ಭಾರಿ ವಿರೋಧದ ಬಳಿಕ ತಪ್ಪು ಸರಿಪಡಿಸಿಕೊಂಡ ಟ್ವಿಟರ್; ಧೋನಿ ಬ್ಲೂಟಿಕ್ ವಾಪಸ್!

By Suvarna NewsFirst Published Aug 6, 2021, 6:53 PM IST
Highlights
  • ಟ್ವಿಟರ್ ವಿರುದ್ಧ ಎಂಎಸ್ ಧೋನಿ ಅಭಿಮಾನಿಗಳ ಆಕ್ರೋಶ
  • ವಿರೋಧದ ಬೆನ್ನಲ್ಲೇ ತಪ್ಪು ಸರಿಪಡಿಸಿಕೊಂಡ ಟ್ವಿಟರ್ ಇಂಡಿಯಾ
  • ಧೋನಿ ಟ್ವಿಟರ್ ಬ್ಲೂಟಿಕ್ ವಾಪಸ್

ನವದೆಹಲಿ(ಆ.06): ಟ್ವಿಟರ್ ಇಂಡಿಯಾ ಇತ್ತೀಚೆಗೆ ಭಾರಿ ಸದ್ದು ಮಾಡುತ್ತಿದೆ. ಕೆಲ ದಿನಗಳ ಹಿಂದೆ ಕೇಂದ್ರದ ಐಟಿ ನಿಯಮ ವಿರೋಧಿಸಿ ಕೋರ್ಟ್ ಮೆಟ್ಟಿಲೇರಿತ್ತು. ಬಳಿಕ ಉಪರಾಷ್ಟ್ರಪತಿ, ಮಾಜಿ ಐಟಿ ಸಚಿವ ರವಿ ಶಂಕರ್ ಪ್ರಸಾದ್, ಆರ್‌ಎಸ್‌ಎಸ್ ನಾಯಕರು ಸೇರಿದಂತೆ ಹಲವರ ಟ್ವಿಟರ್ ಅಧೀಕೃತ ಖಾತೆಯ ಬ್ಲೂಟಿಕ್ ತೆಗೆದಿತ್ತು. ಇದು ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಬೆಳವಣಿಗ ಬಳಿಕ ಪರಿಸ್ಥಿತಿ ಶಾಂತವಾಗಿತ್ತು. ಇದೀಗ ದಿಢೀರ್ ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್.ಧೋನಿ ಟ್ವಿಟರ್ ಬ್ಲೂಟಿಕ್ ತೆಗೆದಿತ್ತು. ಅಭಿಮಾನಿಗಳ ವಿರೋಧದ ಬಳಿಕ ಮತ್ತೆ ಬ್ಲೂಟಿಕ್ ವಾಪಸ್ ನೀಡಲಾಗಿದೆ.

ದಿಗ್ಗಜ ಎಂಎಸ್‌ ಧೋನಿ ಟ್ವಿಟರ್ ಖಾತೆಯಿಂದ ಬ್ಲೂಟಿಕ್ ಮಾಯ, ಕಾರಣ  ಗೊತ್ತಿಲ್ಲ!

ಎಂ.ಎಸ್.ಧೋನಿ ಟ್ವಿಟರ್ ಖಾತೆಯ ಅಧೀಕೃತ ಬ್ಲೂಟಿಕ್ ಇದ್ದಕ್ಕಿದ್ದಂತೆ ಮಾಯವಾಗಿದೆ. ಇದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಟ್ವಿಟರ್ ನಡೆಗೆ ವಿರೋಧ ವ್ಯಕ್ತವಾಗಿತ್ತು. ಟ್ವಿಟರ್ ವಿರುದ್ಧ ವ್ಯಕ್ತವಾದ ಆಕ್ರೋಶಕ್ಕೆ ಟ್ವಿಟರ್ ಇಂಡಿಯಾ ಬೆಚ್ಚಿ ಬಿದ್ದಿದೆ. ತಕ್ಷಣವೇ ತಪ್ಪು ಸರಿಸಪಡಿಸಿಕೊಂಡು ಬ್ಲೂಟಿಕ್ ಮತ್ತೆ ನೀಡಿದೆ.

ಟ್ವಿಟರ್ ಪ್ರಕಾರ ಸಕ್ರೀಯವಲ್ಲದ ಖಾತೆಗಳ ಬ್ಲೂಟಿಕ್ ರದ್ದಾಗಲಿದೆ. ಧೋನಿ ಕೊನೆಯದಾಗಿ ಟ್ವೀಟ್ ಮಾಡಿರಿವುದು ಜನವರಿ 8, 2021ರಲ್ಲಿ. ಬಳಿಕ ಧೋನಿ ಟ್ವಿಟರ್ ಖಾತೆಯಲ್ಲಿ ಯಾವುದೇ ಪೋಸ್ಟ್ ಕಾಣಿಸಿಲ್ಲ. ಕನಿಷ್ಠ 6 ತಿಂಗಳು ಸಕ್ರೀಯಾಗಿಲ್ಲದಿದ್ದರೆ, ಟ್ವಿಟರ್ ನಿಯಮದ ಪ್ರಕಾರ ಬ್ಲೂ ಟಿಕ್ ತೆಗೆಯಲಿದೆ.

ದಿಗ್ಗಜ ಕ್ರಿಕೆಟಿಗ ಧೋನಿ ಟ್ವಿಟರ್‌ನಲ್ಲಿ 8.2 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಸಾಮಾಜಿಕ ಜಾಲತಾಣದಿಂದ ಧೋನಿ ದೂರವೇ ಉಳಿದಿದ್ದಾರೆ. ಟೀಂ ಇಂಡಿಯಾದಿಂದ ವಿದಾಯ ಹೇಳಿರುವ ಧೋನಿ ಕೇವಲ ಐಪಿಎಲ್ ಟೂರ್ನಿಯಲ್ಲಿ ಮಾತ್ರ ಸಕ್ರಿಯರಾಗಿದ್ದಾರೆ. ಇದೀಗ ಧೋನಿ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ಶೀಘ್ರದಲ್ಲೇ ಐಪಿಎಲ್ 2021ರ ಟೂರ್ನಿ ಭಾಗ 2 ಮುಂದುವರಿಯಲಿದೆ. ಈ ವೇಳೆ ಧೋನಿ ಮತ್ತೆ ಕಾಣಿಸಿಕೊಳ್ಳಲಿದ್ದಾರೆ.

click me!