ದುಲೀಪ್‌ ಟ್ರೋಫಿ: ರಿಯಾನ್‌ ಪರಾಗ್‌, ರಾವತ್‌ ಅರ್ಧಶತಕ, ಭಾರತ ‘ಎ’ 333 ರನ್‌ ಲೀಡ್‌

By Naveen Kodase  |  First Published Sep 22, 2024, 9:33 AM IST

ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಇಂಡಿಯಾ 'ಸಿ' ವಿರುದ್ಧ ಇಂಡಿಯಾ 'ಎ' ತಂಡವು ಭರ್ಜರಿ ಪ್ರದರ್ಶನ ತೋರಿದ್ದು ಒಟ್ಟಾರೆ 333 ರನ್‌ಗಳ ಮುನ್ನಡೆ ಪಡೆದಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ


ಅನಂತಪುರ: ಈ ಬಾರಿ ದುಲೀಪ್‌ ಟ್ರೋಫಿ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಮಯಾಂಕ್‌ ಅಗರ್‌ವಾಲ್‌ ನಾಯಕತ್ವದ ಭಾರತ ‘ಎ’ ತಂಡ ಭಾರತ ‘ಸಿ’ ವಿರುದ್ಧ ದೊಡ್ಡ ಮುನ್ನಡೆ ಸಾಧಿಸಿದೆ. ಈಗಾಗಲೇ ಇನ್ನಿಂಗ್ಸ್‌ ಲೀಡ್‌ ಪಡೆದಿದ್ದ ತಂಡ ಸದ್ಯ 333 ರನ್‌ಗಳ ದೊಡ್ಡ ಮುನ್ನಡೆ ಪಡೆದಿದ್ದು, ಪಂದ್ಯದ ಕೊನೆ ದಿನವಾದ ಭಾನುವಾರ ಉತ್ತಮ ಪ್ರದರ್ಶನ ನೀಡಿ ಗೆಲ್ಲುವ ಕಾತರದಲ್ಲಿದೆ.

ಭಾರತ 2 ತಂಡದ 297 ರನ್‌ಗೆ ಉತ್ತರವಾಗಿ 2ನೇ ದಿನದಂತ್ಯಕ್ಕೆ 7 ವಿಕೆಟ್‌ಗೆ 216 ರನ್‌ ಗಳಿಸಿದ್ದ ಸಿ ತಂಡ ಶನಿವಾರ ಕೇವಲ 18 ರನ್‌ ಸೇರಿಸಿತು. ಪುಲ್ಕಿತ್‌ ನಾರಂಗ್‌ 41 ರನ್‌ ಗಳಿಸಿ ಔಟಾದರು. ವಿಜಯ್‌ಕುಮಾರ್‌ ವೈಶಾಖ್‌ 18 ರನ್‌ ಕೊಡುಗೆ ನೀಡಿದರು. ತಂಡದ 234 ರನ್‌ಗೆ ಗಂಟುಮೂಟೆ ಕಟ್ಟಿತು. ಆವೇಶ್‌ ಖಾನ್‌ ಹಾಗೂ ಆಖಿಬ್‌ ಖಾನ್‌ ತಲಾ 3 ವಿಕೆಟ್‌ ಕಿತ್ತರು.

Latest Videos

undefined

ಎಡ ಭಾಗದಿಂದಲೇ ಆಕಾಶ ನೋಡಿ ಮೈದಾನಕ್ಕಿಳಿಯೋದ್ಯಾಕೆ? ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರ ಕೊಟ್ಟ ಧೋನಿ!

63 ರನ್‌ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್‌ ಆರಂಭಿಸಿರುವ ‘ಎ’ ತಂಡ 3ನೇ ದಿನದಂತ್ಯಕ್ಕೆ 6 ವಿಕೆಟ್‌ ಕಳೆದುಕೊಂಡು 270 ರನ್‌ ಗಳಿಸಿದೆ. ಮಯಾಂಕ್‌(34) ಮತ್ತೊಮ್ಮೆ ದೊಡ್ಡ ಇನ್ನಿಂಗ್ಸ್‌ ಕಟ್ಟಲು ವಿಫಲರಾದರು. 94ಕ್ಕೆ 3 ವಿಕೆಟ್‌ ಕಳೆದುಕೊಂಡಿದ್ದ ತಂಡಕ್ಕೆ ರಿಯಾನ್‌ ಪರಾಗ್‌ ಹಾಗೂ ಶಾಶ್ವತ್‌ ರಾವತ್‌ ಆಸರೆಯಾದರು. ಈ ಜೋಡಿ 4ನೇ ವಿಕೆಟ್‌ಗೆ 105 ರನ್‌ ಜೊತೆಯಾಟವಾಡಿತು.

