ಬೇರೆ ದಾರಿ ಇಲ್ಲದೆ ಗೆಳತಿ ಪಿಂಕ್ ಸ್ಲಿಪ್ಪರ್ ಧರಿಸಿ ತೆರಳಿದ್ದೆ, 2008ರ ಡೇಟಿಂಗ್ ಕತೆ ಬಿಚ್ಚಿಟ್ಟ ಯುವರಾಜ್!

Published : Sep 26, 2024, 03:14 PM IST
ಬೇರೆ ದಾರಿ ಇಲ್ಲದೆ ಗೆಳತಿ ಪಿಂಕ್ ಸ್ಲಿಪ್ಪರ್ ಧರಿಸಿ ತೆರಳಿದ್ದೆ, 2008ರ ಡೇಟಿಂಗ್ ಕತೆ ಬಿಚ್ಚಿಟ್ಟ ಯುವರಾಜ್!

ಸಾರಾಂಶ

ನಟಿ ಜೊತೆ ಡೇಟಿಂಗ್ ಮಾಡುತ್ತಿದ್ದೆ. ಆಕೆ ಎಲ್ಲಾ ಡ್ರೆಸ್ ಪ್ಯಾಕ್ ಮಾಡಿದ್ದಳು. ನನ್ನ ಶೂ, ಚಪ್ಪಲಿ ಎಲ್ಲವೂ ಪ್ಯಾಕ್ ಆಗಿ ಟೀಂ ಬಸ್‌ಗೆ ಹಾಕಿದ್ದಳು. ಬೇರೆ ದಾರಿ ಇಲ್ಲದೆ ಆಕೆಯ ಪಿಂಕ್ ಸ್ಲಿಪ್ಪರ್ ಧರಿಸಿ ಏರ್‌ಪೋರ್ಟ್‌ಗೆ ತೆರಳಿದ್ದೆ ಎಂದು ಯುವರಾಜ್ ಸಿಂಗ್ 2008ರ ಆಸ್ಟ್ರೇಲಿಯಾ ಪ್ರವಾಸದ ರೋಚಕ ಘಟನೆ ವಿವರಿಸಿದ್ದಾರೆ.

ಮುಂಬೈ(ಸೆ.26) ಟೀಂ ಇಂಡಿಯಾ ಫ್ಲಾಮ್‌ಬಾಯ್ ಎಂದೇ ಖ್ಯಾತಿಗೊಂಡಿದ್ದ ಯುವರಾಜ್ ಸಿಂಗ್ ಸದ್ಯ ವಿಶ್ರಾಂತಿ ಜೀವನದಲ್ಲಿದ್ದಾರೆ. ಕುಟುಂಬದ ಜೊತೆ ಕಾಲಕಳೆಯುತ್ತಿದ್ದಾರೆ. ಆದರೆ ಯುವಿ ಟೀಂ ಇಂಡಿಯಾ ಪರ ಆಡುತ್ತಿದ್ದ ದಿನಗಳಲ್ಲಿನ ಹಲವು ರೋಚಕ ಕತೆಗಳು ಕೆಲವು ಬಹಿರಂಗವಾಗಿದೆ. ಈ ಪೈಕಿ 2008ರಲ್ಲಿ ಯುವರಾಜ್ ಸಿಂಗ್ ನಟಿಯ ಜೊತೆ ಡೇಟಿಂಗ್ ನಡೆಸುತ್ತಿದ್ದಾಗ ನಡೆದ ಘಟನೆ ಇದೀಗ ಬಹಿರಂಗಗೊಂಡಿದೆ. ಬೇರೆ ದಾರಿ ಇಲ್ಲದೆ ಗೆಳತಿಯ ಪಿಂಕ್ ಸ್ಲಿಪ್ಪರ್ ಧರಿಸಿ ಏರ್‌ಪೋರ್ಟ್‌ಗೆ ತೆರಳಿದ್ದೆ. ತಂಡದ ಬಸ್‌ನಲ್ಲಿ ಇತರರ ನಕ್ಕಿದ್ದರು ಎಂದು ಯುವಿ ಹಳೇ ಘಟನೆಯನ್ನು ನೆನೆಪಿಸಿಕೊಂಡಿದ್ದಾರೆ.

