ವಿರಾಟ್ ಕೊಹ್ಲಿ ವಿರುದ್ದ ಸಮರ ಸಾರಿದ ಮಾಜಿ ಕ್ರಿಕೆಟರ್ಸ್‌..!

Published : Jul 12, 2022, 03:36 PM IST
ವಿರಾಟ್ ಕೊಹ್ಲಿ ವಿರುದ್ದ ಸಮರ ಸಾರಿದ ಮಾಜಿ ಕ್ರಿಕೆಟರ್ಸ್‌..!

ಸಾರಾಂಶ

ವಿರಾಟ್ ಕೊಹ್ಲಿ ಮೇಲೆ ಮುಗಿ ಬಿದ್ದ ಮಾಜಿ ಕ್ರಿಕೆಟಿಗರು ಫಾರ್ಮ್‌ನಲ್ಲಿಲ್ಲದ ಆಟಗಾರರನ್ನು ಮುಲಾಜಿಲ್ಲದೇ ಕೈಬಿಡಿ ಎಂದ ಮಾಜಿ ಕ್ರಿಕೆಟರ್ಸ್ ಎಲ್ಲರಿಗೂ ಒಂದೇ ರೀತಿಯ ನಿಯಮಾವಳಿಗಳಿರಲಿ ಎಂದ ವೆಂಕಿ

ಮುಂಬೈ(ಜು.12): ಕಿಂಗ್​ ಕೊಹ್ಲಿಯ ಔಟ್ ಆಫ್​ ಫಾರ್ಮ್​ ಮ್ಯಾಟರ್​​​​​ ಸದ್ಯ ಚರ್ಚೆಯ ಕೇಂದ್ರಬಿಂದುವಾಗಿದೆ. ಐಸಿಸಿ ಟಿ20 ವಿಶ್ವಕಪ್​​​ ಹೊತ್ತಿನಲ್ಲಿ ವಿರಾಟ್ ಕೊಹ್ಲಿ​ ಸ್ಥಾನದ ಬಗ್ಗೆ ಡಿಬೇಟ್​​​​​ ಜೋರಾಗಿದೆ. ಸೆಲೆಕ್ಟರ್ಸ್​ ಇತ್ತೀಚೆಗಷ್ಟೇ ಮುಂಬರುವ ಸರಣಿಗಳ ಪರ್ಫಾಮೆನ್ಸ್​​ ಮೇಲೆ ವಿರಾಟ ಕೊಹ್ಲಿಯ ವಿಶ್ವಕಪ್​​ ಭವಿಷ್ಯ ನಿರ್ಧಾರವಾಗಲಿದೆ ಎನ್ನುವ ಮೂಲಕ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ರು.  ಇದಾದ ಬೆನ್ನಲ್ಲೇ ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್​ ಕಪಿಲ್​ ದೇವ್​, ರವಿಚಂದ್ರನ್ ಅಶ್ವಿನ್​ರನ್ನು ಆಡುವ ಹನ್ನೊಂದರ ಬಳಗದಿಂದ ಕೈಬಿಡಲು ಸಾಧ್ಯವಾಗೋದಾದ್ರೆ ಫಾರ್ಮ್​ನಲ್ಲಿಲ್ಲದ ಕೊಹ್ಲಿಯನ್ನ ಏಕೆ ಹೊರಗಿಡಬಾರದು ಎನ್ನುವ ಮೂಲಕ ಮ್ಯಾನೇಜ್​​ಮೆಂಟ್​ ಅನ್ನು ನೇರವಾಗಿ ಪ್ರಶ್ನಿಸಿದ್ರು. ಇನ್ನೇನು ಕಪಿಲ್​ ದೇವ್​ ಆಕ್ರೋಶ ತಣ್ಣಗಾಯ್ತು ಅನ್ನುವಷ್ಟರಲ್ಲಿ ವೆಂಕಟೇಶ್ ಪ್ರಸಾದ್​ ಕೊಹ್ಲಿ ವಿರುದ್ಧ ಗುಡುಗಿದ್ದಾರೆ.

