ದಿಢೀರ್ ಎಂ.ಎಸ್.ಧೋನಿ ಪ್ರತ್ಯಕ್ಷ; ಫ್ಯಾನ್ಸ್ ನಿಯಂತ್ರಿಸಲು ಹರಸಾಹಸ!

Suvarna News   | Asianet News
Published : Feb 01, 2020, 08:51 PM IST
ದಿಢೀರ್ ಎಂ.ಎಸ್.ಧೋನಿ ಪ್ರತ್ಯಕ್ಷ; ಫ್ಯಾನ್ಸ್ ನಿಯಂತ್ರಿಸಲು ಹರಸಾಹಸ!

ಸಾರಾಂಶ

ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿ ಸದ್ಯ ತಂಡದಲ್ಲಿ ಇಲ್ಲದಿದ್ದರೂ ಅಭಿಮಾನಿಗಳಿಗೇನು ಕಡಿಮೆ ಇಲ್ಲ. ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಪಂದ್ಯದ ವೇಳೆಯೂ ಧೋನಿ ವಿ ಮಿಸ್ ಯು ಬ್ಯಾನರ್ ರಾರಾಜಿಸುತ್ತಿತ್ತು. ಇದೀಗ ಧೋನಿ ದಿಢೀರ್ ಪ್ರತ್ಯಕ್ಷವಾಗೋ ಮೂಲಕ ಅಚ್ಚರಿ ನೀಡಿದ್ದಾರೆ. ಆದರೆ ಧೋನಿಗಾಗಿ ಮುಗಿಬಿದ್ದ ಫ್ಯಾನ್ಸ್ ದೂರ ಮಾಡಲು ಪೊಲೀಸರು ಹರಸಾಹಸ ಪಡಬೇಕಾಯಿತು.

ಮಧ್ಯ ಪ್ರದೇಶ(ಫೆ.01): ಎಂ.ಎಸ್.ಧೋನಿ ಮತ್ತೆ ಮೈದಾನಕ್ಕಿಳಿಯುವುದನ್ನು ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. 2019ರ ವಿಶ್ವಕಪ್ ಟೂರ್ನಿ ಬಳಿಕ ಧೋನಿ ಯಾವುದೇ ಪಂದ್ಯ ಆಡಿಲ್ಲ. ಧೋನಿ ನಿವೃತ್ತಿ, ಧೋನಿಯನ್ನು ಕಡೆಗಣಿಸಲಾಗಿದೆ ಅನ್ನೋ ಹಲವು ವರದಿಗಳು ಬಂದರೂ ಧೋನಿ ಮೌನವಾಗಿದ್ದಾರೆ. ಇದೀಗ ಧೋನಿ ದಿಢೀರ್ ಪ್ರತ್ಯಕ್ಷವಾಗೋ ಮೂಲಕ ಅಚ್ಚರಿ ನೀಡಿದ್ದಾರೆ. 

ಇದನ್ನೂ ಓದಿ: IPL 2020: ತಯಾರಿ ಆರಂಭಿಸಿದ ಧೋನಿ-ರೈನಾ!.

ಮಧ್ಯಪ್ರದೇಶದಲ್ಲಿ ಧೋನಿ ಪ್ರತ್ಯಕ್ಷವಾಗಿದ್ದಾರೆ. ಕುಟುಂಬಸ್ಥರು ಹಾಗೂ ಆಪ್ತರ ಜೊತೆ ಧೋನಿ ಕಾಣಿಸಿಕೊಂಡ ತಕ್ಷಣವೇ ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಅಭಿಮಾನಿಗಳಿಂದ ಧೋನಿಯನ್ನು ರಕ್ಷಿಸಲು ಪೊಲೀಸರು ಹಾಗೂ ಬಾಡಿ ಗಾರ್ಡ್ ಹರಸಾಹಸ ಪಡಬೇಕಾಯಿತು.

 

ಇದನ್ನೂ ಓದಿ: ರಾಹುಲ್‌ಗೆ ಕೀಪಿಂಗ್; ಕೊಹ್ಲಿ- ಧೋನಿ ನಾಯಕತ್ವ ವ್ಯತ್ಯಾಸ ಹೇಳಿದ ಸೆಹ್ವಾಗ್!.

38 ವರ್ಷದ ಧೋನಿ ಸರಿಸುಮಾರು ಕ್ರಿಕೆಟ್ ಆಡದೇ ಒಂದು ವರ್ಷಗಳೇ ಉರುಳುತ್ತಿದೆ. 2020ರ ಐಪಿಎಲ್ ಟೂರ್ನಿ ಬಳಿಕ ಧೋನಿ ಟೀಂ ಇಂಡಿಯಾ ಭವಿಷ್ಯ ನಿರ್ಧರಿಸಲಾಗುತ್ತೆ ಅನ್ನೋ ಮಾತುಗಳು ಕೇಳಿ ಬಂದಿದೆ. ಆದರೆ 2020ರ ಟಿ20  ವಿಶ್ವಕಪ್ ತಂಡದಲ್ಲಿ ಧೋನಿ ಇರಬೇಕು ಅನ್ನೋ ಕೂಗು ಕೇಳಿ ಬರುತ್ತಿದೆ. 
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯದ ಟಿಕೆಟ್ ಮಾರಾಟ ಆರಂಭ, 450 ರೂಗೆ ಬುಕಿಂಗ್ ಹೇಗೆ?
ಸಂಜು ಸ್ಯಾಮ್ಸನ್ ಔಟ್, ಶುಭ್‌ಮನ್ ಗಿಲ್ ಇನ್: ಅಸಲಿ ಸತ್ಯ ಬಿಚ್ಚಿಟ್ಟ ರವಿಚಂದ್ರನ್ ಅಶ್ವಿನ್!