ಕ್ಲಬ್ ಪ್ರೈರಿ ಫೈರಿ ಪಾಡ್‌ಕಾಸ್ಟ್‌ನಲ್ಲಿ ಯುವರಾಜ್ ಸಿಂಗ್ ಈ ರೋಚಕ ಘಟನೆ ವಿವರಿಸಿದ್ದಾರೆ. ಸ್ಫೋಟಕ ಬ್ಯಾಟಿಂಗ್ ಮೂಲಕ ತಂಡದ ಗೆಲುವಿನ ರೂವಾರಿಯಾಗಿದ್ದ ಯುವರಾಜ್ ಸಿಂಗ್ ಹಿಂದೆ ಹಲವು ಯುವತಿಯರು ಬಿದ್ದಿದ್ದರು ಅನ್ನೋ ಮಾಹಿತಿ ಗೌಪ್ಯವಾಗಿ ಉಳಿದಿಲ್ಲ. ಈ ಪೈಕಿ ಯುವರಾಜ್ ಸಿಂಗ್ ನಟಿಯೊಬ್ಬಳ ಜೊತೆ ಡೇಟಿಂಗ್‌ನಲ್ಲಿದ್ದರು. 2008ರ ಬಾರ್ಡರ್ ಗವಾಸ್ಕರ್ ಟ್ರೋಫಿಗಾಗಿ ಟೀಂ ಇಂಡಿಯಾ ಆಸ್ಟ್ರೇಲಿಯಾ ಪ್ರಯಾಣ ಮಾಡಿತ್ತು.

ಧೋನಿ-ಯುವಿ ಗೆಳೆತನ ಮುರಿದುಬೀಳಲು ಕಾರಣ ಏನು? ಈ ಇಬ್ಬರ ಸ್ನೇಹಕ್ಕೆ ಹುಳಿ ಹಿಂಡಿದ್ದು ಯಾರು?

ಈ ವೇಳೆ ಯುವರಾಜ್ ಸಿಂಗ್ ಗೆಳತಿ ಶೂಟಿಂಗ್ ಕಾರಣಕ್ಕಾಗಿ ಆಸ್ಟ್ರೇಲಿಯಾಗೆ ತೆರಳಿದ್ದಳು. ಇತ್ತ ಆರಂಭಿಕ ಟೆಸ್ಟ್ ಪಂದ್ಯದಲ್ಲಿ ಯುವರಾಜ್ ಸಿಂಗ್ ನಿರೀಕ್ಷಿತ ಪ್ರದರ್ಶನ ನೀಡಿರಲಿಲ್ಲ. ಹೀಗಾಗಿ ಭೇಟಿಯಾಗಬೇಕೆಂದ ನಟಿಗೆ ಖಡಕ್ ಸಂದೇಶ ರವಾನಿಸಿದ್ದ ಯುವಿ, ಸದ್ಯ ಕ್ರಿಕೆಟ್‌ಗೆ ಕುರಿತು ಗಮನಹರಿಸಬೇಕು. ಹೀಗಾಗಿ ಈ ಸರಣಿ ನಡುವೆ ಭೇಟಿಯಾಗುವುದು ಬೇಡ ಎಂದು ಯುವರಾಜ್ ಸಿಂಗ್ ಸೂಚಿಸಿದ್ದರು.

ಆದರೆ ಕ್ಯಾನಬೆರಾ ಟೆಸ್ಟ್ ಪಂದ್ಯಕ್ಕೆ ತೆರಳುವ ಮುನ್ನ ಆಕೆ ನೇರವಾಗಿ ನಾವು ತಂಗಿದ್ದ ಹೊಟೆಲ್‌ಗೆ ಆಗಮಿಸಿದ್ದಳು. ಇಲ್ಲಿಗೆ ಯಾಕೆ ಬಂದೆ, ನನಗೆ ಕ್ರಿಕೆಟ್ ಮೇಲೆ ಗಮನಕೇಂದ್ರೀಕರಿಸಬೇಕು ಎಂದಿದ್ದೆ, ಮತ್ತೆ ಯಾಕೆ ಈ ಭೇಟಿ ಎಂದು ಕೇಳಿದ್ದೆ. ನಿನ್ನ ಜೊತೆ ಸಮಯ ಕಳೆಯಬೇಕು ಎಂದು ಹೊಟೆಲ್‌ಗೆ ಆಗಮಿಸಿದ್ದಳು. 