ಇಂಗ್ಲೆಂಡ್ ವಿರುದ್ದದ ಎರಡನೇ ಟಿ20 ಪಂದ್ಯಕ್ಕೆ ಫಾರ್ಮ್‌ನಲ್ಲಿದ್ದ ದೀಪಕ್ ಹೂಡಾ ಅವರನ್ನು ಹೊರಗಿಟ್ಟು ವಿರಾಟ್ ಕೊಹ್ಲಿಗೆ ತಂಡದಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಕೊಹ್ಲಿ ಫಾರ್ಮ್‌ ಕುರಿತಂತೆ ಮಾತನಾಡಿರುವ ಅಜೇಯ್ ಜಡೇಜಾ, ಭಾರತ ಕ್ರಿಕೆಟ್ ತಂಡವನ್ನು ನಾನೇನಾದರೂ ಆಯ್ಕೆ ಮಾಡಿದರೇ ಅಲ್ಲಿ ವಿರಾಟ್ ಕೊಹ್ಲಿಗೆ ಸ್ಥಾನವಿರುವುದಿಲ್ಲ ಎಂದು ಹೇಳಿದ್ದರು.

ಫಾರ್ಮ್​ನಲ್ಲಿಲ್ಲದವರು ಡೊಮೆಸ್ಟಿಕ್​​​ಗೆ ಹಿಂದಿರುಗಬೇಕು: 

ಹೌದು, ಕಪಿಲ್​ ದೇವ್ ಬೆನ್ನಲ್ಲೇ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್​​​ ಬಿಸಿಸಿಐ ಟೀಂ​​ ಮ್ಯಾನೇಜ್​​ಮೆಂಟನ್ನ ಕಟುವಾಗಿ ಟೀಕಿಸಿದ್ದಾರೆ. ಆಟಗಾರರು ತಮ್ಮ ಖ್ಯಾತಿಯ ಮೇಲೆ ಆಡಲು ಸಾಧ್ಯವಿಲ್ಲ. ದೊಡ್ಡ ಆಟಗಾರರು ಬ್ಯಾಡ್ ಫಾರ್ಮ್​ಗೆ ಸಿಲುಕಿದ್ರೆ ಅವರು ದೇಶಿಯ ಕ್ರಿಕೆಟ್​ಗೆ ಮರಳಬೇಕು. ಸೌರವ್​ ಗಂಗೂಲಿ, ಯುವರಾಜ್ ಸಿಂಗ್​​ ಹಾಗೂ ಭಜ್ಜಿ ಎಲ್ಲರನ್ನು ಫಾರ್ಮ್​ನಲ್ಲಿಲ್ಲದಿದ್ದಾಗ ಕೈಬಿಡಲಾಯ್ತು ಎಂದು ಟ್ವೀಟ್​ ಮಾಡಿದ್ದಾರೆ. ಸದ್ಯ ವಿರಾಟ್ ಕೊಹ್ಲಿ ಮೂರು ಫಾಮ್ಯಾಟ್​​ನಲ್ಲಿ ರನ್​ ಬರ ಎದುರಿಸುತ್ತಿದ್ದಾರೆ. ಮೂರು ವರ್ಷದಿಂದ ಒಂದೂ ಶತಕವನ್ನು ಸಿಡಿಸಿಲ್ಲ. ಇದೇ ಸಮಯದಲ್ಲಿ ವೆಂಕಿ ಅವರು ಟ್ವೀಟ್ ಮಾಡಿದ್ದು, ಪರೋಕ್ಷವಾಗಿ ಕೊಹ್ಲಿಗೆ ಕುಟುಕಿದ್ದಾರೆ.

