ನನ್ನ ಹೃದಯ,ಆತ್ಮ ಬೆಂಗಳೂರು, ಕೊನೆಯವರೆಗೂ ಆರ್‌ಸಿಬಿಗೆ ಆಡ್ತೇನೆ,ಕೊಹ್ಲಿ ಮಾತಿಗೆ ಫ್ಯಾನ್ಸ್ ಭಾವುಕ

Published : Jun 04, 2025, 12:55 AM IST
rcb vs pbks final 2025

ಸಾರಾಂಶ

ಆರ್‌ಸಿಬಿ ಗೆಲುವಿನ ಬಳಿಕ ವಿರಾಟ್ ಕೊಹ್ಲಿ ಭಾವುಕರಾಗಿ ಮೈದಾನದಲ್ಲಿ ಕಣ್ಣೀರಿಟ್ಟಿದ್ದಾರೆ. ಬಳಿಕ ಮಾತನಾಡಿದ ಕೊಹ್ಲಿ ನನ್ನ ಹೃದಯ, ಆತ್ಮ ಎಲ್ಲವೂ ಬೆಂಗಳೂರಿನೊಂದಿಗೆ ಬೆಸೆದುಕೊಂಡಿದೆ. ನಾನು ಎಲ್ಲೀವರೆಗೆ ಆಡುತ್ತೇನೆ, ಅಲ್ಲೀವರೆಗೆ ಆರ್‌ಸಿಬಿಗೆ ಆಡುತ್ತೇನೆ ಎಂದು ಕೊಹ್ಲಿ ಹೇಳಿದ್ದಾರೆ.  

ಅಹಮ್ಮದಾಬಾದ್(ಜೂ.04) ಐಪಿಎಲ್ ಟೂರ್ನಿಗೆ ಹೊಸ ಬಾಸ್. ಆರ್‌ಸಿಬಿ ಚಾಂಪಿಯನ್ ಕಿರೀಟ ಅಲಂಕರಿಸಿದೆ. ಸತತ ಪ್ರಯತ್ನ, ಸಂಘಟಿತ ಹೋರಾಟಕ್ಕೆ ಫಲ ಸಿಕ್ಕಿದೆ. ಇದೀಗ ಆರ್‌ಸಿಬಿ ತಂಡ, ಅಭಿಮಾನಿಗಳ ಸಂಭ್ರಮ ಡಬಲ್ ಆಗಿದೆ. ಇತ್ತ ಆರ್‌ಸಿಬಿ ಗೆಲುವು ದಾಖಸಲಿಸುತ್ತಿದ್ದಂತೆ ವಿರಾಟ್ ಕೊಹ್ಲಿ ಭಾವುಕರಾಗಿ ಕಣ್ಣೀರಿಟ್ಟಿದ್ದರು. ಆದರೆ ಕೊಹ್ಲಿ ತಮ್ಮ ಭಾವನೆ ನಿಯಂತ್ರಿಸಿಕೊಂಡು ಆಡಿದ ಮಾತಿಗೆ ಬೆಂಗಳೂರು ಅಭಿಮಾನಿಗಳು ಭಾವುಕರಾಗಿದ್ದಾರೆ. ಯಾವತ್ತೂ ನನ್ನ ಹೃದಯ ಹಾಗೂ ಆತ್ಮ ಬೆಂಗಳೂರಿನೊಂದಿಗೆ ಬೆಸದುಕೊಂಡಿದೆ. ಎಲ್ಲೀವರಗೆ ನಾನು ಐಪಿಎಲ್ ಆಡುತ್ತೇನೆ, ಅಲ್ಲೀವರೆಗೆ ಆರ್‌ಸಿಬಿಗೆ ಆಡುತ್ತೇನೆ ಎಂದು ಕೊಹ್ಲಿ ಹೇಳಿದ್ದಾರೆ.

ನನ್ನ ನಿಷ್ಠೆ ಆರ್‌ಸಿಬಿಗೆ

ನಾನು ಆರ್‌ಸಿಬಿ ತಂಡಕ್ಕೆ ನಿಷ್ಠೆಯಿಂದ ಆಡಿದ್ದೇನೆ. ಎಲ್ಲರೂ ಇತರ ತಂಡಕ್ಕೆ ಹರಾಜಾಗುತ್ತಿದ್ದರು. ತಂಡ ಟ್ರೋಫಿ ಗೆಲ್ಲಲೇ ಇಲ್ಲ. ಹೀಗಾಗಿ ಮತ್ತೊಂದು ತಂಡಕ್ಕೆ ಹೋಗುವ ಆಲೋಚನೆ ಬಂದಿದ್ದು ಸುಳ್ಳಲ್ಲ. ಆದರೆ ನಾನು ಆರ್‌ಸಿಬಿ ತಂಡದ ಭಾಗವಾಗಿ ಮುಂದುವರಿಯಲು ದೃಢ ನಿರ್ಧರಾ ಮಾಡಿದ್ದೆ. ನನ್ನ ಮನಸ್ಸು, ಹೃದಯ, ಆತ್ಮ ಬೆಂಗಳೂರಿನೊಂದಿಗೆ ಬೆಸದು ಕೊಂಡಿದೆ. ಇಂದ ನಾನು ಮಗುವಿನಂತೆ ನಿದ್ರಿಸುತ್ತೇನೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ. ಇದು ಬೆಂಗಳೂರು ಗೆಲುವು ಎಂದು ಕೊಹ್ಲಿ ಹೇಳಿದ್ದಾರೆ.

