IND vs AUS ಆಸ್ಟ್ರೇಲಿಯಾ ವಿರುದ್ಧ ಟಾಸ್ ಗೆದ್ದ ಟೀಂ ಇಂಡಿಯಾ, ಪಂದ್ಯ 8 ಓವರ್‌ಗೆ ಸೀಮಿತ!

By Suvarna NewsFirst Published Sep 23, 2022, 9:21 PM IST
Highlights

ಆಸ್ಟ್ರೇಲಿಯಾ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಟೀಂ ಇಂಡಿಯಾದಲ್ಲಿ ಎರಡು ಮಹತ್ವದ ಬದಲಾವಣೆ ಮಾಡಲಾಗಿದೆ.

ನಾಗ್ಪುರ(ಸೆ.23): ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟಿ20 ಸರಣಿಯಲ್ಲಿಂದು ಮಹತ್ವದ ಪಂದ್ಯ. ಆದರೆ ಮಳೆಯಿಂದ ಒದ್ದೆಯಾಗಿದ್ದ ಕಾರಣ ಪಂದ್ಯ ಆರಂಭ ವಿಳಂಬವಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಟೀಂ ಇಂಡಿಯಾದಲ್ಲಿ ಎರಡು ಬದಲಾವಣೆ ಮಾಡಲಾಗಿದೆ. ಉಮೇಶ್ ಯಾದವ್ ಹಾಗೂ ಭುವನೇಶ್ವರ್ ಕುಮಾರ್ ತಂಡದಿಂದ ಹೊರಗುಳಿದಿದ್ದಾರೆ. ಜಸ್ಪ್ರೀತ್ ಬುಮ್ರಾ ಹಾಗೂ ರಿಷಬ್ ಪಂತ್ ತಂಡ ಸೇರಿಕೊಂಡಿದ್ದಾರೆ. ಆಸ್ಟ್ರೇಲಿಯಾ ತಂಡದಲ್ಲೂ ಎರಡು ಬದಲಾವಣೆ ಮಾಡಲಾಗಿದೆ. ಎಲ್ಲಿಸ್ ಇಂಜುರಿಯಾಗಿರುವ ಕಾರಣ ತಂಡದಿಂದ ಹೊರಗುಳಿದಿದ್ದಾರೆ. ಎಲ್ಲಿಸ್ ಬದಲು ಡೇನಿಯಲ್ ಸ್ಯಾಮ್ಸ್ ತಂಡ ಸೇರಿಕೊಂಡಿದ್ದಾರೆ. ಇನ್ನು ಇಂಗ್ಲೀಸ್ ಬದಲು ಸೀನ್ ಅಬೋಟ್ ತಂಡ ಸೇರಿಕೊಂಡಿದ್ದಾರೆ.  ಪಂದ್ಯ ವಿಳಂಬವಾದ ಕಾರಣ ಪಂದ್ಯವನ್ನು 8 ಓವರ್‌ಗೆ ಸಮೀತಗೊಳಿಸಲಾಗಿದೆ. ಪವರ್ ಪ್ಲೇ ಓವರ್ ಕೇವಲ 2 ಮಾತ್ರ. ಇನ್ನು ಓರ್ವ ಬೌಲರ್ ಗರಿಷ್ಠ ಎರಡು ಓವರ್ ಮಾತ್ರ ಬೌಲಿಂಗ್ ಮಾಡಲು ಅವಕಾಶವಿದೆ. 

ಟೀಂ ಇಂಡಿಯಾ ಪ್ಲೇಯಿಂಗ್ 11
ಕೆಎಲ್ ರಾಹುಲ್, ರೋಹಿತ್ ಶರ್ಮಾ(ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಬ್ ಪಂತ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಅಕ್ಸರ್ ಪಟೇಲ್, ಹರ್ಷಲ್ ಪಟೇಲ್, ಜಸ್ಪ್ರೀತ್ ಬುಮ್ರಾ, ಯುಜುವೇಂದ್ರ ಚಹಾಲ್

IPL 2023 ಡಿ. 16ಕ್ಕೆ ಐಪಿಎಲ್ ಆಟಗಾರರ ಮಿನಿ ಹರಾಜು, ಜಡೇಜಾ ಖರೀದಿಗೆ ಹಲವು ಫ್ರಾಂಚೈಸಿ ತಯಾರಿ!

