ಇಂಡೋ ಪಾಕ್ ಕ್ರಿಕೆಟ್ ಲೈವ್‌ಗಾಗಿ ಮಲ್ಟಿಪ್ಲೆಕ್ಸ್‌ನಿಂದ ಸಿನಿಮಾ ಎತ್ತಂಗಡಿ, ನಿರ್ಮಾಪಕ ಆಕ್ರೋಶ!

By Suvarna NewsFirst Published Aug 28, 2022, 4:15 PM IST
Highlights

ಮಲ್ಟಿಪ್ಲೆಕ್ಸ್ ಸಿನಿಮಾ ಮಂದಿರದಿಂದ ಸಿನಿಮಾಗೆ ಕೊಕ್ ನೀಡಿ ಇದೀಗ ಇಂಡೋ ಪಾಕ್ ಲೈವ್ ಪ್ರದರ್ಶನ ಮಾಡಲಾಗುತ್ತಿದೆ. ಕಾನೂನುಬಾಹಿರ ನಡೆಯಿಂದ ಸಿನಿಮಾ ನಿರ್ಮಾಪಕರು, ವಿತರರಿಗೆ ದೊಡ್ಡ ಮಡ್ಡದ ನಷ್ಟವಾಗುತ್ತಿದೆ ಅನ್ನೋ ಆಕ್ರೋಶ ವ್ಯಕ್ತವಾಗುತ್ತಿದೆ.

ಬೆಂಗಳೂರು(ಆ.28) ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ಕ್ರೇಜ್ ಯಾವತ್ತೂ ಹಾಗೇ. ಸುಮ್ಮನೆ ಕುಳಿತವರನ್ನು ಬಡಿದೆಬ್ಬಿಸುವ ತಾಕತ್ತು ಈ ಪಂದ್ಯಕ್ಕಿದೆ. ಇಲ್ಲಿ ಯಾರೂ ಕೂಡ ಸೋಲನ್ನು ಸಹಿಸುವುದಿಲ್ಲ. ಈ ಕ್ರೇಜ್‌‌ನಿಂದ ಇದೀಗ ಬೆಂಗಳೂರಿನ ಮಲ್ಟಿಪ್ಲೆಕ್ಸ್ ಸಿನಿಮಾ ಮಂದಿರಗಳಲ್ಲಿ ಸಿನಿಮಾಗೆ ಕೊಕ್ ನೀಡಿ ಇಂದಿನ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ಲೈವ್ ನೀಡಲಾಗುತ್ತಿದೆ. ಇದು ಸಿನಿಮಾ ನಿರ್ಮಾಪಕರು, ವಿತರಕರ ಆಕ್ರೋಶಕ್ಕೆ ಕಾರಣವಾಗಿದೆ. ಬಹುತೇಕ ಮಲ್ಟಿಪ್ಲೆಕ್‌ಗಳಲ್ಲಿ ಇಂದು ಸಂಜೆ ಸಿನಿಮಾ ಪ್ರದರ್ಶನವನ್ನು ಎತ್ತಂಗಡಿ ಮಾಡಿ ಈ ಸಮಯದಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಏಷ್ಯಾಕಪ್ ಪಂದ್ಯ ಲೈವ್ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ. ಐನಾಕ್ಸ್, ಪಿವಿಆರ್ ಸಿನಿ ಸೇರಿದಂತೆ ಹಲವು ಮಲ್ಟಿಫ್ಲೆಕ್ಸ್ ಸ್ಕ್ರೀನ್ ಗಳಲ್ಲಿ‌ ಕ್ರಿಕೆಟ್ ಲೈವ್ ಟೆಲಿಕಾಸ್ಟ್ ಮಾಡಲಾಗುತ್ತಿದೆ. ಇದರಿಂದ ಸಿನಿಮಾಗೆ ಸಮಸ್ಯೆಯಾಗುತ್ತಿದೆ. ಇಂದು ಭಾನುವಾರವಾಗಿರುವ ಕಾರಣ ಹಲವರು ಟಿಕೆಟ್ ಬುಕಿಂಗ್ ಮಾಡುತ್ತಾರೆ. ಹೆಚ್ಚಿನ ಕಲೆಕ್ಷನ್ ಭಾನುವಾರವೇ ಆಗುತ್ತಿದೆ. ಆದರೆ ಇದೇ ಸಮಯದಲ್ಲಿ ಕ್ರಿಕೆಟ್ ಲೈವ್ ಪ್ರದರ್ಶನ ಹಾಕುವ ಮೂಲಕ ಸಿನಿಮಾಗೆ ಅನ್ಯಾಯ ಮಾಡಿದ್ದಾರೆ ಎಂದು ಸಿನಿಮಾ ಕ್ಷೇತ್ರದ ಹಲವರು ಆರೋಪಿಸಿದ್ದಾರೆ.

