Latest Videos

ಮಗನ ಜೊತೆ ಕಾಂಟ್ಯಾಕ್ಟ್ ನಲ್ಲೇ ಇಲ್ಲ: ಫಾದರ್ಸ್ ಡೇ ದಿನ Shikhar Dhawan ಸಂಕಟ..!

By Naveen KodaseFirst Published Jun 17, 2024, 5:56 PM IST
Highlights

ಶಿಖರ್ ಧವನ್ ಹಾಗೂ ಪತ್ನಿ ಆಯೆಷಾ ಮುಖರ್ಜಿ ನಡುವೆ ದಾಂಪತ್ಯದಲ್ಲಿ ಬಿರುಕು ಬಿಟ್ಟಿದ್ದರಿಂದ ಇಬ್ಬರು ಬೇರೆ ಬೇರೆ ವಾಸವಾಗಿದ್ದರು. ಕಳೆದ ಅಕ್ಟೋಬರ್‌ನಲ್ಲಿ ಡೆಲ್ಲಿ ಕೋರ್ಟ್ ಈ ಇಬ್ಬರಿಗೂ ಡಿವೋರ್ಸ್‌ಗೆ ಅನುಮತಿ ನೀಡಿತ್ತು. ಧವನ್ ಭಾರತದಲ್ಲಿ ವಾಸವಾಗಿದ್ದರೇ, ಆಯೆಷಾ ಮುಖರ್ಜಿ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದರೆ.

ನವದೆಹಲಿ: ಟೀಂ ಇಂಡಿಯಾ ಅನುಭವಿ ಕ್ರಿಕೆಟಿಗ ಶಿಖರ್ ಧವನ್, ಫಾದರ್ಸ್‌ ಡೇ ಹಿನ್ನಲೆಯಲ್ಲಿ ತಮ್ಮ ಪುತ್ರನನ್ನು ನೆನೆದು ಭಾವಾನತ್ಮಕ ಪೋಸ್ಟ್ ಹಂಚಿಕೊಂಡಿದ್ದು, ಈ ಪೋಸ್ಟ್‌ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಜೂನ್ 16ರಂದು ಜಗತ್ತಿನಾದ್ಯಂತ ಫಾದರ್ಸ್ ಡೇ ಆಚರಿಸಲಾಯಿತು. ಈ ಸಂದರ್ಭದಲ್ಲಿ ತಮಗೆ ತಮ್ಮ ಮಗನ ಜತೆ ಸಂಪರ್ಕವೇ ಇಲ್ಲ ಎಂದು ಮನದ ನೋವನ್ನು ತೋಡಿಕೊಂಡಿದ್ದಾರೆ.

ತಮ್ಮ ತಂದೆ ಹಾಗೂ ಮಗನ ಜತೆಗಿರುವ ಹಳೆಯ ಪೋಟೋವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಧವನ್, "ನನ್ನ ತಂದೆಗೆ ಫಾದರ್ಸ್ ಡೇ ಶುಭಾಶಯಗಳು. ನನಗೆಲ್ಲವನ್ನೂ ನೀಡಿದ್ದಕ್ಕೆ ನಿಮಗೆ ಧನ್ಯವಾದಗಳು. ಇದೇ ವೇಳೆ ನನಗೆ ನನ್ನ ಜತೆ ಮಗನಿಲ್ಲ ಎನ್ನುವುದನ್ನು ನೆನಪಿಸಿಕೊಂಡರೇ, ಒಂದು ರೀತಿ ಎಮೋಷನಲ್ ಎನಿಸುತ್ತಿದೆ. ನನಗೆ ನನ್ನ ಮಗನ ಸಂಪರ್ಕವೇ ಇಲ್ಲ. ಆತನಿಗೂ ಫಾದರ್ಸ್ ಡೇ ಶುಭಾಶಯಗಳು. ತಂದೆಯಿಂದ ಮಕ್ಕಳು ದೂರವಿರುವ ಪ್ರತಿಯೊಬ್ಬರು ಇದನ್ನು ಅನುಭವಿಸುತ್ತಾರೆ. ಅವರೆಲ್ಲರಿಗೂ ತುಂಬು ಪ್ರೀತಿ ಹಾಗೂ ಫಾಸಿವಿಟಿಯನ್ನು ಕಳಿಸುತ್ತಿದ್ದೇನೆ" ಎಂದು ಗಬ್ಬರ್ ಸಿಂಗ್ ಖ್ಯಾತಿಯ ಶಿಖರ್ ಧವನ್ ಬರೆದುಕೊಂಡಿದ್ದಾರೆ.

