
ಮುಂಬೈ(ಜು.02): ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಡಿಸೆಂಬರ್ 11, 2017ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೊಹ್ಲಿ ಹಾಗೂ ಅನುಷ್ಕಾ ಇಬ್ಬರೂ ಕೂಡ ತಮ್ಮ ತಮ್ಮ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಅದರಲ್ಲೂ ವಿರಾಟ್ ಕೊಹ್ಲಿ ಟೀಂ ಇಂಡಿಯಾದ ಟೆಸ್ಟ್, ಏಕದಿನ ಹಾಗೂ ಟಿ20 ತಂಡದ ನಾಯಕರಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಕೊಹ್ಲಿ ವರ್ಷದ 356 ದಿನವೂ ಬ್ಯುಸಿ.
ಪ್ರಧಾನಿ ಪರಿಹಾರ ನಿಧಿ ಬಳಿಕ ಮುಂಬೈ ಪೊಲೀಸ್‌ಗೆ ದೇಣಿಕೆ ನೀಡಿದ ಕೊಹ್ಲಿ-ಅನುಷ್ಕಾ!...
ಮದುವೆಯಾದ ಎಡೂವರೆ ವರ್ಷ ಕೊಹ್ಲಿ ಹಾಗೂ ಅನುಷ್ಕಾ ಜೊತೆಯಾಗಿ ಕೆಲವೇ ಕೆಲವು ದಿನ ಮಾತ್ರ ಜೊತೆಯಾಗಿ ಕಳೆದಿದ್ದಾರೆ. ಇನ್ನುಳಿದ ದಿನ ವಿಡಿಯೋ ಕಾಲ್, ಮೆಸೇಜ್‌ನಲ್ಲೇ ದಿನದೂಡಿದ್ದಾರೆ. ಕೊರೋನಾ ವೈರಸ್ ವಕ್ಕರಿಸಿದ ಬಳಿಕ ಈ ಜೋಡಿ ಬರೋಬ್ಬರಿ 3 ತಿಂಗಳು ಜೊತೆಯಾಗಿ ಕಳೆದಿದ್ದಾರೆ. ಈ ವೇಳೆ ಅನುಷ್ಕಾ ಶರ್ಮಾ ಮದ್ವೆಯಾದ ಆರಂಭಿಕ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ಕೌಟುಂಬಿಕ ದೌರ್ಜನ್ಯ: ಜನತೆಗೆ ಮಹತ್ವದ ಸಂದೇಶ ಸಾರಿದ ವಿರಾಟ್ ಕೊಹ್ಲಿ..
ಮದುವೆಯಾದ ಆರಂಭಿಕ 6 ತಿಂಗಳಲ್ಲೇ ಕೇವಲ 21 ದಿನ ಮಾತ್ರ ಜೊತೆಗಿದ್ದೆವು. ಕೊಹ್ಲಿ ಕ್ರಿಕೆಟ್‌ನಲ್ಲಿ ತುಂಬಾ ಬ್ಯುಸಿಯಾಗಿದ್ದರು. ಇತ್ತ ನಾನು ಶೂಟಿಂಗ್,ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದೆ. ಹೀಗಾಗಿ ವಿಡಿಯೋ ಕಾಲ್ ಮೂಲಕ ಮಾತನಾಡುತ್ತಿದ್ದೇವು. ಕೆಲ ಬಾರಿ ವಿದೇಶಗಳಲ್ಲಿ ಕೊಹ್ಲಿಯನ್ನು ಬೇಟಿಯಾಗುತ್ತಿದ್ದೆ. ಕೊಹ್ಲಿ ಕೂಡ ಒಂದು ದಿನ ಬೇಟಿಯಾಗಿ ವಿದೇಶದಿಂದ ನನ್ನ ಶೂಟಿಂಗ್ ಸ್ಥಳಕ್ಕೆ ಆಗಮಿಸುತ್ತಿದ್ದರು ಎಂದು ಅನುಷ್ಕಾ ಶರ್ಮಾ ಹೇಳಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.