
ಖಠ್ಮಂಡು (ಸೆ. 8): ನೇಪಾಳ ಕ್ರಿಕೆಟ್ ತಂಡದ ನಾಯಕ ಸಂದೀಪ್ ಲಮಿಚಾನೆ ಮೇಲೆ ಅತ್ಯಾಚಾರ ಆರೋಪ ಕೇಳಿ ಬಂದಿದೆ. 17 ವರ್ಷದ ಅಪ್ರಾಪ್ತ ಬಾಲಕಿ ಆತನ ಮೇಲೆ ಆರೋಪ ಮಾಡಿದ್ದಾಳೆ. ಈ ಕುರಿತಾಗಿ ಪೊಲೀಸರು ಕೇಸ್ ಕೂಡ ದಾಖಲಿಸಲಾಗಿದೆ. ಕಠ್ಮಂಡುವಿನಲ್ಲಿ ವೈದ್ಯಕೀಯ ಪರೀಕ್ಷೆಯ ನಂತರ ಬಂದ ಮಾಹಿತಿಯ ಪ್ರಕಾರ, ಲಮಿಚಾನೆ ಮೇಲೆ ಪ್ರಕರಣ ದಾಖಲಿಸಲಾಗಿದೆ. ಸದ್ಯ ಲಮಿಚಾನೆ ಕೀನ್ಯಾದಲ್ಲಿ ನೇಪಾಳದ ಪರ ಕ್ರಿಕೆಟ್ ಆಡುತ್ತಿದ್ದಾರೆ. 22 ವರ್ಷದ ಲಮಿಚಾನೆ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರವಾಗಿ ಮೂರು ಋತುವಿನಲ್ಲಿ ಆಡಿದ್ದರು. ಅಂದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೋಚ್ ಆಗಿದ್ದ ದಿಗ್ಗಜ ಆಟಗಾರ ರಿಕಿ ಪಾಂಟಿಂಗ್ ಅವರಿಂದ ಉದಯೋನ್ಮುಖ ಕ್ರಿಕೆಟಿಗ ಎನ್ನುವ ಗೌರವವನ್ನೂ ಸಂಪಾದನೆ ಮಾಡಿದ್ದರು. ಲೆಗ್ ಸ್ಪಿನ್ನರ್ ಆಗಿದ್ದ ಸಂದೀಪ್ ಲಮಿಚಾನೆ ಐಪಿಎಲ್‌ನಲ್ಲಿ 13 ವಿಕೆಟ್ ಉರುಳಿಸಿದ್ದರು. ನೇಪಾಳ ಪರವಾಗಿ ಐಪಿಎಲ್ ಆಡಿದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. ಐಪಿಎಲ್‌ನಲ್ಲಿ ಆಡಿದ 9 ಪಂದ್ಯಗಳಿಂದ ಅವರು 13 ವಿಕೆಟ್ ಉರುಳಿಸಿದ್ದರು. 2018ರಲ್ಲಿ ಡೆಲ್ಲಿ ಪರವಾಗಿ ಆಡುವ ಮೂಲಕ ಲಮಿಚಾನೆ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಪಾದಾರ್ಪಣೆ ಮಾಡಿದ್ದರು.
ಹೋಟೆಲ್‌ನಲ್ಲಿ ಅತ್ಯಾಚಾರ: ಬಾಲಕಿ ನೀಡಿದ ದೂರಿನ ಆಧಾರದಲ್ಲಿ ಹೇಳುವುದಾದರೆ, ಸಂದೀಪ್ ಲಮಿಚಾನೆ ಖಾಸಗಿ ಹೋಟೆಲ್‌ನಲ್ಲಿ ಆಗಸ್ಟ್ 21 ರಂದು ತಮ್ಮ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ದೂರು ನೀಡಿದ್ದಾಳೆ. ದೂರಿನಲ್ಲಿ ಕಠ್ಮಂಡುವಿನ ಖಾಸಗಿ ಹೊಟೇಲ್ ಒಂದರಲ್ಲಿ ತನ್ನ ಮೇಲೆ ನೇಪಾಳ ಕ್ರಿಕೆಟ್ ತಂಡದ ಆಟಗಾರ ಸಂದೀಪ್ ಲಮಿಚಾನೆ ಅತ್ಯಾಚಾರ ಎಸಗಿದ್ದಾಗಿ 17 ವರ್ಷದ ಅಪ್ರಾಪ್ತ ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ. ಆಗಸ್ಟ್ 21 ರಂದು ಅತ್ಯಾಚಾರ ನಡೆದಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. 'ನಾನು ಸಂದೀಪ್‌ನ ಅಭಿಮಾನಿಯಾಗಿದ್ದೆ. ವಾಟ್ಸಾಪ್‌ನಲ್ಲಿ ಆಗಾಗ ಅವರೊಂದಿಗೆ ಚಾಟ್ ಮಾಡುತ್ತಿದ್ದೆ. ಕೆಲವೊಮ್ಮೆ ಭೇಟಿಯೂ ನಡೆದಿತ್ತು. ಇತ್ತೀಚೆಗೆ ಅವರು ನನಗೆ ಪ್ರೇಮ ನಿವೇದನೆ ಕೂಡ ಮಾಡಿದ್ದರು. ಆಗಸ್ಟ್ 21 ರಂದು ಹೋಟೆಲ್‌ಗೆ ಕರೆದು ಅತ್ಯಾಚಾರ ಮಾಡಿದ್ದಾರೆ ಎಂದು ಬಾಲಕಿ ದೂರಿನಲ್ಲಿ ಬರೆದಿದ್ದಾರೆ.
