ಕ್ರಿಕೆಟಿಗ ಪೃಥ್ವಿ ಶಾ ಹಾಗೂ ಅಭಿಮಾನಿಗಳ ನಡುವೆ ಮಾರಾಮಾರಿ, ಕಾರು ಪುಡಿ ಪುಡಿ!

By Suvarna NewsFirst Published Feb 16, 2023, 6:12 PM IST
Highlights

ಸೆಲ್ಫಿ ನಿರಾಕರಿಸಿದ ಟೀಂ ಇಂಡಿಯಾ ಕ್ರಿಕೆಟಿಗ ಪೃಥ್ವಿ ಶಾ ಹಾಗೂ ಆತನ ಗೆಳೆಯನ ಮೇಲೆ ಅಭಿಮಾನಿಗಳ ಗುಂಪೊಂದು ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ. ನಡು ಬೀದಿಯಲ್ಲಿ  ಬೇಸ್‌ಬಾಲ್ ಬ್ಯಾಟ್‌ನಿಂದ ಹೊಡೆದಾಟ ನಡೆದಿದೆ. ಕಾರಿನ ಕಾಜು ಪುಡಿ ಪುಡಿಯಾಗಿದ್ದರೆ, ಇತ್ತ ದೂರು ದಾಖಲಾಗಿದೆ. ಅಷ್ಟಕ್ಕೂ ನಡೆದಿದ್ದೇನು?
 

ಮುಂಬೈ(ಫೆ.16): ಟೀಂ ಇಂಡಿಯಾ ಕ್ರಿಕೆಟಿಗ ಪೃಥ್ವಿ ಶಾ ಹಾಗೂ ಅಭಿಮಾನಿಗಳ ನಡುವೆ ಮರಾಮಾರಿ ನಡೆದಿದೆ. ಸೆಲ್ಫಿ ನಿರಾಕರಿಸಿದ ಕಾರಣಕ್ಕೆ ಪೃಥ್ವಿ ಶಾ ಸಂಚರಿಸುತ್ತಿದ್ದ ಕಾರು ಚೇಸ್ ಮಾಡಿ ಬಂದ ಅಭಿಮಾನಿಗಳು ಬೇಸ್ ಬಾಲ್ ಬ್ಯಾಟ್ ಮೂಲಕ ಹಲ್ಲೆ ನಡೆಸಿದ್ದಾರೆ. ನಡು ಬೀದಿಯಲ್ಲಿ ನೂಕೂಟ ತಳ್ಳಾಟ ನಡಿದಿದೆ. ಇತ್ತ ಕಾರಿನ ಗಾಜು ಪುಡಿ ಪುಡಿಯಾಗಿದೆ. ಇದರ ಜೊತೆಗೆ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದೆ.ಪೃಥ್ವಿ ಶಾ ಗೆಳೆಯ ನೀಡಿದ ದೂರಿನಲ್ಲಿ ಅಭಿಮಾನಿಗಳು ಹಲ್ಲೆ ನಡೆಸಿದ್ದಾರೆ ಎಂದರೆ, ಇತ್ತ ಪೃಥ್ವಿ ಶಾ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಅಭಿಮಾನಿಗಳು ದೂರಿದ್ದಾರೆ.

ಪೃಥ್ವಿ ಶಾ ಹಾಗೂ ಆತನ ಗೆಳೆಯ ಮುಂಬೈ ವಿಮಾನ ನಿಲ್ದಾಣದ ಸಮೀಪದಲ್ಲಿರುವ ಐಷಾರಾಮಿ ಹೊಟೆಲ್‌ಗೆ ತೆರಳಿದ್ದಾರೆ. ಈ ವೇಳೆ ಹೊಟೆಲ್‌ಗೆ ಆಗಮಿಸಿದ ಕೆಲ ಯುವತಿರು ಪೃಥ್ವಿ ಶಾ ಬಳಿ ಸೆಲ್ಫಿಗೆ ಮುಗಿ ಬಿದ್ದಿದ್ದಾರೆ. ಕೆಲ ಸೆಲ್ಫಿಗೆ ಫೋಸ್ ನೀಡಿದ ಪೃಥ್ವಿ ಶಾ ಬಳಿಕ ನಿರಾಕರಿಸಿದ್ದಾರೆ. ಇದರಿಂದ ಯುವತಿಯರು ಹಾಗೂ ಆಕೆಯ ಗೆಳೆಯರು ಪೃಥ್ವಿ ಶಾ ಜೊತೆ  ವಾಗ್ವಾದಕ್ಕೆ ಇಳಿದಿದ್ದಾರೆ. ತಕ್ಷಣವೇ ಹೊಟೆಲ್ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಹೀಗಾಗಿ ಯುವತಿಯರು ಆಕೆಯ ಗೆಳೆಯರನ್ನು ಹೊಟೆಲ್‌ನಿಂದ ಹೊರಕ್ಕೆ ಹಾಕಲಾಗಿದೆ.

'ಫುಟ್‌ಬಾಲ್‌ ಟೀಮ್‌ಗೆ ಚೆಸ್‌ ಪ್ಲೇಯರ್ ಕೋಚ್‌ ಆದಂಗಾಯ್ತು..' ಆರ್‌ಸಿಬಿ 'ಮೆಂಟರ್‌' ಆಯ್ಕೆಗೆ ತಲೆಕೆರೆದುಕೊಂಡ ಫ್ಯಾನ್ಸ್‌!

