
ಕರಾಚಿ: ಚಾಂಪಿಯನ್ಸ್ ಟ್ರೋಫಿಯಿಂದ ಹೊರಬಿದ್ದಿರುವ ಪಾಕಿಸ್ತಾನ ವಿರುದ್ಧ ಆಕ್ರೋಶ ಹೊರಹಾಕುತ್ತಿರುವ ಮಾಜಿ ಕ್ರಿಕೆಟಿಗರ ಸಂಖ್ಯೆ ಹೆಚ್ಚುತ್ತಲೇ ಇದೆ. ಪಾಕ್ ಮಹಿಳಾ ತಂಡದ ಮಾಜಿ ನಾಯಕಿ ಸನಾ ಮೀರ್ ಕೂಡಾ ಪಾಕ್ ಪುರುಷರ ತಂಡದ ಆಟದ ಬಗ್ಗೆ ಕಿಡಿ ಕಾರಿದ್ದು, 'ಎಂ.ಎಸ್. ಧೋನಿ ಯಂತವರು ನಾಯಕನಾದರೂ ಸದ್ಯ ಇರುವ ಪಾಕಿ ಸ್ತಾನ ಪುರುಷರ ತಂಡವನ್ನು ಸುಧಾರಿಸುವುದಕ್ಕೆ ಸಾಧ್ಯ ವಿಲ್ಲ' ಎಂದಿದ್ದಾರೆ.
ಈ ಬಗ್ಗೆ ಮಾತನಾಡಿರುವ ಸನಾ ಮೀರ್, 'ಚಾಂಪಿಯನ್ಸ್ ಟ್ರೋಫಿಯ ಪಾಕ್ ತಂಡಕ್ಕೆ ಧೋನಿ, ಯೂನಿಸ್ ಖಾನ್‌ರನ್ನು ನಾಯಕರನ್ನಾಗಿ ಮಾಡಿದರೂ ಸದ್ಯದ ಪರಿಸ್ಥಿತಿಯಲ್ಲಿ ತಂಡವನ್ನು ಏನೂ ಮಾಡುವುದಕ್ಕೆ ಸಾಧ್ಯವಿಲ್ಲ. 15 ಜನರ ತಂಡ ಘೋಷಿಸಿದಾಗಲೇ ನಾವು ಅರ್ಧ ಸೋತಾಗಿತ್ತು ಟ್ರೋಫಿ ಕಳೆದುಕೊಂಡಿದ್ದೆವು' ಎಂದಿದ್ದಾರೆ.
ಇದನ್ನೂ ಓದಿ: ಟೀಂ ಇಂಡಿಯಾ ಸೋಲಿಸಲು ಆರ್ಮಿ ಟ್ರೈನಿಂಗ್: ಬೆಟ್ಟ ಹತ್ತಿಸಿದ್ರು, ಗೋಡೆ ಹಾರಿಸಿದ್ರು, ಆದ್ರೂ ಪಾಕ್ ಗೆಲ್ಲಲಿಲ್ಲ
2017ರಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಸರ್ಫರಾಜ್ ಅಹಮ್ಮದ್ ನೇತೃತ್ವದ ಪಾಕಿಸ್ತಾನ ತಂಡವು ಫೈನಲ್‌ನಲ್ಲಿ ಭಾರತ ತಂಡವನ್ನು ಮಣಿಸಿ ಮೊದಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಇದಾದ ಬಳಿಕ 8 ವರ್ಷಗಳ ನಂತರ ಆಯೋಜನೆಗೊಂಡಿದ್ದ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಹಾಲಿ ಚಾಂಪಿಯನ್ ಪಾಕಿಸ್ತಾನವೇ ಆತಿಥ್ಯ ವಹಿಸಿತ್ತು. ಮತ್ತೊಮ್ಮೆ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆಲ್ಲುವ ಕನವರಿಕೆಯಲ್ಲಿದ್ದ ಮೊಹಮ್ಮದ್ ರಿಜ್ವಾನ್ ನೇತೃತ್ವದ ಪಾಕಿಸ್ತಾನ ತಂಡವು ಸತತ ಎರಡು ಪಂದ್ಯ ಸೋಲುವ ಮೂಲಕ ಸೆಮೀಸ್ ರೇಸ್‌ನಿಂದ ಹೊರಬಿದ್ದಿದೆ. ಆಘಾತಕಾರಿ ಸೋಲುಂಡು ಚಾಂಪಿಯನ್ಸ್ ಟ್ರೋಫಿಯಿಂದ ಹೊರಬಿದ್ದ ಬೆನ್ನಲ್ಲೇ ಅಭಿಮಾನಿಗಳಿಂದ ಹಿಡಿದು ಪಾಕ್ ಮಾಜಿ ಕ್ರಿಕೆಟಿಗರವರೆಗೆ ಎಲ್ಲರೂ ಪಾಕ್ ತಂಡದ ಪ್ರದರ್ಶನದ ಬಗ್ಗೆ ಕಿಡಿಕಾರುತ್ತಿದ್ದಾರೆ.
