
ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ ರೀತಿಯ ಬಗ್ಗೆ ಬಿಸಿಸಿಐ ತಪ್ಪು ಮಾಡಿದೆ ಅಂತ ಭಾರತ ತಂಡದ ಮಾಜಿ ಕೋಚ್ ರವಿ ಶಾಸ್ತ್ರಿ ಹೇಳಿದ್ದಾರೆ. ಕೊಹ್ಲಿ ನಿವೃತ್ತಿ ನಿರ್ಧಾರ ಮತ್ತು ಅದನ್ನು ಘೋಷಿಸಿದ ರೀತಿಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಸೋನಿ ಲೈವ್‌ಗೆ ನೀಡಿದ ಸಂದರ್ಶನದಲ್ಲಿ ಈ ವಿಷಯ ತಿಳಿಸಿದ್ದಾರೆ.
ವಿರಾಟ್ ಜೊತೆ ಮಾತನಾಡಬೇಕಿತ್ತು!
ವಿರಾಟ್ ಕೊಹ್ಲಿ ನಿವೃತ್ತಿ ನಂತರ ಅವರು ಎಷ್ಟು ದೊಡ್ಡ ಆಟಗಾರ ಅಂತ ಜನರಿಗೆ ಅರ್ಥ ಆಗಿದೆ. ಕೊಹ್ಲಿ ನಿವೃತ್ತಿ ಮತ್ತು ಅದನ್ನು ಘೋಷಿಸಿದ ರೀತಿಯ ಬಗ್ಗೆ ಬೇಸರವಿದೆ. ಕೊಹ್ಲಿ ನಿವೃತ್ತಿ ನಿರ್ಧಾರವನ್ನು ಉತ್ತಮವಾಗಿ ನಿರ್ವಹಿಸಬಹುದಿತ್ತು. ನಿವೃತ್ತಿ ಘೋಷಣೆಗೂ ಮುನ್ನ ಕೊಹ್ಲಿ ಜೊತೆ ಮಾತನಾಡಬೇಕಿತ್ತು ಅಂತ ಶಾಸ್ತ್ರಿ ಹೇಳಿದ್ದಾರೆ.
ಟೆಸ್ಟ್ ಕ್ರಿಕೆಟ್ ರಾಯಭಾರಿ ಕೊಹ್ಲಿ
ಕೊಹ್ಲಿ ವಿಷಯದಲ್ಲಿ ನನಗೆ ಏನಾದರೂ ಮಾಡಲು ಸಾಧ್ಯವಿದ್ದಿದ್ದರೆ ಆಸ್ಟ್ರೇಲಿಯಾ ಪ್ರವಾಸದ ನಂತರ ಅವರನ್ನೇ ನಾಯಕನನ್ನಾಗಿ ಮಾಡುತ್ತಿದ್ದೆ. ಕೇವಲ ಅಂಕಿ-ಅಂಶಗಳ ಆಧಾರದ ಮೇಲೆ ಆಟಗಾರನ ಸಾಮರ್ಥ್ಯವನ್ನು ನಿರ್ಣಯಿಸಲು ಸಾಧ್ಯವಿಲ್ಲ. ಕೊಹ್ಲಿ ಟೆಸ್ಟ್ ಕ್ರಿಕೆಟ್‌ನ ರಾಯಭಾರಿ. ವಿಶೇಷವಾಗಿ ವಿದೇಶಿ ಸರಣಿಗಳಲ್ಲಿ, ಲಾರ್ಡ್ಸ್‌ನಲ್ಲಿ ಅವರು ಆಡಿದ ರೀತಿ ಮತ್ತು ನಂತರ ತಂಡದ ಪ್ರದರ್ಶನದಲ್ಲಿ ಆದ ಬದಲಾವಣೆ ಅದ್ಭುತವಾಗಿತ್ತು. ಅದರಲ್ಲಿ ನಾನೂ ಭಾಗಿಯಾಗಿದ್ದಕ್ಕೆ ಸಂತೋಷವಾಗಿದೆ ಅಂತ ರವಿ ಶಾಸ್ತ್ರಿ ಹೇಳಿದ್ದಾರೆ.
