ಗರಿಷ್ಠ ಟೆಸ್ಟ್‌ ವಿಕೆಟ್‌ ಸಾಧನೆ: ಕುಂಬ್ಳೆ ದಾಖಲೆ ಮರಿದ ಆ್ಯಂಡರ್‌ಸನ್‌, ಶಹಬ್ಬಾಶ್ ಎಂದ ಜಂಬೋ

By Suvarna NewsFirst Published Aug 7, 2021, 3:49 PM IST
Highlights

* ಅನಿಲ್‌ ಕುಂಬ್ಳೆ ಹೆಸರಿನಲ್ಲಿದ್ದ ಗರಿಷ್ಠ ಟೆಸ್ಟ್ ವಿಕೆಟ್ ದಾಖಲೆ ಅಳಿಸಿಹಾಕಿದ ಆ್ಯಂಡರ್‌ಸನ್‌

* ಅನಿಲ್ ಕುಂಬ್ಳೆ ಹಿಂದಿಕ್ಕಿ ಮೂರನೇ ಸ್ಥಾನಕ್ಕೇರಿದ ಇಂಗ್ಲೆಂಡ್ ವೇಗಿ

* ಜೇಮ್ಸ್‌ ಆ್ಯಂಡರ್‌ಸನ್‌ಗೆ ಧನ್ಯವಾದಗಳನ್ನು ಅರ್ಪಿಸಿದ ಕುಂಬ್ಳೆ

ನಾಟಿಂಗ್‌ಹ್ಯಾಮ್‌(ಆ.07): ದಶಕಗಳ ಅನಿಲ್‌ ಕುಂಬ್ಳೆ ಅವರ ಹೆಸರಿನಲ್ಲಿದ್ದ ಮೂರನೇ ಗರಿಷ್ಠ ಟೆಸ್ಟ್‌ ವಿಕೆಟ್‌ ಸರದಾರ ಎನ್ನುವ ದಾಖಲೆಯನ್ನು ಇಂಗ್ಲೆಂಡ್ ಅನುಭವಿ ವೇಗಿ ಜೇಮ್ಸ್‌ ಆ್ಯಂಡರ್‌ಸನ್ ತಮ್ಮ ಹೆಸರಿಗೆ ಬರೆಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಭಾರತ ವಿರುದ್ದದ ಮೊದಲ ಟೆಸ್ಟ್‌ ಪಂದ್ಯದಲ್ಲೇ ಆ್ಯಂಡರ್‌ಸನ್ ಈ ಸಾಧನೆ ಮಾಡಿದ್ದಾರೆ. ಇಂಗ್ಲೆಂಡ್ ವೇಗಿಯ ಈ ಸಾಧನೆಗೆ ಕನ್ನಡಿಗ ಅನಿಲ್‌ ಕುಂಬ್ಳೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಟೀಂ ಇಂಡಿಯಾ ಎದುರಿನ ಮೊದಲ ಟೆಸ್ಟ್‌ ಪಂದ್ಯದ ಮೂರನೇ ದಿನ 94 ರನ್‌ ಬಾರಿಸಿ ಶತಕದತ್ತ ಮುನ್ನುಗ್ಗುತ್ತಿದ್ದ ಕನ್ನಡಿಗ ಕೆ.ಎಲ್. ರಾಹುಲ್ ಅವರ ವಿಕೆಟ್‌ ಪಡೆಯುತ್ತಿದ್ದಂತೆಯೇ ಅನಿಲ್‌ ಕುಂಬ್ಳೆ ಹೆಸರಿನಲ್ಲಿದ್ದ 619 ವಿಕೆಟ್‌ಗಳ ದಾಖಲೆಯನ್ನು ಹಿಂದಿಕ್ಕುವಲ್ಲಿ ಇಂಗ್ಲೆಂಡ್ ವೇಗಿ ಯಶಸ್ವಿಯಾದರು. ಇನ್ನು ಮರು ಓವರ್‌ನಲ್ಲಿ ಶಾರ್ದೂಲ್ ಠಾಕೂರ್ ವಿಕೆಟ್ ಪಡೆಯುವ ಮೂಲಕ ಆ್ಯಂಡರ್‌ಸನ್‌ ಖಾತೆಗೆ 621 ವಿಕೆಟ್‌ಗಳು ಸೇರ್ಪಡೆಯಾಗಿವೆ. ಇದಷ್ಟೇ ಅಲ್ಲದೇ ಟೆಸ್ಟ್‌ ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಮುತ್ತಯ್ಯ ಮುರುಳೀಧರನ್ ಹಾಗೂ ಶೇನ್ ವಾರ್ನ್‌ ಬಳಿಕ ಆ್ಯಂಡರ್‌ಸನ್ ಇದೀಗ ಮೂರನೇ ಸ್ಥಾನಕ್ಕೇರಿದ್ದಾರೆ.

ಟೀಂ ಇಂಡಿಯಾ 278 ರನ್‌ಗೆ ಆಲೌಟ್, ಇಂಗ್ಲೆಂಡ್ ವಿರುದ್ಧ 95 ರನ್ ಮುನ್ನಡೆ!

ಹಲವಾರು ಹಿರಿಕಿರಿಯ ಆಟಗಾರರು ಆ್ಯಂಡರ್‌ಸನ್ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ತಮ್ಮ ದಾಖಲೆಯನ್ನು ಹಿಂದಿಕ್ಕಿದ್ದಕ್ಕೆ ಜಂಬೋ ಖ್ಯಾತಿಯ ಅನಿಲ್‌ ಕುಂಬ್ಳೆ ಕೂಡಾ ಇಂಗ್ಲೆಂಡ್ ಅನುಭವಿ ವೇಗಿ ಜೇಮ್ಸ್‌ ಆ್ಯಂಡರ್‌ಸನ್ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೇಮ್ಸ್‌ ಆ್ಯಂಡರ್‌ಸನ್‌ಗೆ ಅಭಿನಂದನೆಗಳು. ವೇಗದ ಬೌಲರ್‌ ಆಗಿ ಈ ಸಾಧನೆ ಮಾಡಿರುವುದು ನಿಜಕ್ಕೂ ಅದ್ಭುತ ಎಂದು ಕುಂಬ್ಳೆ ಟ್ವೀಟ್‌ ಮೂಲಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. 

Congratulations Fantastic to see a fast bowler get up there.

— Anil Kumble (@anilkumble1074)

39 ವರ್ಷದ ಜೇಮ್ಸ್‌ ಆ್ಯಂಡರ್‌ಸನ್ ಭಾರತ ವಿರುದ್ದದ ಮೊದಲ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ 54 ರನ್‌ ನೀಡಿ 4 ವಿಕೆಟ್‌ ಕಬಳಿಸಿದ್ದಾರೆ. ಭಾರತ ಮೊದಲ ಇನಿಂಗ್ಸ್‌ನಲ್ಲಿ 278 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಒಟ್ಟಾರೆ 95 ರನ್‌ಗಳ ಮುನ್ನಡೆ ಸಾಧಿಸಿತ್ತು. 

click me!