Ashes 2021 : ವರ್ಷದಲ್ಲಿ ಇಂಗ್ಲೆಂಡ್ ಪರವಾಗಿ ಗರಿಷ್ಠ ರನ್ ಬಾರಿಸಿದ ಬ್ಯಾಟ್ಸ್ ಮನ್ ಎನಿಸಿದ ರೂಟ್!

By Suvarna NewsFirst Published Dec 10, 2021, 5:36 PM IST
Highlights

ಬ್ರಿಸ್ಬೇನ್ ಟೆಸ್ಟ್ ನಲ್ಲಿ ಆಸೀಸ್ ಗೆ ತಿರುಗೇಟು ನೀಡಿದ ಇಂಗ್ಲೆಂಡ್
ಇಂಗ್ಲೆಂಡ್ ಪರವಾಗಿ ಕ್ಯಾಲೆಂಡರ್ ವರ್ಷದಲ್ಲಿ ಗರಿಷ್ಠ ರನ್ ಬಾರಿಸಿದ ದಾಖಲೆ ಮಾಡಿದ ರೂಟ್
3ನೇ ವಿಕೆಟ್ ಗೆ ರೂಟ್-ಮಲಾನ್ 159 ರನ್ ಜೊತೆಯಾಟ

ಬ್ರಿಸ್ಬೇನ್ (ಡಿ.10): ಕ್ಯಾಲೆಂಡರ್ ವರ್ಷವೊಂದರಲ್ಲಿ ಇಂಗ್ಲೆಂಡ್ (England)ಪರವಾಗಿ ಟೆಸ್ಟ್ ಕ್ರಿಕೆಟ್ ನಲ್ಲಿ ಗರಿಷ್ಠ ರನ್ ಬಾರಿಸಿದ ದಾಖಲೆ ಮಾಡಿದ ನಾಯಕ ಜೋ ರೂಟ್ (Joe Root) ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಡೇವಿಡ್ ಮಲಾನ್ (Dawid Malan) ಮುರಿಯದ ಮೂರನೇ ವಿಕೆಟ್ ಗೆ 159 ರನ್ ಗಳ ಜೊತೆಯಾಟವಾಡಿದ್ದಾರೆ. ಆ ಮೂಲಕ ಆ್ಯಷಸ್‌(Ashes) ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್ ತಂಡ ಆತಿಥೇಯ ಆಸ್ಟ್ರೇಲಿಯಾಕ್ಕೆ (Australia) ತಿರುಗೇಟು ನೀಡುವಲ್ಲಿ ಯಶಸ್ವಿಯಾಗಿದೆ. ಬ್ರಿಸ್ಬೇನ್ ನ ಗಾಬಾ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ(Brisbane Test) 3ನೇ ದಿನವಾದ ಶುಕ್ರವಾರ, ಮೊದಲ ಇನ್ನಿಂಗ್ಸ್ ನಲ್ಲಿ 278 ರನ್ ಗಳ ದೊಡ್ಡ ಹಿನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡ ಜೋ ರೂಟ್ (86) ಹಾಗೂ ಡೇವಿಡ್ ಮಲಾನ್ (80) ಆಕರ್ಷಕ ಇನ್ನಿಂಗ್ಸ್ ನಿಂದ ದಿನದಾಟದ ಅಂತ್ಯಕ್ಕೆ 70 ಓವರ್ ಗಳಲ್ಲಿ2 ವಿಕೆಟ್ ಗೆ 220 ರನ್ ಪೇರಿಸಿದೆ. ಇದರ ನಡುವೆಯೂ ಇಂಗ್ಲೆಂಡ್ ತಂಡ ಇನ್ನೂ 58 ರನ್ ಗಳಿಂದ ಹಿನ್ನಡೆಯಲ್ಲಿದೆ.

ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಹಾಲಿ ವರ್ಷದಲ್ಲಿ1541 ರನ್ ಬಾರಿಸಿದ್ದಾರೆ. ಆ ಮೂಲಕ ಒಂದೇ ವರ್ಷದಲ್ಲಿ ಗರಿಷ್ಠ ಟೆಸ್ಟ್ ರನ್ ಬಾರಿಸಿ ಮಾಜಿ ನಾಯಕ ಮೈಕೆಲ್ ವಾನ್ (Michael Vaughan) ಅವರ ದಾಖಲೆಯನ್ನು ರೂಟ್ ಮುರಿದರು. ಮೈಕೆಲ್ ವಾನ್ 2002ರಲ್ಲಿ 1481 ರನ್ ಬಾರಿಸಿದ್ದು ಈವರರೆಗೂ ದಾಖಲೆಯಾಗಿತ್ತು.

ಒಂದೇ ಕ್ಯಾಲೆಂಡರ್ ವರ್ಷದಲ್ಲಿ ಗರಿಷ್ಠ ಟೆಸ್ಟ್ ರನ್ ಬಾರಿಸಿದ ದಾಖಲೆ ಪಾಕಿಸ್ತಾನದ (Pakistan)ಬ್ಯಾಟ್ಸ್ ಮನ್ ಮೊಹಮದ್ ಯೂಸುಫ್ (Mohammad Yousuf ) ಹೆಸರಲ್ಲಿದೆ. 2006ರಲ್ಲಿ ಮೊಹಮದ್ ಯೂಸೂಫ್ ಆಡಿದ 11 ಪಂದ್ಯಗಳಿಂದ 1788 ರರನ್ ಬಾರಿಸಿದ್ದು ವಿಶ್ವದಾಖಲೆ.
 

Joe Root and Dawid Malan led England’s fightback in the final session of day three with an unbeaten 159-run partnership 💪 | | https://t.co/pR2hqnigau pic.twitter.com/KS8iaPfffS

— ICC (@ICC)


 ಮೊದಲ ಇನ್ನಿಂಗ್ಸ್ ನಲ್ಲಿ ಇಂಗ್ಲೆಂಡ್ 147 ರನ್ ಗೆ ಆಲೌಟ್ ಆಗಿದ್ದರೆ, ಪ್ರತಿಯಾಗಿ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ ನಲ್ಲಿ 425 ರನ್ ಗೆ ಆಲೌಟ್ ಆಯಿತು. 7 ವಿಕೆಟ್ ಗೆ 343 ರನ್ ಗಳಿಂದ ದಿನದಾಟ ಮುಂದುವರಿಸಿದ ಆಸ್ಟ್ರೇಲಿಯಾ ಕೊನೆ ಮೂರು ವಿಕೆಟ್ ಗಳಿಂದ 82 ರನ್ ಗಳನ್ನು ಕೂಡಿಸಿತು. ವೇಗದ ಶತಕದ ಮೂಲಕ ಗಮನಸೆಳೆದ (Travis Head) ಟ್ರಾವಿಸ್ ಹೆಡ್ (152 ರನ್, 148 ಎಸೆತ, 14 ಬೌಂಡರಿ, 4 ಸಿಕ್ಸರ್) ಮಾರ್ಕ್ ವುಡ್ ಗೆ ವಿಕೆಟ್ ಒಪ್ಪಿಸಿದರು.

