INDvNZ 5ನೇ ಟಿ20: ಬದಲಾವಣೆಗೆ ಮುಂದಾದ ಭಾರತ! ಇಲ್ಲಿದೆ ಸಂಭವನೀಯ ತಂಡ!

By Suvarna News  |  First Published Feb 1, 2020, 6:49 PM IST

ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿ ಅತ್ಯಂತ ರೋಚಕ ಸರಣಿಯಾಗಿ ಮಾರ್ಪಟ್ಟಿದೆ. ಎರಡು ಸೂಪರ್ ಓವರ್ ಪಂದ್ಯ, ಎರಡಲ್ಲೂ ಭಾರತಕ್ಕೆ ಗೆಲುವು ಟೀಂ ಇಂಡಿಯಾ ಆತ್ಮವಿಶ್ವಾಸವನ್ನೇ ಹೆಚ್ಚಿಸಿದೆ. ಇದೀಗ 5ನೇ ಹಾಗೂ ಅಂತಿಮ ಪಂದ್ಯಕ್ಕೆ ತಂಡದಲ್ಲಿ ಬದಲಾವಣೆ ಮಾಡಲು ಕೊಹ್ಲಿ ಸೈನ್ಯ ಮುಂದಾಗಿದೆ. ಯಾರಿಗೆ ಚಾನ್ಸ್, ಯಾರಿಗೆ ಕೊಕ್? ಇಲ್ಲಿದೆ ತಂಡದ ವಿವರ.


ಮೌಂಟ್ ಮೌಂಗನುಯಿ(ಫೆ.01): ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಸರಣಿ ಅಂತಿಮ ಘಟ್ಟ ತಲುಪಿದೆ. ಸರಣಿಯಲ್ಲಿ 4-0 ಅಂತರದ ಮುನ್ನಡೆಯಲ್ಲಿರುವ ಟೀಂ ಇಂಡಿಯಾ ಇದೀಗ ಅಂತಿಮ ಹಾಗೂ 5ನೇ ಪಂದ್ಯ ಗೆದ್ದು ಕ್ಲೀನ್ ಸ್ವೀಪ್ ಗುರಿ ಇಟ್ಟುಕೊಂಡಿದೆ. ಹೀಗಾಗಿ ಅಂತಿಮ ಪಂದ್ಯ ತೀವ್ರ ಕೂತೂಹಲ ಕೆರಳಿಸಿದೆ.

ಇದನ್ನೂ ಓದಿ: ನ್ಯೂಜಿಲೆಂಡ್ ಸರಣಿಗೆ ಸ್ಟಾರ್ ಆಲ್ರೌಂಡರ್ ಅನ್‌ಫಿಟ್, ಕೊಹ್ಲಿಗೆ ಟೆನ್ಶನ್.!

Latest Videos

undefined

ಟಿ20 ಸರಣಿಯಲ್ಲಿ 2 ಸೂಪರ್ ಓವರ್ ಪಂದ್ಯದಿಂದ ಸರಣಿ ರೋಚಕತೆ ಇಮ್ಮಡಿಯಾಗಿದೆ. ತವರಿನಲ್ಲಿ ಆರಂಭಿಕ 4 ಪಂದ್ಯ ಸೋತು ಟೀಕೆಗೆ ಗುರಿಯಾಗಿರುವ ನ್ಯೂಜಿಲೆಂಡ್ ಅಂತಿಮ ಪಂದ್ಯ ಗೆದ್ದು ಮಾನ ಉಳಿಸಿಕೊಳ್ಳಲು ಸಿದ್ದತೆ ನಡೆಸುತ್ತಿದೆ. ಆದರೆ ಕೊಹ್ಲಿ ಸೈನ್ಯ ಗೆಲುವಿನೊಂದಿಗೆ ಏಕದಿನ ಸರಣಿಗೆ ರೆಡಿಯಾಗಲು ಪ್ಲಾನ್ ಮಾಡಿಕೊಂಡಿದೆ. ಇದಕ್ಕಾಗಿ ಕೊಹ್ಲಿ ಸೈನ್ಯ ತಂಡದಲ್ಲಿ ಬದಲಾವಣೆಗೆ ಮುಂದಾಗಿದೆ.

ಇದನ್ನೂ ಓದಿ:ನ್ಯೂಜಿಲೆಂಡ್ ಈಗ ಸೂಪರ್ ಓವರ್ ಚೋಕರ್ಸ್!

ಇಂಜುರಿಯಿಂದ ಕಮ್‌ಬ್ಯಾಕ್ ಮಾಡಿರುವ ವೇಗಿ ಜಸ್ಪ್ರೀತ್ ಬುಮ್ರಾ ಮೊನಚು ಕಳೆದುಕೊಂಡಿದ್ದಾರೆ. 4ನೇ ಪಂದ್ಯದಿಂದ ವಿಶ್ರಾಂತಿ ಪಡೆದಿದ್ದ ಮೊಹಮ್ಮದ್ ಶಮಿ ಮತ್ತೆ ಕಮ್‌ಬ್ಯಾಕ್ ಮಾಡುವ ಸಾಧ್ಯತೆ ಇದ್ದು, ಬುಮ್ರಾಗೆ ವಿಶ್ರಾಂತಿ ನೀಡಲು ಟೀಂ ಮ್ಯಾನೇಜ್ಮಂಟ್ ಮುಂದಾಗಿದೆ.  ಇನ್ನುಳಿದಂತೆ ಹೆಚ್ಚಿನ ಬದಲಾವಣೆಗೆ ಕೊಹ್ಲಿ ಮನಸ್ಸು ಮಾಡಿಲ್ಲ.

ಭಾರತ ಸಂಭಾವ್ಯ ತಂಡ: 
ವಿರಾಟ್ ಕೊಹ್ಲಿ(ನಾಯಕ), ಕೆಎಲ್ ರಾಹುಲ್, ಸಂಜು ಸಾಮ್ಸನ್, ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ಶಿವಂ ದುಬೆ, ವಾಶಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಯಜುವೇಂದ್ರ ಚಹಾಲ್, ನವದೀಪ್ ಸೈನಿ, ಮೊಹಮ್ಮದ್ ಶಮಿ
 

click me!