Ravi Shastri : ಬಿಸಿಸಿಐ ಒಳಗಿನವರೇ ನನಗೆ ಕೆಲಸ ಸಿಗದಂತೆ ನೋಡಿಕೊಂಡಿದ್ದರು!

By Suvarna News  |  First Published Dec 10, 2021, 4:24 PM IST

ಟೀಮ್ ಇಂಡಿಯಾ ಮಾಜಿ ಕೋಚ್ ರವಿಶಾಸ್ತ್ರಿ ಹೇಳಿಕೆ
2017ರಲ್ಲಿ ತಾವು ಕೋಚ್ ಆದ ದಿನಗಳನ್ನು ನೆನೆದ ಮಾಜಿ ಆಲ್ರೌಂಡರ್
ನಾನು ಕೋಚ್ ಆಗುವುದನ್ನು ತಡೆಯಲು ಬಹಳ ಪ್ರಯತ್ನಪಟ್ಟಿದ್ದರು
 


ಬೆಂಗಳೂರು (ಡಿ.10): ಟೀಮ್ ಇಂಡಿಯಾ (Team India) ಮಾಜಿ ಕೋಚ್ ರವಿಶಾಸ್ತ್ರಿ(Ravi Shastri ) 2017ರಲ್ಲಿ ತಾವು ಕೋಚ್ ಆದ ದಿನಗಳನ್ನು ನೆನೆಸಿಕೊಂಡಿದ್ದು, ನನ್ನನ್ನು ಕೋಚ್ ಆಗಿ ಬಿಸಿಸಿಐ (BCCI) ಆಯ್ಕೆ ಮಾಡಿದ್ದು, ಅಂದು ಕ್ರಿಕೆಟ್ ಮಂಡಳಿಯ ಒಳಗಿನ ಕೆಲ ವ್ಯಕ್ತಿಗಳಿಗೆ ಬಹಳ ಇರಿಸುಮುರಿಸು ಉಂಟುಮಾಡಿತ್ತು. ಟೀಮ್ ಡೈರೆಕ್ಟರ್ (Team Director) ಆಗಿದ್ದ ನಾನು ಕೋಚ್ ಆಗಿ ಮುಂದುವರಿಯಬೇಕಾಗಿತ್ತು. ಆದರೆ ಬಿಸಿಸಿಐನ ಒಳಗಿನವರೇ ನನಗೆ ಕೆಲಸ ಸಿಗದಂತೆ ನೋಡಿಕೊಂಡಿದ್ದರು ಎಂದು ಆರೋಪ ಮಾಡಿದ್ದಾರೆ. 2017ರಲ್ಲಿ ಭಾರತ ತಂಡ ಇಂಗ್ಲೆಂಡ್ ನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ (Champions Trophy) ಫೈನಲ್ ನಲ್ಲಿ ಪಾಕಿಸ್ತಾನ (Pakistan) ವಿರುದ್ಧ ಸೋಲು ಕಂಡ ಬಳಿಕ ಅಂದಿನ ಕೋಚ್ ಆಗಿದ್ದ ಅನಿಲ್ ಕುಂಬ್ಳೆ (Anil Kumble) ತಮ್ಮ ಸ್ಥಾನವನ್ನು ತೊರೆದಿದ್ದರು. ಈ ಸಮಯದಲ್ಲಿ ಬಿಸಿಸಿಐನ ಬಹಳ ಮಂದಿಗೆ ತಾವು ಕೋಚ್ ಆಗುವುದು ಇಷ್ಟವಿರಲಿಲ್ಲ ಎಂದು ರವಿಶಾಸ್ತ್ರಿ ಹೇಳಿದ್ದಾರೆ.

2014ರ ಆಗಸ್ಟ್ ತಿಂಗಳಿನಲ್ಲಿ ರವಿಶಾಸ್ತ್ರಿ ಟೀಮ್ ಇಂಡಿಯಾ ಜೊತೆಗಿನ ತಮ್ಮ ಅಭಿಯಾನ ಆರಂಭಿಸಿದ್ದರು. ಅಂದಿನ ಇಂಗ್ಲೆಂಡ್ (England) ಪ್ರವಾಸದ ವೇಳೆ ಟೀಮ್ ಇಂಡಿಯಾ ಡೈರೆಕ್ಟರ್ ಆಗಿ ನೇಮಕವಾಗಿದ್ದ ರವಿಶಾಸ್ತ್ರಿ ಮೊದಲ ಪ್ರವಾಸದಲ್ಲಿಯೇ ಕಳಪೆ ನಿರ್ವಹಣೆಯಿಂದಾಗಿ ಟೀಕೆಗೆ ಗುರಿಯಾಗಿದ್ದರು. ಅದಾದ ಬಳಿಕ 2015ರ ಏಕದಿನ ವಿಶ್ವಕಪ್ (ODI World Cup) ಹಾಗೂ 2016ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ (T20 World Cup) ಸೆಮಿಫೈನಲ್ ಸಾಧನೆ ಮಾಡುವ ಮೂಲಕ ಗಮನಸೆಳೆದಿದ್ದರು.