ಕೊಹ್ಲಿ ಪರ ಕ್ಯಾಪ್ಟನ್ ರೋಹಿತ್ ಶರ್ಮಾ ಬ್ಯಾಟಿಂಗ್: 

ಒಂದೆಡೆ ಕೊಹ್ಲಿ ಔಟ್ ಆಫ್​​ ಫಾರ್ಮ್​ ಬಗ್ಗೆ ಫ್ಯಾನ್ಸ್ ಸೇರಿದಂತೆ ಮಾಜಿ ಕ್ರಿಕೆಟರ್ಸ್​ ಆಕ್ರೋಶ ವ್ಯಕ್ತಪಡಿಸ್ತಿದ್ರೆ, ಅತ್ತ ಕ್ಯಾಪ್ಟನ್ ರೋಹಿತ್ ಶರ್ಮಾ ವಿರಾಟ್ ಪರ ಬ್ಯಾಟ್​ ಬೀಸಿದ್ದಾರೆ. ಹೊರಗಿನ ಟೀಕೆಗಳಿಗೆ ನಾವು ಕಿವಿಗೊಡಲ್ಲ. ಕೊಹ್ಲಿ ಅನೇಕ ವರ್ಷಗಳಿಂದ ಸ್ಥಿರ ಫಾರ್ಮ್​ ಉಳಿಸಿಕೊಂಡಿದ್ದು, ಒಂದೆರೆಡು ಸರಣಿ ಆಡದ ಮಾತ್ರಕ್ಕೆ ಅವರ ಕೆಪಾಸಿಟಿ ಪ್ರಶ್ನಿಸಲಾಗದು ಎನ್ನುವ ಮೂಲಕ ಹಿಟ್​ಮ್ಯಾನ್, ಕೊಹ್ಲಿ ಬೆಂಬಲಕ್ಕೆ ನಿಂತಿದ್ದಾರೆ.

Virat Kohli ಕಳಪೆ ಫಾರ್ಮ್‌ ಬಗ್ಗೆ ಮತ್ತೆ ತುಟಿ ಬಿಚ್ಚಿದ ನಾಯಕ ರೋಹಿತ್ ಶರ್ಮಾ..!

ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಕಳೆದ ಮೂರು ವರ್ಷಗಳಿಂದ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕ ಬಾರಿಸಲು ಯಶಸ್ವಿಯಾಗಿಲ್ಲ. 2019ರಲ್ಲಿ ಕೋಲ್ಕತಾದ ಈಡನ್ ಗಾರ್ಡನ್ಸ್‌ ಮೈದಾನದಲ್ಲಿ ಬಾಂಗ್ಲಾದೇಶ ವಿರುದ್ದದ ಪಿಂಕ್ ಬಾಲ್ ಟೆಸ್ಟ್ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಕೊನೆಯ ಬಾರಿಗೆ ಶತಕ ಸಿಡಿಸಿದ್ದರು. ಇದಾದ ಬಳಿಕ ಕೊಹ್ಲಿಗೆ ಮೂರಂಕಿ ಮೊತ್ತ ದಾಖಲಿಸಲು ಯಶಸ್ವಿಯಾಗಿಲ್ಲ. ಇದೀಗ ಇಂದಿನಿಂದ ಇಂಗ್ಲೆಂಡ್ ಎದುರು ಮೂರು ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದ್ದು, ಏಕದಿನ ಸರಣಿಯಲ್ಲಾದರೂ ಕಿಂಗ್ ಕೊಹ್ಲಿ ಶತಕ ಸಿಡಿಸಿ ಟೀಕಾಕಾರರ ಬಾಯಿ ಮುಚ್ಚಿಸುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

One8 ಸ್ಪೋರ್ಟ್ಸ್ ಬ್ರ್ಯಾಂಡ್ ಮಾರಾಟಕ್ಕೆ ಮುಂದಾದ ಕೊಹ್ಲಿ, 40 ಕೋಟಿ ಹೂಡಿಕೆ ಪ್ಲಾನ್
ಸ್ಮೃತಿ ಮಂಧನಾ ಮದುವೆ ಮುರಿದ ಬಳಿಕ ಟೀಮ್‌ ಇಂಡಿಯಾ ಆಟಗಾರ್ತಿಯರ ಮಹಾ ನಿರ್ಧಾರ!