ಭಾರತ-ಬ್ರಿಟನ್‌ ಪ್ರೊ ಲೀಗ್‌ ಹಾಕಿ ಪಂದ್ಯ ಮುಂದೂಡಿಕೆ

By Suvarna NewsFirst Published Apr 22, 2021, 8:31 AM IST
Highlights

ಭಾರತ ಹಾಗೂ ಗ್ರೇಟ್‌ ಬ್ರಿಟನ್‌ ನಡುವೆ ನಡೆಯಬೇಕಿದ್ದ ಎಫ್‌ಐಎಚ್ ಹಾಕಿ ಪಂದ್ಯಗಳು ಕೋವಿಡ್ 19 ಭೀತಿಯಿಂದಾಗಿ ಮುಂದೂಡಲ್ಪಟ್ಟಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

ಲುಸ್ಸಾನೆ(ಏ.22): ಭಾರತದಲ್ಲಿ ಕೊರೋನಾ ಪ್ರಕರಣಗಳು ವ್ಯಾಪಕವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ಪ್ರಯಾಣಿಕರನ್ನು ಬ್ರಿಟನ್‌ ‘ಕೆಂಪು ಪಟ್ಟಿ’ಗೆ ಸೇರಿಸಿದೆ. ಈ ಕಾರಣ ಮೇ 8 ಹಾಗೂ 9ರಂದು ಲಂಡನ್‌ನಲ್ಲಿ ನಡೆಯಬೇಕಿದ್ದ ಭಾರತ ಹಾಗೂ ಬ್ರಿಟನ್‌ ನಡುವಿನ ಎಫ್‌ಐಎಚ್‌ ಪುರುಷರ ಪ್ರೊ ಲೀಗ್‌ ಹಾಕಿ ಪಂದ್ಯಗಳನ್ನು ಮುಂದೂಡಲಾಗಿದೆ. 

ಎಫ್‌ಐಎಚ್‌, ಹಾಕಿ ಇಂಡಿಯಾ ಮತ್ತು ಗ್ರೇಟ್‌ ಬ್ರಿಟನ್‌ ಹಾಕಿ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದು, ಮುಂಬರುವ ದಿನಗಳಲ್ಲಿ ಈ ಟೂರ್ನಿಯನ್ನು ಪುನಃ ಆಯೋಜಿಸುವ ವಿಶ್ವಾಸವಿದೆ ಎಂದು ಅಂತಾರಾಷ್ಟ್ರೀಯ ಹಾಕಿ ಫೆಡರೇಷನ್‌(ಎಫ್‌ಐಎಚ್‌) ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಆದರೆ ಮೇ ತಿಂಗಳಲ್ಲಿ ಭಾರತ, ಯುರೋಪ್‌ಗೆ ಪ್ರಯಾಣಿಸಲಿದ್ದು, ಮೇ 15, 16ರಂದು ಸ್ಪೇನ್‌, ಮೇ 22, 23ರಂದು ಜರ್ಮನಿ ವಿರುದ್ಧ ಪ್ರೊ ಲೀಗ್‌ ಪಂದ್ಯಗಳನ್ನು ಆಡಲಿದೆ.

5ನೇ ಸ್ಥಾನಕ್ಕೆ ಕುಸಿದ ಭಾರತ ಪುರುಷರ ಹಾಕಿ ತಂಡ

ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 2,95,041 ಹೊಸ ಕೋವಿಡ್‌ 19 ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ದೇಶದಲ್ಲಿ ಸಕ್ರಿಯ ಕೊರೋನಾ ಪ್ರಕರಣಗಳ ಸಂಖ್ಯೆ 21 ಲಕ್ಷದ ಗಡಿ ದಾಟಿದೆ.
 

click me!