ಕಸದ ತೊಟ್ಟಿಯಲ್ಲಿ ಸಿಕ್ಕಾಕೆ ಅಂತರರಾಷ್ಟ್ರೀಯ ಕ್ರಿಕೆಟ್​ ತಂಡದ ಅಧ್ಯಕ್ಷೆ! ಭಾರತದ ಕುವರಿಯ ರೋಚಕ ಕಥೆ ಕೇಳಿ...

Published : Mar 01, 2025, 12:13 PM ISTUpdated : Mar 01, 2025, 03:14 PM IST
ಕಸದ ತೊಟ್ಟಿಯಲ್ಲಿ ಸಿಕ್ಕಾಕೆ ಅಂತರರಾಷ್ಟ್ರೀಯ ಕ್ರಿಕೆಟ್​ ತಂಡದ ಅಧ್ಯಕ್ಷೆ! ಭಾರತದ ಕುವರಿಯ ರೋಚಕ ಕಥೆ ಕೇಳಿ...

ಸಾರಾಂಶ

1979ರಲ್ಲಿ ಪುಣೆಯಲ್ಲಿ ಕಸದ ತೊಟ್ಟಿಯಲ್ಲಿ ಸಿಕ್ಕ ಮಗುವನ್ನು ಆಸ್ಟ್ರೇಲಿಯಾದ ದಂಪತಿ ದತ್ತು ಪಡೆದರು. ಆ ಮಗುವೇ ಲಿಸಾ ಸ್ಥಾಲೇಕರ್, ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕಿಯಾಗಿ ಬೆಳೆದರು. 187 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಆಸ್ಟ್ರೇಲಿಯಾವನ್ನು ಪ್ರತಿನಿಧಿಸಿ, 2010ರ ಟಿ20 ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. 2022ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟಿಗರ ಸಂಘದ ಮೊದಲ ಮಹಿಳಾ ಅಧ್ಯಕ್ಷೆಯಾಗಿ ಆಯ್ಕೆಯಾದರು. ಲಿಸಾ ಅವರ ಜೀವನ ಕಸದ ತೊಟ್ಟಿಯಿಂದ ವಿಶ್ವಖ್ಯಾತಿಯವರೆಗೆ ಸಾಗಿ ಬಂದಿದೆ.

ಅದು 1979ರ ಅವಧಿ. ಪುಣೆಯಲ್ಲಿ ಹುಟ್ಟಿತ್ತು ಮುದ್ದು ಕಂದಮ್ಮ. ಅದ್ಯಾವ ತಾಯಿ-ತಂದೆ ಹುಟ್ಟಿದ ಮಗುವೋ ಗೊತ್ತಿಲ್ಲ. ಹೆತ್ತಾಕೆಗೆ ಈ ಮುದ್ದು ಕಂದ ಯಾಕೆ ಬೇಡವಾಯಿತೋ ಅದೂ ತಿಳಿದಿಲ್ಲ. ಹೆಣ್ಣು ಎಂಬ ಕಾರಣಕ್ಕೋ ಅಥವಾ ಇನ್ನಾವುದಕ್ಕೋ ಗೊತ್ತಿಲ್ಲ... ಒಟ್ಟಿನಲ್ಲಿ ಮಾತೃ ಹೃದಯ ಎನ್ನುವುದು ಅಲ್ಲಿ ಕೆಲಸ ಮಾಡಲೇ ಇಲ್ಲ. ಹಸಿಗೂಸನ್ನು ತಂದು ಕಸದ ತೊಟ್ಟಿಯಲ್ಲಿ ಎಸೆದು ಹೋಗಿಬಿಟ್ಟಳು. ಬೀದಿನಾಯಿಗಳು, ಹಂದಿಗಳು... ಇನ್ನಾರ ಪಾಲಾಗಲು ಬಿಟ್ಟು ಹೋಗಿತ್ತು ಆ ತಾಯಿಯ ಕರುಳು. ಆದರೆ, ವಿಧಿಯ ಲೀಲೆಯೇ ಬೇರೆಯಾಗಿತ್ತು. ಆ ಪುಟಾಣಿ ಯಾರದ್ದೋ ದಾರಿಹೋಕರ ಕಣ್ಣಿಗೆ ಬಿದ್ದಳು. ಅವರು ಮಗುವನ್ನು ರಕ್ಷಿಸಿ ಅನಾಥಾಶ್ರಮಕ್ಕೆ ಕರೆದುಕೊಂಡು ಹೋದರು. ಅಲ್ಲಿಂದ ಮುಂದೆ ಸಿಕ್ಕಿದ್ದೇ ರೋಚಕ ತಿರುವು. 

