Duleep Trophy Final: ದಕ್ಷಿಣ ವಲಯದ ಮೇಲೆ ಯಶಸ್ವಿ ಜೈಸ್ವಾಲ್ ಸವಾರಿ

By Kannadaprabha NewsFirst Published Sep 24, 2022, 9:16 AM IST
Highlights

ರೋಚಕ ಘಟದತ್ತ ದುಲೀಪ್ ಟ್ರೋಫಿ ಫೈನಲ್‌ ಪಂದ್ಯ
ಮೂರನೇ ದಿನ ಪಶ್ಚಿಮ ವಲಯ ಪರ ಅಜೇಯ ದ್ವಿಶತಕ ಚಚ್ಚಿದ ಯಶಸ್ವಿ ಜೈಸ್ವಾಲ್
ಮೂರನೇ ದಿನದಾಟದಂತ್ಯಕ್ಕೆ 319 ರನ್‌ಗಳ ಮುನ್ನಡೆ ಪಡೆದ ಪಶ್ಚಿಮ ವಲಯ

ಕೊಯಮತ್ತೂರು(ಸೆ.24): ಯಶಸ್ವಿ ಜೈಸ್ವಾಲ್‌ರ ಸ್ಫೋಟಕ ದ್ವಿಶತಕದ ನೆರವಿನಿಂದ ದುಲೀಪ್‌ ಟ್ರೋಫಿ ಫೈನಲ್‌ನಲ್ಲಿ ಪಶ್ಚಿಮ ವಲಯ ದಕ್ಷಿಣ ವಲಯ ವಿರುದ್ಧ ದೊಡ್ಡ ಮುನ್ನಡೆ ಪಡೆದಿದೆ. 57 ರನ್‌ ಹಿನ್ನಡೆಯೊಂದಿಗೆ 2ನೇ ಇನ್ನಿಂಗ್‌್ಸ ಆರಂಭಿಸಿದ ಪಶ್ಚಿಮ ವಲಯ 3ನೇ ದಿನದಂತ್ಯಕ್ಕೆ 3 ವಿಕೆಟ್‌ಗೆ 376 ರನ್‌ ಗಳಿಸಿದ್ದು, 319 ರನ್‌ಗಳ ಮುನ್ನಡೆ ಪಡೆದಿದೆ.

ಜೈಸ್ವಾಲ್‌ 244 ಎಸೆತಗಳಲ್ಲಿ 23 ಬೌಂಡರಿ, 3 ಸಿಕ್ಸರ್‌ಗಳೊಂದಿಗೆ 209 ರನ್‌ ಗಳಿಸಿ ಔಟಾಗದೆ ಉಳಿದಿದ್ದಾರೆ. ಪಂದ್ಯದಲ್ಲಿ ಇನ್ನೂ 2 ದಿನ ಬಾಕಿ ಇದ್ದು, 4ನೇ ದಿನವಾದ ಶನಿವಾರ ಭೋಜನ ವಿರಾಮಕ್ಕೆ ಇನ್ನಿಂಗ್‌್ಸ ಡಿಕ್ಲೇರ್‌ ಮಾಡಿಕೊಂಡರೂ ದಕ್ಷಿಣ ವಲಯವನ್ನು ಆಲೌಟ್‌ ಮಾಡಲು ಪಶ್ಚಿಮ ವಲಯಕ್ಕೆ ಒಂದೂವರೆ ದಿನ ಸಮಯ ಸಿಗಲಿದೆ. ದಕ್ಷಿಣ ವಲಯ ತಂಡವು ಪಂದ್ಯವನ್ನು ಡ್ರಾ ಮಾಡಿಕೊಂಡರೆ, ಮೊದಲ ಇನ್ನಿಂಗ್‌್ಸ ಮುನ್ನಡೆ ಆಧಾರದಲ್ಲಿ ಟ್ರೋಫಿ ಸಿಗಲಿದೆ. 2ನೇ ದಿನದಂತ್ಯಕ್ಕೆ 7 ವಿಕೆಟ್‌ಗೆ 318 ರನ್‌ ಗಳಿಸಿದ್ದ ದಕ್ಷಿಣ ವಲಯ ಆ ಮೊತ್ತಕ್ಕೆ ಕೇವಲ 7 ರನ್‌ ಸೇರಿಸಿ 327 ರನ್‌ಗೆ ಆಲೌಟ್‌ ಆಯಿತು.

Duleep Trophy Final: ಬಾಬಾ ಇಂದ್ರಜಿತ್ ಶತಕ, ದಕ್ಷಿಣ ವಲಯಕ್ಕೆ ಇನಿಂಗ್ಸ್‌ ಮುನ್ನಡೆ

2ನೇ ಇನ್ನಿಂಗ್‌್ಸ ಆರಂಭಿಸಿದ ಪಶ್ಚಿಮ ವಲಯ ಮೊದಲ ವಿಕೆಟ್‌ಗೆ 110 ರನ್‌ ಜೊತೆಯಾಟ ಪಡೆಯಿತು. ಪ್ರಿಯಾಂಕ್‌(40) ಔಟಾದ ಬಳಿಕ ಕ್ರೀಸ್‌ಗಿಳಿದ ನಾಯಕ ರಹಾನೆ(15) ಬೇಗನೆ ಔಟದರು. ಜೈಸ್ವಾಲ್‌ ಹಾಗೂ ಶ್ರೇಯಸ್‌ ಅಯ್ಯರ್‌(71) 3ನೇ ವಿಕೆಟ್‌ಗೆ 169 ರನ್‌ ಸೇರಿಸಿದರು. ಸರ್ಫರಾಜ್‌ ಖಾನ್‌(30) ಹಾಗೂ ಯಶಸ್ವಿ 4ನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

