ಟೀಂ ಇಂಡಿಯಾ ಆಯ್ಕೆ ಸಮಿತಿಗೆ ಅಜಿತ್ ಅಗರ್ಕರ್‌ ಎಂಟ್ರಿ..?

Kannadaprabha News   | Asianet News
Published : Nov 17, 2020, 10:52 AM IST
ಟೀಂ ಇಂಡಿಯಾ ಆಯ್ಕೆ ಸಮಿತಿಗೆ ಅಜಿತ್ ಅಗರ್ಕರ್‌ ಎಂಟ್ರಿ..?

ಸಾರಾಂಶ

ಟೀಂ ಇಂಡಿಯಾ ಆಯ್ಕೆ ಸಮಿತಿಯಲ್ಲಿ ಸ್ಥಾನ ಪಡೆಯಲು ಮಾಜಿ ಕ್ರಿಕೆಟಿಗರಾದ ಚೇತನ್ ಶರ್ಮಾ, ಅಜಿತ್ ಅಗರ್ಕರ್ ಸೇರಿದಂತೆ ಹಲವು ಮಂದಿ ರೇಸ್‌ನಲ್ಲಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಮುಂಬೈ(ಅ.17): ಭಾರತ ಪುರುಷರ ಕ್ರಿಕೆಟ್‌ ತಂಡದ ಆಯ್ಕೆ ಸಮಿತಿಗೆ ಮೂವರು ನೂತನ ಸದಸ್ಯರ ನೇಮಕವಾಗಬೇಕಿದ್ದು, ಅದಕ್ಕಾಗಿ ಬಿಸಿಸಿಐ ಅರ್ಜಿ ಆಹ್ವಾನಿಸಿತ್ತು. ಅರ್ಜಿ ಸಲ್ಲಿಸಲು ಭಾನುವಾರ (ನ.15) ಕೊನೆ ದಿನವಾಗಿತ್ತು. ಟೀಂ ಇಂಡಿಯಾದ ಮಾಜಿ ವೇಗಿಗಳಾದ ಅಜಿತ್‌ ಅಗರ್ಕರ್‌, ಚೇತನ್‌ ಶರ್ಮಾ, ಮಾಜಿ ಆರಂಭಿಕ ಬ್ಯಾಟ್ಸ್‌ಮನ್‌ ಶಿವಸುಂದರ್‌ ದಾಸ್‌, ಮಾಜಿ ಸ್ಪಿನ್ನರ್‌ ಮಣೀಂದರ್‌ ಸಿಂಗ್‌ ಅರ್ಜಿ ಸಲ್ಲಿಸಿರುವ ಪ್ರಮುಖರಾಗಿದ್ದಾರೆ. 

ಆಯ್ಕೆ ಸಮಿತಿಯಲ್ಲಿ ಸದ್ಯ ಸುನಿಲ್‌ ಜೋಶಿ ಹಾಗೂ ಹರ್ವಿಂದರ್‌ ಸಿಂಗ್‌ ಇದ್ದು, ಮೂವರನ್ನು ಹೊಸದಾಗಿ ಸೇರ್ಪಡೆಗೊಳಿಸಬೇಕಿದೆ. ಒಂದೊಮ್ಮೆ ಅಗರ್ಕರ್‌ ನೇಮಕಗೊಂಡರೆ, ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ ಆಧಾರದ ಮೇಲೆ ಜೋಶಿ ಬದಲಿಗೆ ಆಯ್ಕೆ ಸಮಿತಿಯ ಮುಖ್ಯಸ್ಥನ ಸ್ಥಾನಕ್ಕೇರಬಹುದು ಎನ್ನಲಾಗಿದೆ.

ಆಸೀಸ್‌ನಲ್ಲಿ ನೆಟ್ಸ್ ಅಭ್ಯಾಸ ಆರಂಭಿಸಿದ ಕೊಹ್ಲಿ ಪಡೆ..!

ಬಂಗಾಳದ ಮಾಜಿ ವೇಗಿ ರಣದೇಬ್‌ ಬೋಸ್‌ ಸಹ ಅರ್ಜಿ ಹಾಕಿದ್ದು, ಅವರನ್ನು ಕಿರಿಯರ ಆಯ್ಕೆ ಸಮಿತಿಗೆ ನೇಮಿಸಿ, ಸದ್ಯ ಕಿರಿಯರ ಆಯ್ಕೆ ಸಮಿತಿ ಮುಖ್ಯಸ್ಥರಾಗಿರುವ ಮಾಜಿ ವೇಗಿ ದೇಬಾಶಿಶ್‌ ಮೊಹಂತಿ ಅವರನ್ನು ಹಿರಿಯರ ತಂಡದ ಆಯ್ಕೆ ಸಮಿತಿಗೆ ನೇಮಕ ಮಾಡಬಹುದು ಎಂದು ಮೂಲಗಳು ತಿಳಿಸಿವೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸ್ಮೃತಿ ಮಂಧನಾ ಮದುವೆ ಮುರಿದ ಬಳಿಕ ಟೀಮ್‌ ಇಂಡಿಯಾ ಆಟಗಾರ್ತಿಯರ ಮಹಾ ನಿರ್ಧಾರ!
ಸಂಕಷ್ಟ ನಿವಾರಣೆಗೆ ಸಿಂಹಾಚಲಂ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ವಿರಾಟ್ ಕೊಹ್ಲಿ