ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್‌ 4 ವಾರ ಕ್ರಿಕೆಟ್‌ನಿಂದ ಔಟ್..!

By Suvarna NewsFirst Published May 27, 2021, 2:48 PM IST
Highlights

* ಮೊಣಕೈ ಶಸ್ತ್ರಚಿಕಿತ್ಸೆಗೆ ಒಳಗಾದ ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್

* ಈಗಾಗಲೇ ನ್ಯೂಜಿಲೆಂಡ್ ವಿರುದ್ದದ ಟೆಸ್ಟ್ ಸರಣಿಯಿಂದ ಹೊರಬಿದ್ದಿರುವ ಆರ್ಚರ್‌

* ಮುಂದಿನ 4 ವಾರಗಳ ಕಾಲ ಆರ್ಚರ್‌ಗೆ ವಿಶ್ರಾಂತಿ

ಲಂಡನ್‌(ಮೇ.27): ಇಂಗ್ಲೆಂಡ್ ವೇಗದ ಬೌಲರ್‌ ಜೋಫ್ರಾ ಆರ್ಚರ್‌ ಯಶಸ್ವಿಯಾಗಿ ಬಲಗೈ ಮೊಣಕೈ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಮುಂದಿನ 4 ವಾರಗಳ ಕಾಲ ಕ್ರಿಕೆಟ್‌ನಿಂದ ವಿಶ್ರಾಂತಿ ಪಡೆಯಲಿದ್ದಾರೆ ಎಂದು ಇಂಗ್ಲೆಂಡ್ ಹಾಗೂ ವೇಲ್ಸ್‌ ಕ್ರಿಕೆಟ್ ಮಂಡಳಿ(ಇಸಿಬಿ) ತಿಳಿಸಿದೆ.

ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾರಕ ವೇಗಿ ಜೋಫ್ರಾ ಆರ್ಚರ್‌ ಈಗ 4 ವಾರಗಳ ಕಾಲ ಪುನಶ್ಚೇತನ ಶಿಬಿರವನ್ನು ಸೇರಿಕೊಳ್ಳಲಿದ್ದಾರೆ. ಈ ಅವಧಿಯಲ್ಲಿ ಇಸಿಬಿ ಹಾಗೂ ಸಸೆಕ್ಸ್‌ ವೈದ್ಯಕೀಯ ಸಿಬ್ಬಂದಿ ಆರ್ಚರ್‌ಗೆ ಸೂಕ್ತ ಮಾರ್ಗದರ್ಶನ ನೀಡಲಿದ್ದಾರೆ ಎಂದು ಎಂದು ಇಸಿಬಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಜೋಫ್ರಾ ಆರ್ಚರ್‌ ಅವರು ಸರಿಸುಮಾರು 4 ವಾರಗಳ ಕಾಲ ವೈದ್ಯಕೀಯ ಸಿಬ್ಬಂದಿಗಳ ಮಾರ್ಗದರ್ಶನದಲ್ಲಿ ಫಿಟ್ನೆಸ್‌ ಪಡೆಯಲು ಮುಂದಾಗಲಿದ್ದಾರೆ. 4 ವಾರಗಳ ಬಳಿಕ ಆರ್ಚರ್‌ ಯಾವಾಗ ತಂಡ ಕೂಡಿಕೊಳ್ಳಲಿದ್ದಾರೆ ಎನ್ನುವುದರ ಕುರಿತಂತೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಇಸಿಬಿ ತಿಳಿಸಿದ್ದಾರೆ. 

ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್‌ಗೆ ಮೊಣಕೈ ಸರ್ಜರಿ; ಭಾರತ ವಿರುದ್ದದ ಸರಣಿಗೆ ಡೌಟ್..!

26 ವರ್ಷದ ಬಲಗೈ ವೇಗಿ ಜೋಫ್ರಾ ಆರ್ಚರ್ ಈಗಾಗಲೇ ತವರಿನಲ್ಲಿ ನಡೆಯಲಿರುವ ನ್ಯೂಜಿಲೆಂಡ್ ವಿರುದ್ದದ ಎರಡು ಪಂದ್ಯಗಳ ಟೆಸ್ಟ್ ಸರಣಿಯಿಂದ ಹೊರಬಿದ್ದಿದ್ದಾರೆ. ಇದರ ಜತೆಗೆ ಜೂನ್ 23ರಿಂದ ಆರಂಭವಾಗಲಿರುವ ಶ್ರೀಲಂಕಾ ವಿರುದ್ದದ 3 ಪಂದ್ಯಗಳ ಟಿ20 ಸರಣಿಯಿಂದಲೂ ಆರ್ಚರ್‌ ಬಹುತೇಕ ಹೊರಬಿದ್ದಂತೆ ಆಗಿದೆ. ಭಾರತ ವಿರುದ್ದ ಆಗಸ್ಟ್‌ 04ರಿಂದ ಆರಂಭವಾಗಲಿರುವ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆರ್ಚರ್‌ ಸಂಪೂರ್ಣ ಫಿಟ್‌ ಆಗುತ್ತಾರೆಯೇ ಅಥವಾ ಇಲ್ಲವೇ ಎನ್ನುವ ಕುರಿತಂತೆ ಇಸಿಬಿ ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ.
 

click me!