From 's sensational unbeaten double ton to 's solid 71!💪 👍 |

Here's how the action unfolded on Day 3 of the 🎥 🔽 https://t.co/DWxI9zzEU3 pic.twitter.com/WxuKqRcrpP

— BCCI Domestic (@BCCIdomestic)

ಸ್ಕೋರ್‌: 
ಪಶ್ಚಿಮ ವಲಯ 270 ಹಾಗೂ 376/3(ಯಶಸ್ವಿ 209*, ಪ್ರಿಯಾಂಕ್‌ 40, ಸಾಯಿಕಿಶೋರ್‌ 2-100), 
ದಕ್ಷಿಣ ವಲಯ 327/10(ಇಂದ್ರಜಿತ್‌ 118, ಉನಾದ್ಕತ್‌ 4-52, ಅತೀತ್‌ 3-51)

ವೇಗಿ ಜೂಲನ್‌ಗೆ ಗೆಲುವಿನ ಗುಡ್‌ಬೈ ಹೇಳುತ್ತಾ ಭಾರತ?

ಲಂಡನ್‌: ದಿಗ್ಗಜ ವೇಗದ ಬೌಲರ್‌ ಜೂಲನ್‌ ಗೋಸ್ವಾಮಿಗೆ ಗೆಲುವಿನ ವಿದಾಯ ಹೇಳಲು ಭಾರತ ಮಹಿಳಾ ತಂಡ ಕಾತರಿಸುತ್ತಿದೆ. ಇಂಗ್ಲೆಂಡ್‌ ವಿರುದ್ಧ ಶನಿವಾರ ನಡೆಯಲಿರುವ 3ನೇ ಏಕದಿನ ಪಂದ್ಯವನ್ನು ಗೆದ್ದು ಸರಣಿ ಕ್ಲೀನ್‌ ಸ್ವೀಪ್‌ ಮಾಡುವ ಗುರಿಯೂ ಹರ್ಮನ್‌ಪ್ರೀತ್‌ ಪಡೆಯದ್ದಾಗಿದೆ. ಕ್ರಿಕೆಟ್‌ ಕಾಶಿ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಜೂಲನ್‌ಗೆ ತಮ್ಮ ವೃತ್ತಿಬದುಕಿನ ಅಂತಿಮ ಪಂದ್ಯವನ್ನು ಆಡುವ ಅವಕಾಶ ಸಿಕ್ಕಿರುವುದು ವಿಶೇಷ. ತಮ್ಮ ನಿವೃತ್ತಿಯ ಬಗ್ಗೆ ಮಾತನಾಡಿರುವ ಜೂಲನ್‌, ‘ವಿಶ್ವಕಪ್‌ ಗೆಲ್ಲದಿರುವುದೊಂದೇ ಬೇಸರದ ಸಂಗತಿ’ ಎಂದಿದ್ದಾರೆ.

ಅ.18ಕ್ಕೆ ಬಿಸಿಸಿಐ ಸಭೆ: ಶಾ, ಗಂಗೂಲಿ ಪುನರಾಯ್ಕೆ ನಿರೀಕ್ಷೆ

ಮುಂಬೈ: ಅ.18ರಂದು ಬಿಸಿಸಿಐ ತನ್ನ ವಾರ್ಷಿಕ ಸಾಮಾನ್ಯ ಸಭೆ(ಎಜಿಎಂ)ಯನ್ನು ನಡೆಸಲು ನಿರ್ಧರಿಸಿದ್ದು ಆ ದಿನ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಹಾಗೂ ಕಾರ‍್ಯದರ್ಶಿ ಜಯ್‌ ಶಾ ಅವರ ಪುನರಾಯ್ಕೆಯಾಗುವ ನಿರೀಕ್ಷೆ ಇದೆ. ಅಂದೇ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ(ಐಸಿಸಿ)ಗೆ ಬಿಸಿಸಿಐನ ಪ್ರತಿನಿಧಿಯನ್ನು ಆಯ್ಕೆ ಮಾಡುವ ಪ್ರಕ್ರಿಯೆಯೂ ನಡೆಯಲಿದೆ. ಆ ಸ್ಥಾನಕ್ಕೆ ಮಾಜಿ ಅಧ್ಯಕ್ಷ ಎನ್‌.ಶ್ರೀನಿವಾಸನ್‌ ಹಾಗೂ ಸೌರವ್‌ ಗಂಗೂಲಿ ಹೆಸರು ಕೇಳಿಬರುತ್ತಿದೆ. ಮಹಿಳಾ ಐಪಿಎಲ್‌ ಬಗ್ಗೆಯೂ ಅಂದೇ ನಿರ್ಧಾರವಾಗಲಿದೆ ಎನ್ನಲಾಗುತ್ತಿದೆ.

click me!