ಕ್ರಿಕೆಟ್ ಪಂದ್ಯವನ್ನು ಲೈವ್ ಪ್ರದರ್ಶನ ಮಾಡುವಂತಿಲ್ಲ. ಇದಕ್ಕೆ ಮಾಧ್ಯಮ ಪ್ರಸಾರ ಹಕ್ಕು ಪಡೆದಿರುವ ಕಂಪನಿಗಳಿಗೆ ಕೋಟಿ ಕೋಟಿ ಮೊತ್ತಕ್ಕೆ ರೈಟ್ಸ್ ಖರೀದಸಬೇಕು. ಅನುಮತಿ ಪಡೆಯಬೇಕು. ಆದರೆ ಮಲ್ಟಿಪ್ಲೆಕ್ಸ್‌ನವರು ಅಕ್ರಮವಾಗಿ ಇಂಡೋ ಪಾಕ್ ಕ್ರಿಕೆಟ್ ಲೈವ್ ತೋರಿಸುತ್ತಿದ್ದಾರೆ. ಇದಕ್ಕಾಗಿ ಟಿಕೆಟ್ ಬುಕಿಂಗ್ ಕೂಡ ಮಾಡುತ್ತಿದ್ದಾರೆ. ಇದು ಕಾನೂನಿಗೆ ವಿರುದ್ಧವಾಗಿದೆ.  ಇಂದು ಸಿನಿಮಾ ಟಿಕೆಟ್ ಬುಕಿಂಗ್ ಮಾಡಲು ಹೋದರೆ ಸಿನಿಮಾ ಇಲ್ಲ, ಕ್ರಿಕೆಟ್ ಪಂದ್ಯ ಲೈವ್ ಇದೆ ಎಂದು ತೋರಿಸುತ್ತಿದೆ. ಸಿನಿಮಾ ಮಂದಿರಗಳಲ್ಲಿ ಅಕ್ರಮವಾಗಿ, ಕಾನೂನು ಬಾಹಿರವಾಗಿ ಕ್ರಿಕೆಟ್ ತೋರಿಸುತ್ತಿರುವುದು ತಪ್ಪು ಎಂದು ನಿರ್ಮಾಪಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂಡೋ ಪಾಕ್ ಪಂದ್ಯ ವೀಕ್ಷಿಸಿದರೆ 5 ಸಾವಿರ ರೂ ದಂಡ, ಶ್ರೀನಗರದ ಕಾಲೇಜು ಆಡಳಿತ ಮಂಡಳಿ ಆದೇಶ!

ಈ ರಿತಿಯ ಕಾನೂನುಬಾಹಿರ ಕ್ರಿಕೆಟ್ ಲೈವ್ ಪ್ರದರ್ಶನದಿಂದ ನಿರ್ಮಾಪಕ, ವಿತರಕರಿರಗೆ ಇದರಿಂದ ದೊಡ್ಡ ಮಟ್ಟದ ಲಾಸ್ ಆಗುತ್ತಿದೆ ಎಂದು ಸಿನಿ ಕ್ಷೇತ್ರದ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ವೀಕ್ಷಿಸಲು ಮಲ್ಟಿಪ್ಲೆಕ್ಸ್‌ನಲ್ಲಿ ಅವಕಾಶ ಮಾಡಿಕೊಟ್ಟು ಇದರಿಂದ ಹಣ ಮಾಡಲು ಮಲ್ಟಿಪ್ಲೆಕ್ಸ್ ಮುಂದಾಗಿದೆ. ಇದ ಸರಿಯಲ್ಲ ಎಂದು ಸಿನಿ ಕ್ಷೇತ್ರದ ಹಲವರು ಅಸಮಾಧಾನ ತೋಡಿಕೊಂಡಿದ್ದಾರೆ.

ಏಷ್ಯಾಕಪ್ ಫೈಟ್
ಭಾರತ ಹಾಗೂ ಪಾಕಿಸ್ತಾನ ನಡುವಿನ ಏಷ್ಯಾಕಪ್ ಹೋರಾಟ ಇಂದು ಸಂಜೆ 7.30ಕ್ಕೆ ಆರಂಭಗೊಳ್ಳಲಿದೆ. ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯ ಈಗಾಗಲೇ ಸಾಕಷ್ಟು ಕುತೂಹಲ ಕೆರಳಿಸಿದೆ. ಈ ಪಂದ್ಯ ವೀಕ್ಷಿಸಲು ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ ದಿಟ್ಟ ಹೋರಾಟ ನೀಡಲು ಕಠಿಣ ಅಭ್ಯಾಸ ಮಾಡಿದೆ. ಇತ್ತ ಬಾಬರ್ ಅಜಮ್ ನೇತೃತ್ವದ ಪಾಕಿಸ್ತಾನ ತಂಡ ಮತ್ತೊಂದು ಗೆಲುವಿಗೆ ಹೊಂಚು ಹಾಕಿದೆ. ಹೀಗಾಗಿ ರೋಚಕ ಹಣಾಹಣಿ ಏರ್ಪಡಲಿದೆ.

Asia Cup 2022: ಪಾಕ್ ಎದುರಿನ ಪಂದ್ಯಕ್ಕೆ ಬಲಿಷ್ಠ ಸಂಭಾವ್ಯ ತಂಡ ಪ್ರಕಟ..!

click me!