Ben Stokes No-Ball Drama: ಸಾಕ್ಷಿ ಸಮೇತ ವಿವರ ಬಿಚ್ಚಿಟ್ಟ ಚಾನೆಲ್ 7!
"ಪೇರ್" ನಿಂದ ಬಚಾವ್ ಆದ ಬರ್ನ್ಸ್!
ದಿನದ ಮೊದಲ ಅವಧಿಯ ಆಟದಲ್ಲಿ ಇಂಗ್ಲೆಂಡ್ ತಂಡದ ಆರಂಭಿಕರು ಎಚ್ಚರಿಕೆಯ ಬ್ಯಾಟಿಂಗ್ ಮಾಡಿ 23 ರನ್ ಬಾರಿಸಿದ್ದರು. ಆದರೆ, ಮಧ್ಯಾಹ್ನದ ಅವಧಿ ಆರಂಭಗೊಂಡ ಕೆಲ ಹೊತ್ತಿನಲ್ಲಿಯೇ ರೋರಿ ಬರ್ನ್ಸ್ ಹಾಗೂ ಹಸೀಬ್ ಅಹ್ಮದ್ ಕ್ರಮವಾಗಿ ಪ್ಯಾಟ್ ಕಮ್ಮಿನ್ಸ್ (Pat Cummins) ಹಾಗೂ ಮಿಚೆಲ್ ಸ್ಟಾರ್ಕ್ ಗೆ (Mitchell Starc) ವಿಕೆಟ್ ಒಪ್ಪಿಸಿದರು. ರೋರಿ ಬರ್ನ್ಸ್ (Rory Burns) "ಪೇರ್" ಕುಖ್ಯಾತಿಯಿಂದ ಸ್ವಲ್ಪದರಲ್ಲೇ ಬಚಾವ್ ಆದರು. ಸ್ಟಾರ್ಕ್ ಎಸೆದ ಮೊದಲ ಓವರ್ ನಲ್ಲಿಯೇ ಬರ್ನ್ಸ್ ಗೆ ಎಲ್ ಬಿ ಔಟ್ ತೀರ್ಪು ನೀಡಲಾಗಿತ್ತು. ಆದರೆ, ಅದನ್ನು ಡಿಆರ್ ಎಸ್ ನಲ್ಲಿ ಪರಿಶೀಲನೆ ಮಾಡಿ ಪಾರಾಗಿದ್ದರು.

Ashes 2021: ಟೆಸ್ಟ್ ಪಂದ್ಯದಲ್ಲಿ ಏಕದಿನ ಶೈಲಿಯ ಬ್ಯಾಟಿಂಗ್, ಕೇವಲ 85 ಎಸೆತಗಳಲ್ಲಿ ಹೆಡ್ ಹಂಡ್ರೆಡ್!
27 ಎಸೆತಗಳಲ್ಲಿ 13 ರನ್ ಬಾರಿಸಿದ್ದ ಬರ್ನ್ಸ್ ಭೋಜನ ವಿರಾಮದ ಬಳಿಕ ನಡೆದ ಮೊದಲ ಓವರ್ ನಲ್ಲಿಯೇ ವಿಕೆಟ್ ಒಪ್ಪಿಸಿದರು. 58 ಎಸೆತಗಳಲ್ಲಿ 27 ರನ್ ಬಾರಿಸಿದ್ದ ಹಸೀಬ್ ಅಹ್ಮದ್ (Haseeb Hameed), ಸ್ಟಾರ್ಕ್ ಎಸೆತದಲ್ಲಿ ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿಗೆ ವಿಕೆಟ್ ನೀಡಿ ಹೊರನಡೆದರು. 61 ರನ್ ಗೆ 2 ವಿಕೆಟ್ ಕಳೆದುಕೊಂಡಿದ್ದ ಹಂತದಲ್ಲಿ ಜೊತೆಯಾದ ರೂಟ್ (86ರನ್, 158 ಎಸೆತ, 10 ಬೌಂಡರಿ) ಹಾಗೂ ಡೇವಿಡ್ ಮಲಾನ್ (80* ರನ್, 177 ಎಸೆತ, 10 ಬೌಂಡರಿ) ಆಸೀಸ್ ಬೌಲರ್ ಗಳನ್ನು ಕಾಡಿದರು. ಜೋ ರೂಟ್ ಇನ್ನೊಂದು ರನ್ ಬಾರಿಸಿದರೆ, ಆಸೀಸ್ ನೆಲದಲ್ಲಿ ನಡೆದ ಆ್ಯಷಸ್‌ ಟೆಸ್ಟ್ ನಲ್ಲಿ ತಮ್ಮ ಗರಿಷ್ಠ ಮೊತ್ತವನ್ನು ದಾಖಲಿಸಿದ್ದಾರೆ. 

click me!