ಇವರ ಅವಧಿಯಲ್ಲೇ ಟೀಮ್ ಇಂಡಿಯಾ ಎಂಟು ತಿಂಗಳ ಕಾಲ ಐಸಿಸಿ (ICC) ಟೆಸ್ಟ್ ಶ್ರೇಯಾಂಕದಲ್ಲಿ ನಂ.1 ಸ್ಥಾನದಲ್ಲಿತ್ತು. ಇಷ್ಟೆಲ್ಲಾ ಸಾಧನೆ ಬೆನ್ನಿಗಿದ್ದರೂ, 2016ರಲ್ಲಿ ಅನಿಲ್ ಕುಂಬ್ಳೆ ಕೋಚ್ ಆಗಿ ಘೋಷಣೆ ಆದ ಬೆನ್ನಲ್ಲಿಯೇ ತಂಡವನ್ನು ತೊರೆದಿದ್ದರು. ಈ ವೇಳೆ ಉತ್ತಮ ನಿರ್ವಹಣೆ ತೋರಿದ್ದರೂ, ಟೀಮ್ ಡೈರೆಕ್ಟರ್ ಸ್ಥಾನದಿಂದ ತಮ್ಮನ್ನು ಕೆಳಗಿಳಿಸಲು ಬಿಸಿಸಿಐ ಸೂಕ್ತ ಕಾರಣ ನೀಡಿರಲಿಲ್ಲ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

Inzamam ul Haq Claims ರವಿಶಾಸ್ತ್ರಿ-ವಿರಾಟ್ ಕೊಹ್ಲಿ ಜತೆ ಬಿಸಿಸಿಐ ಸಂಬಂಧ ಸರಿಯಿರಲಿಲ್ಲವೆಂದ ಪಾಕ್ ಮಾಜಿ ನಾಯಕ..!
ಟಿವಿಯಲ್ಲಿ ನನ್ನ ಜೀವನವನ್ನು ತೊರೆಯುವಂತೆ ಹೇಳಿದ ಎರಡು ವರ್ಷಗಳ ಒಳಗಾಗಿ ನಾನು ಮತ್ತೆ ಎಲ್ಲವನ್ನೂ ಬಿಟ್ಟು ತಂಡವನ್ನು ಸೇರಿಕೊಳ್ಳಬೇಕಾಗಿತ್ತು. ಯಾವುದೇ ಕಾರಣವಿಲ್ಲದೆ ನಾನು ಹೊರಬಿದ್ದಿದ್ದೆ. ನಾನು ತಂಡದಲ್ಲಿ ಬಿತ್ತಿದ್ದ ಬೀಜಗಳು ಆಗ ಹಣ್ಣು ಕೊಡಲು ಆರಂಭಿಸಿದ್ದವು. ಆದರೆ, ಎಲ್ಲಿಂದಲೂ ಬಂದ ಸುದ್ದಿಯೊಂದಿಗೆ ತಂಡದಲ್ಲಿ ನನ್ನ ಸ್ಥಾನವನ್ನು ತೊರೆಯಬೇಕಾಯಿತು. ಯಾರೂ ಕೂಡ ಏನನ್ನು ಹೇಳಲಿಲ್ಲ. ಈ ಎಲ್ಲಕ್ಕಿಂತ ಮುಖ್ಯವಾಗಿ ಅಂದು ನನ್ನನ್ನು ನಡೆಸಿಕೊಂಡ ರೀತಿಯಿಂದ ನನಗೆ ಬಹಳ ಬೇಸರವಾಗಿತ್ತು! ಎಂದು ಹೇಳಿದ್ದಾರೆ. ಅಲ್ಲಿಯವರೆಗೂ ನಾನು ಸಲ್ಲಿಸಿದ್ದ ಸೇವೆಗೆ, ಬಿಸಿಸಿಐನಿಂದ ಕನಿಷ್ಠ ಒಂದು ಶಬ್ದವನ್ನು ನಾನು ಕೇಳಲು ಬಯಸಿದ್ದೆ. "ನೋಡಿ, ನೀವು ಈಗ ಈ ಹುದ್ದೆಗೆ ಅಗತ್ಯವಿಲ್ಲ. ನೀವು ಈ ಹುದ್ದೆಯಲ್ಲಿರುವುದು ನಮಗೆ ಇಷ್ಟವಿಲ್ಲ. ಬೇರೆ ಅವರನ್ನು ಈ ಸ್ಥಾನಕ್ಕೆ ತರುವ ಯೋಚನೆ ಇದೆ" ಎನ್ನುವುದನ್ನಾದರೂ ಕೇಳಲು ಸಿದ್ಧವಿದ್ದೆ. ಆದರೆ, ಅದೃಷ್ಟ ನನ್ನೊಂದಿಗಿತ್ತು. ನಾನು ಪರಿಣಿತನಾಗಿದ್ದ ಟಿವಿಗೆ ಮರಳಿದೆ" ಎಂದಿದ್ದಾರೆ.