ಇದು ಅಂತರರಾಷ್ಟ್ರೀಯ ಕ್ರಿಕೆಟಿಗರ ಸಂಘದ ಮೊದಲ ಮಹಿಳಾ ಅಧ್ಯಕ್ಷೆ ಎಂಬ ಬಿರುದು ಪಡೆದಿರುವ, ಆಸ್ಟ್ರೇಲಿಯಾದ ಕ್ರಿಕೆಟ್​ ತಂಡದ ಕ್ಯಾಪ್ಟನ್​ ಕೂಡ ಆಗಿದ್ದ ಲಿಸಾ ಸ್ಥಾಲೇಕರ್​ ಅವರ ಕುತೂಹಲದ ಜೀವನ ಚರಿತ್ರೆ.  ಅದೃಷ್ಟ ಜೊತೆಗಿದ್ದರೆ ವಿಶ್ವಮಟ್ಟದಲ್ಲಿಯೂ ಮಿಂಚಬಹುದು, ಅದೃಷ್ಟ ಕೈಕೊಟ್ಟರೆ ಬೀದಿಪಾಲೂ ಆಗಬಹುದು ಎನ್ನುವ ಮಾತಿದೆ. ಯಾರು ಯಾವ ರೀತಿಯ ಅದೃಷ್ಟ ಪಡೆದು ಬಂದಿರುತ್ತಾರೋ ಯಾರ ಅರಿವಿಗೂ ಬರುವುದಿಲ್ಲ. ಅವೆಲ್ಲಾ ಹಿಂದಿನ ಜನ್ಮದ ಪಾಪ-ಪುಣ್ಯಗಳ ಮೇಲೆ ಆಧರಿತವಾಗಿರುತ್ತದೆ ಎನ್ನುವವರೂ ಇದ್ದಾರೆ, ಪುನರ್ಜನ್ಮ, ಪಾಪ- ಪುಣ್ಯ ಎಲ್ಲವೂ ಸುಳ್ಳು ಎನ್ನುವವರೂ ಇದ್ದಾರೆ. ವಾದ ಏನೇ ಇರಲಿ, ಆದರೆ ಅದೃಷ್ಟವೊಂದು ಜೊತೆಗಿದ್ದರೆ ಮನುಷ್ಯ ಕಸದ ತೊಟ್ಟಿಯಿಂದ ವಿಶ್ವಖ್ಯಾತಿಯನ್ನೂ ಪಡೆಯಬಹುದು ಎನ್ನುವುದಕ್ಕೆ ಉದಾಹರಣೆಯಾಗಿ ನಿಂತವರು,  ಲಿಸಾ ಸ್ಥಾಲೇಕರ್​. 

ಸ್ಮೃತಿ ಮಂದಾನ ಅಡುಗೆಯಲ್ಲಿ ಎಕ್ಸಫರ್ಟ್, ಈ ಖಾದ್ಯ ಮಾಡೋದಂದ್ರೆ ಇಷ್ಟವಂತೆ!