ಪೃಥ್ವಿ ಶಾ ಹೊಟೆಲ್‌ನಿಂದ ಹೊರಬರುತ್ತಿದ್ದಂತೆ ಯುವತಿಯ ಗೆಳೆಯರು ಬೇಸ್ ಬಾಲ್ ಬ್ಯಾಟ್ ಮೂಲಕ ಹಲ್ಲೆಗೆ ಸ್ಕೆಚ್ ಹಾಕಿದ್ದಾರೆ. ಆದರೆ ಪೃಥ್ವಿ ಶಾ ಗೆಳೆಯನ ಕಾರಿನಲ್ಲಿ ಸಾಗಿದ್ದಾರೆ. ಈ ವೇಳೆ ಯುವತಿಯರು ಹಾಗೂ ಆಕೆಯ ಗೆಳೆಯರು ಕಾರಿನ ಮೂಲಕ ಚೇಸಿಂಗ್ ಮಾಡಿ ಪೃಥ್ವಿ ಶಾ ಸಂಚರಿಸುತ್ತಿದ್ದ ಗೆಳೆಯನ ಕಾರನ್ನು ಅಡ್ಡಗಟ್ಟಿ ಗಾಜು ಒಡೆದಿದ್ದಾರೆ. ಈ ವೇಳೆ ನಡು ಬೀದಿಯಲ್ಲಿ ಹಲ್ಲೆ ನಡೆದಿದೆ ಎಂದು ಪೃಥ್ವಿ ಶಾ ಗೆಳೆಯ ನೀಡಿದ ದೂರಿನಲ್ಲಿ ಹೇಳಿದ್ದಾರೆ. ಕಾರಿನ ಗಾಜು ಒಡೆದು 50,000 ರೂಪಾಯಿ ನಷ್ಟ ಸಂಭವಿಸಿದೆ, ಇದನ್ನು ಭರಿಸಬೇಕು ಎಂದು ದೂರಿನಲ್ಲಿ ಪೃಥ್ವಿ ಶಾ ಬೇಡಿಕೆ ಇಟ್ಟಿದ್ದಾರೆ.

ಆದರೆ ಈ ಆರೋಪವನ್ನು ಸೆಲ್ಫಿ ಕ್ಲಿಕ್ಕಿಸಲು ಹೋದ ಯುವತಿ ಹಾಗೂ ಆಕೆಯ ಗೆಳೆಯರು ತಳ್ಳಿ ಹಾಕಿದ್ದಾರೆ. ಪೃಥ್ವಿ ಶಾ ಹಾಗೂ ಆಕೆಯ ಗೆಳೆಯರು ಮೊದಲು ದಾಳಿ ನಡೆಸಿದ್ದಾರೆ. ಇಬ್ಬರು ಮಹಿಳಾ ಅಭಿಮಾನಿಗಳಾದ ಶೋಬಿತಾ ಠಾಕೂರ್ ಹಾಗೂ ಸಪ್ನಾ ಗಿಲ್ ವಿರುದ್ದ ದೂರು ದಾಖಲಾಗಿದೆ. ಆದರೆ ಸಪ್ನಾ ಗಿಲ್ ವಕೀಲರು, ಕೆಲ ವಿಡಿಯೋ ತುಣುಕು ಹಿಡಿದು ಪೃಥ್ವಿ ಶಾ ಮೇಲೆ ಆರೋಪ ಮಾಡಿದ್ದಾರೆ. ಪೃಥ್ವಿ ಶಾ ಮಹಿಳೆ ಮೇಲೆ ಹಲ್ಲೆ ಮಾಡಿದ್ದಾರೆ. ಸಪ್ನಾ ಗಿಲ್‌ನ್ನು ಪೊಲೀಸ್ ಠಾಣೆಯಲ್ಲೇ ಕೂರಿಸಲಾಗಿದೆ ಎಂದು ಸಪ್ನಾ ಗಿಲ್ ವಕೀಲ ಆಲಿ ಖಾಶಿಫ್ ಖಾನ್ ಹೇಳಿದ್ದಾರೆ.

ಮೈದಾನಕ್ಕೆ ನುಗ್ಗಿ ರೋಹಿತ್ ಬಿಗಿದಪ್ಪಿದ ಪುಟ್ಟ ಅಭಿಮಾನಿ, ಕ್ರಮ ಕೈಗೊಳ್ಳದಂತೆ ನಾಯಕನ ಸೂಚನೆ!

ಪೃಥ್ವಿ ಶಾ ಹಾಗೂ ಯುವತಿಯರ ಬೀದಿ ಜಗಳದ ವಿಡಿಯೋ ವೈರಲ್ ಆಗಿದೆ. ಆರೋಪ ಪ್ರತ್ಯಾರೋಪ ಜೋರಾಗಿದೆ. ಈ ಘಟನೆ ಪೃಥ್ವಿ ಶಾ ಕ್ರಿಕೆಟ್ ಬದುಕಿನ ಮೇಲೆ ಪರಿಣಾಮಬೀರುವ ಸಾಧ್ಯತೆ ಇದೆ. ಈ ಹಿಂದೆಯೂ ಪೃಥ್ವಿ ಶಾ ಅಭಿಮಾನಿಗಳ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ ಅನ್ನೋ ಆರೋಪ ಕೇಳಿಬಂದಿತ್ತು. ಇದೀಗ ಎರಡನೇ ಪ್ರಕರಣ ದಾಖಲಾಗಿದೆ. 

click me!