ಭಾರತ ಕ್ರಿಕೆಟ್ ತಂಡದ ನೂತನ ಕೋಚ್ ಆಗಿ ಗಂಭೀರ್ ನೇಮಕಗೊಳ್ಳುವುದು ಖಚಿತವಾಗಿದ್ದು, ಅಧಿಕೃತ ಪ್ರಕಟಣೆಯೊಂದೇ ಬಾಕಿ ಇದೆ ಎಂದು ಸುದ್ದಿಯಾಗಿರುವ ಬೆನ್ನಲ್ಲೇ ಅಮಿತ್ ಶಾ ಅವರನ್ನು ಗಂಭೀರ್ ಭೇಟಿ ಮಾಡಿ ಚರ್ಚೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ. ಈ ತಿಂಗಳಾಂತ್ಯಕ್ಕೆ ಹೊಸ ಕೋಚ್ ನೇಮಕ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಹೇಳಲಾಗುತ್ತಿದೆ.
ನವದೆಹಲಿ: ಭಾರತದ ಮಾಜಿ ಕ್ರಿಕೆಟಿಗ, ಐಪಿಎಲ್‌ನ ಕೆಕೆಆರ್ ತಂಡದ ಮೆಂಟರ್ ಗೌತಮ್ ಗಂಭೀರ್ ಸೋಮವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾದರು. 2019ರ ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ದೆಹಲಿ ಕ್ಷೇತ್ರದಿಂದ ಬಿಜೆಪಿ ಸಂಸದರಾಗಿ ಆಯ್ಕೆಯಾಗಿದ್ದ ಗಂಭೀರ್, ಈ ಬಾರಿ ಚುನಾವಣಾ ಕಣದಿಂದ ಹಿಂದೆ ಸರಿದಿದ್ದರು.
ಭಾರತ ಕ್ರಿಕೆಟ್ ತಂಡದ ನೂತನ ಕೋಚ್ ಆಗಿ ಗಂಭೀರ್ ನೇಮಕಗೊಳ್ಳುವುದು ಖಚಿತವಾಗಿದ್ದು, ಅಧಿಕೃತ ಪ್ರಕಟಣೆಯೊಂದೇ ಬಾಕಿ ಇದೆ ಎಂದು ಸುದ್ದಿಯಾಗಿರುವ ಬೆನ್ನಲ್ಲೇ ಅಮಿತ್ ಶಾ ಅವರನ್ನು ಗಂಭೀರ್ ಭೇಟಿ ಮಾಡಿ ಚರ್ಚೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ. ಈ ತಿಂಗಳಾಂತ್ಯಕ್ಕೆ ಹೊಸ ಕೋಚ್ ನೇಮಕ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಹೇಳಲಾಗುತ್ತಿದೆ.
undefined
ಪಾಕಿಸ್ತಾನ, ನ್ಯೂಜಿಲೆಂಡ್ ಸೇರಿ 2026ರ ಟಿ20 ವಿಶ್ವಕಪ್‌ಗೆ 12 ತಂಡಗಳಿಗೆ ನೇರ ಅರ್ಹತೆ..!
ಟೀಂ ಇಂಡಿಯಾಗೆ ಜಾಂಟಿ ರೋಡ್ಸ್ ಫೀಲ್ಡಿಂಗ್ ಕೋಚ್?
ನವದೆಹಲಿ: ಭಾರತ ಕ್ರಿಕೆಟ್ ತಂಡದ ನೂತನ ಫೀಲ್ಡಿಂಗ್ ಕೋಚ್ ಆಗಿ ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ, ಪ್ರಚಂಡ ಫೀಲ್ಡರ್ ಎಂದೇ ಗುರುತಿಸಿಕೊಂಡಿದ್ದ ಜಾಂಟಿ ರೋಡ್ಸ್ ನೇಮಕಗೊಳ್ಳಲಿದ್ದಾರೆ ಎನ್ನುವ ಸುದ್ದಿ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. 2019ರಲ್ಲಿ ರೋಡ್ಸ್, ಟೀಂ ಇಂಡಿಯಾದ ಫೀಲ್ಡಿಂಗ್ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದರಾದರೂ, ಅವರನ್ನು ಬಿಸಿಸಿಐ ಪರಿಗಣಿಸಿರಲಿಲ್ಲ. ಆದರೆ, ಇದೀಗ ಗಂಭೀರ್ ಹೊಸ ಕೋಚ್ ಆಗಿ ನೇಮಕಗೊಳ್ಳುವುದು ಬಹುತೇಕ ಖಚಿತ ಎನ್ನಲಾಗುತ್ತಿದ್ದು, ಅವರೊಂದಿಗೆ ಐಪಿಎಲ್‌ನ ಲಖನೌ ತಂಡದಲ್ಲಿ ಕೆಲಸ ಮಾಡಿದ ರೋಡ್ಸ್‌ರನ್ನು ನೇಮಕ ಮಾಡುವಂತೆ ಬಿಸಿಸಿಐಗೆ ಕೇಳಲಿದ್ದಾರೆ ಎಂದು ಹೇಳಲಾಗಿದೆ.
27 ಎಸೆತಗಳಲ್ಲಿ ಶತಕ ಸಿಡಿಸಿದ ಸೌಹಿಲ್ ಚೌಹಾಣ್!
