ಆಸ್ಟ್ರೇಲಿಯಾ ವಿರುದ್ದದ ದ್ವಿತೀಯ ಟಿ20 ಪಂದ್ಯದಲ್ಲಿ ಭಾರತ ಸಿಕ್ಸರ್ , ಬೌಂಡರಿ ಮೂಲಕ ಅಬ್ಬರಿಸಿ ಭರ್ಜರಿ ಗೆಲುವು ದಾಖಲಿಸಿದೆ. 8 ಓವರ್ ಪಂದ್ಯದಲ್ಲಿ ಗೆಲುವು ದಾಖಲಿಸುವ ಮೂಲಕ ಸರಣಿಯನ್ನು ಸಮಬಲಗೊಳಿಸಿದೆ.
ನಾಗ್ಪುರ(ಸೆ.23): ಆಸ್ಟ್ರೇಲಿಯಾ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾಗೆ 8 ಓವರ್‌ನಲ್ಲಿ 91 ರನ್ ಟಾರ್ಗೆಟ್. ಆರಂಭದಿಂದಲೇ ಅಬ್ಬರಿಸಿದ ಟೀಂ ಇಂಡಿಯಾ ಓವರ್‌ಗಳಲ್ಲಿ ವಿಕೆಟ್ ಕಳೆದುಕೊಂಡು ಗುರಿ ತಲುಪಿದೆ. ರೋಹಿತ್ ಶರ್ಮಾ ಸ್ಫೋಟಕ ಬ್ಯಾಟಿಂಗ್, ದಿನೇಶ್ ಕಾರ್ತಿಕ್ ಫೀನಿಶಿಂಗ್ ಟಚ್ ಮೂಲಕ ಭಾರತ 6 ವಿಕೆಟ್ ಗೆಲುವು ದಾಖಲಿಸಿದೆ. ಈ ಮೂಲಕ ಟೀಂ ಇಂಡಿಯಾ 3 ಪಂದ್ಯಗಳ ಸರಣಿಯನ್ನು 1-1 ಅಂತರದಲ್ಲಿ ಸಮಬಲಗೊಳಿಸಿದೆ. ಇದೀಗ 3ನೇ ಹಾಗೂ ಅಂತಿಮ ಟಿ20 ಪಂದ್ಯ ಫೈನಲ್ ಸ್ವರೂಪ ಪಡೆದುಕೊಂಡಿದೆ.
ಕೆಎಲ್ ರಾಹುಲ್ ಹಾಗೂ ರೋಹಿತ್ ಶರ್ಮಾ ನೀಡಿದ ಆರಂಭದಿಂದ ಟೀಂ ಇಂಡಿಯಾ ಆತ್ಮವಿಶ್ವಾಸ ಹೆಚ್ಚಿತು 2.5 ಓವರ್‌ಗೆ ಭಾರತ 39 ರನ್ ಸಿಡಿಸಿ ಅಬ್ಬರಿಸಿತ್ತು. ಬೌಂಡರಿ ಸಿಕ್ಸರ್‌ಗಳ ಅಬ್ಬರ ಹೆಚ್ಚಾಗಿತ್ತು. ಆದರೆ ಕೆಎಲ್ ರಾಹುಲ್ 6 ಎಸೆತದಲ್ಲಿ 10 ರನ್ ಸಿಡಿಸಿ ಔಟಾದರು. ಇತ್ತ ರೋಹಿತ್ ಶರ್ಮಾ ಅಬ್ಬರ ಮುಂದುವರಿದರೆ, ವಿರಾಟ್ ಕೊಹ್ಲಿ ಮತ್ತೆ ನಿರಾಸೆ ಅನುಭವಿಸಿದರು. ಕೊಹ್ಲಿ 11 ರನ್ ಸಿಡಿಸಿ ಔಟಾದರು.
IPL 2023 ಡಿ. 16ಕ್ಕೆ ಐಪಿಎಲ್ ಆಟಗಾರರ ಮಿನಿ ಹರಾಜು, ಜಡೇಜಾ ಖರೀದಿಗೆ ಹಲವು ಫ್ರಾಂಚೈಸಿ ತಯಾರಿ!