ಬಲಗೈ ಸ್ಪಿನ್ ಬೌಲರ್ ಆಗಿದ್ದ ಲಮಿಚಾನೆ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ (delhi capitals ) ತಂಡ 20 ಲಕ್ಷ ರೂಪಾಯಿ ಮೂಲಬೆಲೆಗೆ ಖರೀದಿಸಿತ್ತು. 2016ರ 19 ವಯೋಮಿತಿ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಸಂದೀಪ್ ಲಮಿಚಾನೆ ಅದ್ಭುತ ನಿರ್ವಹಣೆ ತೋರಿದ್ದರು. ಅವರ ಈ ನಿರ್ವಹಣೆಯ ಕಾರಣದಿಂದಾಗಿ ನೇಪಾಳ ತಂಡ 8ನೇ ಸ್ಥಾನ ಪಡೆದುಕೊಂಡಿತ್ತು.
ವಿಶ್ವ ಇಲೆವನ್ ತಂಡಕ್ಕೆ ನೇಪಾಳದ ಸಂದೀಪ್
4 ವರ್ಷಗಳಲ್ಲಿ 23 ತಂಡಗಳ ಪರವಾಗಿ ಆಟ: ತಮ್ಮ ನಾಲ್ಕು ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್ (International Cricket) ಜೀವನದಲ್ಲಿ ಸಂದೀಪ್ ಲಮಿಚಾನೆ (Sandeep Lamichhane) ಬರೋಬ್ಬರಿ 23 ತಂಡಗಳ ಪರವಾಗಿ ಆಡಿದ್ದಾರೆ. ಭಾರತದಲ್ಲಿನ ಐಪಿಎಲ್ (IPL) ಹೊರತಾಗಿ ಪಾಕಿಸ್ತಾನ, ನೇಪಾಳ ಮತ್ತು ಆಸ್ಟ್ರೇಲಿಯಾ ಸೇರಿದಂತೆ ವಿವಿಧ ದೇಶಗಳ ಪ್ರಖ್ಯಾತ ಕ್ರಿಕೆಟ್ ಲೀಗ್‌ಗಳಲ್ಲಿ 22 ವರ್ಷದ ಸಂದೀಪ್ ಲಮಿಚಾನೆ ಆಡಿದ್ದರು. ನೇಪಾಳ ಪರವಾಗಿ ಸಂದೀಪ್ 30 ಏಕದಿನ ಪಂದ್ಯವಾಡಿದ್ದು, 44 ಟಿ20 ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಲಮಿಚಾನೆ 69 ವಿಕೆಟ್ ಉರುಳಿಸಿದ್ದರೆ, 44 ಟಿ20 ಪಂದ್ಯಗಳಿಂದ 85 ವಿಕೆಟ್ ಉರುಳಿಸಿದ್ದರು.
ವಿದೇಶಿ ಲೀಗ್‌ಗಳತ್ತ ಒಲವು, ಐಪಿಎಲ್‌ಗೆ ಸುರೇಶ್ ರೈನಾ ವಿದಾಯ
ಒಟ್ಟಾರೆ ಟಿ20ಯಲ್ಲಿ 193 ವಿಕೆಟ್: ಸಂದೀಪ್ ಈವರೆಗೂ 136 ಟಿ20 ಪಂದ್ಯಗಳನ್ನು ಭಿನ್ನ ಲೀಗ್ ಹಾಗೂ ಟೂರ್ನಮೆಂಟ್‌ಗಳಲ್ಲಿ ಆಡಿದ್ದು, ಇದರಿಂದ 193 ವಿಕೆಟ್ ಉರುಳಿಸಿದ್ದಾರೆ. ಪ್ರಥಮ ದರ್ಜರ ಕ್ರಿಕೆಟ್‌ನಲ್‌ಲಿ ಮೂರು ವಿಕೆಟ್ ಉರುಳಿಸಿದ್ದ ಸಂದೀಪ್, ಲಿಸ್ಟ್ ಎ ಕ್ರಿಕೆಟ್‌ನಲ್ಲಿ 115 ವಿಕೆಟ್ ಸಾಧನೆ ಮಾಡಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.