73 ರನ್‌ ಗಳಿಸಿದ್ದ ರಿಯಾನ್‌ ಪರಾಗ್‌ಗೆ ಗೌರವ್‌ ಯಾದವ್‌ ಪೆವಿಲಿಯನ್‌ ಹಾದಿ ತೋರಿದರೆ, 53 ರನ್‌ ಗಳಿಸಿದ್ದ ಶಾಶ್ವತ್‌ ರಾವತ್‌ರನ್ನು ಮಾನವ್‌ ಸುತಾರ್‌ ಬೌಲ್ಡ್‌ ಮಾಡಿದರು. ಕುಮಾರ್‌ ಕುಶಾಗ್ರ(40) 4ನೇ ದಿನಕ್ಕೆ ಕ್ರೀಸ್‌ ಕಾಯ್ದುಕೊಂಡಿದ್ದಾರೆ. ಅನ್ಶುಲ್‌, ಗೌರವ್‌, ಮಾನವ್‌ ತಲಾ 2 ವಿಕೆಟ್‌ ಪಡೆದರು.

ಭುಯಿ 90: ಭಾರತ ಡಿ ತಂಡಕ್ಕೆ 311 ರನ್ ಮುನ್ನಡೆ

ಅನಂತಪುರ: ಇಲ್ಲಿ ನಡೆಯುತ್ತಿರುವ ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಿ ಯಲ್ಲಿ ಭಾರತ 'ಬಿ' ತಂಡದ ವಿರುದ ಭಾರತ 'ಡಿ' ತಂಡ ದೊಡ್ಡ ಮುನ್ನಡೆ ಸಾಧಿಸಿದೆ. 3ನೇ ದಿನದಂತ್ಯಕ್ಕೆ ತಂಡ 5 ವಿಕೆಟ್ ಕಳೆದುಕೊಂಡು 244 ರನ್ ಕಲೆಹಾಕಿದೆ. ಒಟ್ಟು 311 ರನ್‌ಗಳ ಲೀಡ್ ಪಡೆದಿರುವ ತಂಡ, ಗೆಲುವಿನ ಕಾತರದಲ್ಲಿದೆ. ಭಾನುವಾರ ಪಂದ್ಯದ ಕೊನೆ ದಿನ.

2ನೇ ದಿನದಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 210 ರನ್ ಗಳಿಸಿದ ಬಿ ತಂಡಕ್ಕೆ ಶನಿವಾರ ವಾಷಿಂಗ್ಟನ್ ಸುಂದರ್ ಆಸರೆಯಾದರು. 7ನೇ ವಿಕೆಟ್‌ಗೆ ರಾಹುಲ್ ಚಹರ್ (9) ಜೊತೆಗೂಡಿ 40 ರನ್‌ ಸೇರಿಸಿದರು. ಇತರ ಬ್ಯಾಟ‌ರ್‌ಗಳು ಕೈಕೊಟ್ಟರೂ ಏಕಾಂಗಿ ಹೋರಾಟ ನಡೆಸಿದ ವಾಷಿಂಗ್ಟನ್ 87 ರನ್ ಸಿಡಿಸಿದರು. ತಂಡ 282ಕ್ಕೆ ಆಲೌಟಾಯಿತು. ಸೌರಭ್ ಕುಮಾರ್ 5 ವಿಕೆಟ್ ಕಿತ್ತರು.

ಗಿಲ್-ಪಂತ್ ಅಮೋಘ ಶತಕ; ಚೆನ್ನೈ ಟೆಸ್ಟ್‌ ಗೆಲ್ಲಲು ಬಾಂಗ್ಲಾಗೆ ಕಠಿಣ ಗುರಿ ಕೊಟ್ಟ ಭಾರತ

ಇದರೊಂದಿಗೆ ಮೊದಲ ಇನ್ನಿಂಗ್ಸ್ ನಲ್ಲಿ 67 ರನ್ ಮುನ್ನಡೆ ಸಾಧಿಸಿದ ಡಿ ತಂಡ 2ನೇ ಇನ್ನಿಂಗ್ಸ್‌ನಲ್ಲೂ ಎದುರಾಳಿ ಮೇಲೆ ಪ್ರಾಬಲ್ಯ ಸಾಧಿಸಿತು. 18 ರನ್ ಗೆ 3 ವಿಕೆಟ್ ಕಳೆದುಕೊಂಡ ಬಳಿಕ ನಾಯಕ ಶ್ರೇಯಸ್ ಅಯ್ಯರ್ 40 ಎಸೆತಗಳಲ್ಲಿ 50, ಸಂಜು ಸ್ಯಾಮನ್ 53 ಎಸೆತಗಳಲ್ಲಿ 45 ರನ್ ಸಿಡಿಸಿದರು. ಮತ್ತೊಂದೆಡೆ ರಿಕ್ಕಿ ಭುಯಿ ಅಬ್ಬರದ ಆಟವಾಡುತ್ತಿದ್ದು, 87 ಎಸೆತಗಳಲ್ಲಿ ಔಟಾಗದೆ 90 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

click me!