ಸೂರ್ಯಕುಮಾರ್ ಯಾದವ್ ಡಕೌಟ್ ಆದರು. ದಿಢೀರ್ ವಿಕೆಟ್ ಪತನ ಟೀಂ ಇಂಡಿಯಾದ ಮೇಲಿನ ಒತ್ತಡ ಹೆಚ್ಚಿಸಿದೆ. ಅಂತಿಮ 18 ಎಸೆತದಲ್ಲಿ ಭಾರತದ ಗೆಲುವಿಗೆ 33 ರನ್ ಅವಶ್ಯಕತೆ ಇತ್ತು. ಇದೇ ವೇಳೆ ಹಾರ್ದಿಕ್ ಪಾಂಡ್ಯ ವಿಕೆಟ್ ಕಳಚಿತು. ಇತ್ತ ದಿನೇಶ್ ಕಾರ್ತಿಕ್ ಹಾಗೂ ರೋಹಿತ್ ಶರ್ಮಾ ಅಬ್ಬರ ಮತ್ತೆ ಮುಂದುವರಿಯಿತು. ಅಂತಿಮ ಓವರ್ ಆರಂಭಿಕ ಎರಡು ಎಸೆತದಲ್ಲಿ ದಿನೇಶ್ ಕಾರ್ತಿಕ್ ಸಿಕ್ಸರ್ ಹಾಗೂ ಬೌಂಡರಿ ಸಿಡಿಸಿ ಭಾರತಕ್ಕೆ ಗೆಲುವು ತಂದುಕೊಟ್ಟರು. ಭಾರತ 7.2 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗುರಿತಲುಪಿದೆ. ರೋಹಿತ್ ಶರ್ಮಾ 20 ಎಸೆತದಲ್ಲಿ ಅಜೇಯ 46 ರನ್ ಸಿಡಿಸಿದರೆ, ದಿನೇಶ್ ಕಾರ್ತಿಕ್ 2 ಎಸೆತದಲ್ಲಿ ಅಜೇಯ 10 ರನ್ ಸಿಡಿಸಿದರು.
ಮಳೆಯಿಂದಾಗಿ 8 ಓವರ್ ಪಂದ್ಯ
ನಿನ್ನೆ ರಾತ್ರಿ ಹಾಗೂ ಇಂದು ಬೆಳಗ್ಗೆ ಸುರಿದ ಮಳೆಯಿಂದ ನಾಗ್ಪುರದ ಮೈದಾನ ಸಂಪೂರ್ಣ ಒದ್ದೆಯಾಗಿತ್ತು. ಮಳೆರಾಯ ಬಿಡುವು ನೀಡಿದ ಬೆನ್ನಲ್ಲೇ ಸಿಬ್ಬಂದಿಗಳು ಮೈದಾನ ಸಜ್ಜುಗೊಳಿಸುವ ಕಾರ್ಯದಲ್ಲಿ ತೊಡಗಿದ್ದರು. ಆದರೆ 7 ಗಂಟೆಗೆ ಪಂದ್ಯ ಆರಂಭವಾಗಬೇಕಿತ್ತು. ಮೈದಾನ ಆಡಲು ಯೋಗ್ಯವಾಗಿಲ್ಲದ ಕಾರಣ ಅಂಪೈರ್‌ಗಳು ಕಾದುನೋಡುವ ತಂತ್ರ ಅನುಸರಿಸಿದರು. ಇತ್ತ ಮೈದಾನ ಆಟಕ್ಕೆ ಸಜ್ಜುಗೊಳಿಸಲು ಸಿಬ್ಬಂದಿಗಳ ಹರಸಾಹಸ ಪಟ್ಟರು. ವಿಳಂಬವಾಗಿ ಪಂದ್ಯ ಆರಂಭಗೊಂಡ ಕಾರಣ ಪಂದ್ಯ ಓವರ್ ಕಡಿತಗೊಳಿಸಲಾಯಿತು. ಪಂದ್ಯವನ್ನು 8 ಓರ್‌ಗೆ ಸೀಮಿತಗೊಳಿಸಲಾಯಿತು.
ಆಸ್ಟ್ರೇಲಿಯಾ ಇನ್ನಿಂಗ್ಸ್
ಟಾಸ್ ಸೋತು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿತು. ನ್ಯಾಕ ಆ್ಯರೋನ್ ಫಿಂಚ್ ಹಾಗೂ ಮ್ಯಾಥ್ಯೂ ವೇಡ್ ಅಬ್ಬರದಿಂದ ಉತ್ತಮ ಮೊತ್ತ ದಾಖಲಿಸಿತು. ಫಿಂಚ್ 31 ರನ್ ಸಿಡಿಸಿದರೆ, ವೇಡ್ ಅಜೇಯ 43 ರನ್ ಸಿಡಿಸಿದರು. ಆದರೆ ಕ್ಯಾಮರೂನ್ ಗ್ರೀನ್, ಟಿಮ್ ಡೇವಿಡ್ ಹಾಗೂ ಸ್ಟೀವನ್ ಸ್ಮಿತ್ ನಿರೀಕ್ಷಿತ ರನ್ ಗಳಿಸಲು ಸಾಧ್ಯವಾಗಿಲ್ಲ. ಹೀಗಾಗಿ ಆಸ್ಟ್ರೇಲಿಯಾ 8 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 90 ರನ್ ಸಿಡಿಸಿತು.