
ಬೆಂಗಳೂರು(ಮೇ.17) ವಿರಾಟ್ ಕೊಹ್ಲಿಗೆ ಟ್ರಿಬ್ಯೂಟ್ ನೀಡಲು ಅಭಿಮಾನಿಗಳು ತಯಾರಾದ ಪಂದ್ಯ, ಆರ್‌ಸಿಬಿಯ ತವರಿನ ಪಂದ್ಯ, ಐಪಿಎಲ್ 2025 ಪುನರ್ ಆರಂಭದ ಪಂದ್ಯ, ಹೀಗೆ ಹಲವು ಕಾರಣಗಳಿಂದ ಆರ್‌ಸಿಬಿ ಕೆಕೆಆರ್ ನಡುವಿನ ಪಂದ್ಯ ಭಾರಿ ಮಹತ್ವದ ಪಡೆದಿದೆ. ಆದರೆ ಬೆಂಗಳೂರಿನಲ್ಲಿ ಸುರಿಯುತ್ತಿರುವ ಮಳೆಯಿಂದ ಪಂದ್ಯ ಆರಂಭಗೊಂಡಿಲ್ಲ. ಈಗಲೂ ಕ್ರೀಡಾಂಗಣದಲ್ಲಿ ಅಭಿಮಾನಿಗಳು ಕಾಯುತ್ತಿದ್ದಾರೆ. ವಿಶೇಷ ಅಂದರೆ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ ವಿರಾಟ್ ಕೊಹ್ಲಿ ಅಭಿಮಾನಿಗಳು ಗೌರವ ಸೂಚಿಸಲು ಸಜ್ಜಾಗಿದ್ದಾರೆ. ಇದಕ್ಕಾಗಿ ಇಂದು ವೈಟ್ ಜರ್ಸಿಯಲ್ಲಿ ಕಾಣಿಸಿಕೊಂಡಿದ್ದಾರೆ. ಇಡೀ ಕ್ರೀಡಾಂಗಣ ಇಂದು ವೈಟ್ ಆ್ಯಂಡ್ ವೈಟ್ ಆಗಿದೆ.
ಕೊಹ್ಲಿ ಟೆಸ್ಟ್ ಜರ್ಸಿಯಲ್ಲಿ ಫ್ಯಾನ್ಸ್
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭಿಮಾನಿಗಳು ವೈಟ್ ಜರ್ಸಿಯಲ್ಲಿ ಕಾಣಿಸಿಕೊಂಡಿದ್ದಾರೆ. ವಿರಾಟ್ ಕೊಹ್ಲಿ ಟೆಸ್ಟ್ ಜರ್ಸಿಯಲ್ಲಿ ಮಿಂಚುತ್ತಿದ್ದಾರೆ. ಕೊಹ್ಲಿ ಟೆಸ್ಟ್ ಮಾದರಿಗೆ ವಿದಾಯ ಹೇಳಿದ ಬಳಿಕ ಆಡುತ್ತಿರುವ ಮೊದಲ ಪಂದ್ಯ ಇದಾಗಿದೆ. ದಿಢೀರ್ ನಿವೃತ್ತಿ ಘೋಷಿಸಿದ ಕಾರಣ ಬಿಸಿಸಿಐನಿಂದಲೂ ಕೊಹ್ಲಿಗೆ ಗೌರವದ ವಿದಾಯ ಸಿಕ್ಕಿಲ್ಲ. ಹೀಗಾಗಿ ಅಭಿಮಾನಿಗಳು ಕೊಹ್ಲಿಗೆ ಟ್ರಿಬ್ಯೂಟ್ ನೀಡಲು ಎಲ್ಲಾ ತಯಾರಿಯೊಂದಿಗೆ ಆಗಮಿಸಿದ್ದಾರೆ.
ಮಳೆಗೆ ಹೈರಾಣದ ಆರ್‌ಸಿಬಿ ಫ್ಯಾನ್ಸ್
ಬೆಂಗಳೂರಿನಲ್ಲಿ ಸಂಜೆಯಿಂದ ಸತತ ಮಳೆ ಸುರಿಯುತ್ತಿದೆ. ಬಿಡುವಿಲ್ಲದೆ ಮಳೆ ಸುರಿಯುತ್ತಿರುವ ಕಾರಣ ಪಂದ್ಯ ಆರಂಭಗೊಂಡಿಲ್ಲ. ಟಾಸ್ ಕೂಡ ನಡೆದಿಲ್ಲ. ಇತ್ತ ಅಭಿಮಾನಿಗಳು ಪಂದ್ಯಕ್ಕಾಗಿ, ಕೊಹ್ಲಿಗಾಗಿ ಕಾಯುತ್ತಿದ್ದಾರೆ. ಆದರೆ ಮಳೆ ಮಾತ್ರ ಬಿಡುತ್ತಿಲ್ಲ. ಹವಾಮಾನ ಇಲಾಖೆ ಮೇ.17 ರಂದು ಬೆಂಗಳೂರಿನಲ್ಲಿ ಭಾರಿ ಮಳೆ ಮುನ್ಸೂಚನೆ ನೀಡಿತ್ತು. ಇದರಂತೆ ಮಳೆ ಸುರಿದಿದೆ. ಕ್ರೀಡಾಂಗಣದಲ್ಲಿ ಅಭಿಮಾನಿಗಳು ಆರ್‌ಸಿಬಿ ಘೋಷಣೆ ಮೊಳಗಿಸುತ್ತಿದ್ದಾರೆ.