ಅನಾಥಾಶ್ರಮದಲ್ಲಿದ್ದ ಪುಟ್ಟ ಕಂದನನ್ನು ಆಸ್ಟ್ರೇಲಿಯಾದ ದಂಪತಿ ದತ್ತು ಪಡೆದರು. ಭಾರತದ ಮಗು ಬೇಕು ಎಂದು ಆಸ್ಟ್ರೇಲಿಯಾದಿಂದ ಭಾರತಕ್ಕೆ ಬಂದಿದ್ದ ಅವರ ಕಣ್ಣಿಗೆ ಬಿದ್ದದ್ದು ಇದೇ ತೊಟ್ಟಿಯಲ್ಲಿ ಸಿಕ್ಕ ಬಾಲೆ. ಆಕೆಯನ್ನು ದತ್ತು ಪಡೆದು ಲಿಸಾ ಎಂದು ನಾಮಕರಣ ಮಾಡಿದರು. ಲಿಸಾಲ ದತ್ತು ತಂದೆ ಕ್ರಿಕೆಟ್ ಅನ್ನು ತುಂಬಾ ಪ್ರೀತಿಸುತ್ತಿದ್ದರು. ಆದ್ದರಿಂದ ತಮ್ಮ ಈ ಮಗಳನ್ನೂ ಕ್ರಿಕೆಟಿಗರನ್ನಾಗಿ ಮಾಡಬೇಕು ಎನ್ನುವುದು ಅವರ ಬಯಕೆ ಆಗಿತ್ತು. ಅದರಂತೆ ತರಬೇತಿಗೆ ಕಳುಹಿಸಿದರು. ಲಿಸಾ ಕೂಡ ಕ್ರಿಕೆಟ್​ ಅಪ್ಪಿಕೊಂಡರು. ಅದರಲ್ಲಿಯೇ ಸಾಕಷ್ಟು ಶ್ರಮ ವಹಿಸಿ ಅಭ್ಯಾಸ ಮಾಡಿದರು. ನಂತರ ಅವರು  ಆಸ್ಟ್ರೇಲಿಯಾದ ಮಹಿಳಾ ಕ್ರಿಕೆಟ್ ತಂಡಕ್ಕಾಗಿ ಆಡಿದರು. ಕ್ಯಾಪ್ಟನ್​ ಕೂಡ ಆದರು.  187 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಆಸ್ಟ್ರೇಲಿಯಾವನ್ನು ಪ್ರತಿನಿಧಿಸಿದ್ದ ಲಿಸಾ,  2010 ರ T 20 ವಿಶ್ವಕಪ್ ಫೈನಲ್‌ನಲ್ಲಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು , ನ್ಯೂಜಿಲೆಂಡ್ ವಿರುದ್ಧ 106 ರನ್ ಗಳಿಸುವಲ್ಲಿ ತಂಡಕ್ಕೆ ಸಹಾಯ ಮಾಡಿದ್ದರು. 2007 ಮತ್ತು 2008 ರಲ್ಲಿ ಆಸ್ಟ್ರೇಲಿಯಾದ ಅತ್ಯುತ್ತಮ ಮಹಿಳಾ ಅಂತರರಾಷ್ಟ್ರೀಯ ಆಟಗಾರ್ತಿಗೆ ನೀಡಲಾಗುವ ಪ್ರತಿಷ್ಠಿತ ಬೆಲಿಂಡಾ ಕ್ಲಾರ್ಕ್ ಪ್ರಶಸ್ತಿಯನ್ನು ಇವರು ಪಡೆದುಕೊಂಡಿದ್ದರು.  

ತಮ್ಮ ವೃತ್ತಿಜೀವನದಲ್ಲಿ, ಅವರು ಆಸ್ಟ್ರೇಲಿಯಾ ಪರ 4 ವಿಶ್ವಕಪ್‌ಗಳನ್ನು ಗೆದ್ದರು ಮತ್ತು ಅವರು ಟಿ 20ಯಲ್ಲಿ ನಂಬರ್ ಒನ್​ ಆಲ್ ರೌಂಡರ್ ಮತ್ತು ಬೌಲರ್ ಆಗಿ ನಿವೃತ್ತರಾದರು. 2022ರಲ್ಲಿ ಸ್ವಿಟ್ಜರ್‌ಲ್ಯಾಂಡ್‌ನ ನಯಾನ್‌ನಲ್ಲಿ ನಡೆದ ಎಫ್‌ಐಸಿಎ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈಕೆಯನ್ನು ಅಂತರರಾಷ್ಟ್ರೀಯ ಕ್ರಿಕೆಟಿಗರ ಸಂಘದ ಅಧ್ಯಕ್ಷೆಯನ್ನಾಗಿ ಘೋಷಿಸಿದಾಗ ಕ್ರಿಕೆಟ್​ ಪ್ರೇಮಿಗಳು ಹಿರಿಹಿರಿ ಹಿಗ್ಗಿದ್ದರು. ತಮ್ಮ ಕನಸಿನಲ್ಲಿಯೂ ಊಹಿಸದ ಸ್ಥಾನವನ್ನು ಪಡೆದಿದ್ದರು ಲಿಸಾ. ಈ ಸ್ಥಾನಕ್ಕೆ ಏರುವುದು ಬಹುದೊಡ್ಡ ಮಟ್ಟದ ದಾಖಲೆಯಾದರೂ ಕಸದ ತೊಟ್ಟಿಯಲ್ಲಿ ಸಿಕ್ಕವಳು ಈ ಲಿಸಾ ಎಂದು ತಿಳಿದಾಗ ಹುಬ್ಬೇರಿಸಿದವರೇ ಎಲ್ಲಾ. ಅಂದಹಾಗೆ ಲಿಸಾ ಅವರಿಗೆ ಈಗ 45 ವರ್ಷ ವಯಸ್ಸು. 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೊನೆಗೂ ಮದುವೆಗೆ ರೆಡಿ ಆದ್ರಾ ಸ್ಮೃತಿ ಮಂಧನಾ-ಪಲಾಶ್‌ ಮುಚ್ಚಾಲ್‌?
ಮೇಲ್ಮನವಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಡಿ.7ಕ್ಕೆ ಕರ್ನಾಟಕ ಕ್ರಿಕೆಚ್ ಸಂಸ್ಥೆ ಚುನಾವಣೆ