ಕ್ಯಾನ್‌ಬೆರಾ ಟೆಸ್ಟ್ ಪಂದ್ಯಕ್ಕೆ ತೆರಳಲು ಹೊಟೆಲ್‌ನಿಂದ ಟೀಂ ಇಂಡಿಯಾ ಕ್ರಿಕೆಟಿಗರ ಬಸ್ ಏರ್‌ಪೋರ್ಟ್‌ಗೆ ತೆರಳಬೇಕಿತ್ತು. ಇದಕ್ಕಾಗಿ ನನ್ನ ಕ್ರಿಕೆಟ್ ಕಿಟ್ ಜೊತೆ ಡ್ರೆಸ್ ಎಲ್ಲವನ್ನೂ ಪ್ಯಾಕ್ ಮಾಡಬೇಕಿತ್ತು. ಇದನ್ನು ಆಕೆ ಮಾಡಿದ್ದಳು. ಬಳಿಕ ಬ್ಯಾಗ್‌ಗಳನ್ನು ಟೀಂ ಬಸ್‌ಗೆ ನೀಡಿದ್ದಳು. ಬೆಳಗ್ಗೆ ರೆಡಿಯಾಗಿ ನೋಡಿದಾಗ ನನಗೆ ಧರಿಸಲು ಶೂ ಇರಲಿಲ್ಲ. ಎಲ್ಲಿ ಕೇಳಿದಾಗ, ಎಲ್ಲವನ್ನು ಪ್ಯಾಕ್ ಮಾಡಿ ನೀಡಾಗಿದೆ ಎಂದಿದ್ದಾಳೆ. ಬಸ್ ಹೊರಡುವ ಸಮಯವಾಗಿತ್ತು. ಈ ವೇಳೆ ನಾನು ಯಾವ ಶೂ ಧರಿಸಲಿ ಎಂದು ಆಕೆಯನ್ನು ರೇಗಾಡಿದ್ದೆ. ಇದಕ್ಕೆ ನನ್ನ ಸ್ಲಿಪ್ಪರ್ ಧರಿಸು ಎಂದು ನೀಡಿದ್ದಳು.

ಬೇರೆ ದಾರಿ ಇಲ್ಲದ ಕಾರಣ, ಆಕೆಯ ಪಿಂಕ್ ಬಣ್ಣದ ಸ್ಲಿಪ್ಪರ್ ಧರಿಸಿ ಟೀಂ ಇಂಡಿಯಾ ಬಸ್ ಹತ್ತಿದ್ದೆ. ಗೆಳತಿಯ ಚಪ್ಪಲಿ ಕಾಣಿಸದಂತೆ ಎಷ್ಟೇ ಪ್ರಯತ್ನ ಪಟ್ಟರೂ ಕ್ರಿಕೆಟಿಗರು ಪತ್ತೆ ಹಚ್ಚಿ ಚಪ್ಪಾಳೆ ತಟ್ಟಿದ್ದರು. ಏರ್‌ಪೋರ್ಟ್‌ ವರೆಗೆ ಈ ಸ್ಲಿಪ್ಪರ್ ಧರಿಸಿ ತೆರಳಿದ್ದೆ. ಬಳಿಕ ಏರ್‌ಪೋರ್ಟ್‌ನಲ್ಲಿ ಬೇರೆ ಸ್ಲಿಪ್ಪರ್ ಖರೀದಿಸಿದೆ ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ. ಆದರೆ ಡೇಟಿಂಗ್ ಮಾಡುತ್ತಿದ್ದ ನಟಿಯ ಹೆಸರನ್ನು ಹೇಳಲು ಯುವರಾಜ್ ಸಿಂಗ್ ನಿರಾಕರಿಸಿದ್ದಾರೆ.

ಕ್ರಿಕೆಟ್ ಇತಿಹಾಸದಲ್ಲೇ ಅತಿ ದೊಡ್ಡ ಸಿಕ್ಸರ್ ಸಿಡಿಸಿದ್ದು ಯಾರು? ಇಲ್ಲಿಯವರೆಗೂ ಯಾರಿಗೂ ಆ ರೆಕಾರ್ಡ್‌ ಬ್ರೇಕ್‌ ಮಾಡೋಕಾಗಿಲ್ಲ!
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಆ್ಯಶಸ್ ಸರಣಿ: ಸತತ ಎರಡು ಪಂದ್ಯ ಗೆದ್ದು ಬೀಗಿದ್ದ ಆಸೀಸ್‌ಗೆ ಆಘಾತ, ಸ್ಟಾರ್ ಬೌಲರ್ ಹೊರಕ್ಕೆ!
ಮದ್ಯ ಮಾರಾಟಕ್ಕೆ ಇಳಿದ ಯುವರಾಜ್‌ ಸಿಂಗ್‌, ಒಂದು ತಿಂಗಳ ಸಂಬಳಕ್ಕೆ ಬರುತ್ತೆ ಒಂದು ಬಾಟಲ್‌!