5 ಓವರ್ ಮ್ಯಾತ್ ಕಟ್ ಆಫ್ ಸಮಯ 10.56
ಭಾರಿ ವಿಳಂಬವಾಗಿರುವ ಕಾರಣ ಈಗ ಮಳೆ ನಿಂತು ಪಂದ್ಯ ಆರಂಭಗೊಂಡರೆ ಓವರ್ ಕಡಿತಗೊಳ್ಳಲಿದೆ. ಆದರೆ ಕೊನೆಯದಾಗಿ 5 ಓವರ್ ಮ್ಯಾಚ್ ಆಡಿಸಲು ರಾತ್ರಿ 10.56ಕ್ಕೆ ಕಟ್ ಆಫ್ ಸಮಯ ನೀಡಲಾಗಿದೆ. 10.56ರಕ್ಕೆ ಪಂದ್ಯ ಆರಂಭಗೊಂಡರೆ ಅದು 5 ಓವರ್ ಪಂದ್ಯ ಆಗಿರಲಿದೆ. ಆದರೆ ಮಳೆ ಮತ್ತೂ ಅನುವು ಮಾಡದೇ ಇದ್ದರೆ ಪಂದ್ಯ ರದ್ದಾಗಲಿದೆ. ಹೀಗಾಗಿ ಇದೀಗ ಅಭಿಮಾನಿಗಳು ಕನಿಷ್ಠ 5 ಓವರ್ ಪಂದ್ಯವಾದರೂ ಸಿಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ.
ಕೆಕೆಆರ್ ವಿರುದ್ಧ ಪಂದ್ಯಕ್ಕೆ ಸಂಭಾವ್ಯ ಆರ್‌ಸಬಿ ಪ್ಲೇಯಿಂಗ್ 11
ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ಜಾಕೋಬ್ ಬೆತೆಲ್/ ಮಯಾಂಕ್ ಅಗರ್ವಾಲ್, ರಜತ್ ಪಾಟೀದಾರ್(ನಾಯಕ), ಜಿತೇಶ್ ಶರ್ಮಾ, ಟಿಮ್ ಡೇವಿಡ್, ರೊಮಾರಿಯಾ ಶೆಫರ್ಡ್, ಕ್ರುನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್,ಲುಂಗಿ ಎನ್‌ಗಿಡಿ, ಯಶ್ ದಯಾಳ್, ಸೂಯಾಶ್ ಶರ್ಮಾ
ಕೋಲ್ಕತಾ ನೈಟ್ ರೈಡರ್ಸ್ ಸಂಭಾವ್ಯ ಪ್ಲೇಯಿಂಗ್ 11
ರಹಮಾನಲ್ಲು ಗುರ್ಬಾಜ್, ಸುನಿಲ್ ನರೈನ್, ಅಜಿಂಕ್ಯ ರಹಾನೆ(ನಾಯಕ), ಅಂಗ್ಕ್ರಿಶ್ ರಘುವಂಶಿ, ಮನೀಶ್ ಪಾಂಡೆ, ಆ್ಯಂಡ್ರೆ ರಸೆಲ್, ರಿಂಕು ಸಿಂಗ್, ರಮನದೀಪ್ ಸಿಂಗ್, ಅಂಕುಲ್ ರಾಯ್, ವೈಭವ್ ಅರೋರ, ವರುಣ್ ಚಕ್ರವರ್ತಿ, ಹರ್ಷಿತ್ ರಣಾ
ಒಂದು ಹಂತದಲ್ಲಿ ಮಳೆ ಕಡಿಮೆಯಾಗಿತ್ತು. ಈ ವೇಳೆ ಕ್ರೀಡಾಂಗಣದಲ್ಲಿ ಚಟುವಟಿಕೆ ಗರಿಗೆದರಿತ್ತು. ಆದರೆ ಮಳೆ ಕಡಿಮೆಯಾಗುತ್ತಿದ್ದಂತೆ ಮತ್ತೆ ಶಾಕ್ ಕೊಟ್ಟಿದೆ. ಚಿನ್ನಸ್ವಾಮಿ ಕ್ರೀಡಾಂಗಣ ಹಾಗೂ ಸುತ್ತ ಮುತ್ತ ಪ್ರದೇಶಗಳಲ್ಲಿ ಮಳೆಯಾಗುತ್ತಿದೆ. ಇದು ಅಭಿಮಾನಿಗಳ ಆತಂಕ ಹೆಚ್ಚಿಸಿದೆ. ಕಾರಣ ಅಂತಿಮ ಕಟ್ ಆಫ್ ಸಮಯ ಹತ್ತಿರಬರುತ್ತಿದೆ. ಆದರೆ ಇನ್ನೂ ಮಳೆ ನಿಂತಿಲ್ಲ. ಮಳೆ ನಿಂತರೆ ಕೆಲವೇ ಕ್ಷಣಗಳಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಬ್ ಏರ್ ಸಿಸ್ಟಮ್ ಇದೆ. ಇದರಿಂದ 10 ರಿಂದ 15 ನಿಮಿಷದಲ್ಲಿ ಪಂದ್ಯ ಆಡಲು ಸಜ್ಜುಗೊಳ್ಳಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.