2ನೇ ಟೆಸ್ಟ್: ಟಾಸ್ ಗೆದ್ದ ಪಾಕಿಸ್ತಾನಕ್ಕೆ ಆ್ಯಂಡರ್‌ಸನ್ ಮೊದಲ ಶಾಕ್..!

By Suvarna NewsFirst Published Aug 13, 2020, 4:09 PM IST
Highlights

ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ ತಂಡಕ್ಕೆ ಆರಂಭದಲ್ಲೇ ಆಘಾತ ಎದುರಾಗಿದೆ, ಮೊದಲ ಟೆಸ್ಟ್ ಪಂದ್ಯದಲ್ಲಿ ಶತಕ ಬಾರಿಸಿದ್ದ ಶಾನ್ ಮಸೂದ್ ಪೆವಿಲಿಯನ್ ಸೇರಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಸೌಂಥಾಪ್ಟಮ್(ಆ.13): ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಪ್ರವಾಸಿ ಪಾಕಿಸ್ತಾನ ತಂಡಕ್ಕೆ ಇಂಗ್ಲೆಂಡ್ ಅನುಭವಿ ವೇಗಿ ಜೇಮ್ಸ್ ಆ್ಯಂಡರ್‌ಸನ್ ತಾವೆಸೆದ ಎರಡನೇ ಓವರ್‌ನಲ್ಲೇ ಆಘಾತ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.

ಹೌದು, ಇಂಗ್ಲೆಂಡ್-ಪಾಕಿಸ್ತಾನ ನಡುವಿನ ಎರಡನೇ ಟೆಸ್ಟ್ ಪಂದ್ಯಕ್ಕೆ ಇಲ್ಲಿನ ದ ರೋಸ್ ಬೌಲ್ ಮೈದಾನ ಆತಿಥ್ಯವನ್ನು ವಹಿಸಿದೆ. ಮೂರು ಪಂದ್ಯಗಳ ಸರಣಿಯಲ್ಲಿ ಮೊದಲ ಪಂದ್ಯವನ್ನು ಗೆದ್ದು ಆತ್ಮವಿಶ್ವಾಸದಿಂದ ಬೀಗುತ್ತಿರುವ ಆತಿಥೇಯ ಇಂಗ್ಲೆಂಡ್ ತಂಡಕ್ಕೆ ಮೊದಲ ಯಶಸ್ಸು ದಕ್ಕಿಸಿಕೊಡುವಲ್ಲಿ ಆಂಗ್ಲರ ಪಡೆಯ ಅನುಭವಿ ವೇಗಿ ಆ್ಯಂಡರ್‌ಸನ್ ಯಶಸ್ವಿಯಾಗಿದ್ದಾರೆ. ಮೊದಲ ಟೆಸ್ಟ್ ಒಂದ್ಯದಲ್ಲಿ ಅಮೋಘ ಶತಕ ಬಾರಿಸಿದ್ದ ಶಾನ್ ಮಸೂದ್ ಕೇವಲ 1 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡಿದ್ದಾರೆ. ಇದೀಗ ಪಾಕಿಸ್ತಾನ 5 ಓವರ್ ಅಂತ್ಯಕ್ಕೆ ಒಂದು ವಿಕೆಟ್ ಕಳೆದುಕೊಂಡು 11 ರನ್ ಗಳಿಸಿದೆ. 

'ದಂಡ ಕಟ್ಟು ಮಗನೇ' ಎಂದ ಸ್ಟುವರ್ಟ್ ಬ್ರಾಡ್ ಅಪ್ಪ ಕ್ರಿಸ್ ಬ್ರಾಡ್..!

Just the start England were after 🔥 pic.twitter.com/6iRa2AJkgR

— ICC (@ICC)

ಇಂಗ್ಲೆಂಡ್ ಪರ 2, ಪಾಕ್ ಒಂದು ಬದಲಾವಣೆ: ಇಂಗ್ಲೆಂಡ್ ತಂಡದಲ್ಲಿ ಪ್ರಮುಖವಾಗಿ ಎರಡು ಬದಲಾವಣೆ ಮಾಡಲಾಗಿದ್ದು, ಬೆನ್ ಸ್ಟೋಕ್ಸ್ ಬದಲು ಜ್ಯಾಕ್ ಕ್ರಾವ್ಲಿ ಹಾಗೂ ಜೋಫ್ರಾ ಆರ್ಚರ್ ಬದಲಿಗೆ ಸ್ಯಾಮ್ ಕರನ್‌ಗೆ ತಂಡದಲ್ಲಿ ಅವಕಾಶ ನೀಡಲಾಗಿದೆ. ಇನ್ನು ಪಾಕಿಸ್ತಾನ ಪರ ಏಕೈಕ ಬದಲಾವಣೆ ಮಾಡಲಾಗಿದ್ದು ಶಾದಾಬ್ ಖಾನ್ ಬದಲಿಗೆ ಫವಾದ್ ಆಲಂ ತಂಡ ಕೂಡಿಕೊಂಡಿದ್ದಾರೆ.

click me!