಿಸಿದೆ. 

Tap to resize

Latest Videos

ಕಳೆದ ಕೆಲ ವರ್ಷಗಳಿಂದ ಮಹಿಳಾ ಕ್ರಿಕೆಟ್‌(Women's Cricket) ಬೆಳೆಯುತ್ತಿರುವ ರೀತಿಯನ್ನು ಗಮನದಲ್ಲಿಟ್ಟುಕೊಂಡು ಪದ ಬಳಕೆಯಲ್ಲಿ ಕೆಲವೊಂದು ಬದಲಾವಣೆ ತರಲು ತೀರ್ಮಾನಿಸಲಾಗಿದೆ ಎಂದು ಎಂಸಿಸಿ ಸಹಾಯಕ ಕಾರ್ಯದರ್ಶಿ ಜೆಮ್ಮಿ ಕಾಕ್ಸ್‌ ತಿಳಿಸಿದ್ದಾರೆ. ಬ್ಯಾಟರ್ ಎನ್ನುವ ಪದವು ಕ್ರಿಕೆಟ್‌ನಲ್ಲಿ ಸಮಾನ ಅರ್ಥವನ್ನು ಹೊಂದಿದ್ದು, ಯಾವುದೇ ಲಿಂಗ ತಾರತಮ್ಯ ಕಂಡು ಬರುವುದಿಲ್ಲ. ಹೀಗಾಗಿ ನಾವಿಂದು ಅಧಿಕೃತವಾಗಿ ಬ್ಯಾಟರ್ ಪದ ಬಳಕೆಗೆ ಚಾಲನೆ ನೀಡುತ್ತಿದ್ದೇವೆ ಎಂದು ತಿಳಿಸಲು ಖುಷಿಯಾಗುತ್ತಿದೆ ಎಂದು ಕಾಕ್ಸ್ ಹೇಳಿದ್ದಾರೆ

MCC has today announced amendments to the Laws of Cricket to use the gender-neutral terms “batter” and “batters”, rather than “batsman” or “batsmen”.

— Marylebone Cricket Club (@MCCOfficial)

IPL 2021: ರೋಹಿತ್, ಕೊಹ್ಲಿ ದಾಖಲೆ ಅಳಿಸಿ ಹಾಕಿದ ಶಿಖರ್ ಧವನ್‌..!

ಕ್ರಿಕೆಟ್‌(Cricket)ನಲ್ಲಿ ಲಿಂಗ ಸಮಾನತೆ ಇರಬೇಕೆಂಬ ಕಾರಣಕ್ಕೆ ಈ ತಿದ್ದುಪಡಿ ಮಾಡಲಾಗಿದ್ದು, ಇದು ತಕ್ಷಣವೇ ಜಾರಿಯಾಗಲಿದೆ ಎಂದು ಎಂಸಿಸಿ ತಿಳಿಸಿದೆ. ಹಲವಾರು ಆಡಳಿತ ಮಂಡಳಿಗಳು ಹಾಗೂ ಮಾಧ್ಯಮ ಸಂಸ್ಥೆಗಳು ಈಗಾಗಲೇ ಬ್ಯಾಟರ್‌/ಬ್ಯಾಟ​ರ್ಸ್‌ ಪದವನ್ನು ಬಳಸುತ್ತಿವೆ.

ಬ್ಯಾಟರ್ ಪದದ ಬಗ್ಗೆ ಪ್ರಶ್ನೆ ಎತ್ತಿದ ರಾಜ್‌ದೀಪ್‌ ಸರ್‌ದೇಸಾಯಿ: 

ಮಾರ್ಲೆಬೋನ್‌ ಕ್ರಿಕೆಟ್‌ ಕ್ಲಬ್ ಸದ್ಯ ಬ್ಯಾಟರ್ ಎನ್ನುವ ಪದವನ್ನು ಅಧಿಕೃತವಾಗಿ ಬಳಕೆಗೆ ತಂದಿದೆಯಾದರೂ, ಕೆಲವೊಂದು ಅನುಮಾನಗಳಿಗೆ ಉತ್ತರವನ್ನು ಕೊಟ್ಟಿಲ್ಲ. ಕ್ಷೇತ್ರ ರಕ್ಷಣೆ ಮಾಡುವ ವೇಳೆ ಥರ್ಡ್‌ ಮ್ಯಾನ್‌, 12th ಮ್ಯಾನ್‌, ನೈಟ್‌ವಾಚ್‌ಮನ್ ಎನ್ನುವ ಪದಗಳು ಬಳಕೆಯಲ್ಲಿವೆ. ಈ ಪದಗಳ ಬಳಕೆ ಕುರಿತಂತೆ ಎಂಸಿಸಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. 

So batsmen have become batters as per the new gender sensitive ICC rules, but what happens to third man? Have a super day!😄😄

— Rajdeep Sardesai (@sardesairajdeep)

ಈ ಕುರಿತಂತೆ ಟ್ವೀಟ್‌ ಮಾಡಿರುವ ಖ್ಯಾತ ಪತ್ರಕರ್ತ ರಾಜ್‌ದೀಪ್ ಸರ್‌ದೇಸಾಯಿ, ಲಿಂಗ ಸಮಾನತೆಯನ್ನು ಗಮನದಲ್ಲಿಟ್ಟುಕೊಂಡು ಬ್ಯಾಟ್ಸ್‌ಮನ್‌ಗಳು ಬ್ಯಾಟರ್‌ಗಳಾಗಿ ಬದಲಾಗಿದ್ದಾರೆ. ಆದರೆ Third Man ಗಳ ಕಥೆ ಏನು ಎಂದು ಪ್ರಶ್ನೆ ಎತ್ತಿದ್ದಾರೆ.
 

click me!