ಆಸ್ಟ್ರೇಲಿಯಾ ಪ್ಲೇಯಿಂಗ್ 11
ಆ್ಯರೋನ್ ಫಿಂಚ್(ನಾಯಕ), ಕ್ಯಾಮರೂನ್ ಗ್ರೀನ್, ಸ್ಟೀವನ್ ಸ್ಮಿತ್, ಗ್ಲೆನ್ ಮ್ಯಾಕ್ಸ್‌ವೆಲ್, ಸೀನ್ ಅಬೋಟ್, ಟಿಮ್ ಡೇವಿಡ್, ಮ್ಯಾಥ್ಯೂ ವೇಡ್, ಪ್ಯಾಟ್ ಕಮಿನ್ಸ್, ಡೇನಿಯಲ್ ಸ್ಯಾಮ್ಸ್, ಆ್ಯಡಂ ಜಂಪಾ, ಜೋಶ್ ಹೇಜಲ್‌ವುಡ್ 

ಟಾಸ್ ಗೆದ್ದು ಮಾತನಾಡಿದ ರೋಹಿತ್ ಶರ್ಮಾ, ಇಷ್ಟು ಹೊತ್ತು ಪಂದ್ಯಕ್ಕಾಗಿ ಕಾದು ಕುಳಿತ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ. ಇದು 8 ಓವರ್ ಪಂದ್ಯವಾಗಿರುವ ಕಾರಣ ಸಿಕ್ಕ ಅವಕಾಶವನ್ನು ಬಳಸಿಕೊಂಡು ಉತ್ತಮ ಹೋರಾಟ ನೀಡಬೇಕು ಎಂದು ರೋಹಿತ್ ಹೇಳಿದ್ದಾರೆ.

ಇಂಗ್ಲೆಂಡ್ ಬೌಲರ್‌ಗಳನ್ನು ಚೆಂಡಾಡಿದ ಸಚಿನ್ ತೆಂಡುಲ್ಕರ್; ಟಿ20 ವಿಶ್ವಕಪ್‌ಗೆ ಬ್ಯಾಕ್‌ಅಪ್‌ ಓಪನ್ನರ್ ಎಂದ ನೆಟ್ಟಿಗರು..!

ನಿನ್ನೆ ರಾತ್ರಿ ಸುರಿದ ಮಳೆಯಿಂದಾಗಿ ಮೈದಾನ ಸಂಪೂರ್ಣ ಒದ್ದೆಯಾಗಿತ್ತು. ಇಂದು ಬೆಳಗ್ಗೆಯಿಂದ ಮೈದಾನ ಸಜ್ಜುಗೊಳಿಸುವ ಕಾರ್ಯ ಆರಂಭಗೊಂಡಿತ್ತು. ಆದರೆ ಬಿಸಿಲಿನ ಅಭಾವದಿಂದ ಮೈದಾನ ಸಂಪೂರ್ಣವಾಗಿ ಸಜ್ಜುಗೊಂಡಿರಲಿಲ್ಲ. ಆಟಗಾರರ ಸುರಕ್ಷತೆಯ ದೃಷ್ಟಿಯಿಂದ ಅಂಪೈರ್ಸ್ ಕೆಲ ಹೊತ್ತು ಕಾದು ನೋಡುವ ತಂತ್ರ ಅನುಸರಿಸಿದರು. ಕೊನೆಗೆ ಎರಡು ಬಾರಿ ಮೈದಾನ ಪರಿಶೀಲನೆ ನಡೆಸಿ ಪಂದ್ಯಕ್ಕೆ ಅನುವು ಮಾಡಿಕೊಡಲಾಗಿದೆ.

click me!