Team India ಮುಖ್ಯ ಕೋಚ್ ರವಿಶಾಸ್ತ್ರಿಗೆ ವಿರಾಟ್ ಕೊಹ್ಲಿ ಭಾವನಾತ್ಮಕ ಅಪ್ಪುಗೆಯ ವಿದಾಯ..!
9 ತಿಂಗಳ ಬಳಿಕ ಮತ್ತೆ ವಾಪಸ್
2016ರಲ್ಲಿ ಮುಖ್ಯ ಕೋಚ್ ಸ್ಥಾನಕ್ಕೆ ಅರ್ಜಿ ಸಲ್ಲಿಸಿದ್ದ ರವಿಶಾಸ್ತ್ರಿ, ಅನಿಲ್ ಕುಂಬ್ಳೆ ಎದುರು ಸೋತಿದ್ದರು. ಚಾಂಪಿಯನ್ಸ್ ಟ್ರೋಫಿ ಸೋಲಿನ ಬಳಿಕ ಅನಿಲ್ ಕುಂಬ್ಳೆ ತಂಡದಿಂದ ಹೊರನಡೆದರೆ, ರವಿಶಾಸ್ತ್ರಿ ಕೋಚ್ ಆಗಿ ತಂಡಕ್ಕೆ ವಾಪಸಾಗಿದ್ದರು. "ಆ ಒಂಭತ್ತು ತಿಂಗಳ ಅವಧಿಯಲ್ಲಿ, ಟೀಮ್ ಇಂಡಿಯಾದಲ್ಲಿ ಸಮಸ್ಯೆಗಳಿದೆ ಎನ್ನುವ ಒಂದು ಸಣ್ಣ ಕುರುಹು ಕೂಡ ಇರಲಿಲ್ಲ. ತಂಡದಲ್ಲಿ ಒಂದು ಸಮಸ್ಯೆ ಆಗಿದೆ ಎಂದು ನನಗೆ ತಿಳಿಸಲಾಯಿತು. ಆದರೆ 9 ತಿಂಗಳ ಅವಧಿಯಲ್ಲಿ ಸಮಸ್ಯೆ ಆಗಲು ಹೇಗೆ ಸಾಧ್ಯ ಎಂದು ನಾನು ಕೇಳಿದ್ದೆ. ನಾನು ತಂಡವನ್ನು ಬಿಟ್ಟಾಗ ಸ್ಥಿತಿ ಉತ್ತಮವಾಗಿತ್ತು. ಆದರೆ, ಆ ಅವಧಿಯಲ್ಲಿ ಅಷ್ಟು ಸಮಸ್ಯೆ ಆಗಿದ್ದಾದರೂ ಹೇಗೆ ಎನ್ನುವ ಆಲೋಚನೆ ಶುರುವಾಯಿತು' ಎಂದು ಹೇಳಿದ್ದಾರೆ.

ದೊಡ್ಡ ವಿವಾದದ ಬಳಿಕ ನನ್ನ 2ನೇ ಅವಧಿಯನ್ನು ತಂಡದೊಂದಿಗೆ ಆರಂಭಿಸಿದೆ. ನನ್ನನ್ನು ಮತ್ತೆ ತಂಡದಲ್ಲಿ ಕಾಣಬಾರದು ಎನ್ನುವ ಮುಖಗಳೆಲ್ಲ ಅವಮಾನ ಎದುರಿಸಿದ್ದವು. ನನ್ನ ಬದಲಿಗೆ ಈ ವ್ಯಕ್ತಿಗಳು ಬೇರೊಬ್ಬರನ್ನು ಆರಿಸಿದ್ದರು. ಆದರೆ 9 ತಿಂಗಳ ಬಳಿಕ ಯಾರನ್ನು ತಂಡದಿಂದ ಹೊರಹಾಕಿದ್ದರೂ ಅವರ ಬಳಿಗೆ ಈ ವ್ಯಕ್ತಿಗಳು ಬಂದಿದ್ದರು ಎಂದು ವಿವರಿಸಿದ್ದಾರೆ.

Latest Videos

click me!