ಎಪಿಸ್ಕೋಪಿ(ಸೈಪ್ರಸ್): ಟಿ20 ಕ್ರಿಕೆಟ್‌ನಲ್ಲಿ ಅತಿವೇಗದ ಶತಕ ಬಾರಿಸಿದ ವಿಶ್ವ ದಾಖಲೆಯನ್ನು ಭಾರತೀಯ ಮೂಲದ ಎಸ್ಟೋನಿಯಾ ಕ್ರಿಕೆಟಿಗ ಸಾಹಿಲ್ ಚೌಹಾಣ್ ಬರೆದಿದ್ದಾರೆ. ಸೈಪ್ರಸ್ ದೇಶದ ವಿರುದ್ಧದ 6 ಪಂದ್ಯಗಳ ಸರಣಿಯ 2ನೇ ಪಂದ್ಯದಲ್ಲಿ ಸೋಮವಾರ ಸಾಹಿಲ್, ಕೇವಲ 27 ಎಸೆತಗಳಲ್ಲಿ ಶತಕ ಸಿಡಿಸಿದರು. ಆ ಮೂಲಕ 2013ರಲ್ಲಿ ಪುಣೆ ವಾರಿಯರ್ಸ್ ವಿರುದ್ಧ ಆರ್‌ಸಿಬಿಯ ಕ್ರಿಸ್ ಗೇಲ್ 30 ಎಸೆತಗಳಲ್ಲಿ ಶತಕ ಸಿಡಿಸಿ ಬರೆದಿದ್ದ ದಾಖಲೆಯನ್ನು ಮುರಿದರು.
ಗ್ರೂಪ್ ಹಂತದಲ್ಲೇ ಹೊರಬಿದ್ದ ಪಾಕಿಸ್ತಾನ ತಂಡದ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಹೆಡ್ ಕೋಚ್ ಗ್ಯಾರಿ ಕರ್ಸ್ಟನ್..!
ಇನ್ನು ಅಂತಾರಾಷ್ಟ್ರೀಯ ಟಿ20ಯಲ್ಲಿ ನಮೀಬಿಯಾದ ಲಾಫ್ಟಿ ಈಟನ್ ನೇಪಾಳ ವಿರುದ್ಧ ಇದೇ ವರ್ಷ ಫೆಬ್ರವರಿಯಲ್ಲಿ 33 ಎಸೆತಗಳಲ್ಲಿ ಶತಕ ಬಾರಿಸಿದ್ದರು. ಸಾಹಿಲ್ ಇದೀಗ ಅಂ.ರಾ.ಟಿ20ಯಲ್ಲೂ ವೇಗದ ಶತಕದ ಸರದಾರ ಎನಿಸಿದ್ದಾರೆ. ಸೈಪ್ರಸ್ ನೀಡಿದ್ದ 192 ರನ್ ಗುರಿಯನ್ನು ಬೆನ್ನತ್ತಿದ ಎಸ್ಟೋನಿಯಾ, 13 ಓವರಲ್ಲೇ 4 ವಿಕೆಟ್‌ಗೆ 194 ರನ್ ಗಳಿಸಿತು. ಸಾಹಿಲ್ ಕೇವಲ 41 ಎಸೆತದಲ್ಲಿ 6 ಬೌಂಡರಿ, 18 ಸಿಕ್ಸರ್‌ಗಳೊಂದಿಗೆ ಔಟಾಗದೆ 144 ರನ್ ಸಿಡಿಸಿದರು.
ಸಿಕ್ಸರ್‌ನಲ್ಲೂ ವಿಶ್ವದಾಖಲೆ:
ಅಂ.ರಾ.ಟಿ20 ಇನ್ನಿಂಗ್ಸ್‌ನಲ್ಲಿ ಅತಿಹೆಚ್ಚು ಸಿಕ್ಸರ್ ಸಿಡಿಸಿದ ದಾಖಲೆಯೂ ಸಾಹಿಲ್ ಪಾಲಾಯಿತು. 18 ಸಿಕ್ಸರ್ ಸಿಡಿಸಿದ ಅವರು, ಅಫ್ಘಾನಿಸ್ತಾನದ ಹಜರತ್ತುಲ್ಲಾ ಝಝಾಯ್ ದಾಖಲೆಯನ್ನು ಮುರಿದರು. ಝಝಾಯ್ 2019ರಲ್ಲಿ ಐರ್ಲೆಂಡ್ ವಿರುದ್ಧ 16 ಸಿಕ್ಸರ್ ಸಿಡಿಸಿದ್ದರು. ಇನ್ನು ಒಟ್ಟಾರೆ ಟಿ20 ಕ್ರಿಕೆಟ್‌ನ ಇನ್ನಿಂಗ್ಸಲ್ಲಿ ಅತಿಹೆಚ್ಚು ಸಿಕ್ಸರ್ ಸಿಡಿಸಿದ ದಾಖಲೆ ಕ್ರಿಸ್ ಗೇಲ್ ಹೆಸರಲ್ಲಿದೆ. ಗೇಲ್ 2017ರಲ್ಲಿ ಬಾಂಗ್ಲಾ ಟಿ20 ಲೀಗ್‌ನ ಡೈನಮೈಟ್ಸ್ ವಿರುದ್ಧದ ಪಂದ್ಯದಲ್ಲಿ ರಂಗ್‌ಪುರ್ ಪರ 18 ಸಿಕ್ಸರ್ ಬಾರಿಸಿದ್ದರು. ಸಾಹಿಲ್, ಗೇಲ್‌ರ ದಾಖಲೆ ಸರಿಗಟ್ಟಿದ್ದಾರೆ.