ಇಷ್ಟು ಬೇಗ ನಿವೃತ್ತಿ ಘೋಷಣೆ ಮಾಡಿದ್ಯಾಕೆ?
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡವನ್ನು ಪ್ರಕಟಿಸುವ ಮುನ್ನ ಕೊಹ್ಲಿ ನಿವೃತ್ತಿ ಘೋಷಿಸಿದ್ದರು. ಇಂಗ್ಲೆಂಡ್ ಪ್ರವಾಸದಲ್ಲಿ ಟೆಸ್ಟ್ ನಾಯಕನಾಗಿ ಮರಳಲು ಕೊಹ್ಲಿ ಆಸಕ್ತಿ ತೋರಿಸಿದ್ದರು. ಆದರೆ ಆಯ್ಕೆದಾರರು ಒಪ್ಪದ ಕಾರಣ ನಿವೃತ್ತಿ ಘೋಷಿಸಿದರು ಅಂತ ವರದಿಗಳಿದ್ದವು. ಇದನ್ನು ಶಾಸ್ತ್ರಿಯವರ ಹೇಳಿಕೆ ಸಮರ್ಥಿಸುತ್ತದೆ. ಭಾರತ ಪರ 123 ಟೆಸ್ಟ್ ಪಂದ್ಯಗಳನ್ನು ಆಡಿರುವ ಕೊಹ್ಲಿ 46.85 ಸರಾಸರಿಯಲ್ಲಿ 30 ಶತಕ ಸೇರಿದಂತೆ 9230 ರನ್ ಗಳಿಸಿದ್ದಾರೆ.
ಆರ್‌ಸಿಬಿ ಗೆಲುವಿನ ಮಧ್ಯೆ ಸಾವು!
ಅಂದಹಾಗೆ ವಿರಾಟ್ ಕೊಹ್ಲಿ ಅವರು ಐಪಿಎಲ್‌ನಲ್ಲಿ ಕಳೆದ ಹದಿನೆಂಟು ವರ್ಷಗಳಿಂದ ಆರ್‌ಸಿಬಿ ತಂಡದಲ್ಲಿ ಆಡಿದ್ದರು. ಈ ರೀತಿ ಶಿಸ್ತು, ಬದ್ಧತೆ ಇದ್ದ ಕ್ರಿಕೆಟರ್, ಹದಿನೆಂಟನೇ ವರ್ಷದಲ್ಲಿ ಆರ್‌ಸಿಬಿ ಗೆಲ್ಲುವಂತೆ ಮಾಡಿದರು. ಆದರೆ ಈ ಖುಷಿ ಒಂದು ದಿನ ಕಳೆಯುವುದರೊಳಗಡೆ ಸೂತಕವಾಗಿ ಮಾರ್ಪಟ್ಟಿತು. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿರಾಟ್ ಕೊಹ್ಲಿಯನ್ನು ನೋಡಲು, ಆರ್‌ಸಿಬಿ ತಂಡವನ್ನು ಕಣ್ತುಂಬಿಸಿಕೊಳ್ಳಲು ದೊಡ್ಡ ಮಟ್ಟದಲ್ಲಿ ಜನರು ಸೇರಿದರು. ಇದರಿಂದ ಕಾಲ್ತುಳಿತವಾಗಿ ಹನ್ನೊಂದು ಜನರು ಸತ್ತರು. ಈ ಬಗ್ಗೆ ವಿರಾಟ್ ಕೊಹ್ಲಿ ಕೂಡ ಬೇಸರ ವ್ತಕ್ತಪಡಿಸಿದ್ದರು. ಒಟ್ಟಿನಲ್ಲಿ ಖುಷಿ, ಸೂತಕವಾಯ್ತು. ಆರ್‌ಸಿಬಿ ಗೆಲುವನ್ನು ಈ ರೀತಿ ಕೂಡ ನೆನಪು ಇಟ್ಟುಕೊಳ್ಳುವಂತಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.