
ನಾಟಿಂಗ್‌ಹ್ಯಾಮ್(ಆ.06): ಕೆಎಲ್ ರಾಹುಲ್ ಹಾಗೂ ರವೀಂದ್ರ ಜಡೇಜಾ ಅರ್ಧಶತಕ, ರೋಹಿತ್ ಶರ್ಮಾ ಹಾಗೂ ಜಸ್ಪ್ರೀತ್ ಬುಮ್ರಾ ಬ್ಯಾಟಿಂಗ್ ನೆರವಿನಿಂದ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ದದ ಮೊದಲ ಇನ್ನಿಂಗ್ಸ್‌ನಲ್ಲಿ 95 ರನ್ ಮುನ್ನಡೆ ಪಡೆದುಕೊಂಡಿದೆ. ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ದಿಟ್ಟ ಹೋರಾಟ ನೀಡಿರುವ ಟೀಂ ಇಂಡಿಯಾ 278 ರನ್‌ಗೆ ಆಲೌಟ್ ಆಗಿದೆ.
ಕೆಎಲ್ ರಾಹುಲ್ ಹೋರಾಟ; ಇಂಗ್ಲೆಂಡ್ ವಿರುದ್ದ ಮೊದಲ ಇನ್ನಿಂಗ್ಸ್ ಮುನ್ನಡೆ!
ತೃತೀಯ ದಿನದಾಟದಲ್ಲಿ ಕೆಎಲ್ ರಾಹುಲ್ 84 ರನ್ ಕಾಣಿಕೆ ನೀಡಿದರು. ರಿಷಬ್ ಪಂತ್ 25 ರನ್ ಸಿಡಿಸಿ ಔಟಾದರು. ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ರವೀಂದ್ರ ಜಡೇಜಾ 56 ರನ್ ಸಿಡಿಸಿ ಔಟಾದರು. ಶಾರ್ದೂಲ್ ಶೂನ್ಯ ಸುತ್ತಿದರೆ, ಮೊಹಮ್ಮದ್ ಶಮಿ 13 ರನ್ ಸಿಡಿಸಿದರು. ಆದರೆ ಜಸ್ಪ್ರೀತ್ ಬುಮ್ರಾ ಅಂತಿಮ ಹಂತದ ಹೋರಾಟವೂ ಟೀಂ ಇಂಡಿಯಾಗೆ ನೆರವಾಯಿತು.
ಭಾರಿ ವಿರೋಧದ ಬಳಿಕ ತಪ್ಪು ಸರಿಪಡಿಸಿಕೊಂಡ ಟ್ವಿಟರ್; ಧೋನಿ ಬ್ಲೂಟಿಕ್ ವಾಪಸ್!
ಬುಮ್ರಾ 28 ರನ್ ಸಿಡಿಸಿದರು. ಬುಮ್ರಾ ವಿಕೆಟ್ ಪತನದೊಂದಿಗೆ ಟೀಂ ಇಂಡಿಯಾ 278 ರನ್‌ಗೆ ಆಲೌಟ್ ಆಯಿತು. ಇಂಗ್ಲೆಂಡ್ ಪರ ಒಲ್ಲಿ ರಾಬಿನ್ಸ್ 5 ವಿಕೆಟ್ ಕಬಳಿಸಿದರೆ, ಜೇಮ್ಸ್ ಆ್ಯಂಡರ್ಸನ್ 4 ವಿಕೆಟ್ ಕಬಳಿಸಿದರು.
ಇಂಗ್ಲೆಂಡ್ ಮೊದಲ ಇನ್ನಿಂಗ್ಸ್
ಟಾಸ್ ಗೆದ್ದ ಬ್ಯಾಟಿಂಗ್ ಇಳಿದ ಇಂಗ್ಲೆಂಡ್ ಟೀಂ ಇಂಡಿಯಾ ದಾಳಿಗೆ ತತ್ತರಿಸಿತು. ಜೋ ರೂಟ್ ಸಿಡಿಸಿದ 64 ರನ್ ಹೊರತು ಪಡಿಸಿದರೆ ಇತರ ಬ್ಯಾಟ್ಸ್‌ಮನ್ ಅಬ್ಬರಿಸಲಿಲ್ಲ. ಹೀಗಾಗಿ ಇಂಗ್ಲೆಂಡ್ 183 ರನ್‌ಗೆ ಆಲೌಟ್ ಆಗಿತ್ತು. ಜಸ್ಪ್ರೀತ್ ಬುಮ್ರಾ 4, ಮೊಹಮ್ಮದ್ ಶಮಿ 3, ಶಾರ್ದೂಲ್ ಠಾಕೂರ್ 2 ಹಾಗೂ ಮೊಹಮ್ಮದ್ ಸಿರಾಜ್ 1 ವಿಕೆಟ್ ಕಬಳಿಸಿ ಮಿಂಚಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.