ಆಸ್ಟ್ರೇಲಿಯಾ ಸ್ಟಾರ್ ಕ್ರಿಕೆಟಿಗ ಸ್ಟುವರ್ಟ್‌ ಮೆಕ್‌ಗಿಲ್‌ ಅಪಹರಣ..!

By Suvarna NewsFirst Published May 5, 2021, 12:47 PM IST
Highlights

ಆಸ್ಟ್ರೇಲಿಯಾದ ಸ್ಟಾರ್ ಕ್ರಿಕೆಟಿಗ ಸ್ಟುವರ್ಟ್‌ ಮೆಕ್‌ಗಿಲ್‌ರನ್ನು ಅಪಹರಣಕಾರರು ಕಿಡ್ನಾಪ್‌ ಮಾಡಿ ಬೆದರಿಕೆಯೊಡ್ಡಿದ ಘಟನೆ ವರದಿಯಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಮೆಲ್ಬರ್ನ್‌(ಮೇ.05): ಆಸ್ಟ್ರೇಲಿಯಾದ ಮಾಜಿ ಲೆಗ್‌ ಸ್ಪಿನ್ನರ್ ಸ್ಟುವರ್ಟ್‌ ಮೆಕ್‌ಗಿಲ್‌ ಅಪಹರಣಕ್ಕೆ ಒಳಗಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಏಪ್ರಿಲ್‌ 14ರಂದು ಸಿಡ್ನಿಯ ತಮ್ಮ ನಿವಾಸದ ಬಳಿಯೇ ಅಪಹರಣಕ್ಕೊಳಗಾಗಿದ್ದಾರೆ ಎಂದು ಡೇಲಿ ಟೆಲಿಗ್ರಾಫ್ ವರದಿ ಮಾಡಿದೆ. 50 ವರ್ಷದ ಸ್ಟುವರ್ಟ್‌ ಅವರನ್ನು ನಗರದ ಮತ್ತೊಂದು ಭಾಗಕ್ಕೆ ಅಪಹರಣಕಾರರು ಕರೆದೊಯ್ದು, ಬಂಧೂಕನ್ನು ಗುರಿಯಿಟ್ಟು ಸುಲಿಗೆ ಮಾಡಲು ಯತ್ನಿಸಿದ್ದಾರೆ ಹಾಗೂ ಬಿಡುಗಡೆಗೂ ಮುನ್ನ ಮನಬಂದಂತೆ ಥಳಿಸಿದ್ದಾರೆಂದು ವರದಿಯಾಗಿದೆ.

ಈ ಘಟನೆಗೆ ಸಂಬಂಧಿಸಿದಂತೆ ನ್ಯೂ ಸೌಥ್ ವೇಲ್ಸ್‌ ಪೊಲೀಸರು ನಾಲ್ವರು ಶಂಕಿತ ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಸ್ಟುವರ್ಟ್‌ ಅಪಹರಣಕ್ಕೆ ಒಳಗಾದ ವಿಚಾರ ಏಪ್ರಿಲ್ 20ರಂದು ತಿಳಿಯಿತು. ಆ ಬಳಿಕ ದರೋಡೆ ಮತ್ತು ಗಂಭೀರ ಅಪರಾಧ ವಿಭಾಗದ ಅಧಿಕಾರಿಗಳು ತನಿಖೆ ನಡೆಸಿದ್ದಾರೆ. ಆದರೆ ಸಂತ್ರಸ್ಥರನ್ನು ಇನ್ನೂ ಪತ್ತೆಹಚ್ಚಿಲ್ಲ ಎಂದು ತಿಳಿಸಿದ್ದಾರೆ.

ಐಪಿಎಲ್‌ ತಂಡದ ಬಸ್‌ಗಾಗಿ ಆ್ಯಂಬುಲೆನ್ಸ್ ತಡೆಹಿಡಿದ ಗುಜರಾತ್ ಪೊಲೀಸರು..!

ಈ ಕುರಿತಂತೆ ಪ್ರಕಟಣೆ ಹೊರಡಿಸಿರುವ ನ್ಯೂ ಸೌಥ್ ವೇಲ್ಸ್ ಪೊಲೀಸರು, ಏಪ್ರಿಲ್ 14, 2021ರ ಬುಧವಾರ ಸಂಜೆ 8 ಗಂಟೆಯ ಸುಮಾರಿಗೆ 50 ವರ್ಷದ ವ್ಯಕ್ತಿ ಮುಂದೆ 46 ವರ್ಷದ ವ್ಯಕ್ತಿಯೊಬ್ಬ ಹಾಜರಾಗಿದ್ದಾನೆ. ಕೆಲವೇ ನಿಮಿಷಗಳಲ್ಲಿ ಮತ್ತಿಬ್ಬರು ವ್ಯಕ್ತಿಗಳು ಪ್ರತ್ಯಕ್ಷರಾಗಿದ್ದಾರೆ. ಆ ಬಳಿಕ ಒತ್ತಯಾಪೂರ್ವಕವಾಗಿ ಆ ವ್ಯಕ್ತಿಯನ್ನು ಕಾರಿನೊಳಗೆ ತುಂಬಿದ್ದಾರೆ. ಇದಾದ ಬಳಿಕ ಆತನನ್ನು ಬ್ರಿಂಗೆಲ್ಲಿಗೆ ಕರೆದೊಯ್ದಿದ್ದಾರೆ. ಅಲ್ಲಿ 50 ವರ್ಷದ ವ್ಯಕ್ತಿಯನ್ನು ಥಳಿಸಿದ್ದಾರೆ ಹಾಗೂ ಬಂಧೂಕನಿಟ್ಟು ಬೆದರಿಸಿದ್ದಾರೆ. ಇದಾಗಿ ಒಂದು ಗಂಟೆ ಬಳಿಕ ಬೆಲ್ಮೋರ್ ಬಳಿ ತಂದು ಬಿಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಸ್ಟ್ರೇಲಿಯಾ ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ, ಅಪಹರಣಕ್ಕೆ ಒಳಗಾದ ವ್ಯಕ್ತಿ ಆಸೀಸ್‌ ಸ್ಪಿನ್ ದಿಗ್ಗಜ ಸ್ಟುವರ್ಟ್ ಮೆಕ್‌ಗಿಲ್‌. ಲೆಗ್‌ ಸ್ಪಿನ್ನರ್‌ ಮೆಕ್‌ಗಿಲ್‌ 184 ಪ್ರಥಮ ದರ್ಜೆ ಪಂದ್ಯಗಳನ್ನಾಡಿ 774 ವಿಕೆಟ್ ಕಬಳಿಸಿದ್ದಾರೆ. ಇನ್ನು ಆಸ್ಟ್ರೇಲಿಯಾ ಪರ 44 ಟೆಸ್ಟ್‌ ಪಂದ್ಯಗಳನ್ನಾಡಿ 208 ವಿಕೆಟ್ ಕಬಳಿಸಿದ್ದಾರೆ. 

click me!