Ind vs Eng ಕೊನೆಗೂ ನಿಜವಾಯ್ತು ಸೂರ್ಯಕುಮಾರ್ ಬಗ್ಗೆ ರೋಹಿತ್​​ ನುಡಿದ ಭವಿಷ್ಯ..!

Published : Jul 12, 2022, 02:56 PM IST
Ind vs Eng ಕೊನೆಗೂ ನಿಜವಾಯ್ತು ಸೂರ್ಯಕುಮಾರ್ ಬಗ್ಗೆ ರೋಹಿತ್​​ ನುಡಿದ ಭವಿಷ್ಯ..!

ಸಾರಾಂಶ

* ದಶಕದ ಹಿಂದೆಯೇ ಸೂರ್ಯಕುಮಾರ್ ಯಾದವ್ ಪ್ರತಿಭೆ ಹುಡುಕಿದ್ದ ರೋಹಿತ್ ಶರ್ಮಾ * 10 ವರ್ಷಗಳ ಹಿಂದೆ ಸೂರ್ಯಕುಮಾರ್ ಕುರಿತಾಗಿ ರೋಹಿತ್ ಮಾಡಿದ್ದ ಟ್ವೀಟ್‌ ವೈರಲ್ * ಇಂಗ್ಲೆಂಡ್ ಎದುರಿನ ಮೂರನೇ ಟಿ20 ಪಂದ್ಯದಲ್ಲಿ ಶತಕ ಚಚ್ಚಿದ್ದ ಸೂರ್ಯಕುಮಾರ್

ಬೆಂಗಳೂರು(ಜು.12): ವಾರೆ ವ್ಹಾ, ನಿಜಕ್ಕೂ ಎಂತಹ ಟಾಪ್ ಕ್ಲಾಸ್ ಇನ್ನಿಂಗ್ಸ್​​​. ಬಿಗ್​​ ಟಾರ್ಗೆಟ್​​ ಕಣ್ಣ ಮುಂದಿದೆ. ಆದರೂ ಒತ್ತಡವನ್ನ ಲೆಕ್ಕಿಸದೇ ನಿರ್ಭೀತಿ ಆಟ. ಘಟಾನುಘಟಿ ಆಟಗಾರರ ವೈಫಲ್ಯದ ಮಧ್ಯೆ ಸದಾ ಸ್ಮರಿಸುವ ಡೇರಿಂಗ್​ ಇನ್ನಿಂಗ್ಸ್. ಪಂದ್ಯ ಸೋತ್ರೂ ಸ್ಪೋಟಕ ಸೆಂಚುರಿ ವೈಭವ. 55 ಎಸೆತಗಳಲ್ಲಿ ಸಿಡಿಲಬ್ಬರದ 117 ರನ್.​​​​ ಗೆಲುವಿಗಾಗಿ ಕೊನೆಯವರೆಗೆ ಒಂಟಿಸಲಗಂತೆ ಹೋರಾಡಿದ ಪರಿಯಂತೂ ಇನ್ನೂ ಅತ್ಯಾದ್ಭುತ. ನಿಜಕ್ಕೂ ಸೂರ್ಯಕುಮಾರ್​​​​​ ಯಾದವ್​​ ಯೂ ಆರ್​​​​​​ ದಿ ರಿಯಲ್​ ವಾರಿಯರ್​​.

ಇಂಗ್ಲೆಂಡ್​ ವಿರುದ್ಧದ ಮೂರನೇ ಹಾಗೂ ಕೊನೆಯ ಟಿ20ಯಲ್ಲಿ ಭಾರತ ಕ್ರಿಕೆಟ್ ತಂಡವು ವೀರೋಚಿತ ಸೋಲುಂಡ್ರು, ಆ ನೋವನ್ನು ಸೂರ್ಯಕುಮಾರ್ ಯಾದವ್ ಅವರ ಮಾಸ್​ ಆಟ ಎಲ್ಲವನ್ನು ಮರೆಸಿಬಿಟ್ಟಿತ್ತು. ಸೋಲಿನಲ್ಲೂ SKYಮ್ಯಾನ್​ ಅದೆಷ್ಟೋ ಜನರ ಹೃದಯ ಗೆದ್ದು ಬಿಟ್ರು. ನಾಟಿಂಗ್​ಹ್ಯಾಮ್​​​​ನಲ್ಲಿ ಸೂರ್ಯ ಶತಕ ಸಿಡಿಸಿ ಪ್ರಖರಿಸ್ತಿದ್ದಂತೆ ಕ್ಯಾಪ್ಟನ್ ರೋಹಿತ್​​​​ ಶರ್ಮಾ 10 ವರ್ಷದ ಹಿಂದೆ ಮಾಡಿದ್ದ ಟ್ವೀಟ್​ವೊಂದು ಭಾರೀ ವೈರಲ್​ ಆಗ್ತಿದೆ.

