ಐಸಿಸಿ ಏಕದಿನ ವಿಶ್ವಕಪ್ ಬಳಿಕ ಕ್ರಿಕೆಟ್‌ನಿಂದ ದೂರವೇ ಉಳಿದಿರುವ ಮಹೇಂದ್ರ ಸಿಂಗ್ ಧೋನಿಯ ನಿರ್ಧಾರದ ಬಗ್ಗೆ ಮಾಜಿ ಮಾಜಿ ನಾಯಕ ಸುನಿಲ್ ಗವಾಸ್ಕರ್ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ..
ನವದೆಹಲಿ(ಜ.12): ಏಕದಿನ ವಿಶ್ವಕಪ್ ಸೆಮಿಫೈನಲ್ ಸೋಲಿನ ಬಳಿಕ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರ ಉಳಿದಿರುವ ಭಾರತ ತಂಡದ ಮಾಜಿ ನಾಯಕ ಎಂ.ಎಸ್.ಧೋನಿ ನಡೆಯನ್ನು ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಪ್ರಶ್ನಿಸಿದ್ದಾರೆ.
ಟಿ20 ವಿಶ್ವಕಪ್ ತಂಡದಲ್ಲಿ ಧೋನಿ ಯಾಕಿರಬೇಕು? ಇಲ್ಲಿದೆ 3 ಕಾರಣ!
undefined
‘ಯಾರಾದರೂ ಭಾರತ ತಂಡದಿಂದ ಇಷ್ಟೊಂದು ದಿನ ದೂರವಿರಲು ಬಯಸುತ್ತಾರೆಯೇ?’ ಎಂದು ಗವಾಸ್ಕರ್ ಪ್ರಶ್ನೆ ಮಾಡಿದ್ದಾರೆ. ಧೋನಿ ಕ್ರಿಕೆಟ್ ಭವಿಷ್ಯದ ಬಗ್ಗೆ 26ನೇ ಲಾಲ್ ಬಹದ್ದೂರ್ ಶಾಸ್ತ್ರಿ ಸ್ಮರಣಾರ್ಥ ಉಪನ್ಯಾಸದ ವೇಳೆ ಮಾತನಾಡಿದ ಗವಾಸ್ಕರ್, ‘ಫಿಟ್ನೆಸ್ ಬಗ್ಗೆ ಧೋನಿಯನ್ನೇ ಕೇಳಬೇಕು. ಕಳೆದ ವರ್ಷ ಜುಲೈ 9ರಿಂದ ಅವರು ತಂಡಕ್ಕೆ ಅಲಭ್ಯರಾಗಿದ್ದಾರೆ. ಅವರ ನಡೆ ಬಗ್ಗೆ ಪ್ರಶ್ನಿಸಬೇಕು’ ಎಂದಿದ್ದಾರೆ.
ಧೋನಿ ನಿವೃತ್ತಿ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ರವಿಶಾಸ್ತ್ರಿ..!
2019ರ ಐಸಿಸಿ ಏಕದಿನ ವಿಶ್ವಕಪ್ ಮುಕ್ತಾಯದ ಬಳಿಕ ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್'ನಿಂದ ದೂರವೇ ಉಳಿದಿದ್ದಾರೆ. ಇನ್ನು ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿ, ಧೋನಿ ಸದ್ಯದಲ್ಲೇ ಏಕದಿನ ಕ್ರಿಕೆಟ್'ಗೆ ಗುಡ್ ಬೈ ಹೇಳಲಿದ್ದಾರೆ ಎಂದಿದ್ದರು. ಅಲ್ಲದೇ ಐಪಿಎಲ್ ಟೂರ್ನಿಯಲ್ಲಿ ಧೋನಿ ಆಡಲಿದ್ದಾರೆ ಎಂದು ಕೂಡ ಹೇಳಿದ್ದರು.