ಅಭಿಮಾನಿಗಳು 18 ವರ್ಷ ಕಾದು ಕುಳಿತಿದ್ದರು

ಈ ಗೆಲುವಿಗಾಗಿ ಅಭಿಮಾನಿಗಳು 18 ವರ್ಷ ಕಾದು ಕುಳಿತಿದ್ದರು. ತಂಡ ಸೋತಾಗ ಪ್ರತಿಭಾರಿ ಬೆನ್ನೆಲುಬಾಗಿ ನಿಂತು ಹುರಿದುಂಬಿಸಿದ್ದಾರೆ. ಯಾವುದೇ ಮೈದಾನದಲ್ಲಿ ಆಡಿದರೂ ಆರ್‌ಸಿಬಿ ಅಭಿಮಾನಿಗಳು ಆಗಮಿಸಿ ಚಿಯರ್ ಮಾಡುತ್ತಿದ್ದರು. ಬಹುದಿನಗಳಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಟ್ರೋಫಿ ಬಂದಿದೆ ಎಂದು ಕೊಹ್ಲಿ ಹೇಳಿದ್ದಾರೆ.

ಈ ಸಲ ಕಪ್ ನಮ್ದು

ವಿರಾಟ್ ಕೊಹ್ಲಿ ಟ್ರೋಫಿ ಗೆದ್ದ ಬಳಿಕ ಈ ಸಲ ಕಪ್ ನಮ್ದು ಎಂದಿದ್ದಾರೆ. ಬಳಿಕ ಕ್ರಿಸ್ ಗೇಲ್, ಎಬಿ ಡಿವಿಲಿಯರ್ಸ ಜೊತೆ ಸೇರಿ ಮಾತನಾಡಿದ ವಿರಾಟ್ ಕೊಹ್ಲಿ ಮೂವರು ಜೊತೆಯಾಗಿ ಈ ಸಲ ಕಪ್ ನಮ್ದು ಎಂದಿದ್ದಾರೆ. ಎಲ್ಲೆಡೆ ಇದೀಗ ಈ ಸಲ ಕಪ್ ನಮ್ದು ಎಂದು ಘೋಷಣೆಗಳು ಮೊಳಗುತ್ತಿದೆ.

 

 

ಫೈನಲ್ ಫೈಟ್

ಐಪಿಎಲ್ ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ಮೊದಲು ಬ್ಯಾಟಿಂಗ್ ಮಾಡಿತ್ತು. ಕಠಿಣ ಸವಾಲು ಎದುರಿಸಿದ ಆರ್‌ಸಿಬಿ ದಿಟ್ಟ ಹೋರಾಟ ನೀಡಿತ್ತು. ಈ ಮೂಲಕ ಆರ್‌ಸಿಬಿ 9 ವಿಕೆಟ್ ಕಳೆದುಕೊಂಡು 190 ರನ್ ಸಿಡಿಸಿತ್ತು. ವಿರಾಟ್ ಕೊಹ್ಲಿ 43 ರನ್ ಸಿಡಿಸಿದ್ರು. ಮಯಾಂಕ್ ಅಗರ್ವಾಲ್, ನಾಯಕ ರಜತ್ ಪಾಟಿದಾರ್, ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ, ರೋಮಾರಿಯೋ ಶೆಫರ್ಡ್ ಸೇರದಂತೆ ಆರ್‌ಸಿಬಿ ಬ್ಯಾಟ್ಸಮನ್ ಉತ್ತಮ ಹೋರಾಟ ನೀಡಿದರು. ಈ ಮೂಲಕ 190 ರನ್ ಸಿಡಿಸಿತು. 191 ರನ್ ಟಾರ್ಗೆಟ್ ಚೇಸ್ ಮಾಡಿದ ಪಂಜಾಬ್ ಕಿಂಗ್ಸ್‌ಗೆ ಆರಂಭದಲ್ಲಿ ಉತ್ತಮ ರನ್ ಹರಿದು ಬಂದಿತ್ತು. ಆದರೆ ಆರ್‌ಸಿಬಿ ಪಂದ್ಯದ ಮೇಲೆ ಹಿಡಿತ ಸಾಧಿಸಿತ್ತು. ಕ್ರುನಾಲ್ ಪಾಂಡ್ಯ ಅದ್ಬುತ ಓವರ್, ಭುವನೇಶ್ವರ್ ಕುಮಾರ್, ಜೋಶ್ ಹೇಜಲ್‌ವುಡ್, ಯಶ್ ದಯಾಳ್, ರೋಮಾರಿಯೋ ಶೆಫರ್ಡ್ ಬೌಲಿಂಗ್ ದಾಳಿಗೆ ಪಂಜಾಬ್ ಹೋರಾಟ ಕಠಿಣಗೊಂಡಿತ್ತು. 184 ರನ್ ಸಿಡಿಸಿ ಪಂಜಾಬ್ ಸೋಲೊಪ್ಪಿಕೊಂಡಿತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೊನೆಗೂ ಮದುವೆಗೆ ರೆಡಿ ಆದ್ರಾ ಸ್ಮೃತಿ ಮಂಧನಾ-ಪಲಾಶ್‌ ಮುಚ್ಚಾಲ್‌?
ಮೇಲ್ಮನವಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಡಿ.7ಕ್ಕೆ ಕರ್ನಾಟಕ ಕ್ರಿಕೆಚ್ ಸಂಸ್ಥೆ ಚುನಾವಣೆ