ಧೋನಿ ಮೇಲೆ ದ್ರಾವಿಡ್‌ ಸಿಟ್ಟಾಗಿದ್ದರು: ಗುಟ್ಟು ಬಿಚ್ಚಿಟ್ಟ ವಿರೇಂದ್ರ ಸೆಹ್ವಾಗ್‌

Suvarna News   | Asianet News
Published : Apr 12, 2021, 09:22 AM IST
ಧೋನಿ ಮೇಲೆ ದ್ರಾವಿಡ್‌ ಸಿಟ್ಟಾಗಿದ್ದರು: ಗುಟ್ಟು ಬಿಚ್ಚಿಟ್ಟ ವಿರೇಂದ್ರ ಸೆಹ್ವಾಗ್‌

ಸಾರಾಂಶ

ಶಾಂತ ಸ್ವಭಾವದ ರಾಹುಲ್‌ ದ್ರಾವಿಡ್‌ ಒಮ್ಮೊಮ್ಮೆ ತಾಳ್ಮೆ ಕಳೆದುಕೊಳ್ಳುತ್ತಾರೆ ಎನ್ನುವ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ನವದೆಹಲಿ(ಏ.12): ಕ್ರೆಡಿಟ್‌ ಕಾರ್ಡ್‌ವೊಂದರ ಜಾಹೀರಾತಿನಲ್ಲಿ ಆಕ್ರಮಣಕಾರಿ ಶೈಲಿಯಲ್ಲಿ ಕಾಣಿಸಿಕೊಂಡಿದ್ದ ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ರಾಹುಲ್‌ ದ್ರಾವಿಡ್‌ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದರು. 

ಕ್ರಿಕೆಟ್‌ನಲ್ಲಿ ತಾಳ್ಮೆಗೆ ಮತ್ತೊಂದು ಹೆಸರು ಎನಿಸಿಕೊಂಡಿರುವ ದ್ರಾವಿಡ್‌ರನ್ನು ಆ ರೀತಿ ನೋಡಿದ ಅಭಿಮಾನಿಗಳು ಅವರಿಗೂ ಸಿಟ್ಟು ಬರುತ್ತಾ ಎಂದು ಸಾಮಾಜಿಕ ತಾಣಗಳಲ್ಲಿ ಪ್ರಶ್ನೆ ಮಾಡಿದ್ದರು. ಇದಕ್ಕೆ ಕ್ರಿಕೆಟ್‌ ವೆಬ್‌ಸೈಟ್‌ವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ವೀರೇಂದ್ರ ಸೆಹ್ವಾಗ್‌ ಉತ್ತರಿಸಿದ್ದು, ತಾವು ದ್ರಾವಿಡ್‌ ಸಿಟ್ಟು ಮಾಡಿಕೊಂಡಿರುವುದನ್ನು ನೋಡಿರುವುದಾಗಿ ಹೇಳಿದ್ದಾರೆ. 

ಇಂದಿರಾ ನಗರ ಗೂಂಡಾ: ದ್ರಾವಿಡ್‌ ಜಾಹಿರಾತು, ಜೊಮ್ಯಾಟೋಗೆ ಆಪತ್ತು..!

‘2006ರ ಪಾಕಿಸ್ತಾನ ಪ್ರವಾಸದ ವೇಳೆ ಎಂ.ಎಸ್‌.ಧೋನಿ ಸುಲಭವಾಗಿ ಕ್ಯಾಚಿತ್ತು ಔಟಾದರು. ಪೆವಿಲಿಯನ್‌ಗೆ ವಾಪಸ್‌ ಬರುತ್ತಿದ್ದಂತೆ ಧೋನಿಗೆ ಇಂಗ್ಲಿಷ್‌ನಲ್ಲಿ ದ್ರಾವಿಡ್‌ ಹಿಗ್ಗಾಮುಗ್ಗಾ ಬೈದರು. ಅವರ ಬೈದ ಅರ್ಧಕ್ಕರ್ಧ ಪದಗಳು ಅರ್ಥವೇ ಆಗಲಿಲ್ಲ’ ಎಂದು ಸೆಹ್ವಾಗ್‌ ಹೇಳಿದ್ದಾರೆ. ಈ ರೀತಿನಾ ಆಡೋದು? ನೀನು ಪಂದ್ಯವನ್ನು ಫಿನಿಶ್‌ ಮಾಡಬೇಕಿತ್ತು ಎಂದೆಲ್ಲ ಧೋನಿ ಮೇಲೆ ರಾಹುಲ್‌ ದ್ರಾವಿಡ್‌ ಕಿಡಿಕಾರಿದ್ದರು. ದ್ರಾವಿಡ್‌ ಹೇಳಿದ ಅರ್ಧಕರ್ಧ ಮಾತುಗಳು ನನಗೆ ಅರ್ಥವೇ ಆಗಿರಲಿಲ್ಲ ಎಂದು ಸೆಹ್ವಾಗ್ ನಗೆ ಚಟಾಕಿ ಹಾರಿಸಿದ್ದಾರೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೆಲವೇ ದಿನದಲ್ಲಿ ಸ್ಮೃತಿ ಮಂಧನಾ ಮದುವೆ ಆಘಾತದಿಂದ ಹೊರಬಂದಿದ್ದೇಗೆ? 3 ವರ್ಷ ಹಿಂದೆ ಹೇಳಿದ್ದ ಟಿಪ್ಸ್
ದಕ್ಷಿಣ ಆಫ್ರಿಕಾ ಎದುರಿನ ಮೊದಲ ಟಿ20 ಪಂದ್ಯಕ್ಕೂ ಮೊದಲು ಗೊಂದಲಕ್ಕೆ ಸಿಲುಕಿದ ಗೌತಮ್ ಗಂಭೀರ್!