ಬರ್ಮಿಂಗ್‌ಹ್ಯಾಮ್(ಜು.02): ಇಂಗ್ಲೆಂಡ್ ವಿರುದ್ಧದ 5ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾಗೆ ಡಬಲ್ ಸಂಭ್ರಮ. ಇದೇ ಮೊದಲ ಬಾರಿಗೆ ನಾಯಕನಾಗಿ ಕಣಕ್ಕಿಳಿದಿರುವ ಬುಮ್ರಾ, ಬ್ಯಾಟಿಂಗ್‌ನಲ್ಲಿ ದಾಖಲೆ ಬರೆದಿದ್ದಾರೆ. ಸ್ಟುವರ್ಟ್ ಬ್ರಾಡ್ ಒಂದೇ ಓವರ್‌ನಲ್ಲಿ ಬುಮ್ರಾ 35 ರನ್ ಸಿಡಿಸಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್‌ನ ಒಂದು ಓವರ್‌ನಲ್ಲಿ ಗರಿಷ್ಠ ರನ್ ಸಿಡಿಸಿ ಹೆಗ್ಗಳಿಕಗೆ ಪಾತ್ರರಾಗಿದ್ದಾರೆ.
ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ ಒಂದು ಓವರ್‌ನಲ್ಲಿ 4 ಬೌಂಡರಿ ಹಾಗೂ ಎರಡು ಸಿಕ್ಸರ್ ಸಿಡಿಸಿದ್ದಾರೆ. ಅಂತಿಮ ವಿಕೆಟ್‌ನಲ್ಲಿ ಬುಮ್ರಾ ಅಬ್ಬರದ ಬ್ಯಾಟಿಂಗ್ ಇಂಗ್ಲೆಂಡ್ ತಲೆನೋವು ಹೆಚ್ಚಿಸಿತು. ಒಂದು ಓವರ್‌ನಲ್ಲಿ 35 ರನ್ ಹರಿಬಿಟ್ಟ ಸ್ಟುವರ್ಟ್ ಬ್ರಾಡ್ ಟೆಸ್ಟ್ ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಬಿಟ್ಟುಕೊಟ್ಟ ಬೌಲರ್ ಅನ್ನೋ ಕುಖ್ಯಾತಿಗೆ ಗುರಿಯಾದರು.
IND VS ENG ರವೀಂದ್ರ ಜಡೇಜಾ ಶತಕ ಅಬ್ಬರ, ಮೊದಲ ಇನಿಂಗ್ಸ್‌ನಲ್ಲಿ ಟೀಂ ಇಂಡಿಯಾ ಆಲೌಟ್ @ 416
ಟೆಸ್ಟ್ ಕ್ರಿಕೆಟ್‌ನ ಒಂದು ಓವರ್‌ನಲ್ಲಿ ಗರಿಷ್ಠ ರನ್ ಸಿಡಿಸಿದ ಬ್ಯಾಟ್ಸ್‌ಮನ್
35 ರನ್, ಜಸ್ಪ್ರೀತ್ ಬುಮ್ರಾ, ಸ್ಟುವರ್ಟ್ ಬ್ರಾಡ್ ಓವರ್, 2022
28 ರನ್, ಬ್ರಿಯಾನ್ ಲಾರಾ, ರಾಬಿನ್ ಪೀಟರ್ಸನ್ ಓವರ್, 2003
28 ರನ್, ಜಾರ್ಜ್ ಬೈಲಿ, ಜೇಮ್ಸ್ ಆ್ಯಂಡರ್ಸನ್ ಓವರ್, 2013
28 ರನ್, ಕೇಶವ್ ಮಹಾರಾಜ್, ಜೂ ರೂಟ್ ಓವರ್, 2020