ಸೂರ್ಯ, ಭವಿಷ್ಯದಲ್ಲಿ ದೊಡ್ಡ ಪ್ಲೇಯರ್​​​ ಆಗ್ತಾನೆ ಎಂದಿದ್ದ ರೋಹಿತ್​​: ಭಾರತ ತಂಡದ ಅಗ್ರೆಸ್ಸಿವ್​​ ಬ್ಯಾಟರ್ ಸೂರ್ಯಕುಮಾರ್​ ಯಾದವ್​ ಬಗ್ಗೆ ರೋಹಿತ್​​​​​​ ಶರ್ಮಾ 11 ವರ್ಷಗಳ ಹಿಂದೆ ಒಂದು ಟ್ವೀಟ್​ ಮಾಡಿದ್ರು. ಸದ್ಯ ಆ ಟ್ವೀಟ್​ ಎಲ್ಲೆಡೆ ವೈರಲ್​ ಆಗುತ್ತಿದೆ. ಈ ಟ್ವೀಟ್​ ಅನ್ನ ಹಿಟ್​ಮ್ಯಾನ್​ ಡಿಸೆಂಬರ್​​ 10, 2011 ರಂದು ಪೋಸ್ಟ್ ಮಾಡಿದ್ರು. ಈಗಷ್ಟೇ ಚೆನ್ನೈನಲ್ಲಿ ಪ್ರಶಸ್ತಿ ಸಮಾರಂಭ ಮುಗಿಯಿತು. ಮುಂಬೈನ ಸೂರ್ಯಕುಮಾರ್​ ಯಾದವ್​​ ಭವಿಷ್ಯದಲ್ಲಿ ದೊಡ್ಡ ಆಟಗಾರ ಆಗುತ್ತಾನೆ ಎಂಬ ಅರ್ಥದಲ್ಲಿ ಟ್ವೀಟ್​ ಮಾಡಿದ್ರು. ಈಗ ಅದು ನಿಜವಾಗಿದೆ.

ಸೂರ್ಯ ಟೀಂ ಇಂಡಿಯಾದ ಮಿಸ್ಟರ್​​ 360: 

ಸೂರ್ಯಕುಮಾರ್ ಯಾದವ್ ಚೊಚ್ಚಲ ಟಿ20 ಸೆಂಚುರಿ ನೋಡುಗರನ್ನು ನಿಜಕ್ಕೂ ಚಕಿತಗೊಳಿಸಿತ್ತು. ಅವರ ಒಂದೊಂದು ಶಾಟ್​ ಸೆಲೆಕ್ಷನ್​​ ಅದ್ಭುತ ಅನ್ನಿಸಿತು. ನಾಟಿಂಗ್​​​ಹ್ಯಾಮ್​​​ನಲ್ಲಿ ಅಷ್ಟ ದಿಕ್ಕಿಗೂ ಚೆಂಡುನ್ನು ಅಟ್ಟಿ ಎದುರಾಳಿ ಪಡೆಯನ್ನು 19ನೇ ಓವರ್​​​ನ ತನಕ ಕಕ್ಕಾಬಿಕ್ಕಿಯಾಗಿಸಿದ್ರು. ನಿಜಕ್ಕೂ SKY ಟೀಂ​ ಇಂಡಿಯಾಗೆ ಸಿಕ್ಕ ಮಿಸ್ಟರ್​ 360 ಡಿಗ್ರಿ ಮ್ಯಾನ್​​​. ಸೂರ್ಯ ಟೀಂ​ ಇಂಡಿಯಾದ ಖಾಯಂ ಆಟಗಾರ ಎನಿಸಿಕೊಂಡಿದ್ರೂ, ಟಿ20 ವಿಶ್ವಕಪ್​​ನಲ್ಲಿ ಅವರ ಸ್ಥಾನ ಇನ್ನೂ ಖಚಿತವಾಗಿರ್ಲಿಲ್ಲ. ಮಧ್ಯಮ ಕ್ರಮಾಂಕದಲ್ಲಿ ಪ್ರಬಲ ಪೈಪೋಟಿ ಏರ್ಪಟ್ಟಿತ್ತು. ಇಂಗ್ಲೆಂಡ್​ ಸರಣಿಯಿಂದಲೇ ವಿಶ್ವಕಪ್ ಸಿದ್ಧತೆಗೆ ಕಹಳೆ ಊದಿತ್ತು. ಸದ್ಯ ಇದೇ ಟೂರ್​​ನಲ್ಲಿ ಅಗ್ರೆಸ್ಸಿವ್​ ಬ್ಯಾಟರ್​ ಸೆಂಚುರಿ ಸಿಡಿಸಿ ಚುಟುಕು ಮಹಾಸಮರ ಆಡುವ ಕೆಪಾಸಿಟಿ ನನ್ನಲ್ಲಿದೆ ಅನ್ನೋದನ್ನ ಪ್ರೂವ್​ ಮಾಡಿದ್ದಾರೆ.