ವಿರಾಟ್ ಕೊಹ್ಲಿಯಂಥ ಶ್ರೇಷ್ಠ ಏಕದಿನ ಕ್ರಿಕೆಟಿಗನನ್ನು ನಾನು ನೋಡಿಲ್ಲ: ರಿಕಿ ಪಾಂಟಿಂಗ್
ದುಬೈ: ವಿರಾಟ್ ಕೊಹ್ಲಿಯಂಥ ಶ್ರೇಷ್ಠ ಏಕದಿನ ಕ್ರಿಕೆಟಿಗನನ್ನು ನಾನು ನೋಡಿಲ್ಲ ಎಂದು ಆಸ್ಟ್ರೇಲಿಯಾದ ದಿಗ್ಗಜ ಕ್ರಿಕೆಟಿಗ ರಿಕಿ ಪಾಂಟಿಂಗ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಈ ಬಗ್ಗೆ ಐಸಿಸಿ ಸಂದರ್ಶನದಲ್ಲಿ ಮಾತನಾಡಿರುವ ಅವರು, 'ಏಕದಿನ ಕ್ರಿಕೆಟ್‌ನ ಗರಿಷ್ಠ ರನ್ ಗಳಿಕೆಯಲ್ಲಿ ಕೊಹ್ಲಿ ನನ್ನನ್ನು ಹಿಂದಿಕ್ಕಿದ್ದಾರೆ. ಅವರಿಗಿಂತ ಮುಂದೆ ಕೇವಲ ಇಬ್ಬರು ಬ್ಯಾಟರ್ಸ್(ಸಚಿನ್, ಸಂಗಕ್ಕರ) ಇದ್ದಾರೆ. ಕೊಹ್ಲಿ ಸಾರ್ವಕಾಲಿಕ ಗರಿಷ್ಠ ರನ್ ಸರದಾರನಾಗಬ ಹುದು' ಎಂದು ಪಾಂಟಿಂಗ್ ಭವಿಷ್ಯ ನುಡಿದಿದ್ದಾರೆ.
ಇದನ್ನೂ ಓದಿ: ಇಂಗ್ಲೆಂಡ್ ಸರಣಿಗಾಗಿ ಐಪಿಎಲ್‌ನಲ್ಲೇ ಭಾರತ ರೆಡ್ ಬಾಲ್ ಅಭ್ಯಾಸ!
ಕೊಹ್ಲಿ ಸಂಪೂರ್ಣ ಫಿಟ್ಟೆಸ್ ಹೊಂದಿದ್ದಾರೆ ಮತ್ತು ಕಠಿಣ ಅಭ್ಯಾಸ ನಡೆಸುತ್ತಿರುತ್ತಾರೆ. ಅವರು ಸಚಿನ್‌ಗಿಂತ 4,000 ರನ್ ಹಿಂದಿದ್ದಾರೆ. ಆದರೆ ಅವರಲ್ಲಿರುವ ರನ್ ಹಸಿವು ಮುಂದೆಯೂ ಇದ್ದರೆ, ಖಂಡಿತಾ ಸಚಿನ್‌ರನ್ನು ಹಿಂದಿಕ್ಕಿಲಿದ್ದಾರೆ' ಎಂದಿದ್ದಾರೆ. ಕೊಹ್ಲಿ ಏಕದಿನದಲ್ಲಿ 14,085, ಸಚಿನ್ 18,426 ರನ್ ಗಳಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.