ಆರ್‌ಸಿಬಿ ಅಭಿಮಾನಿ ರಶ್ಮಿಕಾ ನೆಚ್ಚಿನ ಕ್ರಿಕೆಟರ್‌ ವಿರಾಟ್ ಕೊಹ್ಲಿಯಲ್ಲ..!

Suvarna News   | Asianet News
Published : May 17, 2021, 06:18 PM IST
ಆರ್‌ಸಿಬಿ ಅಭಿಮಾನಿ ರಶ್ಮಿಕಾ ನೆಚ್ಚಿನ ಕ್ರಿಕೆಟರ್‌ ವಿರಾಟ್ ಕೊಹ್ಲಿಯಲ್ಲ..!

ಸಾರಾಂಶ

* ರಶ್ಮಿಕಾ ಮಂದಣ್ಣ ಆರ್‌ಸಿಬಿ ತಂಡದ ಬಿಗ್ ಫ್ಯಾನ್‌ * ಬಹುಭಾಷಾ ನಟಿಯ ನೆಚ್ಚಿನ ಕ್ರಿಕೆಟಿಗ ವಿರಾಟ್ ಕೊಹ್ಲಿ * ಟೀಂ ಇಂಡಿಯಾ ಮಾಜಿ ನಾಯಕನಿಗೆ ಮನಸೋತ ಕಿರಿಕ್ ಪಾರ್ಟಿ ಬೆಡಗಿ

ಬೆಂಗಳೂರು(ಮೇ.17): ಕಿರಿಕ್ ಪಾರ್ಟಿ ಖ್ಯಾತಿಯ ನಟಿ ರಶ್ಮಿಕಾ ಮಂದಣ್ಣ ಕ್ರಿಕೆಟ್‌ ಅಭಿಮಾನಿ ಎನ್ನುವುದು ಬಹುತೇಕ ಎಲ್ಲರಿಗೂ ಗೊತ್ತಿರುವ ವಿಚಾರ. ಇನ್ನು ಐಪಿಎಲ್‌ ವಿಚಾರಕ್ಕೆ ಬಂದರೆ ರಶ್ಮಿಕಾ ಮಂದಣ್ಣ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ಅಪ್ಪಟ ಅಭಿಮಾನಿ ಕೂಡಾ ಹೌದು.

ಇತ್ತೀಚೆಗೆ ಸೋಷಿಯಲ್ ಮೀಡಿಯಾ ಚಾಟ್‌ ವೇಳೆ ಅಭಿಮಾನಿಯೊಬ್ಬ ನಿಮ್ಮ ನೆಚ್ಚಿನ ಐಪಿಎಲ್ ತಂಡ ಯಾವುದು ಎನ್ನುವ ಪ್ರಶ್ನೆಗೆ ರಶ್ಮಿಕಾ ಮಂದಣ್ಣ, ಈ ಸಲಾ ಕಪ್ ನಮ್ದೇ ಎನ್ನುವ ಮೂಲಕ ಆರ್‌ಸಿಬಿಗೆ ತಮ್ಮ ಬೆಂಬಲ ಎನ್ನುವುದನ್ನು ಮತ್ತೊಮ್ಮೆ ಸಾರಿ ಹೇಳಿದ್ದರು.

ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ಅಭಿಮಾನಿಯಾಗಿದ್ದರೂ ಸಹಾ ತಮ್ಮ ನೆಚ್ಚಿನ ಆಟಗಾರ ವಿರಾಟ್ ಕೊಹ್ಲಿಯಲ್ಲ ಎನ್ನುವ ವಿಚಾರವನ್ನು ಬಾಯ್ಬಿಟ್ಟಿದ್ದಾರೆ. ಹೌದು, ಇತ್ತೀಚೆಗಷ್ಟೇ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿದೆ. ಹೀಗಿರುವಾಗಲೇ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಯೊಬ್ಬ ನಿಮ್ಮ ನೆಚ್ಚಿನ ಕ್ರಿಕೆಟ್ ಆಟಗಾರ ಯಾರು ಎಂದು ಪ್ರಶ್ನಿಸಿದ್ದಾನೆ. ಈ ಪ್ರಶ್ನೆಗೆ ಥಟ್ಟನೆ ಉತ್ತರ ನೀಡಿದ ರಶ್ಮಿಕಾ ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಎಂದು ಉತ್ತರಿಸಿದ್ದಾರೆ. ಧೋನಿ ಅವರೊಬ್ಬ ಮಾಸ್ಟರ್ ಕ್ಲಾಸ್ ಬ್ಯಾಟ್ಸ್‌ಮನ್‌, ಅವರ ಬ್ಯಾಟಿಂಗ್, ವಿಕೆಟ್ ಕೀಪಿಂಗ್ ಹಾಗೂ ನಾಯಕತ್ವ ಅಮೋಘ ಎಂದು ಗುಣಗಾನ ಮಾಡಿದ್ದಾರೆ.

ಒಂದು ವಾರದಲ್ಲಿ 11 ಕೋಟಿ ರೂ ದೇಣಿಗೆ ಸಂಗ್ರಹಿಸಿದ ವಿರುಷ್ಕಾ ಜೋಡಿ..!

ಧೋನಿ ಬ್ಯಾಟಿಂಗ್, ನಾಯಕತ್ವ, ವಿಕೆಟ್‌ ಕೀಪಿಂಗ್ ಅತ್ಯದ್ಭುತ. ಅವರೊಬ್ಬ ಮಾಸ್ಟರ್ ಕ್ಲಾಸ್ ಆಟಗಾರ. ಧೋನಿ ನನ್ನ ಹೀರೋ ಎಂದು ಇತ್ತೀಚೆಗೆ ಸೋಷಿಯಲ್‌ ಮೀಡಿಯಾ ಮಾತುಕತೆ ವೇಳೆ ಈ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ. 

ರಶ್ಮಿಕಾ ಮಂದಣ್ಣ ಸದ್ಯ ಅಲ್ಲು ಅರ್ಜುನ್‌ ನಟನೆಯ 'ಪುಷ್ಪಾ' ಎನ್ನುವ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಈಗಾಗಲೇ ರಶ್ಮಿಕಾ ಸ್ಯಾಂಡಲ್‌ವುಡ್‌, ಟಾಲಿವುಡ್‌ ಹಾಗೂ ಬಾಲಿವುಡ್‌ನಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮುಂಬೈಗೆ ಬಂದಿಳಿದ ವಿರುಷ್ಕಾ ದಂಪತಿ; ಮೆಸ್ಸಿಯನ್ನು ಭೇಟಿಯಾಗ್ತಾರಾ ವಿರಾಟ್ ಕೊಹ್ಲಿ?
ಟೀಂ ಇಂಡಿಯಾ ಕ್ರಿಕೆಟಿಗರಿಗೆ ದುಶ್ಚಟವಿದೆ, ಆದರೆ ನನ್ನ ಪತಿಗಿಲ್ಲ! ಈ ಕ್ರಿಕೆಟರ್ ಪತ್ನಿಯಿಂದ ವಿವಾದಾತ್ಮಕ ಹೇಳಿಕೆ