Rohit Sharma 8 ತಿಂಗಳ ಕ್ಯಾಪ್ಟನ್ಸಿಯಲ್ಲಿ ದಿಗ್ಗಜರ ದಾಖಲೆಗಳು ದಮನ..!

ಸೂರ್ಯಕುಮಾರ್ ಯಾದವ್ ಗುಣಗಾನ ಮಾಡಿದ ರೋಹಿತ್ ಶರ್ಮಾ

ಇಂಗ್ಲೆಂಡ್ ಎದುರಿನ ಮೂರನೇ ಟಿ20 ಪಂದ್ಯ ಮುಕ್ತಾಯದ ಬಳಿಕ ಮಾತನಾಡಿದ ರೋಹಿತ್ ಶರ್ಮಾ, ಮುಂಬೈ ಮೂಲದ ಸೂರ್ಯಕುಮಾರ್ ಯಾದವ್ ಅವರ ಬ್ಯಾಟಿಂಗ್ ಪ್ರದರ್ಶನವನ್ನು ಕೊಂಡಾಡಿದ್ದಾರೆ. ನಾವು ಅಲ್ಪ ರನ್‌ಗಳ ಅಂತರದಲ್ಲಿ ಸೋಲು ಅನುಭವಿಸಿದ್ದರೂ ಸಹಾ, ಇದೊಂದು ರೀತಿಯ ಅದ್ಭುತ ಚೇಸ್ ಆಗಿತ್ತು. ನಮ್ಮ ಹೋರಾಟದ ಬಗ್ಗೆ ಹೆಮ್ಮೆಯಿದೆ. ಸೂರ್ಯಕುಮಾರ್ ಯಾದವ್ ಅವರ ಬ್ಯಾಟಿಂಗ್ ನೋಡಲು ಅದ್ಭುತವಾಗಿತ್ತು. ನಾನು ಸಾಕಷ್ಟು ಸಮಯದಿಂದ ಅವರ ಆಟವನ್ನು ನೋಡುತ್ತಾ ಬಂದಿದ್ದೇನೆ. ಅವರು ಈ ಮಾದರಿಯ ಕ್ರಿಕೆಟ್‌ನಲ್ಲಿ ಸೊಗಸಾದ ಆಟವನ್ನು ಆಡುತ್ತಾರೆ. ಅವರು ನಮ್ಮ ತಂಡ ಕೂಡಿಕೊಂಡ ಬಳಿಕ ಹಂತ ಹಂತವಾಗಿ ಬೆಳೆಯುತ್ತಾ ಬಂದಿದ್ದಾರೆ ಎಂದು ರೋಹಿತ್ ಶರ್ಮಾ ಮುಂಬೈನ ಸಹ ಆಟಗಾರರನ ಪ್ರದರ್ಶನವನ್ನು ಕೊಂಡಾಡಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ತಲೆಗೆ 20 ಹೊಲಿಗೆ, ಭುಜಕ್ಕೆ ಬಲವಾದ ಪೆಟ್ಟು! ಕ್ರಿಕೆಟ್ ತಂಡಕ್ಕೆ ಆಯ್ಕೆ ಮಾಡದ್ದಕ್ಕೆ ಕೋಚ್‌ ಮೇಲೆ ಆಟಗಾರರ ಮಾರಣಾಂತಿಕ ಹಲ್ಲೆ!
ಆ ಒಂದು ಫೋಟೋ: ಪಾಪರಾಜಿಗಳ ಮೇಲೆ ಹಾರ್ದಿಕ್ ಪಾಂಡ್ಯ ಕೆಂಡಾಮಂಡಲ!