
ಬೆಂಗಳೂರು(ಜೂ.04) ಆರ್‌ಸಿಬಿ 18 ವರ್ಷಗಳ ಬಳಿಕ ಚೊಚ್ಚಲ ಟ್ರೋಫಿ ಗೆದ್ದುಕೊಂಡಿದೆ. ಬೆಂಗಳೂರು ಬೀದಿ ಬಿದಿಗಳಲ್ಲಿ ಸಂಭ್ರಮಾಚರಣೆ ನಡೆಯುತ್ತಿದೆ. ಹಲವು ರಸ್ತೆಗಳು ಜಾಮ್ ಆಗಿದೆ. ಈ ಗೆಲುವು ಹಲವು ಮಹತ್ವದ ಮೈಲಿಗಲ್ಲು ರಚಿಸಿದೆ. ವಿಶೇಷ ಅಂದರೆ ಆರ್‌ಸಿಬಿಯ ಈ ಗೆಲುವಿನಿಂದ ಇಡೀ ದೇಶವೇ ಕನ್ನಡ ಮಾತನಾಡಿದೆ. ಆರ್‌ಸಿಬಿಗೆ ಇತರ ರಾಜ್ಯದ ನಾಯಕರು, ಸಿನಿಮಾ ಸೇರಿದಂತೆ ಸೆಲೆಬ್ರೆಟಿಗಳು ಶುಭಕೋರುತ್ತಿದ್ದಾರೆ. ಇದೇ ವೇಳೆ ಈ ಸಲ ಕಪ್ ನಮ್ದು ಎಂದು ಕನ್ನಡದಲ್ಲಿ ಹೇಳುತ್ತಿದ್ದಾರೆ. ಆರ್‌ಸಿಬಿ ಗೆಲುವು ಕನ್ನಡ ಮಾತನಾಡುವಂತೆ ಮಾಡಿದೆ.
ಎಬಿಡಿ, ಗೇಲ್ ಜೊತೆ ಈ ಸಲ ಕಪ್ ನಮ್ದು ಎಂದ ಕೊಹ್ಲಿ
ಚಾಂಪಿಯನ್ ಆದ ಬಳಿಕ ಮಾತನಾಡಿದ ವಿರಾಟ್ ಕೊಹ್ಲಿ ಈ ಸಲ ಕಪ್ ನಮ್ದು ಎಂದಿದ್ದಾರೆ. ಬಳಿಕ ಆರ್‌ಸಿಬಿ ಮಾಜಿ ಕ್ರಿಕೆಟಿಗರಾದ ಎಬಿ ಡಿವಿಲಿಯರ್ಸ್, ಕ್ರಿಸ್ ಗೇಲ್ ಜೊತೆ ಸೇರಿ ಕೊಹ್ಲಿ ಮಾತನಾಡಿದ್ದಾರೆ. ಆರ್‌ಸಿಬಿ ನಡೆದು ಬಂದ ಹಾದಿ, ಎಬಿಡಿ ಹಾಗೂ ಗೇಲ್ ಕೊಡುಗೆ ಸೇರಿದಂತೆ ಹಲವು ವಿಚಾರಗಳನ್ನು ಕೊಹ್ಲಿ ನೆನೆಪಿಸಿಕೊಂಡಿದ್ದಾರೆ. ಇದೇ ವೇಳೆ ಮೂವರು ಜೊತೆಯಾಗಿ ಈ ಸಲ ಕಪ್ ನಮ್ದು ಎಂದು ಹೇಳಿದ್ದಾರೆ.
ಟ್ರೋಫಿ ಸ್ವೀಕರಿಸುವ ಮುನ್ನ ನಾಯಕನಿಂದ ಕನ್ನಡ
ಪ್ರಶಸ್ತಿ ಸಮಾರಂಭದಲ್ಲಿ ಆರ್‌ಸಿಬಿ ನಾಯಕ ರಜತ್ ಪಾಟಿದಾರ್ ಮಾತನಾಡಿದ್ದಾರೆ. ರವಿ ಶಾಸ್ತ್ರಿ ಪಂದ್ಯದ ಕುರಿತು ಕೆಲ ಪ್ರಶ್ನೆ, 18 ವರ್ಷಗಳ ಕಾಯುವಿಕೆ ಸೇರಿದಂತೆ ಹಲವು ವಿಚಾರಗಳ ಕುರಿತು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ರಜತ್ ಪಾಟಿದಾರ್ ಕೊನೆಯಲ್ಲಿ ಅಭಿಮಾನಿಗಳಿಗೆ, ಎಲ್ಲರಿಗೂ ಒಂದು ವಿಚಾರ ಹೇಳಬೇಕಿದೆ ಎಂದು ಈ ಸಲ ಕಪ್ ನಮ್ದು ಎಂದಿದ್ದಾರೆ.
ವಿದೇಶಿ ಕ್ರಿಕೆಟಿಗರು, ಸೇರಿದಂತೆ ಹಲವು ಕ್ರಿಕೆಟಿಗರು, ಇತರ ರಾಜ್ಯದ ಬಹುತೇಕರು ಆರ್‌ಸಿಬಿಗೆ ಶುಭಕೋರುತ್ತಿದ್ದಾರೆ. ಎಲ್ಲರೂ ಈ ಸಲ ಕಪ್ ನಮ್ದು ಎಂದು ಶುಭ ಹಾರೈಸುತ್ತಿದ್ದಾರೆ. ದೇಶ ವಿದೇಶದಲ್ಲಿ ಇದೀಗ ಕನ್ನಡ ಮಾತನಾಡುತ್ತಿದ್ದಾರೆ. ತೆಲುಗಿನ ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಆರ್‌ಸಿಬಿ ತಂಡಕ್ಕೆ ಶುಭ ಹಾರೈಸಿದ್ದಾರೆ. ಈ ವೇಳೆ ಈ ಸಲ ಕಪ್ ನಮ್ದೇ ಎಂದು ಕನ್ನಡ ಮಾತನಾಡಿದ್ದಾರೆ.
ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್
ಆರ್‌ಸಿಬಿ ಪ್ರಶಸ್ತಿ ಗೆದ್ದ ಖುಷಿಯಲ್ಲಿ ಅಭಿಮಾನಿಗಳು ಸಂಭ್ರಮಾಚರಣೆಯಲ್ಲಿ ಮುಳುಗಿದ್ದಾರೆ. ಇದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ. ರಸ್ತೆಯಲ್ಲಿ ಮೆರವಣಿಗೆ, ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದಾರೆ. ಇದರಿಂದ ಭಾರಿ ಟ್ರಾಫಿಕ್ ಜಾಮ್ ಸಂಭವಿಸಿದೆ. ಎಂ ಜಿ ರೋಡ್ ನಲ್ಲಿ ಆರ್‌ಸಿಬಿ ಅಭಿಮಾನಿಗಳು ಅದ್ದೂರಿ ಮೆರವಣಿ ಮಾಡುತ್ತಿದ್ದಾರೆ. ಹೀಗಾಗಿ ಈ ರಸ್ತೆ ಹಾಗೂ ಸುತ್ತ ಮುತ್ತಲಿನ ರಸ್ತೆಗಳು ನಡು ರಾತ್ರಿ ಜಾಮ್ ಆಗಿದೆ. ಆರ್‌ಸಿಬಿ ಪರ ಜೈಕಾಕ ಹಾಕುತ್ತಾ ಬೈಕ್ ರ್ಯಾಲಿ, ಕಾರು ರ್ಯಾಲಿಗಳು ನಡೆಯುತ್ತಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.