T20 World Cup 2024: ಟೀಂ ಇಂಡಿಯಾ ಆಟಗಾರರ ಜತೆ ಕಾಣಿಸಿಕೊಂಡ 'ನಿಗೂಢ ವ್ಯಕ್ತಿ'..! ವಿಡಿಯೋ ವೈರಲ್

ಇನ್ನು ಶಿಖರ್ ಧವನ್ ಹಾಗೂ ಪತ್ನಿ ಆಯೆಷಾ ಮುಖರ್ಜಿ ನಡುವೆ ದಾಂಪತ್ಯದಲ್ಲಿ ಬಿರುಕು ಬಿಟ್ಟಿದ್ದರಿಂದ ಇಬ್ಬರು ಬೇರೆ ಬೇರೆ ವಾಸವಾಗಿದ್ದರು. ಕಳೆದ ಅಕ್ಟೋಬರ್‌ನಲ್ಲಿ ಡೆಲ್ಲಿ ಕೋರ್ಟ್ ಈ ಇಬ್ಬರಿಗೂ ಡಿವೋರ್ಸ್‌ಗೆ ಅನುಮತಿ ನೀಡಿತ್ತು. ಧವನ್ ಭಾರತದಲ್ಲಿ ವಾಸವಾಗಿದ್ದರೇ, ಆಯೆಷಾ ಮುಖರ್ಜಿ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದರೆ. ಹೀಗಿದ್ದೂ ಕೋರ್ಟ್ ಆಗಾಗ ತಮ್ಮ ಪುತ್ರ ಜ್ವೆರೋವರ್ ಅವರನ್ನು ಭೇಟಿ ನೀಡಲು ಅವಕಾಶ ಕಲ್ಪಿಸಬೇಕು ಎಂದು ಆಯೇಷಾಗೆ ಕೋರ್ಟ್ ಸೂಚಿಸಿತ್ತು. 

ಕೊನೆಗೂ ಗಂಭೀರ್ ಆ 'ಡಿಮ್ಯಾಂಡ್' ಒಪ್ಪಿಕೊಂಡ ಬಿಸಿಸಿಐ..! ಟೀಂ ಇಂಡಿಯಾ ಹೆಡ್‌ ಕೋಚ್ ಘೋಷಣೆಗೆ ಕ್ಷಣಗಣನೆ

ಒಮ್ಮೆ ಈ ವಿಚಾರದ ಬಗ್ಗೆ ಮಾತನಾಡಿದ್ದ ಶಿಖರ್ ಧವನ್, "ನಾನು ನನ್ನ ಮಗನನ್ನು ಭೇಟಿಯಾಗಲು ಆಸ್ಟ್ರೇಲಿಯಾಗೆ ತೆರಳಿದ್ದೆ. ಆಗ ನನ್ನ ಮಗನನ್ನು ಕೇವಲ ಎರಡು ಬಾರಿ ಮಾತ್ರ ಭೇಟಿ ಮಾಡಲು ಸಾಧ್ಯವಾಗಿತ್ತು. ಅದು ಕೇವಲ 2ರಿಂದ ಮೂರು ಗಂಟೆಗಳ ಕಾಲವಷ್ಟೇ. ನನ್ನ ಮಗ ಯಾವಾಗಲೂ ನನ್ನ ಜತೆಯೇ ಇರಲಿ ಎಂದು ನಾನು ಬಯಸುತ್ತೇನೆ. ನಾನು ಆತನನ್ನು ಅಪ್ಪಿಕೊಳ್ಳಬೇಕು ಎಂದು ಅನಿಸುತ್ತಿದೆ" ಎಂದು ಶಿಖರ್ ಧವನ್ ಹೇಳಿದ್ದರು.

ಶಿಖರ್ ಧವನ್ ಹಾಗೂ ಆಯೆಷಾ ಮುಖರ್ಜಿ ಇಬ್ಬರೂ 2012ರಲ್ಲಿ ಮದುವೆಯಾಗಿದ್ದರು. ಭಾರತೀಯ ಮೂಲದ ಆಸ್ಟ್ರೇಲಿಯಾ ನಿವಾಸಿಯಾಗಿರುವ ಆಯೆಷಾ ಹಾಗೂ ಜ್ವೊರೋವರ್ ಸದ್ಯ ಆಸ್ಟ್ರೇಲಿಯಾ ಪೌರತ್ವವನ್ನು ಹೊಂದಿದ್ದಾರೆ. ಆಯೆಷಾ, ಶಿಖರ್ ಧವನ್ ಧವನ್ ಅವರನ್ನು ಮದುವೆಯಾಗುವ ಮುನ್ನ ಬೇರೆಯೊಬ್ಬನನ್ನು ಮದುವೆಯಾಗಿದ್ದರು. ಆಯೆಷಾ, ಶಿಖರ್ ಮದುವೆಯಾಗುವ ಮುನ್ನ ಆಕೆಗೆ ಇಬ್ಬರು ಹೆಣ್ಣು ಮಕ್ಕಳಿದ್ದರು.

click me!