ಟಿ20: ಪಾಕ್‌ ವಿರುದ್ಧ ಇಂಗ್ಲೆಂಡ್‌ಗೆ ಸರಣಿ ಜಯ

By Kannadaprabha NewsFirst Published Jul 22, 2021, 10:38 AM IST
Highlights

* ಪಾಕಿಸ್ತಾನ ಎದುರು ಟಿ20 ಸರಣಿ ಜಯಿಸಿದ ಇಂಗ್ಲೆಂಡ್

* ನಿರ್ಣಾಯಕ ಪಂದ್ಯದಲ್ಲಿ ಇಂಗ್ಲೆಂಡ್‌ಗೆ 3 ವಿಕೆಟ್‌ಗಳ ರೋಚಕ ಜಯ

* 2-1 ಅಂತರದಲ್ಲಿ ಟಿ20 ಸರಣಿ ಇಂಗ್ಲೆಂಡ್ ಪಾಲು

ಮ್ಯಾಂಚೆಸ್ಟರ್(ಜು.22)‌: ಪಾಕಿಸ್ತಾನ ವಿರುದ್ಧ 3ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ 3 ವಿಕೆಟ್‌ ಗೆಲುವು ಸಾಧಿಸಿದ ಇಂಗ್ಲೆಂಡ್‌ ಕ್ರಿಕೆಟ್ ತಂಡವು 3 ಪಂದ್ಯಗಳ ಸರಣಿಯನ್ನು 2-1ರಲ್ಲಿ ತನ್ನದಾಗಿಸಿಕೊಂಡಿತು. 

Chris Jordan hits the winning runs to seal the series for England! 🏆 have won by three wickets with two balls remaining. | https://t.co/VCE8X9KdxU pic.twitter.com/VcQ1TZjQ99

— ICC (@ICC)

ಮೊದಲು ಬ್ಯಾಟ್‌ ಮಾಡಿದ ಪಾಕಿಸ್ತಾನ 20 ಓವರಲ್ಲಿ 6 ವಿಕೆಟ್‌ಗೆ 154 ರನ್‌ ಗಳಿಸಿತು. ಮೊಹಮದ್‌ ರಿಜ್ವಾನ್‌ 76 ರನ್‌ ಗಳಿಸಿದರು. ಜೇಸನ್‌ ರಾಯ್‌(61)ರ ಅರ್ಧಶತಕದ ನೆರವಿನಿಂದ ಇಂಗ್ಲೆಂಡ್‌ 2 ಎಸೆತ ಬಾಕಿ ಇರುವಂತೆ 7 ವಿಕೆಟ್‌ ಕಳೆದುಕೊಂಡು ಗೆಲುವು ಸಾಧಿಸಿತು.

ಸ್ಕೋರ್‌: ಪಾಕಿಸ್ತಾನ 154/6, ಇಂಗ್ಲೆಂಡ್‌ 155/7

ಏಕದಿನ: ವಿಂಡೀಸ್‌ ವಿರುದ್ಧ ಗೆದ್ದ ಆಸೀಸ್‌

ಬ್ರಿಡ್ಜ್‌ಟೌನ್‌: ಮಿಚೆಲ್‌ ಸ್ಟಾರ್ಕ್(5-48) ಹಾಗೂ ಜೋಶ್‌ ಹೇಜಲ್‌ವುಡ್‌(3-11) ಮಾರಕ ದಾಳಿಗೆ ತತ್ತರಿಸಿದ ವೆಸ್ಟ್‌ಇಂಡೀಸ್‌ 123 ರನ್‌ಗಳಿಗೆ ಆಲೌಟ್‌ ಆದ ಕಾರಣ, ಆಸ್ಪ್ರೇಲಿಯಾ ಮೊದಲ ಏಕದಿನ ಪಂದ್ಯದಲ್ಲಿ 133 ರನ್‌ಗಳ ಗೆಲುವು ಸಾಧಿಸಿತು. 

ಅಭ್ಯಾಸ ಪಂದ್ಯ: ಉಮೇಶ್-ಸಿರಾಜ್ ಬೌಲಿಂಗ್‌ ಝಲಕ್‌ ಭಾರತ ಮೇಲುಗೈ

A resounding victory for Alex Carey in his first match as captain 👨‍✈️

Australia win the first ODI by 133 runs 🇦🇺

Scorecard 🧮 https://t.co/gVLuSrLBdZ pic.twitter.com/SmBtGQ2eEB

— ICC (@ICC)

257 ರನ್‌ ಗುರಿ ಬೆನ್ನತ್ತಿದ್ದ ವಿಂಡೀಸ್‌ 8ನೇ ಓವರಲ್ಲಿ 27 ರನ್‌ಗೆ 6 ವಿಕೆಟ್‌ ಕಳೆದುಕೊಂಡಿತ್ತು. ನಾಯಕ ಪೊಲ್ಲಾರ್ಡ್‌(56) ಹೋರಾಟದಿಂದ ತಂಡ 120 ರನ್‌ ದಾಟಿತು. ಮಳೆಯಿಂದಾಗಿ ಪಂದ್ಯವನ್ನು 49 ಓವರ್‌ಗೆ ಇಳಿಸಲಾಗಿತ್ತು. ಆಸ್ಪ್ರೇಲಿಯಾ 9 ವಿಕೆಟ್‌ಗೆ 252 ರನ್‌ ಗಳಿಸಿತು. ಡಕ್ವರ್ತ್ ಲೂಯಿಸ್‌ ನಿಯಮದನ್ವಯ ವಿಂಡೀಸ್‌ಗೆ 49 ಓವರಲ್ಲಿ 257 ರನ್‌ ಗುರಿ ನೀಡಲಾಗಿತ್ತು.

click me!