ಅಂತಿಮ ವಿಕೆಟ್‌ನಲ್ಲಿ ಮೊಹಮ್ಮದ್ ಸಿರಾಜ್ ಜೊತೆ ಬ್ಯಾಟಿಂಗ್ ಮಾಡಿದ ನಾಯಕ ಬುಮ್ರಾ 84ನೇ ಓವರ್‌ನಲ್ಲಿ ದಾಖಲೆ ಬರೆದಿದ್ದಾರೆ. ಮೊದಲ ಎಸೆತದವನ್ನು ಬುಮ್ರಾ ಬೌಂಡ್ರಿ ಸಿಡಿಸಿದ್ದಾರೆ. 2ನೇ ಎಸೆತ ಮಾರಕ ಬೌನ್ಸರ್ ಎಸೆದ ಕಾರಣ ಅಂಪೈರ್ ವೈಡ್ ಎಂದು ತೀರ್ಪು ನೀಡಿದರು. ಇದರ ಜೊತೆಗೆ 4 ಬೋನಸ್ ರನ್ ಕೂಡ ಆಗಮಿಸಿತು. ಎರು ಎಸೆತದ ಎತದ ನೋ ಬಾಲ್ ಆಗಿತ್ತು. ಬುಮ್ರಾ ನೇರವಾಗಿ ಸಿಕ್ಸರ್ ಸಿಡಿಸಿದರು. 3ನೇ ಎಸೆತದಲ್ಲಿ ಮತ್ತೆ ಬೌಂಡರಿ ಸಿಡಿಸಿದರು. 4 ಎಸೆತವನ್ನು ಬುಮ್ರಾ ಬೌಂಡರಿ ಸಿಡಿಸಿದರೆ, 5ನೇ ಎಸೆತದಲ್ಲಿ ಸಿಕ್ಸರ್. ಇನ್ನು ಕೊನೆಯ ಎಸೆತದಲ್ಲಿ 1 ರನ್ ಸಿಡಿಸಿದರು. ಈ ಮೂಲಕ ಒಟ್ಟು ಹರಿದು ಬಂತು.
The most expensive over in Test cricket history - Jasprit Bumrah the man! pic.twitter.com/7G5BvcYVOz
— Mufaddal Vohra (@mufaddal_vohra)ಬುಮ್ರಾ ಅಬ್ಬರಕ್ಕೂ ಮೊದಲು ಸ್ಟುವರ್ಟ್ ಬ್ರಾಡ್ ಅತ್ಯುತ್ತಮ ಬೌಲಿಂಗ್ ದಾಳಿ ಮಾಡಿ ವಿಕೆಟ್ ಸಾಧನೆ ಮಾಡಿದ್ದರು. ಒಂದು ಓವರ್ ಮೇಡನ್ ಜೊತೆಗೆ ವಿಕೆಟ್ ಕಬಳಿಸಿದ ಬ್ರಾಡ್ 550 ಟೆಸ್ಟ್ ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದರು. ಮೊಹಮ್ಮದ್ ಶಮಿ ವಿಕೆಟ್ ಕಬಳಿಸಿದ ಬ್ರಾಡ್ 550 ವಿಕೆಟ್ ಸಾಧನೆ ಗುರಿ ಮುಟ್ಟಿದ್ದರು. ಆದರೆ ಜಸ್ಪ್ರೀತ್ ಬುಮ್ರಾ ಲೆಕ್ಕಾಚಾರವನ್ನೇ ಬದಲಿಸಿದರು.
Birmingham Test: ಸಚಿನ್ ತೆಂಡುಲ್ಕರ್ ಹೆಸರಿನಲ್ಲಿದ್ದ ಅಪರೂಪದ ದಾಖಲೆ ಮುರಿದ ರಿಷಭ್ ಪಂತ್..!
ಭಾರತ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ ರಿಷಬ್ ಪಂತ್ ಹಾಗೂ ರವೀಂದ್ರ ಜಡೇಜಾ ಶತಕದ ನೆರವಿನಿಂದ 416 ರನ್ ಸಿಜಿಸಿದೆ.98 ರನ್‌ಗೆ 5 ವಿಕೆಟ್ ಕಳೆದುಕೊಂಡ ಟೀಂ ಇಂಡಿಯಾ ಅಲ್ಪಮೊತ್ತಕ್ಕೆ ಕುಸಿಯುವ ಭೀತಿ ಅನುಭವಿಸಿತ್ತು. ಆದರೆ ರಿಷಬ್ ಪಂತ್ ಹಾಗೂ ರವೀಂದ್ರ ಜಡೇಜಾ ಹೋರಾಟಕ್ಕೆ ಟೀಂ ಇಂಡಿಯಾ ಚಿತ್ರಣ ಬದಲಾಯಿತು. 416 ರನ್ ಸಿಡಿಸಿ ಆಲೌಟ್ ಆಯಿತು.